#Feelfree: ನಂಗೆ ಗರ್ಲ್‌ಫ್ರೆಂಡ್ ಇಲ್ಲವಲ್ಲ, ಏನ್ ಮಾಡಲಿ?

ನಂಗೆ ಏನ್ ಮಾಡಿದ್ರೂ ಗರ್ಲ್‌ಫ್ರೆಂಡ್ ಸಿಗ್ತಿಲ್ಲ. ನನ್ನ ಗೆಳೆಯರೆಲ್ಲಾ ಒಬ್ಬೊಬ್ಬ ಪ್ರೇಯಸಿಯರನ್ನು ಪಡೆದು ಮಜವಾಗಿದ್ದಾರೆ. ನಾನೇನು ಮಾಡಬೇಕು?

What should I do to have a girlfriend

ಪ್ರಶ್ನೆ: ನಾನು ಹದಿನೇಳು ವರ್ಷದ ಯುವಕ. ನನಗೆ ಲೈಫ್‌ನಲ್ಲಿ ಎಲ್ಲವೂ ಇದೆ. ಏನೂ ಕೊರತೆ ಅಂತ ಇಲ್ಲ. ಒಳ್ಳೆಯ ಕಾಲೇಜಿಗೆ ಹೋಗುತ್ತೇನೆ. ಪಾಠ ಪ್ರವಚನದಲ್ಲಿ ಆಸಕ್ತಿ ಇದೆ, ಸಾದನೆಯೂ ಇದೆ. ನನ್ನ ಹೆತ್ತವರೂ ಒಳ್ಳೆಯವರೇ. ನನಗೆ ಬೇಕಾದ್ದನ್ನು ತೆಗೆಸಿ ಕೊಡುತ್ತಾರೆ. ತೀರಾ ಶ್ರೀಮಂತ ಅಲ್ಲವಾದರೂ ಮೇಲ್ ಮಧ್ಯಮ ವರ್ಗದ ಕುಟುಂಬ. ಬೈಕ್ ಇದೆ, ಕಾರೂ ಇದೆ. ಆದರೆ ನನಗೆ ಒಂದೇ ಕೊರತೆ ಎಂದರೆ ಯಾವುದೇ ಗರ್ಲ್‌ಫ್ರೆಂಡ್ ಇಲ್ಲ. ನನಗೆ ಸಾಕಷ್ಟು ಗೆಳತಿಯರು ಇದ್ದಾರೆ. ಕ್ಲಾಸ್‌ಮೇಟ್‌ಗಳು ನನ್ನೊಂದಿಗೆ ಸ್ನೇಹವಾಗಿಯೇ ಇದ್ದಾರೆ. ಆದರೆ ಯಾರೂ ಗರ್ಲ್‌ಫ್ರೆಂಡ್ ಆಗುತ್ತಲೇ ಇಲ್ಲ.

ನನ್ನ ಸ್ನೇಹಿತರಲ್ಲಿ ಹಲವಾರು ಮಂದಿ ಈಗಾಗಲೇ ಒಬ್ಬಿಬ್ಬ ಗರ್ಲ್ಫ್ರೆಂಡ್ ಮಾಡಿಕೊಂಡು ಮಜವಾಗಿ ಇದ್ದಾರೆ. ಹಿಂದೆ ಒಮ್ಮೆ ಒಬ್ಬಳು ಇನ್ನೇನು ನನ್ನ ಸಂಗಾತಿಯಾಗಲಿದ್ದಳು. ಆದರೆ ಅಷ್ಟರಲ್ಲೇ ಇನ್ನೊಬ್ಬನೊಂದಿಗೆ ಹೊರಟುಹೋದಳು. ಆತ ನನಗೆ ಹೋಲಿಸಿದರೆ ಹಣಕಾಸಿನಲ್ಲಾಗಲೀ ಪ್ರತಿಭೆಯಲ್ಲಾಗಲೀ ಓದಿನಲ್ಲಾಗಲೀ ಪ್ರತಿಭಾವಂತನೇನಲ್ಲ. ನನ್ನನ್ನಷ್ಟು ಸುಂದರನೂ ಅಲ್ಲ. ಹುಡುಗಿಯರು ಇಂಥ ಖರಾಬು ಹುಡುಗರಿಗೆ ಏಕೆ ಬಲಿಯಾಗುತ್ತಾರೆ? ನನಗೇ ಒಳ್ಳೇ ಗೆಳತಿ ಸಿಗೋಲ್ಲ?

#Feelfree: ನಾನ್ ಮದ್ವೆ ಆಗೋ ಹುಡುಗೀಗೆ ಬೇರೆಯವ್ರ ಜೊತೆ ದೈಹಿಕ ಸಂಬಂಧ ಇರಬಹುದಾ? ...

