ಪ್ರಶ್ನೆ: ನನಗೆ ಇತ್ತೀಚೆಗಷ್ಟೆ ಮದುವೆಯಾಗಿದೆ. ಗಂಡ ಯಾವಾಗಲೂ ಮೇಲಿನ ಭಂಗಿಯಲ್ಲಿದ್ದು ಸೆಕ್ಸ್ ನಡೆಸುತ್ತೇವೆ. ಒಮ್ಮೆಯೂ ನಾನು ಗಂಡನ ಮೇಲೆ ಕುಳಿತು ಅಥವಾ ಮಲಗಿ ಸೆಕ್ಸ್ ನಡೆಸಿಲ್ಲ. ನನಗೆ ಹಾಗೆ ಮಾಡಲು ಆಸೆ. ಆದರೆ ಗಂಡನಿಗೆ ಅದರ ಬಗ್ಗೆ ಗೊತ್ತಿಲ್ಲ. ಏನಾದರೂ ತಿಳಿದುಕೊಂಡರೆ ಎಂಬ ಭಯ!

ಉತ್ತರ: ಈ ಭಯ ಬಿಟ್ಟುಬಿಡಿ. ಹೆಚ್ಚಿನ ಮುನ್ನಲಿವು ಬಳಸಿ, ನಿಮ್ಮ ಗಂಡನನ್ನು ಆ ಕ್ಷಣದಲ್ಲಿ ಒಲಿಸಿಕೊಂಡು, ನಿಮ್ಮ ಆಸೆಗೆ ಓಗೊಡುವಂತೆ ಮಾಡಿ. ಗಂಡನಿಗೆ ಅದನ್ನೆಲ್ಲ ಕಲಿಸಲು ಇದುವೇ ಸುಸಮಯ. ಬಹಳ ಬೇಗನೆ ಕಲಿತುಕೊಂಡುಬಿಡುತ್ತಾರೆ! ಈ ವಿಷಯದಲ್ಲಿ ನೀವೇ ಟೀಚರ್ ಆಗಿ. ಒಮ್ಮೆ ಆ ಆಸನದ ರುಚಿ ಗಂಡಸಿಗೆ ಸಿಕ್ಕರೆ ಮತ್ತೆ ಅವರೇ ಅದನ್ನು ಅಪೇಕ್ಷೆಪಡುತ್ತಾರೆ.

ಪ್ರಶ್ನೆ: ನನಗೆ ನಲುವತ್ತು ವರ್ಷ. ನನ್ನ ಪತ್ನಿಗೆ ಮೂವತ್ತೈದು ವರ್ಷ. ಇಬ್ಬರು ಮಕ್ಕಳಿದ್ದಾರೆ. ನಮಗಿನ್ನು ಮಕ್ಕಳು ಬೇಡ. ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳೋಣ ಎಂದುಕೊಂಡಿದ್ದೇವೆ. ಸಂತಾನಹರಣ ಶಸ್ತ್ರಚಿಕಿತ್ಸೆಯ ಬಳಿಕ ಲೈಂಗಿಕ ಆಸಕ್ತಿ ಕುಂದುತ್ತದೆ ಎಂದು ಹೇಳುವುದು ಕೇಳಿದ್ದೇವೆ. ಇದು ನಿಜವೇ? ನಮಗೆ ಹಾಗಾಗುವುದು ಇಷ್ಟವಿಲ್ಲ. ಯಾರಿಗೆ ಶಸ್ತ್ರಚಿಕಿತ್ಸೆ ಮಾಡಿಸಿದರೆ ಹೆಚ್ಚು ಒಳ್ಳೆಯದು? ಹೆಣ್ಣಿಗೋ ಅಥವಾ ಗಂಡಿಗೋ?

