ಪ್ರೇಮಿಗಳ ದಿನದ ಆಚರಣೆಗೆ ವಿರೋಧ, ನಾಯಿಗಳಿಗೆ ಮದುವೆ ಮಾಡಿಸಿದ ಹಿಂದೂ ಸಂಘಟನೆ
ಫೆಬ್ರವರಿ 14, ಪ್ರೇಮಿಗಳ ದಿನ. ದೇಶಾದ್ಯಂತ ಜೋಡಿಗಳು ಪ್ರಪೋಸ್ ಮಾಡಿ, ಜೊತೆಯಾಗಿ ಸಮಯ ಕಳೆದು ಖುಷಿಯಿಂದ ಸಮಯ ಕಳೆಯುತ್ತಾರೆ. ಕೆಲವೊಬ್ಬರು ವಿದೇಶಿ ಸಂಸ್ಕೃತಿಯಾದ ವಾಲೆಂಟೈನ್ಸ್ ಡೇಗೆ ವಿರೋಧವನ್ನು ಸಹ ವ್ಯಕ್ತಪಡಿಸುತ್ತಾರೆ. ಹಾಗೆಯೇ ತಮಿಳುನಾಡಿನಲ್ಲಿ ಹಿಂದೂ ಸಂಘಟನೆಯೊಂದು ಪ್ರೇಮಿಗಳ ದಿನವನ್ನು ವಿರೋಧಿಸಿ ನಾಯಿಗಳ ಮದುವೆ ಮಾಡಿದೆ.
ತಮಿಳುನಾಡು: ಫೆಬ್ರವರಿ 14, ವಾಲೆಂಟೈನ್ಸ್ ಡೇ. ಪ್ರೇಮಿಗಳಿಗಾಗಿಯೇ ಮೀಸಲಾಗಿರುವ ದಿನ. ಈ ದಿನ ಹುಡುಗ-ಹುಡುಗಿಯರು ಪರಸ್ಪರ ಪ್ರಪೋಸ್ ಮಾಡುತ್ತಾರೆ. ಈಗಾಗಲೇ ಪ್ರೀತಿಯಲ್ಲಿದ್ವರು ತಮ್ಮ ಪ್ರೀತಿಯನ್ನು ಸೆಲಬ್ರೇಟ್ ಮಾಡುತ್ತಾರೆ. ಖುಷಿಯಿಂದ ಜೊತೆಯಾಗಿ ಸಮಯ ಕಳೆಯುತ್ತಾರೆ. ರೋಸ್ ನೀಡಿ, ಗಿಫ್ಟ್, ಡೇಟ್, ಡಿನ್ನರ್ ಎಂದು ಸ್ಪೆಷಲ್ ಆಗಿ ದಿನವನ್ನು ಎಂಜಾಯ್ ಮಾಡುತ್ತಾರೆ. ಆದರೆ ಇನ್ನೂ ಕೆಲವರು ಕೆಲವೊಬ್ಬರು ವಿದೇಶಿ ಸಂಸ್ಕೃತಿಯಾದ ವಾಲೆಂಟೈನ್ಸ್ ಡೇಗೆ ವಿರೋಧವನ್ನು ಸಹ ವ್ಯಕ್ತಪಡಿಸುತ್ತಾರೆ. ಪ್ರೇಮಿಗಳಿಗಾಗಿ ಒಂದು ದಿನವನ್ನು ಆಚರಿಸುವುದರಲ್ಲಿ ಅರ್ಥವಿಲ್ಲ. ವಾಲೆಂಟೈನ್ಸ್ ಡೇ ಹೆಸರಲ್ಲಿ ಯುವಜನತೆ ಹಾದಿ ತಪ್ಪುತ್ತಿದೆ ಎಂದು ಕಿಡಿಕಾರುತ್ತಾರೆ. ಹಾಗೆಯೇ ತಮಿಳುನಾಡಿನಲ್ಲಿ ಹಿಂದೂ ಸಂಘಟನೆಯೊಂದು ಪ್ರೇಮಿಗಳ ದಿನವನ್ನು ವಿರೋಧಿಸಿ ನಾಯಿಗಳ ಮದುವೆ ಮಾಡಿದೆ.
