ಗಂಡು ಜಿರಾಫೆಯೊಂದು ತನಗೆ ಜನಿಸಿದ ಮರಿಯನ್ನು ನೋಡಲು ಆಗಮಿಸಿದ ವಿಡಿಯೋವೊಂದು ಈಗ ವೈರಲ್ ಆಗಿದೆ. 

ಸಂಸಾರ ಕುಟುಂಬ ಎನ್ನುವುದು ಬುದ್ಧಿವಂತ ಪ್ರಾಣಿ ಎನಿಸಿದ ಮನುಷ್ಯರಿಗೆ ಮಾತ್ರ ಎಂದು ನಾವು ಭಾವಿಸುತ್ತೇವೆ. ಆದರೆ ಪ್ರಾಣಿಗಳ ಕೆಲವೊಂದು ವರ್ತನೆಗಳು ಇದನ್ನು ಸುಳ್ಳು ಮಾಡುತ್ತವೆ. ನಮಗೂ ಭಾವನೆಗಳಿವೆ. ಮಗಳು ಮಗ ಅಣ್ಣ ತಂಗಿ ಎಂಬ ಸಂಬಂಧ ನಮ್ಮಲ್ಲೂ ಇವೆ ಎಂಬುದನ್ನು ಸಾಬೀತುಪಡಿಸುತ್ತವೆ. ಇದಕ್ಕೆ ನಾವು ಸಾಮಾಜಿಕ ಜಾಲತಾಣಗಳಲ್ಲಿ ನೋಡುವ ಪ್ರಾಣಿಗಳ ಅನೇಕ ವಿಡಿಯೋಗಳು ಸಾಕ್ಷಿ. ಹಾಗೆಯೇ ಇಲ್ಲೊಂದು ಜಿರಾಫೆ ಕುಟುಂಬದ ವಿಡಿಯೋ ವೈರಲ್ ಆಗಿದೆ.

ಜಿರಾಫೆಯೊಂದು ಮರಿಗೆ ಜನ್ಮ ನೀಡಿದ್ದು, ಇದನ್ನು ನೋಡಲು ಇನ್ನೊಂದು ಮರಿ ಹಾಗೂ ತಂದೆ ಜಿರಾಫೆ ಹೋಗಿ ಹೊಸ ಮರಿಯನ್ನು ನೋಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಅಮೆರಿಕಾದ ಕ್ಯಾಲಿಫೋರ್ನಿಯಾದ ಸಾಂಟಾ ಬಾರ್ಬರಾ ಮೃಗಾಲಯದಲ್ಲಿ ಈ ವೀಡಿಯೊವನ್ನು ಚಿತ್ರೀಕರಿಸಲಾಗಿದೆ. ಇದು ಮೂಲತಃ 2020ರ ವಿಡಿಯೋ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ. ಗಂಡು ಜಿರಾಫೆಯು ತನ್ನ ನವಜಾತ ಮರಿಯನ್ನು ಮೊದಲ ಬಾರಿಗೆ ನೋಡುತ್ತಿರುವ ವಿಡಿಯೋ ಇದಾಗಿದೆ.

Scroll to load tweet…

ಜನ್ಮಕ್ಕಿಷ್ಟು.. ಭೂಮಿ ಮೇಲಿದ್ದ ಒಂದೇ ಒಂದು ಬಿಳಿ ಹೆಣ್ಣು ಜಿರಾಫೆಯನ್ನು ಕೊಂದು ತಿಂದ ಮಾನವ!


ತಂದೆ ಜಿರಾಫೆಯು ತಾಯಿ ಹಾಗೂ ನವಜಾತ ಮರಿ ಇದ್ದ ಆವರಣವನ್ನು ಪ್ರವೇಶಿಸಿ ತನ್ನ ನವಜಾತ ಮಗನನ್ನು ನೋಡಲು ಕೆಳಗೆ ಬಾಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ನಂತರ ತಂದೆ ಹಾಗೂ ತಾಯಿ ಎರಡೂ ಜಿರಾಫೆಗಳು ಪರಸ್ಪರ ಮುದ್ದಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಮೃಗಾಲಯದ ಮಾಹಿತಿ ಪ್ರಕಾರ ತಂದೆ ಜಿರಾಫೆಯ ಹೆಸರು ಮೈಕೆಲ್‌ ಹಾಗೂ ಹೊಸದಾಗಿ ಹುಟ್ಟಿದ ಜಿರಾಫೆಗೆ ಟ್ವಿಗಾ ಎಂದು ಹೆಸರಿಡಲಾಗಿದೆ ಎಂದು ತಿಳಿದು ಬಂದಿದೆ. ಈ ವೀಡಿಯೊವನ್ನು ಲಕ್ಷಾಂತರ ಜನ ವೀಕ್ಷಿಸಿದ್ದಾರೆ ಮತ್ತು 49 ಸಾವಿರಕ್ಕೂ ಹೆಚ್ಚು ಜನ ಇಷ್ಟಪಟ್ಟಿದ್ದಾರೆ. 

