ಪ್ರಶ್ನೆ: ನನ್ನ ಕತೆ ಹೇಳ್ಕೊಳಕ್ಕೆ ಸಂಕೋಚ ಅನಿಸುತ್ತೆ. ಇತ್ತೀಚೆಗೆ ನನಗೆ ಮಾನಸಿಕ ಸಮಸ್ಯೆ ಇದೆಯೇನೋ ಅನಿಸೋದಕ್ಕೂ ಶುರುವಾಗಿದೆ. ಯಾರ ಜೊತೆಗೂ ಹೇಳೋದಕ್ಕಾಗದೇ ಬಹಳ ದಿನದಿಂದ ಒದ್ದಾಡ್ತಿದ್ದೀನಿ. ನಾನು ೩೨ ವರ್ಷದ ಗಂಡಸು. ಮದುವೆ ಆಗಿ ಎರಡು ವರ್ಷ ಕಳೆದಿದೆ. ಹೆಂಡ್ತಿಗೆ ಶುರುವಿನಿಂದಲೂ ಸೆಕ್ಸ್ ಬಗ್ಗೆ ಆಸಕ್ತಿಯೇ ಇರಲಿಲ್ಲ. ನನ್ನ ಬಲವಂತಕ್ಕೆ ಸೆಕ್ಸ್ ನಲ್ಲಿ ಪಾಲ್ಗೊಳ್ಳುತ್ತಿದ್ದಳು. ಕೆಲವೊಮ್ಮೆ ನಾನವಳನ್ನು ಬಲಾತ್ಕಾರ ಮಾಡ್ತಿದ್ದೀನೇನೋ ಅಂತ ಅನಿಸಿ ಮನಸ್ಸಿಗೆ ಒಂಥರಾ ಅನಿಸ್ತಿತ್ತು. ಆದರೂ ಕಂಟ್ರೋಲ್ ಮಾಡೋದು ತುಂಬ ಕಷ್ಟ ಆಗ್ತಿತ್ತು. ಈ ನಡುವೆ ನನ್ನ ಪತ್ನಿ ಗರ್ಭಿಣಿಯಾದಳು. ಆಗಂತೂ ನನ್ನನ್ನು ಹತ್ತಿರಕ್ಕೂ ಸೇರಿಸುತ್ತಿರಲಿಲ್ಲ. ಆರು ತಿಂಗಳು ತುಂಬ್ತಿದ್ದ ಹಾಗೆ ಅವರಮ್ಮನ ಮನೆಗೆ ಹೋದಳು. ಮನೆಯಲ್ಲಿ ನಾನೊಬ್ಬನೇ. ಒಮ್ಮೆ ಆಫೀಸ್ ನಿಂದ ಮನೆಗೆ ಬರ್ತಿದ್ದಾಗ ಒಂದು ಹೆಣ್ಣಿನ ಗೊಂಬೆ ನೋಡಿದೆ. ತಡೆಯಲಾಗದೇ ಹಣ ಜಾಸ್ತಿಯಾದರೂ ಕೊಟ್ಟು ಖರೀದಿಸಿದೆ.

#Feelfree: ಸಾಕಷ್ಟು ತೇವ ಇಲ್ಲವಾದರೆ ಸೆಕ್ಸ್ ಉರಿ ಭಯಂಕರ! ...

