Asianet Suvarna News Asianet Suvarna News

45ರ ಪುರುಷರಲ್ಲೂ ಇಪ್ಪತ್ತೈದರ ಲೈಂಗಿಕಾಸಕ್ತಿ! Lifestyle ಹೇಗಿದ್ದರೆ ಚೆಂದ?

ವಯಸ್ಸು ನಲವತ್ತೈದು ಸಮೀಪಿಸುತ್ತಿರುವಂತೆ ಪುರುಷರ ಲೈಂಗಿಕ ಆಸಕ್ತಿ ಕಡಿಮೆ ಆಗುತ್ತೆ ಅನ್ನುವ ಮಾತಿದೆ. ಹೆಚ್ಚುವ ಜವಾಬ್ದಾರಿಗಳು, ಅನಾರೋಗ್ಯ, ಒತ್ತಡವೂ ಇದಕ್ಕೆ ಕಾರಣ ಇರಬಹುದು. ಆದರೆ ಕೆಲವೊಂದು ಆಹಾರವನ್ನು ನಿಯಮಿತವಾಗಿ ಸೇವಿಸಿದರೆ ನಲವತ್ತೈದರಲ್ಲೂ ಇಪ್ಪತ್ತೈದರ ಲೈಂಗಿಕಾಸಕ್ತಿ ಹೊಂದಬಹುದು ಎನ್ನಲಾಗಿದೆ.

Sex interest after 45 what to be done and how to be lifestyle
Author
Bengaluru, First Published Aug 15, 2022, 11:03 AM IST

ವಯಸ್ಸು ನಲವತ್ತು ದಾಟಿ ಮುಂದೆ ಹೋಗುವಾಗ ಅನೇಕ ದೈಹಿಕ ಮಾನಸಿಕ ಒತ್ತಡಗಳು ವ್ಯಕ್ತಿಯನ್ನು ಅಲ್ಲಾಡಿಸಿಬಿಡುತ್ತವೆ. ಜೊತೆಗೆ ಭವಿಷ್ಯದ ಅಭದ್ರತೆ, ಕುಟುಂಬದ ಜವಾಬ್ದಾರಿ, ಅನಾರೋಗ್ಯ ಇತ್ಯಾದಿ ಸಮಸ್ಯೆಗಳಿಂದ ಆತನಿಗೆ ಲೈಂಗಿಕ ಆಸಕ್ತಿ ಕಡಿಮೆ ಆಗುತ್ತಾ ಹೋಗುತ್ತದೆ. ಮಧ್ಯವಯಸ್ಸಿನಲ್ಲಿ ಹಾರ್ಮೋನುಗಳ ಏರಿಳಿತವೂ ಸಮಸ್ಯೆ ಉಂಟು ಮಾಡಬಹುದು. ಆದರೆ ಇತ್ತೀಚಿನ ಅಧ್ಯಯನಗಳ ಪ್ರಕಾರ ಆಹಾರ ಕ್ರಮದಲ್ಲಿ ಒಂದಿಷ್ಟು ಬದಲಾವಣೆ ಮಾಡಿಕೊಂಡು, ಕೆಲವೊಂದು ಆಹಾರವನ್ನು ನಿಯಮಿತವಾಗಿ ಸೇವಿಸುವ ಮೂಲಕ, ನಮ್ಮ ಲೈಫ್‌ಸ್ಟೈಲ್, ಯೋಚನೆಗಳಲ್ಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ನಲವತ್ತೈದರಲ್ಲೂ ಇಪ್ಪತ್ತೈದರ ಲೈಂಗಿಕಾಸಕ್ತಿ ಹೊಂದಬಹುದು. ಲೈಂಗಿಕ ಬದುಕು ಚೆನ್ನಾಗಿದ್ದರೆ ನಿತ್ಯದ ಜವಾಬ್ದಾರಿ ನಿಭಾಯಿಸುವುದರಲ್ಲಿ ಉತ್ಸಾಹ ಬರುತ್ತದೆ. ಅಭದ್ರತೆ, ಕೀಳರಿಮೆ ಜಾಗದಲ್ಲಿ ಆತ್ಮವಿಶ್ವಾಸ, ಸಂತೋಷಗಳಿರುತ್ತವೆ. ಅಷ್ಟಕ್ಕೂ ಇದನ್ನೆಲ್ಲ ಬದುಕಿನಲ್ಲಿ ಅಳವಡಿಸಿಕೊಳ್ಳಲು ಹೆಚ್ಚು ಕಷ್ಟ ಪಡಬೇಕಾಗಿಯೂ ಇಲ್ಲ. ಆದರೆ ಮನಸ್ಸು ಮಾಡಬೇಕಿರುವುದು, ಅಭ್ಯಾಸಗಳನ್ನು ಬಿಡದೇ ಪಾಲಿಸುತ್ತಾ ಹೋಗುವುದು ಬಹಳ ಮುಖ್ಯವಾಗುತ್ತದೆ.

