Asianet Suvarna News Asianet Suvarna News

Relationship Tips: ಎರಡೆರಡು ಕಾಂಡೋಮ್ ಬಳಸಿದ್ರೆ ಗರ್ಭಧಾರಣೆ ತಡೀಬಹುದಾ?

ಅನಗತ್ಯ ಗರ್ಭಧಾರಣೆ ಮತ್ತು ಲೈಂಗಿಕ ಸೋಂಕು ತಡೆಯಲು ಸಂಭೋಗದ ವೇಳೆ ಕಾಂಡೋಮ್ ಬಳಸುವುದು ಅವಶ್ಯಕ. ಆದ್ರೆ ಕಾಂಡೋಮ್ ಬಳಸಿದ ಮೇಲೂ ಗರ್ಭಧರಿಸುವ ಅಪಾಯವಿರುತ್ತದೆ. ಹಾಗಿದ್ದಾಗ ಎರಡು ಕಾಂಡೋಮ್ ಬಳಸಿದ್ರೆ ಹೇಗೆ? 
 

Can We Use Two Condoms For Extra Protection To Avoid Unwanted Pregnancy roo
Author
First Published Jun 23, 2023, 1:22 PM IST

ಅನಗತ್ಯ ಗರ್ಭಧಾರಣೆ ಹಾಗೂ ಲೈಂಗಿಕ ರೋಗದಿಂದ ದೂರವಿರಲು ಕಾಂಡೋಮ್ ನೆರವಾಗುತ್ತದೆ. ಪ್ರತಿ ಬಾರಿ ಲೈಂಗಿಕ ಕ್ರಿಯೆ ನಡೆಸುವ ವೇಳೆ ಕಾಂಡೋಮ್ ಧರಿಸುವಂತೆ ಸಲಹೆ ನೀಡಲಾಗುತ್ತದೆ. ಆದ್ರೆ ಕೆಲವು ತಪ್ಪಿನಿಂದಾಗಿ ಕಾಂಡೋಮ್ ಬಳಸಿದ ನಂತ್ರವೂ ಮಹಿಳೆ ಗರ್ಭಿಣಿಯಾಗುವ ಅಪಾಯವಿರುತ್ತದೆ. ಒಂದು ಕಾಂಡೋಮ್ ಬಳಸಿದ್ರೆ ಗರ್ಭಧರಿಸುವ ಸಾಧ್ಯತೆಯಿರುತ್ತದೆ ಎನ್ನುವ ಕಾರಣಕ್ಕೆ ಕೆಲವರು ಎರಡು ಕಾಂಡೋಮ್ ಗಳನ್ನು ಒಟ್ಟಿಗೆ ಬಳಸುವ ಪ್ರಯತ್ನ ನಡೆಸ್ತಾರೆ. ಒಂದೇ ಬಾರಿ ಎರಡು ಕಾಂಡೋಮ್ ಬಳಸೋದು ಸರಿಯಾದ ಕ್ರಮವೇ? ಇದ್ರಿಂದ ಸುರಕ್ಷತೆ ಸಿಗುತ್ತದೆಯೇ ಈ ಎಲ್ಲ ಪ್ರಶ್ನೆಗೆ ಉತ್ತರ ಇಲ್ಲಿದೆ.