ಹಿಂದೂ ಸಂಘಟನೆಗಳಿಂದ ನಾಯಿಗಳಿಗೆ ಮದುವೆ
ಹೌದು, ಕೇಳೋಕೆ ಅಚ್ಚರಿಯೆನಿಸಿದರೂ ಇದು ನಿಜ. ಪ್ರೇಮಿಗಳ ದಿನ (Valentines day)ವನ್ನು ವಿರೋಧಿಸಿ ತಮಿಳುನಾಡಿನಲ್ಲಿ ಹಿಂದೂ ಸಂಘಟನೆ (Hindu organisation) ನಾಯಿಗಳ ಮದುವೆ ಮಾಡಿದೆ. ಪ್ರೇಮಿಗಳ ದಿನಾಚರಣೆಯನ್ನು ವಿರೋಧಿಸಿ ಹಿಂದಿ ಮುನ್ನಾನಿ ಸದಸ್ಯರು ತಮಿಳುನಾಡಿನ ಶಿವಗಂಗಾದಲ್ಲಿ ನಾಯಿಗಳ (Dog) ನಡುವೆ ಅಣಕು ವಿವಾಹ ಕಾರ್ಯಕ್ರಮಗಳನ್ನು ನಡೆಸಿದರು. ಹಿಂದೂ ಮುನ್ನಾನಿ ಪ್ರೇಮಿಗಳ ದಿನವನ್ನು ವಿರೋಧಿಸಿದ್ದು, ಇದು ಭಾರತದ ಸಂಸ್ಕೃತಿಗೆ (Indian culture) ವಿರುದ್ಧವಾದ ಆಚರಣೆ ಎಂದು ಕರೆದಿದೆ. ಬಲಪಂಥೀಯ ಸಂಘಟನೆಯ ಸದಸ್ಯರು ಪ್ರತಿ ವರ್ಷ ವಿವಿಧ ರೂಪಗಳಲ್ಲಿ ಪ್ರತಿಭಟನೆ ನಡೆಸುತ್ತಲೇ ಬಂದಿದ್ದಾರೆ.
Valentine's Day 2023: ಪ್ರೇಮಿಗೆ ಈ ದಿನವನ್ನು ವಿಶೇಷವಾಗಿಸಲು ನೀವೇನು ಮಾಡಬಹುದು?
ನಿನ್ನೆ ಹಿಂದೂ ಮುನ್ನಾನಿ ಪದಾಧಿಕಾರಿಗಳು ಎರಡು ನಾಯಿಗಳನ್ನು ಕರೆತಂದು ವಸ್ತ್ರ, ಹಾರಗಳನ್ನು ಹೊದಿಸಿದ್ದರು. ನಂತರ, ನಾಯಿಗಳಿಗೆ ಮದುವೆಯಾಗಿದೆ ಎಂದು ತೋರಿಸಲು ಸಿಬ್ಬಂದಿಯೊಬ್ಬರು ಸಾಂಕೇತಿಕವಾಗಿ ಗಂಟು ಕಟ್ಟಿದರು. ಪ್ರೇಮಿಗಳ ದಿನದಂದು ಸಾರ್ವಜನಿಕ ಸ್ಥಳಗಳಲ್ಲಿ ಪ್ರೇಮಿಗಳು ಅನುಚಿತವಾಗಿ ವರ್ತಿಸುತ್ತಾರೆ ಮತ್ತು ಇದನ್ನು ವಿರೋಧಿಸಿ ನಾಯಿಗಳ ಮದುವೆಯನ್ನು ನಡೆಸಲಾಗಿದ ಎಂದು ಹಿಂದೂ ಮುನ್ನಾನಿ ಕಾರ್ಯಕರ್ತರು ಹೇಳಿದ್ದಾರೆ.
