Asianet Suvarna News Asianet Suvarna News

Happy Life: ಸುಖಕರ ಜೀವನಕ್ಕೆ ನಿಮಗೆ ನೀವೇ ಕೊಡಬಹುದು ಈ ಉಡುಗೊರೆ

ಸಂತೋಷವನ್ನು ನಾವು ಇಡೀ ಪ್ರಪಂಚದಾದ್ಯಂತ ಹುಡುಕ್ತೇವೆ. ಆದ್ರೆ  ಆ ಕ್ಷಣಕ್ಕೆ ಸಿಗುವ ಆನಂದ ಕೆಲ ನಿಮಿಷದಲ್ಲೇ ಮಾಯವಾಗುತ್ತದೆ. ಸದಾ ಸಂತೋಷವಾಗಿರಲು ಏನು ಮಾಡ್ಬೇಕು ಎಂಬ ಗೊಂದಲ ಎಲ್ಲರನ್ನು ಕಾಡೋದು ಸಾಮಾನ್ಯ. ಅದಕ್ಕೆ ಇಲ್ಲಿ ಉತ್ತರವಿದೆ. 
 

Good Habits For Happy Life that keep you mental and physically healthy
Author
Bangalore, First Published Aug 16, 2022, 10:29 AM IST

ಪ್ರತಿಯೊಬ್ಬರೂ ಜೀವನದಲ್ಲಿ ಸಂತೋಷವಾಗಿರಲು ಬಯಸ್ತಾರೆ. ಇದಕ್ಕಾಗಿ ಸಾಕಷ್ಟು ಪ್ರಯತ್ನ ಮಾಡ್ತಾರೆ. ಕೆಲವರು ಸಂತೋಷವಾಗಿರಲು ಹಾಡು ಹೇಳಿದ್ರೆ ಮತ್ತೆ ಕೆಲವರು  ಆನಂದವಾಗಿರಲು ಶಾಪಿಂಗ್ ಮಾಡ್ತಾರೆ. ಮತ್ತೆ ಕೆಲವರು ವಾಕಿಂಗ್ ಹೋದ್ರೆ ಇನ್ನು ಕೆಲವರು ಸ್ನೇಹಿತರ ಜೊತೆ ಎಂಜಾಯ್ ಮಾಡ್ತಾರೆ. ಹೀಗೆ ಸಂತೋಷಕ್ಕಾಗಿ ಒಬ್ಬೊಬ್ಬರು ಒಂದೊಂದು ಕೆಲಸ ಮಾಡ್ತಾರೆ. ಇಷ್ಟೆಲ್ಲ ಮಾಡಿದ್ರೂ ಅನೇಕರಿಗೆ ಖುಷಿ ಸಿಗೋದಿಲ್ಲ. ಮನಸ್ಸಿನ ಮೂಲೆಯೊಂದರಲ್ಲಿ ಒಂದು ರೀತಿಯ ನೋವು ಕಾಡ್ತಿರುತ್ತದೆ. ಸಂಪೂರ್ಣ ಖುಷಿಯಾಗಿರೋದು ಹೇಗೆ, ಆ ಕ್ಷಣವನ್ನು ಹೇಗೆ ಆನಂದಿಸುವುದು ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತದೆ. ಇಂದು ನಾವು ಯಾವಾಗ್ಲೂ ಖುಷಿಯಾಗಿರಲು ಏನು ಮಾಡ್ಬೇಕು ಎಂಬುದನ್ನು ನಾವು ಹೇಳ್ತೇವೆ.