ಉತ್ತರ: ಹಲೋ ಯಂಗ್ ಮ್ಯಾನ್, ನಿಮ್ಮ ಪ್ರಶ್ನೆ ಸ್ವಾರಸ್ಯಕರವಾಗಿದೆ. ನಿಮ್ಮ ಆತಂಕ ಸಹಜವಾದದ್ದೇ. ನಿಮ್ಮ ಪ್ರಕಾರ ನಿಮಗೊಬ್ಬಳು ಗರ್ಲ್‌ಫ್ರೆಂಡ್ ಅರ್ಜೆಂಟಾಗಿ ಬೇಕು ಅಲ್ವೇ. ಯಾವ ಹುಡುಗಿಯೂ ನಿಮಗೆ ಸಂಗಾತಿ ಆಗ್ತಿಲ್ಲ. ನಿಮ್ಮ ಫ್ರೆಂಡ್‌ಶಿಪ್ ಮಾಡ್ತಾರೆ, ಆದರೆ ಗರ್ಲ್‌ಫ್ರೆಂಡ್ ಆಗುತ್ತಿಲ್ಲ. ಇದೊಂದು ಸಮಸ್ಯೆ ಆಂತ ನೀವು ಯಾಕೆ ತಿಳಿದಿದ್ದೀರಿ? ಇದು ನಿಮ್ಮ ಭಾಗ್ಯ ಎಂದೇ ಭಾವಿಸಿ.

ಎಲ್ಲ ಗಂಡಸರನ್ನೂ ಹೆಣ್ಣುಮಕ್ಕಳು ನಿಮ್ಮ ಹಾಗೆ ಸಹಜವಾಗಿ, ಗೆಳೆಯನಾಗಿ ಸ್ವೀಕರಿಸೋಲ್ಲ. ಗೆಳೆಯರನ್ನಾಗಿ ಮಾಡಿಕೊಳ್ಳಲೂ ಹಿಂದೆ ಮುಂದೆ ನೋಡುತ್ತಾರೆ. ಅಂಥ ಹೊತ್ತಿನಲ್ಲಿ ಹಲವಾರು ಗೆಳತಿಯರು ನಿಮ್ಮ ಸ್ನೇಹಿತೆಯರಾಗಿದ್ದಾರೆ, ನಿಮ್ಮ ಜೊತೆಗಿರಲು ಇಷ್ಟಪಡುತ್ತಾರೆ ಎಂದರೆ ನಿಮ್ಮಲ್ಲಿ ಹೋಮ್ಲಿಯಾದ ಯಾವುದೋ ಗುಣವನ್ನು ಕಂಡಿದ್ದಾರೆ ಎಂದೇ ಅರ್ಥ. ಅದನ್ನು ಕೆಡಿಸಿಕೊಳ್ಳಬೇಡಿ. ಬಹುಶಃ ಪ್ರೀತಿಯ ಅನುಭವ ಪಡೆಯುವ ನಿಮ್ಮ ಆತುರವೇ ಅವರನ್ನು ನಿಮ್ಮಿಂದ ದೂರ ಮಾಡಿರಲೂ ಬಹುದು.

#Feelfree: ಮಗಳು ನನ್ನ ಹತ್ರಾನೇ ಬರೋಲ್ಲ, ಏನು ಮಾಡಲಿ? ...