ಕೆಟ್ಟ ಚಟ, ಅಭ್ಯಾಸಗಳು ನಿಯಂತ್ರಣದಲ್ಲಿರಲಿ
ಸಿಗರೇಟು ಸೇವನೆ ಒಂದು ಹಂತದಲ್ಲಿ ಲೈಂಗಿಕ ಆಸಕ್ತಿ ಕಡಿಮೆ ಆಗುವಂತೆ ಮಾಡುತ್ತದೆ. ಬೆಡ್‌ರೂಮ್ ನಲ್ಲಿ ಮೆರೆಯಬೇಕಾದರೆ ಸಿಗರೇಟಿಗೆ ಗುಡ್ ಬೈ ಹೇಳೋದು ಅನಿವಾರ್ಯ. ಅತಿಯಾದ ಕುಡಿತವೂ ಒಂದು ಹಂತದ ನಂತರ ನಿಮ್ಮಲ್ಲಿ ಲೈಂಗಿಕ ಆಸಕ್ತಿ ಕಡಿಮೆ ಮಾಡಬಹುದು. ಪೋರ್ನ್ ವೀಡಿಯೋಗಳ ಅತಿಯಾದ ವೀಕ್ಷಣೆ ಒಂದು ಹಂತದಲ್ಲಿ ಲೈಂಗಿಕತೆ ಬಗ್ಗೆ ನಿರಾಸಕ್ತಿ ಮೂಡಿಸುವ ಸಾಧ್ಯತೆ ಇದೆ ಅನ್ನೋದು ಇತ್ತೀಚೆಗೆ ದೃಢಪಟ್ಟಿದೆ.

ಸಂಗಾತಿ ಜೊತೆಗೆ ಮುಚ್ಚುಮರೆ ಬೇಡ
ಸಂಗಾತಿಯ ಜೊತೆಗೆ ನಿಮ್ಮ ಒಡನಾಟ ಹೆಚ್ಚಿದಷ್ಟೂ ಲೈಂಗಿಕಾಸಕ್ತಿ ಪುರುಷರಲ್ಲಿ ಮಾತ್ರ ಅಲ್ಲ, ಹೆಣ್ಣುಮಕ್ಕಳಲ್ಲೂ ಹೆಚ್ಚಾಗುತ್ತೆ. ನಿಮ್ಮ ಲೈಂಗಿಕ ಬದುಕಲ್ಲಿ ಅನ್ ಕಂಫರ್ಟ್ ಫೀಲ್ ಬರೋದಿಲ್ಲ. ಸಂಗಾತಿಯ ಜೊತೆಗೆ ಮುಕ್ತವಾಗಿ ಎಲ್ಲ ವಿಚಾರ ಹಂಚಿಕೊಳ್ಳುವುದು, ಪ್ರಾಮಾಣಿಕತೆ ಇದ್ದರೆ ಲೈಂಗಿಕ ಬದುಕಲ್ಲಿ ತೃಪ್ತಿ ಸಿಗುತ್ತೆ. ಇದು ದೈನಂದಿನ ಬದುಕಲ್ಲೂ ಉತ್ಸಾಹ ತುಂಬುತ್ತದೆ.

ಸೆಕ್ಸ್ ನಂತರ ಪುರುಷರ ತಲೆಯಲ್ಲಿ ಓಡುವ ವಿಚಾರಗಳಿವು!

ಪರಸ್ಪರ ಖುಷಿ, ಇಷ್ಟವಾಗದ್ದರೆ ಬಗ್ಗೆ ತಿಳಿದಿರಲಿ
ಸೆಕ್ಸ್‌ನಲ್ಲೂ ಕೆಲವು ಪೊಸಿಶನ್‌ ಗಳು ಸಂಗಾತಿಗೆ ಹೆಚ್ಚು ಖುಷಿ ಕೊಡಬಹುದು. ಅವರಲ್ಲಿ ಲೈಂಗಿಕಾಸಕ್ತಿ ಹೆಚ್ಚಿಸುವ ಕೆಲವು ಟ್ರಿಕ್‌ಗಳನ್ನು ನೀವು ತಿಳಿದುಕೊಳ್ಳಬೇಕು. ಲೈಂಗಿಕತೆ ಅನ್ನೋದು ಸ್ನಾನ, ದೈನಂದಿನ ಚಟುವಟಿಕೆಯಂತೆ ನೀರಸವಾಗಿರಬಾರದು. ಅದರಲ್ಲಿ ಹೊಸತನ ತರಲು ಸದಾ ಪ್ರಯತ್ನಿಸಬೇಕು.

