ಅತ್ತೆ-ಮಾವನನ್ನು ಡೀಲ್ ಮಾಡೋದ ಕಲಿತರೆ ಬದುಕು ಬಿಂದಾಸ್!
ನಿಮ್ಮ ಪೋಷಕರಿದ್ದಂತೆ ಪತಿಯ ಪೋಷಕರಿರುವುದಿಲ್ಲ. ಪತಿಗೆ ಕೂಡಾ ನಿಮ್ಮ ಪೋಷಕರು ಬೇರೆ ರೀತಿ ಇದ್ದಾರಲ್ಲ ಎನಿಸಬಹುದು. ನೀವು ಮಾಡಬೇಕಾದುದೇನೆಂದರೆ ಈ ಭಿನ್ನತೆಯನ್ನು ಅರ್ಥ ಮಾಡಿಕೊಳ್ಳುವುದು
ಅತ್ತೆ ಮಾವನೊಂದಿಗೆ ಸಂಬಂಧವನ್ನು ಚೆನ್ನಾಗಿ ತೆಗೆದುಕೊಂಡು ಹೋಗುವುದು ಬಹಳಷ್ಟು ಜನರಿಗೆ ಕಷ್ಟದ ಕೆಲಸವೇ. ಹಲವು ವರ್ಷಗಳ ಸ್ವಾತಂತ್ರ್ಯ ಅನುಭವಿಸಿದ ಬಳಿಕ ಪರಿಚಿತವಿಲ್ಲದ ಕುಟುಂಬದವರನ್ನು ತನ್ನವರೇ ಎಂದು ನಡೆಸಿಕೊಳ್ಳಬೇಕೆಂದರೆ ಕಷ್ಟವೇ. ಬಹುತೇಕರು ಈ ಸಂಬಂಧದಲ್ಲಿ ಒದ್ದಾಡುತ್ತಾರೆ. ಕೆಲವರಿಗೆ ಅತ್ತೆಮಾವ ತಮ್ಮ ವೈಯಕ್ತಿಕ ಜೀವನದಲ್ಲಿ ಮೂಗು ತೂರಿಸುವುದು ಇಷ್ಟವಾಗುವುದಿಲ್ಲವಾದರೆ, ಮತ್ತೆ ಕೆಲವರು ತಮ್ಮನ್ನು ಕುಟುಂಬದಲ್ಲೊಬ್ಬರಂತೆ ನೋಡುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ, ಇನ್ನು ಕೆಲವರಿಗೆ ಅತ್ತೆಮಾವನ ನಿರೀಕ್ಷೆಗಳನ್ನು ತಲುಪುವುದೇ ದುಸ್ಸಾಹಸದಂತೆ ಕಾಣುತ್ತದೆ. ಒಟ್ಟಿನಲ್ಲಿ ಒಬ್ಬೊಬ್ಬರದು ಒಂದೊಂದು ದೂರಿರುತ್ತದೆ.
ನೀವು ಕೂಡಾ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದರೆ ಅಥವಾ ಹೀಗೆ ಅತ್ತೆಮಾವನ ಸಂಬಂಧದೊಂದಿಗೆ ಒದ್ದಾಡುತ್ತಿದ್ದರೆ ಆರೋಗ್ಯಕರ ಸಂಬಂಧ ಹೊಂದಲು ನೆನಪಿಡಬೇಕಾದ ಕೆಲ ವಿಷಯಗಳಿಲ್ಲಿವೆ. ಖುಷಿಯಾಗಿರುವ ಜೋಡಿ ತಮ್ಮ ಅತ್ತೆಮಾವನೊಂದಿಗಿನ ಸಂಬಂಧವನ್ನು ನಿಭಾಯಿಸುವುದು ಹೀಗೆ.
ತಂಗಿಯಿಂದ ಮಾತ್ರ ಇವನ್ನೆಲ್ಲ ಕಲಿಯೋಕೆ ಸಾಧ್ಯ!
ಭಿನ್ನತೆಗಳನ್ನು ಅರ್ಥ ಮಾಡಿಕೊಳ್ಳುವುದು
ಎರಡು ಜೋಡಿ ಪೋಷಕರನ್ನು ಹೋಲಿಸಿ ನೋಡುವುದು ಮೊದಲ ತಪ್ಪು, ಪ್ರತಿಯೊಬ್ಬರೂ ವಿಭಿನ್ನವಾಗಿರುತ್ತಾರೆ. ನಿಮ್ಮ ಪೋಷಕರಿದ್ದಂತೆ ಪತಿಯ ಪೋಷಕರಿರುವುದಿಲ್ಲ. ಪತಿಗೆ ಕೂಡಾ ನಿಮ್ಮ ಪೋಷಕರು ಬೇರೆ ರೀತಿ ಇದ್ದಾರಲ್ಲ ಎನಿಸಬಹುದು. ನೀವು ಮಾಡಬೇಕಾದುದೇನೆಂದರೆ ಈ ಭಿನ್ನತೆಯನ್ನು ಅರ್ಥ ಮಾಡಿಕೊಳ್ಳುವುದು ಹಾಗೂ ಅವರ ಉತ್ತಮ ಗುಣಗಳನ್ನು ಹುಡುಕಿ ತೆಗೆದು ನೋಡುವುದು.