ಮನೆಯಲ್ಲಿ ಅದರೆದುರು ಸ್ವಲ್ಪ ಹೊತ್ತು ಕೂತರೂ ಮೂಡ್ ಬರುತ್ತಿತ್ತು. ಆ ಗೊಂಬೆಯನ್ನು ನೋಡುತ್ತಾ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದೆ. ಇದೀಗ ನನ್ನ ಹೆಂಡತಿಗೆ ಹೆರಿಗೆಯಾಗಿ ಅವಳು ಮನೆಗೆ ಬರಲು ಹಾತೊರೆಯುತ್ತಿದ್ದಾಳೆ. ಒಮ್ಮೆ ಅವರಮ್ಮನ ಮನೆಗೆ ಹೋಗಿದ್ದಾಗ ಯಾರೂ ಇಲ್ಲದ ಹೊತ್ತಲ್ಲಿ ಸೆಕ್ಸ್ ಗೆ ಒತ್ತಾಯ ಮಾಡಿದಳು. ನನಗೆ ಅವಳಲ್ಲಿ ಆಸಕ್ತಿಯೇ ಬರಲಿಲ್ಲ. ನನ್ನ ಈ ಅನಾಸಕ್ತಿ ಕಂಡು ಅವಳಿಗೆ ಡೌಟ್ ಬರಲು ಶುರುವಾಗಿದೆ. ಮನೆಗೆ ಕರೆದುಕೊಂಡು ಹೋಗಲು ಹಠ ಮಾಡುತ್ತಿದ್ದಾಳೆ. ಮಗುವಿನ ಕಾರಣ ಹೇಳಿದ್ದಕ್ಕೆ ಅನುಮಾನ ಇನ್ನೂ ಹೆಚ್ಚಾಗಿದೆ. ನನಗೆ ಏನು ಮಾಡಲೂ ತೋಚುತ್ತಿಲ್ಲ. ಅವಳಲ್ಲಿ ಆಸಕ್ತಿಯೇ ಬರುತ್ತಿಲ್ಲ. ಅದೇ ಆ ಗೊಂಬೆ ಎದುರು ಸುಖಿಸದೇ ಇರಲಾರೆ ಎನಿಸುತ್ತದೆ. ಹೆಂಡತಿ ಬಂದರೆ ಇದೆಲ್ಲ ನಡೆಯಲ್ಲಾ. ನಾನೀಗ ಏನು ಮಾಡ್ಲಿ? ದಯಮಾಡಿ ಈ ಸಮಸ್ಯೆಯಿಂದ ಪಾರಾಗುವ ಬಗೆಯನ್ನು ಹೇಳ್ತೀರಾ?

ಉತ್ತರ: ನೀವು ಕೂಡಲೇ ಮಾನಸಿಕ ತಜ್ಞರಲ್ಲಿ ಭೇಟಿ ಕೊಡುವುದು ಒಳಿತು. ಪ್ರತಿಯೊಬ್ಬರ ಬದುಕಿನಲ್ಲೂ ದುರ್ಬಲ ಗಳಿಗೆ ಬರುತ್ತದೆ. ನಿಮ್ಮ ಮನೆಯಲ್ಲಿ ನಿಮ್ಮ ಪತ್ನಿ ನಿಮ್ಮ ಬಯಕೆಗೆ ಸ್ಪಂದಿಸುತ್ತಿಲ್ಲ ಎಂಬ ಅತೃಪ್ತಿ ಜೊತೆಗೇ ಇದರಿಂದ ನೀವು ಆಕೆಯನ್ನು ಬಲಾತ್ಕಾರ ಮಾಡಿದಂತಾಗುತ್ತದೆ ಎಂಬ ಪಾಪಪ್ರಜ್ಞೆಯೂ ನಿಮ್ಮೊಳಗಿದೆ. ಈಗಾಗಿ ಆಕರ್ಷಕವಾದ ಬೊಂಬೆಯಲ್ಲಿ ಲೈಂಗಿಕ ತೃಪ್ತಿ ಪಡೆಯಲು ಹೊರಟಿದ್ದೀರಿ. ಹೀಗೆ ಮಾಡಿದರೆ ಯಾರಿಗೂ ಅನ್ಯಾಯ ಆಗೋದಿಲ್ವಲ್ಲಾ ಅನ್ನುವ ಕಾರಣ ಇರಬಹುದು. ಆದರೆ ನೀವು ಮನಃಶಾಸ್ತ್ರಜ್ಞರ ಬಳಿ ಹೋದರೆ ಅವರು ಕ್ರಮೇಣ ನಿಮ್ಮ ಈ ಚಟವನ್ನು ಬಿಡಿಸಬಹುದು. ನಿಮ್ಮ ಪತ್ನಿಯ ಹಿಂದಿನ ನಡವಳಿಕೆಗೆ ಆಕೆ ಬೆಳೆದ ಪರಿಸರ ಕಾರಣ ಆಗಿರಬಹುದು. ಈಗ ನಿಮ್ಮ ಮನಸ್ಸಲ್ಲಿ ಗೊಂಬೆಯ ಆಕರ್ಷಣೆ ಕೂತು ಬಿಟ್ಟಿದೆ. ಹಾಗಾಗಿ ಪತ್ನಿಯಲ್ಲಿ ಆಸಕ್ತಿ ಬರುತ್ತಿಲ್ಲ. ಈ ಚಟ ದೂರವಾದರೆ ಕ್ರಮೇಣ ಆಸಕ್ತಿ ಬರಬಹುದು. ಪತ್ನಿಗೆ ಹೆರಿಗೆಯಾಗಿ ಎಷ್ಟು ಸಮಯವಾಯಿತು ಅಂತ ನೀವು ಹೇಳಿಲ್ಲ. ಆದರೂ ಈ ಸಮಯದಲ್ಲಿ ಆಕೆಯ ಮನಸ್ಥಿತಿ ಬಹಳ ಸೂಕ್ಷ್ಮ ಇರುತ್ತದೆ. ನಿಮ್ಮ ಒತ್ತಾಸೆಯ ಅಗತ್ಯ ಆಕೆಗಿದೆ. ಹೀಗಾಗಿ ಇದೊಂದು ಸ್ವಪ್ನ ಅಂದುಕೊಂಡು ಈ ಸ್ಥಿತಿಯಿಂದ ಹೊರಬನ್ನಿ. 