ಲೈಂಗಿಕ ಆಸಕ್ತಿ ಆಹಾರ ಪದಾರ್ಥಗಳು
- ಪ್ರತಿದಿನ ಶುಂಠಿ ಸೇವನೆ ಮಾಡುವುದರಿಂದ ಲೈಂಗಿಕ ಆಸಕ್ತಿ ಹೆಚ್ಚಾಗುತ್ತದೆ ಎನ್ನಲಾಗುತ್ತದೆ. ಅಲ್ಲದೇ ಇದು ರೋಗನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ. ಜೇನುತುಪ್ಪ ಸಹ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಸ್ವಲ್ಪ ಶುಂಠಿ ಪುಡಿಯ ಜೊತೆ ಜೇನುತುಪ್ಪವನ್ನು ಸೇರಿಸಿ ತಿನ್ನುವುದು ಪುರುಷರಲ್ಲಿ ಲೈಂಗಿಕ ಆಸಕ್ತಿ ಹೆಚ್ಚಾಗಲು ಕಾರಣವಾಗುತ್ತದೆ.
- ಮೊಟ್ಟೆಯ ಪ್ರಯೋಜನಗಳು ಒಂದೆರೆಡಲ್ಲ. ಮೊಟ್ಟೆಯನ್ನು ಅರ್ಧ ಬೇಯಿಸಿ ಅದಕ್ಕೆ ಶುಂಠಿ ರಸ ಮತ್ತು ಜೇನುತುಪ್ಪ ಸೇರಿಸಿ ರಾತ್ರಿ ಮಲಗುವ ಮುನ್ನ ಸೇವನೆ ಮಾಡುವುದು ಲೈಂಗಿಕ ಜೀವನ ಚನ್ನಾಗಿರಲು ಸಹಾಯ ಮಾಡುತ್ತದೆ.
- ಪಲಾವ್‌ಗೆ ಬಳಸುವ ಸ್ಟಾರ್ ಹೂವುಗಳನ್ನು ರಾತ್ರಿ ನೆನೆಹಾಕಿ ಮರುದಿನ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.
- ವೀಳ್ಯದ ಎಲೆಯಲ್ಲಿ ಪುರುಷರ ಜನನಾಂಗಗಳ ಕಾರ್ಯ ಚಟುವಟಿಕೆಯನ್ನು ಹೆಚ್ಚಿಸುವ ಮತ್ತು ದೇಹದ ನರನಾಡಿಗಳಲ್ಲಿ ಶಕ್ತಿ ಸಂಚಲನ ಉಂಟು ಮಾಡುವ ಶಕ್ತಿ ಇದೆ. ಹಾಗಾಗಿ ದಿನಕ್ಕೊಂದು ಎಲೆ ತಿನ್ನುವ ಅಭ್ಯಾಸ ಒಳ್ಳೆಯದು

Relationship Tips : ಮೊದಲ ಬಾರಿ ಸೆಕ್ಸ್ ವೇಳೆ ನೋವಾಗೋದನ್ನು ಹೀಗೆ ತಪ್ಪಿಸಿ

- ಪುರುಷರಲ್ಲಿ ಲೈಂಗಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಶಕ್ತಿ ಬೀಟ್‌ರೂಟ್‌ಗೆ ಇದೆ. ನಿತ್ಯ ಬೀಟ್‌ರೂಟ್‌ ರಸ ಸೇವಿಸುವ ಅಭ್ಯಾಸ ರೂಢಿಸಿಕೊಳ್ಳಿ. ನಿಮಿರುವಿಕೆಯ ಸಮಸ್ಯೆಯನ್ನು ಇದು ನಿವಾರಿಸಲಿದೆ.
- ಲೈಂಗಿಕ ಜೀವನವನ್ನು ಉತ್ತೇಜಿಸಲು ನಿಮ್ಮ ಆಹಾರದಲ್ಲಿ ಕಾಳು ಮೆಣಸು ಇರಲಿ. ಸ್ನಾಯುಗಳು, ಹೃದಯ, ಸೇರಿದಂತೆ ಲೈಂಗಿಕ ಅಂಗಗಳಿಗೆ ಉತ್ತಮ ರಕ್ತದ ಹರಿವನ್ನು ಒದಗಿಸುತ್ತದೆ.
- ಡಾರ್ಕ್‌ ಚಾಕೊಲೇಟ್ ರಕ್ತದೊತ್ತಡವನ್ನು ಸಮಪ್ರಮಾಣದಲ್ಲಿ ಇಡುತ್ತದೆ. ಕೊಲೆಸ್ಟ್ರಾಲ್‌ ಅನ್ನು ಕಡಿಮೆಗೊಳಿಸುತ್ತದೆ. ಇದು ಲೈಂಗಿಕತೆಯನ್ನು ಕೂಡ ಉತ್ತೇಜಿಸುತ್ತದೆ.
- ಪುರುಷರು ತಮ್ಮ ಲೈಂಗಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಖಂಡಿತವಾಗಲೂ ಕಲ್ಲಂಗಡಿ ಹಣ್ಣನ್ನು ಸೇವಿಸಬೇಕು. ಇದರಿಂದ ಉದ್ರೇಕ ಸಮಸ್ಯೆಯಿಂದ ಮುಕ್ತರಾಗಬಹುದು.

Follow Us:
Download App:
  • android
  • ios