Asianet Suvarna News Asianet Suvarna News

ಬಾಯ್‌ ಫ್ರೆಂಡಿನ ಮನದಲ್ಲಿ ಸೆಕ್ಸ್‌ ಬಯಕೆಯೊಂದೇ ಇದ್ಯಾ? ತಿಳ್ಕೊಳೋದು ಹೇಗೆ?

ನಿಮ್ಮ ಬಾಯ್‌ ಫ್ರೆಂಡ್‌ ನಿಮ್ಮೊಂದಿಗೆ ಪದೇ ಪದೆ ಸೆಕ್ಸ್‌ ಬಗ್ಗೆ ಮಾತನಾಡುತ್ತಾರೆಯೇ? ರಾತ್ರಿ ಸಮಯದಲ್ಲಿ ಗುಟ್ಟಾಗಿ ನಿಮ್ಮನ್ನು ಭೇಟಿಯಾಗುವ ಆಕಾಂಕ್ಷೆ ತೋರುತ್ತಾರೆಯೇ? ಹುಷಾರು, ಅವರು ನಿಮ್ಮೊಂದಿಗೆ ಕೇವಲ ಲೈಂಗಿಕ ಕ್ರಿಯೆ ನಡೆಸುವ ಉದ್ದೇಶ ಹೊಂದಿರಬಹುದು. 

Can your boyfriend wants only sex with you how true love could be found
Author
Bangalore, First Published Aug 15, 2022, 5:41 PM IST

ಪದೇ ಪದೆ ಬಾಯ್‌ ಫ್ರೆಂಡ್ ನೆನಪಾಗುತ್ತಾನೆ. ಬೆಳಗ್ಗೆ ಎದ್ದರೆ ಅವನದೇ ನೆನಪು, ಸಂಜೆ ಮಲಗುವ ಮುನ್ನ ಅವನೊಂದಿಗೇ ಚಾಟ್. ಯಾವಾಗ ಭೇಟಿ ಆಗುತ್ತೇನೋ ಎನ್ನುವ ಕಾತುರ. ದಿನಕ್ಕೆ ಒಮ್ಮೆಯಾದರೂ ಭೇಟಿ ಮಾಡದಿದ್ದರೆ ಸಮಾಧಾನವಿಲ್ಲ. ಇದೇನು ಪ್ರೀತಿಯೋ, ದೀರ್ಘಕಾಲದ ಸಂಬಂಧದ ಮುನ್ನುಡಿಯೋ ಎನ್ನುವ ಪ್ರಶ್ನೆ ಕಾಡುತ್ತದೆ. ಅವನ ಆಕರ್ಷಕ ಸಾಂಗತ್ಯದಲ್ಲಿ ಅದ್ಯಾವಾಗ ದೈಹಿಕ ಸಂಬಂಧವೂ ಏರ್ಪಟ್ಟಿತು ಎನ್ನುವುದೇ ಗೊತ್ತಾಗುವುದಿಲ್ಲ. ಅಷ್ಟೆ. ಜೀವನದಲ್ಲಿ ರಮ್ಯವಾದ ಕನಸುಗಳನ್ನು ಕಾಣಲು ಕಾರಣನಾಗಿದ್ದ ಅವನೇ ದುಃಸ್ವಪ್ನವಾಗಿ ಕಾಡಲು ಶುರುವಾಗಬಹುದು. ನಿಮ್ಮ ಸಂಬಂಧ ಕೇವಲ ಲೈಂಗಿಕ ಕ್ರಿಯೆಯಲ್ಲೇ ಮುಗಿದು ಹೋಗಬಹುದು. ಕೆಲವರಿಗೆ ಸಾಕಷ್ಟು ಕೆಟ್ಟ ಅನುಭವಗಳೂ ಆಗಬಹುದು. ದೈಹಿಕ ಸಂಬಂಧಕ್ಕಾಗಿಯಷ್ಟೇ ಆತ ನಿಮ್ಮನ್ನು ಬಳಸಿಕೊಳ್ಳಬಹುದು. ಅದಕ್ಕಾಗಿ ಯಾವ ಕೃತ್ಯಕ್ಕೂ ಇಳಿಯಬಹುದು. ಬ್ಲಾಕ್‌ ಮೇಲ್‌ ಮಾಡಬಹುದು. ಇಂದಿನ ಅಂತರ್ಜಾಲದ ಯುಗದಲ್ಲಂತೂ ಯಾವ ರೀತಿ ಬೇಕಿದ್ದರೂ ನಿಮ್ಮ ಫೋಟೊಗಳು ಹರಿದಾಡಬಹುದು. ಕಲ್ಪಿಸಿಕೊಂಡರೇ ಮೈ ಜುಂ ಎನ್ನುತ್ತದೆ ಅಲ್ಲವೇ? ಇವೆಲ್ಲ ಅನುಭವಗಳು ಖಂಡಿತ ಜೀವನಕ್ಕೆ ಬೇಕಾಗಿಲ್ಲ. ಹೀಗಾಗಿ ಎಚ್ಚರಿಕೆ ವಹಿಸುವುದು ಸೂಕ್ತ. ನಿಮ್ಮ ಸ್ನೇಹಿತ ನಿಮ್ಮೊಂದಿಗೆ ಲೈಂಗಿಕ ಕ್ರಿಯೆಗಷ್ಟೇ ಆಸಕ್ತಿ ತೋರುತ್ತಿರಬಹುದು ಎನ್ನುವ ಅನುಮಾನವೊಂದು ನಿಮ್ಮಲ್ಲಿ ಇರಲಿ. ನಿಜಕ್ಕೂ ಆತ ನಿಮ್ಮೊಂದಿಗೆ ದೈಹಿಕ ಸಂಬಂಧಕ್ಕೆ ಆಸಕ್ತಿ ತೋರುತ್ತಿದ್ದಾನೆ ಎನ್ನುವುದನ್ನು ಕೆಲವು ಲಕ್ಷಣಗಳ ಮೂಲಕ ಅರಿತುಕೊಳ್ಳಬಹುದು.