Valentine Day : ಪ್ರೀತಿ ಸಿಗ್ಬೇಕೆಂದ್ರೆ ಪ್ರೇಮಿಗಳ ದಿನ ಬಟ್ಟೆ ಮೇಲೆ ಗಮನವಿರಲಿ
ಮಂಗಳೂರಿನಲ್ಲಿ ಪ್ರೇಮಿಗಳ ದಿನದ ಆಚರಣೆಗೆ ಬಜರಂಗದಳದ ವಿರೋಧ
ಇನ್ನೊಂದೆಡೆ ಮಂಗಳೂರಿನಲ್ಲಿ ಬಜರಂಗದಳ ವ್ಯಾಲೆಂಟೈನ್ಸ್ ಡೇಗೆ ವಿರೋಧ ವ್ಯಕ್ತಪಡಿಸಿದೆ. ಯಾವುದೇ ಸಂಬಂಧಿತ ವಸ್ತುಗಳನ್ನು ಮಾರಾಟ ಮಾಡದಂತೆ ಮನವಿ ಮಾಡಿಕೊಂಡಿದೆ. ಈ ದಿನವನ್ನು ಆಚರಿಸಲು ಜನರನ್ನು ಪ್ರಚೋದಿಸುವ ಯಾವುದೇ ವಸ್ತುಗಳನ್ನು ಮಾರಾಟ ಮಾಡದಂತೆ ವ್ಯಾಪಾರ ಮಳಿಗೆಗಳಲ್ಲಿ ಮನವಿ ಮಾಡಿದೆ. ಪ್ರಕಟಣೆಯಲ್ಲಿ ಬಜರಂಗದಳದ ಜಿಲ್ಲಾ ಸಂಚಾಲಕ ನವೀನ್ ಮೂಡುಶೆಡ್ಡೆ ಮಾತನಾಡಿ, ಭಾರತ ಪುಣ್ಯಭೂಮಿ ವಿಶಿಷ್ಟ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಹೊಂದಿದೆ. ನಮ್ಮ ಆಚರಣೆಗಳು ತಮ್ಮದೇ ಆದ ಪ್ರಾಮುಖ್ಯತೆಯನ್ನು ಹೊಂದಿವೆ ಮತ್ತು ಅವುಗಳಿಗೆ ಶತಮಾನಗಳ ಇತಿಹಾಸವಿದೆ. ಪಾಶ್ಚಿಮಾತ್ಯ ಸಂಸ್ಕೃತಿಯು ಭಾರತೀಯ ಪದ್ಧತಿಗಳಿಗೆ ಸವಾಲು ಹಾಕುತ್ತಿದೆ ಮತ್ತು ಯುವ ಪೀಳಿಗೆಯನ್ನು ತಮ್ಮತ್ತ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.
'ಪಾಶ್ಚಿಮಾತ್ಯ ಸಂಸ್ಕೃತಿಯು ನಮ್ಮ ಸಂಪ್ರದಾಯ ಮತ್ತು ಸಂಸ್ಕೃತಿಯ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರುತ್ತಿದೆ. ವ್ಯಾಲೆಂಟೈನ್ಸ್ ಡೇ ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ವ್ಯಾಲೆಂಟೈನ್ಸ್ ಡೇ ಹೆಸರಿನಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಹಾಗಾಗಿ ಪ್ರೇಮಿಗಳ ದಿನ ಆಚರಿಸಬಾರದು. ಎಲ್ಲಾ ಹೂವಿನ ಮಳಿಗೆಗಳು ಮತ್ತು ಉಡುಗೊರೆ ಕೇಂದ್ರಗಳು ಪ್ರೇಮಿಗಳ ದಿನವನ್ನು ಆಚರಿಸಲು ಯುವಕರನ್ನು ಆಕರ್ಷಿಸುವ ಯಾವುದೇ ವಸ್ತುಗಳನ್ನು ಮಾರಾಟ ಮಾಡಬಾರದು. ಜತೆಗೆ ಇಂತಹ ಆಚರಣೆಗೆ ಯಾರೂ ಬೆಂಬಲ ನೀಡಬಾರದು' ಎಂದು ಅವರು ಹೇಳಿದರು.