ಎರಡೂ ಕಾಂಡೋಮ್ (Condom) ಏಕೆ ಬಳಸಬಾರದು ಗೊತ್ತಾ? : ಎರಡು ಕಾಂಡೋಮ್‌ ಗಳನ್ನು ಒಟ್ಟಿಗೆ ಬಳಸಿದಾಗ ಲೈಂಗಿಕ (Sexual) ಕ್ರಿಯೆ ವೇಳೆ ಅವು ಒಂದಕ್ಕೊಂದು ಉಜ್ಜಿ ಹರಿಯುವ ಸಾಧ್ಯತೆಯಿರುತ್ತದೆ. ಇದ್ರಿಂದ ಅನಗತ್ಯ ಗರ್ಭಧಾರಣೆ (Pregnancy) ಅಪಾಯ ಹೆಚ್ಚಾಗುವ ಜೊತೆಗೆ ಲೈಂಗಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಾಗುತ್ತದೆ. ಬರೀ ಇದೊಂದೇ ಅಲ್ಲ ಎರಡು ಕಾಂಡೋಮ್ ಗಳನ್ನು ಒಟ್ಟಿಗೆ ಧರಿಸುವುದು ನಿಮಗೆ ಕಂಫರ್ಟ್ ಎನ್ನಿಸಲಾರದು. ಇದು ಲೈಂಗಿಕ ಸುಖ ಹಾಗೂ ವಿನೋದವನ್ನು ಹಾಳುಮಾಡುತ್ತದೆ. ಶಿಶ್ನದ ಮೇಲೆ ಬಿಗಿಯಾಗಿ ಕುಳಿತುಕೊಳ್ಳುವ ಕಾರಣ ಸ್ಖಲನ ಅಪಾಯ ಹೆಚ್ಚು. ಅಲ್ಲದೆ ಎರಡು ಕಾಂಡೋಮ್ ಧರಿಸಿದಲ್ಲಿ ಲೈಂಗಿಕ ಸಂತೋಷ ಪ್ರಾಪ್ತಿಯಾಗುವುದಿಲ್ಲ. 

ಗಂಡ ಮಾತೇ ಆಡೋಲ್ವಾ? ಅರ್ಥ ಮಾಡಿಕೊಳ್ಳೋದು ಕಷ್ಟ ಅನಿಸ್ತಾ ಇದ್ಯಾ?

ಒಂದು ಕಾಂಡೋಮ್ ಬಳಕೆಯಿಂದ ಪ್ರಯೋಜನ ಹೆಚ್ಚು : ಎರಡು ಕಾಂಡೋಮ್, ಅನಗತ್ಯ ಗರ್ಭಧಾರಣೆ ತಪ್ಪಿಸುತ್ತದೆ ಎಂಬುದು ನಿಮ್ಮ ತಪ್ಪು ಕಲ್ಪನೆಯಾಗಿದ್ದು, ಇದಕ್ಕೆ ಒಂದೇ ಕಾಂಡೋಮ್ ಸಾಕು. ಅನಗತ್ಯ ಗರ್ಭಧಾರಣೆ ಮತ್ತು ಲೈಂಗಿಕವಾಗಿ ಹರಡುವ ಸೋಂಕುಗಳು (STIs) ಎರಡನ್ನೂ ತಡೆಗಟ್ಟುವಲ್ಲಿ ಇದು ಪರಿಣಾಮಕಾರಿಯಾಗಿದೆ. ಆದ್ರೆ ಕಾಂಡೋಮ್ ಬಳಕೆ ಬಗ್ಗೆ ಸರಿಯಾಗಿ ತಿಳಿದಿರಬೇಕು.

