ಬೆಂಗಳೂರಿನಲ್ಲಿಯೂ ಸ್ಪೀಡ್​ ಡೇಟಿಂಗ್ ಕಾರ್ಯಕ್ರಮ ಆಯೋಜಿಸಲಾಗಿದ್ದು, ಟಿಕೆಟ್​ ಪ್ರೈಸ್​ ನೋಡಿ ಪುರುಷರು ಸಿಡಿಮಿಡಿಗೊಂಡಿದ್ದಾರೆ. ಏನಿದು ಸ್ಪೀಡ್​ ಡೇಟಿಂಗ್​? 

ಡೇಟಿಂಗ್​ ಎಂದರೇನು ಎಂಬುದೇ ಕೆಲ ವರ್ಷಗಳ ಹಿಂದೆ ಯಾರಿಗೂ ತಿಳಿದಿರಲಿಲ್ಲ. ಸಂಬಂಧ, ವೈವಾಹಿಕ ಜೀವನ, ಸ್ನೇಹ ಎಲ್ಲವನ್ನೂ ಒಂದು ಪದ್ಧತಿ ಎಂದು ನಂಬಿ ಆ ಆದರ್ಶದ ವ್ಯಾಪ್ತಿಯಲ್ಲಿಯೇ ಬಾಳುತ್ತಿರುವ ಭಾರತೀಯರಿಗೆ ವಿದೇಶಿಗರ ಡೇಟಿಂಗ್ ಕಲ್ಪನೆ ಅಸಹ್ಯ ಎನಿಸಿದ್ದುಂಟು. ಆದರೆ ಈಗ ಎಲ್ಲವೂ ಬದಲಾಗಿದೆ. ಎಲ್ಲಾ ವಯಸ್ಸಿನವರೂ ಈಗ ಡೇಟಿಂಗ್​ ಶುರು ಮಾಡಿಕೊಂಡಿದ್ದಾರೆ. ಇದಕ್ಕಾಗಿಯೇ ಡೇಟಿಂಗ್​ ಆ್ಯಪ್​ಗಳ ನಾಯಿ ಕೊಡೆಗಳಂತೆ ತಲೆ ಎತ್ತಿವೆ. ಹೆಣ್ಣು-ಗಂಡಿನ ಸಂಬಂಧದ ಪರಿಕಲ್ಪನೆಯೇ ಬದಲಾಗಿರುವ ಈ ಕಾಲದಲ್ಲಿ ಡೇಟಿಂಗ್ ಎನ್ನುವುದು ಕೇವಲ ಲೈಂಗಿಕ ತೃಷೆಯನ್ನು ತೀರಿಸಿಕೊಳ್ಳಲು ಎನ್ನುವ ಮಟ್ಟಿಗೆ ಬಂದು ನಿಂತಿದೆ. ಇದರ ಇನ್ನು ಒಂದು ಮುಂದುವರೆದ ಭಾಗವಾಗಿ ಬಂದಿರೋದೇ ಸ್ಪೀಡ್ ಡೇಟಿಂಗ್!