ನೀವೇನು ತಿಳಿದಿದ್ದೀರಿ ಅಂದ್ರೆ, ನೀವು ಸುಂದರವಾಗಿದ್ದೀರಿ, ಕಾರು ಇದೆ, ಬೈಕ್ ಇದೆ, ಶರೀರ ಗಟ್ಟಿಮುಟ್ಟಾಗಿದೆ- ಹೀಗಾಗಿ ಹುಡುಗಿಯರು ನಿಮಗೆ ಪಟಕ್ಕನೆ ಬೀಳಬೇಕು ಅಂತಲೇ? ಸಾರಿ ಡ್ಯೂಡ್. ಅದು ಹಾಗೆಲ್ಲ ನಡೆಯೋಲ್ಲ. ಪ್ರೀತಿ ಅಥವಾ ಕ್ರಶ್ ಅಥವಾ ಲವ್‌ಗೆ ಇನ್ನೂ ಏನೋ ಬೇಕಾಗುತ್ತೆ. ಅದು ಹಾಗೆಲ್ಲ ಲೆಕ್ಕಾಚಾರದಲ್ಲಿ ನಡೆಯೋಲ್ಲ. ಹುಡುಗಿಯರು ಗೆಳೆಯನನ್ನು ಆರಿಸುವ ಮುನ್ನ ಸಾಕಷ್ಟು ಲೆಕ್ಕಾಚಾರ ಹಾಕುತ್ತಾರೆ ಎಂದರೂ ಹೀಗಲ್ಲ. ಎಲ್ಲ ಸಮರ್ಪಕವಾಗಿ ಇರುವ, ಶ್ರೀಮಂತ ಹುಡುಗರಿಗೆ ಹುಡುಗಿಯರು ಬೀಳಬೇಕು ಎಂದೇನಿಲ್ಲ. ಕೆಲವೊಮ್ಮೆ ತೀರಾ ಬಡವರಾದ, ಆದರೆ ಪ್ರತಿಭಾವಂತರಾದ ಹುಡುಗರಿಗೆ ಒಲಿಯುತ್ತಾರೆ. ಇನ್ನು ಕೆಲವೊಮ್ಮೆ ಏನೂ ಇಲ್ಲದ, ಆದರೆ ಸಾಕಷ್ಟು ಹಾಸ್ಯಪ್ರಜ್ಞೆ ಇರುವ ಹುಡುಗರಿಗೆ ಒಲಿಯುತ್ತಾರೆ. ಇನ್ನು ಕೆಲವೊಮ್ಮೆ ತಾನು ಈತನಲ್ಲಿ ಏನನ್ನು ನೋಡಿ ಒಲಿದೆ ಎಂದು ಹೇಳಲು ಹುಡುಗಿಯರಿಗೆ ಗೊತ್ತೇ ಆಗೋಲ್ಲ. ಹಾಗಾಗಿ, ಈ ಲೆಕ್ಕಾಚಾರಗಳೆಲ್ಲಾ ಪ್ರೀತಿ ವಿಷಯದಲ್ಲಿ ವರ್ಕ್ ಔಟ್ ಆಗಲ್ಲ.

ಆತುರ ಬೇಡ. ನಿಮಗಿನ್ನೂ ಹದಿನೇಳು ವರ್ಷ ವಯಸ್ಸು. ಜೀವನದ ಕಾಲು ಭಾಗ ಕೂಡ ಇನ್ನೂ ಆಗಿಲ್ಲ. ನಿಮ್ಮ ಅಧ್ಯಯನ, ಓದು ಮುಗಿಯಲಿ. ಆ ಬಳಿಕ ಸಂಗಾತಿಗಳನ್ನು ಪಡೆಯುವತ್ತ ಗಮನ ಹರಿಸಿ. ಕಾಲೇಜಿನಲ್ಲೇ ಪ್ರೀತಿಯ ಅನುಭವ ಪಡೆಯಬೇಕೆಂದೇನಿಲ್ಲ. ಕಾಲೇಜು ಮುಗಿಸಿ ಕೆಲಸ ಮಾಡುತ್ತಲೂ ಪಡೆಯಬಹುದು. ಈ ವಿಷಯದಲ್ಲಿ ನಿಮ್ಮ ಗೆಳೆಯರ ಜೊತೆ ಪೈಪೋಟಿಗೆ ಬಿದ್ದು ಏನೂ ಪ್ರಯೋಜನವಿಲ್ಲ. ಯಾಕೆಂದರೆ ಕಾಲೇಜಿನ ಗೆಳೆತನ ಸ್ನೇಹಗಳೆಲ್ಲವೂ ಶಾಶ್ವತ ಪ್ರೀತಿ ಅಥವಾ ದಾಂಪತ್ಯವಾಗಿ ಮಾರ್ಪಾಡು ಆಗುವುದಿಲ್ಲ.

#Feelfree: ಸಾಕಷ್ಟು ತೇವ ಇಲ್ಲವಾದರೆ ಸೆಕ್ಸ್ ಉರಿ ಭಯಂಕರ! ...

ನೀವು ಮಾಡಬೇಕಾದ್ದು- ಪ್ರೀತಿಯ ಬಗ್ಗೆ ಗಮನ ಹರಿಸುವುದನ್ನು ಕಡಿಮೆ ಮಾಡಿ, ಗೆಳೆತನವನ್ನು ಹೆಚ್ಚಿಸುವುದು. ಯಾರಿಗೆ ಗೊತ್ತು, ನಿಮ್ಮ ಆತ್ಮೀಯ ಗೆಳತಿಯರಲ್ಲೇ ಒಬ್ಬಳು ಮುಂದೆ ನಿಮ್ಮ ಸಂಗಾತಿಯಾಗಲೂ ಬಹುದು. ಆದರೆ ನೀವು ಆತುರ ತೋರಿಸುವುದು ಸಲ್ಲದು. ಆತುರ ತೋರಿಸಿದರೆ ಹುಡುಗಿಯರು ನಿಮ್ಮ ಬಳಿಯಿಂದ ದೂರ ಓಡಿ ಹೋಗುತ್ತಾರೆ. ಅದರ ಬದಲು ಕಾಯುವುದು ಒಳ್ಳೆಯದು.

Latest Videos
Follow Us:
Download App:
  • android
  • ios