ಪ್ರಯತ್ನ
ನಿಮ್ಮ ಸಂಗಾತಿಯನ್ನು ನೀವು ಪ್ರೀತಿಸುವಿರಲ್ಲವೇ? ಅವರು ಈಗ ಹೇಗಿದ್ದಾರೋ ಹಾಗಿರಲು ಅವರ ಪೋಷಕರ ಪಾತ್ರ ಹೆಚ್ಚು. ನಿಮಗೆ ಅಂಥ ಉತ್ತಮ ಸಂಗಾತಿ ಸಿಗಲು ಕಾರಣ ಕೂಡಾ ಅವರೇ ಎಂದ ಮೇಲೆ ಗೌರವಿಸಲು ಈ ಕಾರಣವೇ ಸಾಕಲ್ಲವೇ? ಕುಟುಂಬದ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು, ಅವರ ಯೋಗಕ್ಷೇಮ ವಿಚಾರಿಸುವುದು, ಸಾಧ್ಯವಾದಷ್ಟು ಅತ್ತೆಮಾವನೊಡನೆ ಒಡನಾಡಲು ಪ್ರಯತ್ನ ಹಾಕಬೇಕು.
ಆರೋಗ್ಯಕರ ಮಿತಿ
ಎಲ್ಲ ಸಂಬಂಧಗಳಲ್ಲೂ ಆರೋಗ್ಯಕರ ಮಿತಿಯೊಂದನ್ನು ಹಾಕಿಕೊಳ್ಳುವುದು ಮುಖ್ಯ. ಅದರಲ್ಲೂ ಅತ್ತೆಮಾವನೊಡನೆ ಈ ಮಿತಿ ಬಹಳ ಮುಖ್ಯವಾಗುತ್ತದೆ. ಈ ಬಗ್ಗೆ ನಿಮ್ಮ ಸಂಗಾತಿಯ ಬಳಿ ಓಪನ್ ಆಗಿ ಮಾತನಾಡಿ. ಅತ್ತೆಮಾವನ ಯಾವ ಗುಣ ನಿಮಗೆ ಕಷ್ಟವೆನಿಸುತ್ತದೆ, ಅದನ್ನು ಸರಿಯಾಗಿಸಲು ಏನು ಮಾಡಬಹುದೆಂದು ಇಬ್ಬರೂ ಚರ್ಚಿಸಿ ತೀರ್ಮಾನಿಸಿ. ಎಲ್ಲಕ್ಕೂ ಪರಿಹಾರವಿದ್ದೇ ಇರುತ್ತದೆ. ಮತ್ತೆ ಕೆಲವು ಮಾತುಕತೆಯಿಂದ ಸರಿಯಾಗುತ್ತದೆ.
ನೆನಪಿನ ಶಕ್ತಿ ಹೆಚ್ಚಿಸೋಕೆ ಬೇಕು ಈ ಜೀವನಶೈಲಿ
ಸಂಬಂಧಗಳ ವ್ಯಾಖ್ಯಾನ
ಸಂಗಾತಿಯೊಂದಿಗಿನ ಸಂಬಂಧವೇ ಬೇರೆ, ಅತ್ತೆಮಾವನೊಂದಿಗಿನ ಸಂಬಂಧವೇ ಬೇರೆ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಅತ್ತೆಮಾವನೊಂದಿಗೆ ಸಂಬಂಧ ಹದಗೆಟ್ಟಿತೆಂದರೆ ಅದು ಸಂಗಾತಿಯೊಡನೆಯ ಸಂಬಂಧದ ನಡುವೆ ನುಗ್ಗದಂತೆ ನೋಡಿಕೊಳ್ಳಬೇಕು. ಹಾಗೆಯೇ ಪತಿ ಅಥವಾ ಪತ್ನಿಯ ಜೊತೆಗಿನ ಸಂಬಂಧದಲ್ಲಿ ಜಗಳವೋ, ಮನಸ್ತಾಪವೋ ಬಂದರೆ ಅದು ಅತ್ತೆಮಾವನ ಜೊತೆಗಿನ ಸಂಬಂಧದ ನಡುವೆ ನುಗ್ಗಬೇಕಿಲ್ಲ.
ಆಯ್ಕೆಗಳತ್ತ ಗಮನವಿರಲಿ
ಬಹಳಷ್ಟು ಬಾರಿ ಅತ್ತೆಮಾವನ ಮಾತುಗಳನ್ನು, ನಡೆಯನ್ನು ನಿಯಂತ್ರಿಸುವುದು ನಿಮ್ಮಿಂದ ಸಾಧ್ಯವಿರುವುದಿಲ್ಲ. ಆದರೆ ನಿಮ್ಮ ಮಾತು, ನಡೆಗಳನ್ನು ನಿಯಂತ್ರಿಸಿಕೊಳ್ಳಲು ಸಾಧ್ಯವಿರುತ್ತದೆ. ಉದಾಹರಣೆಗೆ ನಿಮ್ಮ ಮಗುವನ್ನು ಹೇಗೆ ಬೆಳೆಸಬೇಕೆಂಬ ಕುರಿತು ಅವರು ಕೊಡುವ ಸಲಹೆಗಳನ್ನು ನೀವು ನಿಯಂತ್ರಿಸಲಾರಿರಿ. ಆದರೆ, ಅದನ್ನು ಅಳವಡಿಸುವುದು ಬಿಡುವುದು ನಿಮ್ಮ ಕೈಲಿದ್ದೇ ಇರುತ್ತದೆ.