ಉತ್ತರ: ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದರಿಂದ ಲೈಂಗಿಕ ಆಸಕ್ತಿ ಕುಂದುತ್ತದೆ ಅನ್ನುವ ಮಾತಿನಲ್ಲಿ ನಿಜವಿಲ್ಲ. ಸೆಕ್ಷುಯಲ್ ಹಾರ್ಮೋನ್‌ಗಳು ಕೆಲಸ ಮಾಡುವುದನ್ನು ನಿಲ್ಲಿಸಿದರೆ ಮಾತ್ರ ಸೆಕ್ಟ್ ಡ್ರೈವ್ ಕುಗ್ಗುತ್ತದೆ. ಇಲ್ಲದಿದ್ದರೆ ಇಲ್ಲ. ವಾಸ್ತವವಾಗಿ, ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರೆ ಲೈಂಗಿಕ ಆಸಕ್ತಿ ಹೆಚ್ಚಬೇಕು. ಯಾಕೆಂದರೆ ಆಗ ಗರ್ಭಧಾರಣೆಯ ಯಾವುದೇ ಆತಂಕ ಇರುವುದಿಲ್ಲ. ಮುಕ್ತವಾಗಿ ನೀವು ರತಿಕೇಳಿಯಲ್ಲಿ ತೊಡಗಿಕೊಳ್ಳಬಹುದು. ಇನ್ನು ನಿಮ್ಮಿಬ್ಬರಲ್ಲಿ ಯಾರು ಆಪರೇಶನ್ ಮಾಡಿಸಿಕೊಳ್ಳಬಹುದು ಎಂದು ಕೇಳಿದ್ದೀರಿ. ಇದರಲ್ಲಿ ಯಾವ ವ್ಯತ್ಯಾಸವೂ ಬರಲಾರದು. ನೀವಿಬ್ಬರೂ ಸಮ್ಮತಿಸಿಕೊಂಡು ಯಾರಾದರೊಬ್ಬರಿಗೆ ಆಪರೇಶನ್ ಮಾಡಿಸಿಕೊಂಡರೆ ಸಾಕು.

------------------

ಪ್ರಶ್ನೆ: ನನ್ನ ಶಿಶ್ನ ಸಾಮಾನ್ಯವಾಗಿದ್ದಾಗ ಎರಡೂವರೆ ಇಂಚು ಉದ್ದವಿರುತ್ತದೆ ಹಾಗೂ ನಿಮಿರಿದಾಗ ಐದು ಇಂಚು ಉದ್ದವಾಗುತ್ತದೆ. ಇದು ನನ್ನ ಸಂಗಾತಿಯನ್ನು ತೃಪ್ತಿಪಡಿಸಲು ಸಾಕಾಗುತ್ತದೆಯೇ? ನನ್ನ ಕೆಲವರು ಗೆಳೆಯರಲ್ಲಿ ನನಗಿಂತ ಸಣ್ಣ ಶಿಶ್ನದವರೂ, ಉದ್ದ ಶಿಶ್ನದವರೂ ಇದ್ದಾರೆ. ಯಾಕೆ ಶಿಶ್ನದ ಉದ್ದದಲ್ಲಿ ಇಷ್ಟೊಂದು ವ್ಯತ್ಯಾಸ ಉಂಟಾಗುತ್ತದೆ?

ಉತ್ತರ: ನೀವು ಪ್ರತಿಯೊಬ್ಬರ ಶಿಶ್ನವನ್ನೂ ಅಳತೆಪಟ್ಟಿ ಹಿಡಿದು ಅಳೆಯುತ್ತಾ ಹೋದಿರೋ ಹೇಗೆ? ಇದರ ಉಸಾಬರಿ ನಿಮಗೇಕೆ? ನಿಮಗೆ ದೇವರು ಕೊಟ್ಟಿರುವ ಶಿಶ್ನದ ಉದ್ದ ಸಾಕಷ್ಟಿದೆ. ಇದು ಅಗತ್ಯಕ್ಕಿಂತ ಹೆಚ್ಚೇ ಆಯಿತು. ಇದನ್ನೇ ಬಳಸಿಕೊಂಡು ನೀವೂ ಸುಖ ಪಡೆಯಿರಿ, ನಿಮ್ಮ ಸಂಗಾತಿಗೂ ಸುಖ ನೀಡಿರಿ.

#Feelfree: ನಂಗೆ ಗರ್ಲ್‌ಫ್ರೆಂಡ್ ಇಲ್ಲವಲ್ಲ, ಏನ್ ಮಾಡಲಿ?.
 