Add Asianetnews Kannada as a Preferred SourcegooglePreferred

ಸ್ಪೀಡ್ ಡೇಟಿಂಗ್ (Speed Dating) ಎನ್ನುವುದು ಇಂದು ಬಹಳ ಜನಪ್ರಿಯವಾಗಿದೆ. ಹಲವಾರು ಕಂಪೆನಿಗಳು ಈಗ ಪ್ರಮುಖ ನಗರಗಳಲ್ಲಿ ತಮ್ಮದೇ ಆದ ಸ್ಪೀಡ್​ ಡೇಟಿಂಗ್ ಕಾರ್ಯಕ್ರಮಗಳನ್ನು ನಡೆಸುತ್ತಿವೆ. ನೋಂದಾಯಿಸಿದವರು ದೈಹಿಕ ಆಕರ್ಷಣೆಗಿಂತ ವ್ಯಕ್ತಿತ್ವವನ್ನು ಗಮನದಲ್ಲಿಟ್ಟುಕೊಂಡು ಈವೆಂಟ್‌ಗೆ ಪ್ರವೇಶಿಸುತ್ತಾರೆ ಎಂಬುದು ಕಲ್ಪನೆಯೊಂದಿಗೆ ಇದನ್ನು ಆಯೋಜಿಸಲಾಗುತ್ತದೆ ಎಂದು ಕಂಪೆನಿ ಹೇಳಿಕೊಳ್ಳುತ್ತಾರೆ. ನಿಮ್ಮ ಅಭಿರುಚಿಗಳು ಮತ್ತು ಹೋಲಿಸಬಹುದಾದ ಆಯ್ಕೆಗಳ ಆಧಾರದ ಮೇಲೆ ನೀವು ಜನರನ್ನು ಆಯ್ಕೆ ಮಾಡಿಕೊಳ್ಳುವುದು ಈ ಸ್ಪಿಡ್​ ಡೇಟಿಂಗ್​ನ ಕಲ್ಪನೆ. ಹೆಚ್ಚಿನ ಜನರು ತಮ್ಮ ಆದರ್ಶ ಸಂಗಾತಿಯನ್ನು ಹುಡುಕಲು ಡೇಟಿಂಗ್​ ಆ್ಯಪ್ (Dating App)​ ಮೊರೆ ಹೋದರೆ, ಅದರ ಒಂದು ಹೆಜ್ಜೆ ಮುಂದಕ್ಕೆ ಹೋಗುತ್ತಿದೆ ಈ ಸ್ಪೀಡ್​ ಡೇಟಿಂಗ್​. ಕೆಲವೊಂದು ಪ್ರಶ್ನೆಗಳನ್ನು ಕೇಳುವ ಮೂಲಕ, ಡೇಟಿಂಗ್​ ಮಾಡಲು ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಈ ಫಾಸ್ಟ್​ ಡೇಟಿಂಗ್​ ಒದಗಿಸುತ್ತದೆ.

Relationship Tips: ಎರಡೆರಡು ಕಾಂಡೋಮ್ ಬಳಸಿದ್ರೆ ಗರ್ಭಧಾರಣೆ ತಡೀಬಹುದಾ?

ಇದರ ಅರ್ಥ ನಿಮಗೆ ಇಷ್ಟವಾಗುವ ಆಕೆ/ಆತನಿಗೆ ಕೆಲವು ಪ್ರಶ್ನೆಗಳನ್ನು ಕೇಳಿ ಅದು ನಿಮಗೆ ಸರಿ ಎನಿಸಿದರೆ ಆತ ಅಥವಾ ಆಕೆಯನ್ನು ಶೀಘ್ರದಲ್ಲಿ ಡೇಟಿಂಗ್​ಗೆ ಆಯ್ಕೆ ಮಾಡಿಕೊಳ್ಳುವುದು ಇದರ ಹಿಂದಿನ ಉದ್ದೇಶ. ಈಗ ಎಲ್ಲವೂ ಫಾಸ್ಟ್​ ಆಗಬೇಕಲ್ಲ, ಅದು ಆಹಾರದಿಂದ ಹಿಡಿದು ಎಲ್ಲವೂ ಫಾಸ್ಟ್​ ಫಾಸ್ಟ್​ ಆಗಿಯೇ ಬೇಕು. ಕಾಯುವಷ್ಟು ತಾಳ್ಮೆ ಇಂದಿನವರಿಗೆ ಇಲ್ಲ. ಇದೀಗ ಡೇಟಿಂಗ್​ ಕ್ಷೇತ್ರದಲ್ಲೂ ಶುರುವಾಗಿದೆ. ಯುವಕ-ಯುವತಿಯನ್ನು ಆಯ್ಕೆ ಮಾಡಿಕೊಂಡು ಆತನೋ, ಆಕೆಯೋ ಡೇಟಿಂಗ್​ಗೆ ಒಪ್ಪುತ್ತಾರೋ ಇಲ್ಲವೋ ಎನ್ನುವ ಕಾಯುವ ಬಯಲು, ಫಾಸ್ಟ್​ ಆಗಿ ಡೇಟಿಂಗ್​ ಶುರು ಮಾಡುವುದೇ ಫಾಸ್ಟ್​ ಡೇಟಿಂಗ್​ ಕಲ್ಪನೆ. ಇದೀಗ ಬೆಂಗಳೂರಿನಲ್ಲಿಯೂ (Bangalore) ಇದನ್ನು ಶುರು ಮಾಡಲಾಗಿದೆ. ಇದರ ಜಾಹೀರಾತು ವೈರಲ್​ ಆಗಿದ್ದು, ಸಕತ್​ ಸುದ್ದಿ ಮಾಡುತ್ತಿದೆ.