#Feelfree: ನಂಗೆ ಗರ್ಲ್‌ಫ್ರೆಂಡ್ ಇಲ್ಲವಲ್ಲ, ಏನ್ ಮಾಡಲಿ? ...

ಪ್ರಶ್ನೆ : ನನಗೆ ಹಸ್ತಮೈಥುನ ಚಟವಾಗಿ ಬಿಟ್ಟಿದೆ. ಎಷ್ಟು ಅಂದರೆ ಮನೆಯೊಳಗೆ ಆ ಸಮಯದಲ್ಲಿ ಚಡಪಡಿಕೆ ಶುರುವಾಗುತ್ತದೆ. ಯಾರ ಜೊತೆಗೆ ಮಾತನಾಡಲೂ ಕಿರಿಕಿರಿ. ತಲೆಯಲ್ಲಿ ಬರೀ ಅಂಥಾ ಯೋಚನೆ. ಇದರ ಜೊತೆಗೆ ಪೋರ್ನ್ ಸಿನಿಮಾ ನೋಡಿಕೊಂಡು ಹಸ್ತಮೈಥುನ ಮಾಡಿಕೊಳ್ಳುವ ಚಟವೂ ಬೆಳೆಯುತ್ತಿದೆ. ಕಂಟ್ರೋಲ್ ಮಾಡಲಾಗದೇ ಒದ್ದಾಡುತ್ತಿದ್ದೇನೆ. 

#Feelfree: ಎಷ್ಟು ಹೊತ್ತು ಸೆಕ್ಸ್ ಮಾಡಿದ್ರೆ ಸ್ಟ್ರಾಂಗು ಗೊತ್ತಾ ಗುರೂ? ...

ಉತ್ತರ : ನೀವು ಯೋಗ, ಪ್ರಣಾಯಾಮ ಆರಂಭಿಸುವುದು ಉತ್ತಮ. ಇದರಿಂದ ಮನಸ್ಸಿನ ಮೇಲೆ ಹತೋಟಿ ಸಾಧಿಸುವುದು ಸಾಧ್ಯವಾಗುತ್ತದೆ. ಅತಿಯಾದ ಹಸ್ತಮೈಥುನ, ಪೋರ್ನ್ ವೀಕ್ಷಣೆಯಿಂದ ಖಿನ್ನತೆಯಂಥಾ ಸಮಸ್ಯೆ ಬರುವುದುಂಟು. ಆ ಬಗ್ಗೆ ಎಚ್ಚರ ಇರಲಿ. ಸಾಧ್ಯವಾದಷ್ಟು ಒಂಟಿಯಾಗಿರುವುದನ್ನು ತಪ್ಪಿಸಿ. ಪ್ರಯತ್ನಪಟ್ಟು ಎಲ್ಲರ ಜೊತೆಗೆ ಬೆರೆಯಿರಿ. ಪುಸ್ತಕ ಓದುವುದು, ತೀವ್ರವಾಗಿ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕವೂ ಇದನ್ನು ನಿಯಂತ್ರಿಸಬಹುದು.