ಅತಿಯಾದ ನಿರೀಕ್ಷೆ (Expectation) ಇಟ್ಕೊಳ್ಳಬೇಡಿ : ಬಹುತೇಕ ಬಾರಿ ನಮ್ಮ ನಿರೀಕ್ಷೆ ಹೆಚ್ಚಿರುತ್ತದೆ. ನಾವು ಒಂದು ವಿಷ್ಯದ ಬಗ್ಗೆ ಅಥವಾ ಒಬ್ಬ ವ್ಯಕ್ತಿ ಬಗ್ಗೆ ಅತಿಯಾದ ನಿರೀಕ್ಷೆ ಇಟ್ಟುಕೊಂಡಿರ್ತೇವೆ. ಆದ್ರೆ ಈ ನಿರೀಕ್ಷೆಗಳನ್ನು ನಮ್ಮವರು ಪೂರೈಸಲು ಸಾಧ್ಯವಾಗದಿದ್ದಾಗ ಅಥವಾ ನಾವಂದುಕೊಂಡಂತೆ ಅದು ನಡೆಯದೆ ಹೋದ್ರೆ ಮನಸ್ಸು ಘಾಸಿಗೊಳ್ಳುತ್ತದೆ. ಸಂತೋಷ (Happiness) ಕಣ್ಮರೆಯಾಗುತ್ತದೆ. ಮನಸ್ಸು ದುಃಖಗೊಳ್ಳುತ್ತದೆ. ಅನೇಕ ಬಾರಿ ಕೋಪ (Anger) ಕ್ಕೂ ಇದು ಕಾರಣವಾಗಬಹುದು. ಹಾಗಾಗಿ ಜೀವನದಲ್ಲಿ ಸದಾ ಸಂತೋಷವಾಗಿರಬೇಕೆಂದ್ರೆ ನಿರೀಕ್ಷೆ ಇಟ್ಟುಕೊಳ್ಳದಿರುವುದು ಒಳ್ಳೆಯದು. ಯಾವುದೇ ವ್ಯಕ್ತಿ ಅಥವಾ ಯಾವುದೇ ವ್ಯಕ್ತಿ ಬಗ್ಗೆ ನಿರೀಕ್ಷೆ ಇಲ್ಲದೆ ಹೋದ್ರೆ ನೋವಾಗುವುದಿಲ್ಲ. ಬೇಸರವಾಗುವುದಿಲ್ಲ. ಫಲಾಫಲ ಅಪೇಕ್ಷಿಸದೆ ಕೆಲಸ ಮಾಡಿದ್ರೆ ಆಗ ಸಂತೋಷವಾಗಿರಬಹುದು ಎನ್ನುತ್ತಾರೆ ತಜ್ಞರು. 

ಸೂರ್ಯೋದಯ (Sunrise) ಕ್ಕಿಂತ ಮೊದಲು ಎದ್ದು ನೋಡಿ :  ಸೂರ್ಯ ನೆತ್ತಿ ಮೇಲೆ ಬಂದಾಗ ಏಳುವ ಅಭ್ಯಾಸ (practice) ವನ್ನು ಅನೇಕರು ಹೊಂದಿರ್ತಾರೆ. ಇದ್ರಿಂದ ಇಡೀ ದಿನಚರಿ ಏರುಪೇರಾಗುತ್ತದೆ. ಸಮಯಕ್ಕೆ ಸರಿಯಾಗಿ ಕೆಲಸ ಆಗ್ಲಿಲ್ಲ ಎಂದಾಗ ಚಡಪಡಿಕೆ, ಒತ್ತಡ (Stress) ವಾಗುತ್ತದೆ. ಕಂಡಕಂಡವರ ಮೇಲೆ ಕೋಪ ಬರಲು ಶುರುವಾಗುತ್ತದೆ. ಸಂತೋಷ ಮಾಯವಾಗುತ್ತದೆ. ಅದೇ ಬೆಳಿಗ್ಗೆ ಬೇಗ ಎದ್ದರೆ ಅದ್ರಿಂದ ಆಗುವ ಪ್ರಯೋಜನ ಅಪಾರ. ಇದು ನಿಮಗೆ ನೀವು ನೀಡುದ ದೊಡ್ಡ ಉಡುಗೊರೆ ಅಂದ್ರೆ ತಪ್ಪಾಗೋದಿಲ್ಲ. ಬೆಳಗ್ಗೆ ಬೇಗ ಎದ್ದರೆ ನಿಮ್ಮ ಅರ್ಧದಷ್ಟು ಸಮಸ್ಯೆಗೆ ಪರಿಹಾರ ಸಿಗುತ್ತದೆ. ನಿಮಗೆ ಹೆಚ್ಚು ಸಮಯ ಸಿಗುವುದ್ರಿಂದ ಯಾವುದೇ ಒತ್ತಡವಿಲ್ಲದೆ ಅಂದಿನ ಕೆಲಸವನ್ನು ನೀವು ಮಾಡ್ಬಹುದು. ಮಾಡಿದ ಕೆಲಸ ಖುಷಿ ನೀಡುತ್ತದೆ. ಸೂರ್ಯೋದಯಕ್ಕಿಂತ ಮೊದಲು ಎದ್ದರೆ ಆ ಶಾಂತ ವಾತಾವರಣ ನಿಮ್ಮ ಮನಸ್ಸಿಗೆ ಮುದ ನೀಡುತ್ತದೆ. ನಿಮಗೆ ಅರಿವಿಲ್ಲದೆ ನಿಮ್ಮ ಮನಸ್ಸು ಖುಷಿಗೊಂಡಿರುತ್ತದೆ. ಇಡೀ ದಿನ ಎನರ್ಜಿ ಇರುವುದಲ್ಲದೆ, ಸಂತೋಷದ ದಿನ ನಿಮ್ಮದಾಗುತ್ತದೆ. 