ಹೌದು, ಫಾಸ್ಟ್​ ಡೇಟಿಂಗ್​ ಅನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಇದು ಬಹಳ ಸುದ್ದಿ ಮಾಡಲು ಕಾರಣ, ಪುರುಷರು ಮತ್ತು ಮಹಿಳೆಯರಿಗೆ ಇಟ್ಟಿರುವ ಟಿಕೆಟ್​ ದರದ ವ್ಯತ್ಯಾಸದಿಂದ! ಇದಾಗಲೇ ಬಸ್ಸಿನಲ್ಲಿ ಮಹಿಳೆಯರಿಗೆ ಫ್ರೀ ಮಾಡಿಯಾಗಿದೆ. ಇದೀಗ ಡೇಟಿಂಗ್​ನಲ್ಲೂ ಮಹಿಳೆಯರಿಗೆ ಇಷ್ಟು ಕಡಿಮೆ ರೇಟ್​ (Ticket Rate) ಇಟ್ಟಿರೋದು ಪುರುಷರಿಗೆ ಸಹಿಸಲು ಆಗ್ತಿಲ್ಲ. ಏಕೆಂದರೆ, ಈ ಈವೆಂಟ್‌ನಲ್ಲಿ ಭಾಗವಹಿಸಲು ಪುರುಷರಿಗೆ 1499 ರೂಪಾಯಿಗಳನ್ನು ಇಟ್ಟಿದ್ದರೆ, ಮಹಿಳೆಯರಿಗೆ ಕೇವಲ ರೂ. 99! ಬುಕ್ ಮೈ ಶೋ ಮೂಲಕ ಟಿಕೆಟ್‌ಗಳನ್ನು ಖರೀದಿಸಬಹುದು ಎಂದು ವೈರಲ್​ ಆಗಿರುವ ಜಾಹೀರಾತಿನಲ್ಲಿ ತಿಳಿಸಲಾಗಿದೆ. ಸ್ನೇಹಿತರನ್ನು ವೈಯಕ್ತಿಕವಾಗಿ ಭೇಟಿ ಮಾಡಲು ಇಲ್ಲಿಗೆ ಬನ್ನಿ, ಫಾಸ್ಟ್​ ಆಗಿ ಡೇಟಿಂಗ್​ಗೆ ಜನರನ್ನು ಆಯ್ಕೆ ಮಾಡಿ ಎಂದು ಹೇಳಲಾಗಿದೆ. ಈ ಈವೆಂಟ್‌ನಲ್ಲಿ ಮೋಜಿನ ಆಟಗಳನ್ನು ಇಡಲಾಗಿದೆ ಎನ್ನಲಾಗಿದೆ.

National Kissing Day: ಮುತ್ತಿಕ್ಕಿದರೆ ಮತ್ತಷ್ಟು ಯೌವನ! ಮತ್ತೇನಾಗುತ್ತೆ ಆರೋಗ್ಯಕ್ಕೆ?

View post on Instagram