ಪ್ರಶ್ನೆ: ನಾನು ಇಪ್ಪತ್ತು ವರ್ಷ ವಯಸ್ಸಿನ ಯುವತಿ. ನನ್ನ ಬಲ ಸ್ತನ, ಎಡ ಸ್ತನಕ್ಕಿಂತ ಗಾತ್ರದಲ್ಲಿ ಕೊಂಚ ಸಣ್ಣದಾಗಿದೆ ಎಂದು ನನಗೆ ಅನಿಸುತ್ತಿದೆ. ಇದರಿಂದ ಮುಂದೆ ಏನಾದರೂ ಸಮಸ್ಯೆ ಇದೆಯಾ?

ಉತ್ತರ: ನಿಮಗೆ ಆ ವಿಚಾರದಲ್ಲಿ ಮುಜುಗರವಾಗಲೀ, ಕೀಳರಿಮೆಯಾಗಲೀ ಇಲ್ಲ ಎಂದಾದರೆ ಯಾವ ಸಮಸ್ಯೆಯೂ ಇಲ್ಲ. ನಿಮ್ಮ ಭಾವಿ ಸಂಗಾತಿಗೂ ಇದರಿಂದ ಏನೂ ವ್ಯತ್ಯಾಸ, ಸಮಸ್ಯೆ ಉಂಟಾಗಲಾರದು. ಅದೇನಿದ್ದರೂ ಇನ್ನಷ್ಟು ಸಮಗ್ರವಾಗಿ ಒಮ್ಮೆ ಗೈನಕಾಲಜಿಸ್ಟ್ ಬಳಿ ಚೆಕಪ್‌ ಮಾಡಿಸಿಕೊಳ್ಳಿ.

#Feelfree: ಸಾಕಷ್ಟು ತೇವ ಇಲ್ಲವಾದರೆ ಸೆಕ್ಸ್ ಉರಿ ಭಯಂಕರ!..

ಪ್ರಶ್ನೆ: ನಾನು ಮತ್ತು ನನ್ನ ಗೆಳತಿ ಇತ್ತೀಚೆಗೆ ಕಾಂಡೋಮ್ ಧರಿಸದೆ ಕೂಡಿದೆವು. ವೀರ್ಯಸ್ಖಲನ ಆಗುವ ಮುನ್ನವೇ ಶಿಶ್ನವನ್ನು ಹೊರಗೆ ತೆಗೆದಿದ್ದೆನಾದರೂ, ಒಂದೆರಡೂ ಹನಿಯಾದರೂ ಒಳಸೇರಿರಬಹುದು ಎಂಬ ಅನುಮಾನವಿದೆ. ಇದರಿಂದ ಆಕೆ ಗರ್ಭಿಣಿ ಆಗೋ ಚಾನ್ಸ್ ಇದೆಯಾ?

ಉತ್ತರ: ಅದು ನಿಮ್ಮ ಗೆಳತಿಯ ಸೇಫ್ಟಿ ಪೀರಿಯಡ್ ಅಲ್ಲದಿದ್ದಲ್ಲಿ, ಖಂಡಿತವಾಗಿಯೂ ಆ ಚಾನ್ಸ್ ಇದೆ. ಇಂಥ ರಿಸ್ಕ್ ತೆಗೆದುಕೊಳ್ಳಬೇಡಿ. ಒಮ್ಮೆ ಪ್ರಗ್ನೆನ್ಸಿ ಕಿಟ್ ಬಳಸಿ ಚೆಕ್ ಮಾಡಿಕೊಳ್ಳಿ. ಪೀರಿಯಡ್ಸ್ ಬಗ್ಗೆ ನಿಗಾ ಇಡಿ. ಮದುವೆಯಾಗೋ ಮುಂಚೆ ಇಂಥ ಕೆಲಸಕ್ಕೆ ಕೈ ಹಾಕದಿದ್ದರೆ ಒಳ್ಳೆಯದು.

#Feelfree: ಎಷ್ಟು ಹೊತ್ತು ಸೆಕ್ಸ್ ಮಾಡಿದ್ರೆ ಸ್ಟ್ರಾಂಗು ಗೊತ್ತಾ ಗುರೂ? ...