ಬಾಯ್‌ ಫ್ರೆಂಡಿನ ಮನದಲ್ಲಿ ಸೆಕ್ಸ್‌ ಬಯಕೆಯೊಂದೇ ಇದ್ಯಾ? ತಿಳ್ಕೊಳೋದು ಹೇಗೆ?

ಯೋಗ (Yoga) – ವ್ಯಾಯಾಮ (Exercise) : ಯೋಗ ಅಥವಾ ವ್ಯಾಯಾಮ ಉತ್ತಮ ಅಭ್ಯಾಸಗಳಲ್ಲಿ ಒಂದಾಗಿದೆ. ನೀವು ಯಾವ ದಿನ ಯೋಗ, ವ್ಯಾಯಾಮ ಅಥವಾ ವಾಕಿಂಗ್ ಮಾಡುತ್ತೀರೋ ಆ ದಿನ ನೀವು ದೇಹ ಹಗುರವಾಗಿರುವ ಅನುಭವವಾಗುತ್ತದೆ. ಜೊತೆಗೆ ಮನಸ್ಸು ಕೂಡ ನಿರಾಳವಾಗಿರುತ್ತದೆ.  ನೀವು ವರ್ಕ್ ಔಟ್ ಮಿಸ್ ಮಾಡಿದ್ದರೆ ಅಥವಾ ಸರಿಯಾದ ರೀತಿಯಲ್ಲಿ ವರ್ಕ್ ಔಟ್ ಮಾಡಿಲ್ಲ ಎಂದಾದ್ರೆ ಇಡೀ ದಿನ ಹಾಳಾಗುತ್ತದೆ. ಯಾವುದೇ ಕೆಲಸ ಮಾಡಲು ನಿಮಗೆ ಉತ್ಸಾಹವಿರುವುದಿಲ್ಲ. 

45ರ ಪುರುಷರಲ್ಲೂ ಇಪ್ಪತ್ತೈದರ ಲೈಂಗಿಕಾಸಕ್ತಿ! Lifestyle ಹೇಗಿದ್ದರೆ ಚೆಂದ?

ನಿಮ್ಮನ್ನು ಅರ್ಥ ಮಾಡಿಕೊಳ್ಳಿ : ಸಂತೋಷ ಎನ್ನುವುದು ಹೊರಗಿನ ಪ್ರಪಂಚದಲ್ಲಿಲ್ಲ ಎಂಬುದನ್ನು ನೀವು ಅರಿಯಬೇಕು. ಬೇರೆಯವರಿಂದ ಸಿಗುವ ಸಂತೋಷ ಕ್ಷಣಿಕವಾಗಿರುತ್ತದೆ. ಸಂತೋಷ ನಮ್ಮಲ್ಲಿಯೇ ಅಡಗಿರುತ್ತದೆ. ಅದನ್ನು ಹೊರ ತೆಗೆಯುವ ಪ್ರಯತ್ನವಾಗ್ಬೇಕು. ಬೇರೆಯವರು ಸಂತೋಷ ನೀಡ್ತಾರೆಂದು ಕಾಯದೆ ನೀವು ನಿಮ್ಮನ್ನು ಅರಿತಾಗ ಸಂತೋಷ ಪಡೆಯುವುದು ಸುಲಭವಾಗುತ್ತದೆ. 

Follow Us:
Download App:
  • android
  • ios