ಕಾಂಡೋಮ್ ಸರಿಯಾದ ಬಳಕೆ ಹೇಗೆ? : 
• ಸರಿಯಾದ ಗಾತ್ರದ ಕಾಂಡೋಮ್ ಖರೀದಿ ಮಾಡಬೇಕಾಗುತ್ತದೆ.
• ಕಾಂಡೋಮ್ ಕೊನೆ ದಿನಾಂಕವನ್ನು ಪರಿಶೀಲನೆ ಮಾಡಿ ನಂತ್ರ ಬಳಕೆ ಮಾಡಿ.
• ಬಳಸುವ ಮೊದಲು ಅದು ಸೋರಿಕೆಯಾಗುವ ಸಾಧ್ಯತೆಯಿದ್ಯಾ ಎಂಬುದನ್ನು ಪರಿಶೀಲಿಸಿ.
• ಕಾಂಡೋಮನ್ನು ಸರಿಯಾಗಿ ಬಳಸುವುದು ಮುಖ್ಯವಾಗುತ್ತದೆ.
• ಕಾಂಡೋಮ್ ಬಳಸುವ ವೇಳೆ ಲೂಬ್ರಿಕೇಶನ್ ಬಳಕೆ ಮಾಡಬೇಡಿ. ಇದರಿಂದ ಜಾರುವ ಅಪಾಯ ಹೆಚ್ಚಿರುತ್ತದೆ.
• ಬಲ ಪ್ರಯೋಗ ಮಾಡಿದಲ್ಲಿ ಹರಿಯವು ಸಾಧ್ಯತೆಯಿರುತ್ತದೆ.
• ಕಾಂಡೋಮ್ ತೆಗೆಯುವ ಸಮಯದಲ್ಲಿ ಲೀಕೇಜ್ ಆಗಿದ್ಯಾ ಎಂಬುದನ್ನು ಪರಿಶೀಲಿಸಿ. 
• ಕಾಂಡೋಮನ್ನು ಕಾರ್ ನಲ್ಲಿ ಅಥವಾ ಮನೆಯ ಯಾವುದೋ ಜಾಗದಲ್ಲಿ, ಪರ್ಸ್, ಪ್ಯಾಂಟ್ ಜೇಬಿನಲ್ಲಿ ಇಡಬೇಡಿ. ಇದು ಶಾಖಕ್ಕೆ ಹಾಳಾಗುವ ಸಾಧ್ಯತೆಯಿರುತ್ತದೆ. ಅದೇ ರೀತಿ ಕಾಂಡೋಮನ್ನು ಅತಿಯಾಗಿ ತಣ್ಣಗಿರುವ ಜಾಗದಲ್ಲೂ ಇಡಬಾರದು. 
• ಪ್ಲೇವರ್ ಬಗ್ಗೆ ಗಮನ ನೀಡಿ : ಕಾಂಡೋಮ್ ನಲ್ಲಿ ಅನೇಕ ಪ್ಲೇವರ್ ಲಭ್ಯವಿದ್ದು, ಕೆಲವು ಸಂಗಾತಿ ಹಾಗೂ ನಿಮಗೆ ಅಲರ್ಜಿನ್ನುಂಟು ಮಾಡಬಹುದು. ಹಾಗಾಗಿ ಅದನ್ನು ಪರಿಶೀಲಿಸುವುದು ಮುಖ್ಯ.

Multiple Relationshipನಲ್ಲಿ ಸುಖ ಕ್ಷಣಿಕ, ಜೀವನ ಪೂರ್ತಿ ಅನುಭವಿಸೋದು ತಪ್ಪೋದೇ ಇಲ್ಲ

ಅನಗತ್ಯ ಗರ್ಭಧಾರಣೆ ತಡೆಯುವ ವಿಧಾನಗಳು : ಉತ್ತಮ ಗುಣಮಟ್ಟದ ಕಾಂಡೋಮನ್ನು ಸರಿಯಾದ ಕ್ರಮದಲ್ಲಿ ಬಳಕೆ ಮಾಡಿದ್ರೆ ಬೇರೆ ಯಾವುದೇ ವಿಧಾನ ಅನುಸರಿಸುವ ಅಗತ್ಯವಿರುವುದಿಲ್ಲ. ಆದ್ರೆ ಹರಿದ, ಎರಡು – ಮೂರು ಕಾಂಡೋಮ್ ಒಟ್ಟಿಗೆ ಬಳಸಬೇಡಿ. ಸ್ತ್ರೀರೋಗ ತಜ್ಞರನ್ನು ಭೇಟಿಯಾಗಿ ನೀವು ಗರ್ಭನಿರೋಧಕ ಮಾತ್ರೆಯನ್ನು ಪಡೆದು, ಅದನ್ನು ಸೇವಿಸುವ ಮೂಲಕವೂ ಗರ್ಭಧಾರಣೆ ತಡೆಯಬಹುದು. ಇದಲ್ಲದೆ ಹೊರಗೆ ಲೀಕೇಜ್ ಹಾಗೂ ಮುಟ್ಟಿನ ಅವಧಿಯನ್ನು ನೆನಪಿನಲ್ಲಿಟ್ಟುಕೊಂಡು ಲೈಂಗಿಕ ಕ್ರಿಯೆ ನಡೆಸುವ ಮೂಲಕವೂ ನೀವು ಅನಗತ್ಯ ಗರ್ಭಧಾರಣೆ ತಡೆಯಬಹುದು. 
 

Follow Us:
Download App:
  • android
  • ios