•    ಆತ ಕಳಿಸುವ ಮೆಸೇಜ್‌ (Message) ಮೇಲೆ ಗಮನವಿರಲಿ
ನೀವು ಸ್ನೇಹಿತನ ಬಣ್ಣಬಣ್ಣದ ಮಾತಿನಿಂದ ಈ ಜಗತ್ತನ್ನೇ ಮರೆಯಬಹುದು. ಆದರೂ ಒಂದು ಕ್ಷಣ ಆತ ಕಳಿಸಿದ ಮೆಸೇಜ್‌ ಗಳನ್ನು ನೆನಪಿಸಿಕೊಳ್ಳಿ. ನಿಮ್ಮ ಸ್ನೇಹವಾದ ಕೆಲವೇ ದಿನಗಳಲ್ಲಿ ಆತ ನಿಮಗೆ ಸೆಕ್ಸ್‌ (Sex) ಕುರಿತ ಮೆಸೇಜ್‌ ಗಳನ್ನು ಕಳಿಸಿರಬಹುದು. ಅಥವಾ ನೇರವಾಗಿಯೇ ಫೋಟೊ, ವಿಡಿಯೋಗಳಿಗೆ ಬೇಡಿಕೆ ಇಟ್ಟಿರಬಹುದು. “ಇದೆಲ್ಲ ಕಾಮನ್‌ʼ ಎಂದುಕೊಳ್ಳಬೇಡಿ. ಸ್ನೇಹವಾದ (Friendship) ಕೆಲ ಸಮಯದಲ್ಲೇ ಸೆಕ್ಸ್‌ ಬಗ್ಗೆ ಮಾತನಾಡುವುದು ಆತನಿಗಿರುವ ಒಲವನ್ನು ತೋರುತ್ತದೆ. ನಿಮ್ಮ ಮಾತುಕತೆಯಲ್ಲಿ ಈ ಬಗ್ಗೆ ಎಷ್ಟು ಬಾರಿ ಪ್ರಸ್ತಾಪವಾಗಿದೆ ಎನ್ನುವುದನ್ನು ಗಮನಿಸಿ.

ಯುವಕನ ಜತೆ ಜುಂಬಾ ಡ್ಯಾನ್ಸರ್ ಪ್ರೇಮಗಾಥೆ, ಮದ್ವೆಗೆ ಸಿದ್ದವಾಗಿದ್ದ ಜೋಡಿ ಸಾವಿನ ಕದ ತಟ್ಟಿದ್ಯಾಕೆ?

•    ಭೇಟಿಯಾಗುವ ಸ್ಥಳ (Meeting Place) ಯಾವುದು?
ನೀವಿಬ್ಬರೇ ಭೇಟಿಯಾಗಬೇಕು ಎಂದುಕೊಂಡಿದ್ದೀರಿ. ಅವರು ಎಲ್ಲಿಗೆ ನಿಮ್ಮನ್ನು ಆಹ್ವಾನಿಸಿದ್ದಾರೆ? ಅಥವಾ ನೀವೇ ಅವರನ್ನು ಎಲ್ಲಿಗೆ ಆಹ್ವಾನಿಸಿದ್ದೀರಿ ಎನ್ನುವುದು ಮುಖ್ಯ. ಮೊದಲ ಭೇಟಿಯಲ್ಲೇ ಅವರು “ಯಾರೂ ಇಲ್ಲದಿರುವಾಗ ಮನೆಗೆ ಬರ್ತೀನಿʼ ಅಥವಾ “ನಮ್ಮನೆಯಲ್ಲಿ ಯಾರೂ ಇಲ್ಲ, ನೀನೇ ಬಾʼ ಎನ್ನುತ್ತಾರೆಯೇ? ಹಾಗಾದರೆ ಅವರ ಉದ್ದೇಶ ಸ್ಪಷ್ಟ. ಮೊದಲ ಭೇಟಿಯಲ್ಲಿ ಸಾಮಾನ್ಯವಾಗಿ ಮಧ್ಯಾಹ್ನ ಅಥವಾ ಸಂಜೆಯ ಊಟ (Dinner) ಇಲ್ಲವೇ ಸಿನಿಮಾ (Cinema) ವೀಕ್ಷಣೆ ಮಾಡುವುದು ಸಾಮಾನ್ಯ. ಅದರ ಬದಲು ರಾತ್ರಿ (Night) ಸಮಯದಲ್ಲಿ ಹೊರಗೆ ಹೋಗೋಣ ಎನ್ನುತ್ತಾರೆಯೇ? ಪಾರ್ಟಿಗೆ (Party) ಕರೆಯುತ್ತಾರೆಯೇ? ಲಾಂಗ್‌ ಡ್ರೈವ್‌ (Long Drive) ಆಸೆ ಹುಟ್ಟಿಸುತ್ತಾರೆಯೇ? ಈಗಲೇ ಎಚ್ಚೆತ್ತುಕೊಳ್ಳಿ. ಅವರ ಭ್ರಮೆಯಲ್ಲಿ ಬದುಕಿನ ಕೆಲ ಸಮಯವನ್ನು ಹಾಳು ಮಾಡಿಕೊಳ್ಳಬೇಡಿ.