ಮುಚ್ಚಿದ ಲಾರಿಯಲ್ಲಿ 8 ದಿನ ಪಯಣಿಸಿ ಅಸ್ಸಾಂ ತಲುಪಿದ ಮೈಸೂರಿನ ಜಿರಾಫೆ..!

ಜಿರಾಫೆಯನ್ನು ಭೂಮಿಯ ಮೇಲೆ ಇರುವ ಅತ್ಯಂತ ಎತ್ತರದ ಪ್ರಾಣಿ ಎಂದು ಗುರುತಿಸಲಾಗಿದೆ. ಸಾಮಾನ್ಯವಾಗಿ ಸಂಪೂರ್ಣವಾಗಿ ಬೆಳೆಯಲ್ಪಟ್ಟಾಗ ಗಂಡು ಜಿರಾಫೆಗಳು ಸುಮಾರು 20 ಅಡಿಗಳಷ್ಟು ಎತ್ತರವನ್ನು ಪಡೆಯಬಹುದು. ಬಹುತೇಕವಾಗಿ ಈ ಸಸ್ತನಿ ಉದ್ದನೆಯ ಕುತ್ತಿಗೆಯನ್ನು ಹೊಂದಿದೆ. ಒಂದು ಟನ್‌ಗಿಂತ ಕಡಿಮೆ ತೂಕವಿರುತ್ತದೆ. ಕುತ್ತಿಗೆಯೇ ಜಿರಾಫೆಯನ್ನು ಭೂಮಿಯ ಮೇಲಿನ ಅತಿ ಎತ್ತರವಾದ ಜೀವಂತ ಪ್ರಾಣಿಯಾಗಿ ಮಾಡುತ್ತದೆ.

ತಾಂತ್ರಿಕವಾಗಿ, ಜಿರಾಫೆಗಳನ್ನು ಆರ್ರಿಯೊಡಕ್ಟೈಲ್ಸ್ ಎಂದು ವರ್ಗೀಕರಿಸಲಾಗಿದೆ. ಜಿರಾಫೆಗಳಲ್ಲಿ ಒಂಬತ್ತು ಪ್ರತ್ಯೇಕ ಉಪಜಾತಿಗಳಿವೆ ನುಬಿಯನ್ ಜಿರಾಫೆ, ರೆಟಿಕ್ಯುಲೇಟೆಡ್ ಜಿರಾಫೆ, ಅಂಗೋಲನ್ ಜಿರಾಫೆ, ಕಾರ್ಡೋಫಾನ್ ಜಿರಾಫೆ, ಮಸಾಯಿ ಜಿರಾಫೆ, ದಕ್ಷಿಣ ಆಫ್ರಿಕಾದ ಜಿರಾಫೆ, ಪಶ್ಚಿಮ ಆಫ್ರಿಕನ್ ಜಿರಾಫೆ, ರೋಡ್ಸಿಯನ್ ಜಿರಾಫೆ, ಮತ್ತು ರಾಥ್ಸ್ಚೈಲ್ಡ್'ಸ್ ಜಿರಾಫೆ ಇವು ಜಿರಾಫೆಗಳ ಒಂಭತ್ತು ಜಾತಿಗಳಾಗಿವೆ. ಹೆಚ್ಚಿನ ಮೃಗಾಲಯಗಳಲ್ಲಿರುವ ಜಿರಾಫೆಗಳು ರೆಟಿಕ್ಯುಲೇಟೆಡ್ ಅಥವಾ ರಾಥ್ಸ್ಚೈಲ್ಡ್ ವಿಧಗಳಾಗಿವೆ. ಇವು ಸಾಮಾನ್ಯವಾಗಿ ಗಾತ್ರಗಳಲ್ಲಿ ಒಂದೇ ರೀತಿ ಇರುತ್ತವೆ.

ಕಳೆದ ವರ್ಷ (2021) ಬನ್ನೇರುಘಟ್ಟದ ಜೈವಿಕ ಉದ್ಯಾನವನದಲ್ಲಿ ಆಹಾರ ತಿನ್ನಲು ಕುತ್ತಿಗೆಯನ್ನು ಹೊರ ಹಾಕಿದ್ದ ಜಿರಾಫೆ ಕಬ್ಬಿಣದ ಮೆಶ್‌ ಗೆ ಸಿಲುಕಿ ಮೃತಪಟ್ಟ ಘಟನೆ ನಡೆದಿತ್ತು. ಆಹಾರ ತಿನ್ನಲು ಜಿರಾಫೆ ಕತ್ತು ಹೊರಹಾಕಿತ್ತು. ಹಿಂದಿನ ವರ್ಷ (2020) ಮೈಸೂರಿನಿಂದ ತರಲಾಗಿದ್ದ ಮೂರುವರೆ ವರ್ಷದ ಜಿರಾಫೆ ಯದುನಂದನ್ ಆಹಾರ ತಿನ್ನಲು ಹೋಗಿ ಸಾವು ಕಂಡಿತ್ತು. ಕಬ್ಬಿಣದ ಮೆಸ್‌ನಲ್ಲಿ ಕತ್ತು ಸಿಲುಕಿ ಉಸಿರಾಟ ಸಾಧ್ಯವಾಗದೆ ಜಿರಾಫೆ ಮೃತಪಟ್ಟಿತ್ತು.