•    ಭೇಟಿಯ ಸಮಯ (Time)
ಲೇಟ್‌ ನೈಟ್‌ ಪಾರ್ಟಿಯಲ್ಲಿ ಪಾಲ್ಗೊಳ್ಳುವುದು, ಸ್ನೇಹಿತರ ಮನೆಯಲ್ಲಿ ಸೇರುವುದು ಎಲ್ಲವೂ ನಿಜಕ್ಕೂ ರೋಮಾಂಚಕಾರಿಯೇ. ಆದರೆ, ಇದನ್ನು ನಿಮ್ಮ ಬಾಯ್‌ ಫ್ರೆಂಡ್‌ (Boy Friend) ಜತೆ ಏಕಾಂಗಿಯಾಗಿ ಕೈಗೊಳ್ಳುವ ಸಾಹಸಕ್ಕೆ ಹೋಗಬೇಡಿ. ಅವರು ಒಂದೊಮ್ಮೆ ಇಂಥದ್ದಕ್ಕೆ ಆಹ್ವಾನ (Invite) ನೀಡಿದರೆ ಅವರನ್ನು ಅನುಮಾನಿಸಿ. ರಾತ್ರಿ ಸಮಯದಲ್ಲಿ ಮನೆಯಲ್ಲಿ ಯಾರೂ ಇಲ್ಲದಾಗ ಆಹ್ವಾನಿಸುವ ಉದ್ದೇಶವೇನಿರುತ್ತದೆ ಎನ್ನುವುದನ್ನು ಅರಿತುಕೊಳ್ಳಿ.

ಹುಡುಗನ ಮೊದಲ ಸ್ಪರ್ಶವಾಗ್ತಿದ್ದಂತೆ ಹೀಗೆ ಯೋಚಿಸ್ತಾಳೆ ಹುಡುಗಿ!

•    ಭೇಟಿಯಾದಾಗ ಮಾತುಕತೆಯಲ್ಲಿ (Conversation) ಆಸಕ್ತಿ ಇಲ್ಲದಿರುವುದು
ನೀವು ಈಗ ತಾನೇ ಭೇಟಿಯಾಗುತ್ತಿದ್ದೀರಿ ಎಂದಿಟ್ಟುಕೊಳ್ಳಿ. ಅವರು ನಿಜಕ್ಕೂ ನಿಮ್ಮ ಬಗ್ಗೆ ಮಧುರವಾದ ಭಾವನೆ ಹೊಂದಿದ್ದರೆ ನಿಮ್ಮೊಂದಿಗೆ ಮಾತನಾಡಲು, ನಗಲು, ಜೋಕ್‌ ಮಾಡಲು, ಕಣ್ಣುಗಳನ್ನು ಕೂಡಿಸಿ ನಲಿಯಲು ಆಸಕ್ತಿ ಹೊಂದಿರುತ್ತಾರೆ. ಎಷ್ಟು ಸಮಯ ಬೇಕಿದ್ದರೂ ಮಾತನಾಡುತ್ತ ಕೂರಲು ಸಿದ್ಧವಿರುತ್ತಾರೆ. ಆದರೆ, ಅವರು ಒಂದು ರೀತಿಯ ಮೌನದಲ್ಲಿ ಕುಳಿತಿದ್ದರೆ, ನಿಮ್ಮೊಂದಿಗೆ ಔಪಚಾರಿಕವಾಗಿ ಮಾತನಾಡುತ್ತಿದ್ದರೆ ಅವರ ಉದ್ದೇಶ ಬೇರೆಯೇ ಇರಬಹುದು ಎಂದರ್ಥ.

Follow Us:
Download App:
  • android
  • ios