ಇಂದು ನ್ಯಾಶನಲ್‌ ಕಿಸ್ಸಿಂಗ್ ಡೇ. ಇಂಡಿಯಾಕ್ಕಿಂತಲೂ ಮುಖ್ಯವಾಗಿ ಅಮೆರಿಕಾದಲ್ಲಿ ಈ ದಿನವನ್ನು ಸಖತ್ ಜಾಯ್‌ಫುಲ್ ಆಗಿ ಆಚರಿಸುತ್ತಾರೆ. ಈ ಕಿಸ್ಸಿಂಗ್ ಡೇಯ ಪುರಾಣಗಳ ಬಗ್ಗೆ ಮಾತಾಡೋದಕ್ಕಿಂತಲೂ ಕಿಸ್ ಮಾಡಿದ್ರೆ ಏನೆಲ್ಲ ಪ್ರಯೋಜನ ಆಗುತ್ತೆ ಅನ್ನೋದನ್ನು ನೋಡ್ಕೊಂಡು ಬರಾಣ.

ಅದು 2010ನೇ ಇಸವಿ. ಎಲೆನಾ ಅನ್‌ಡನ್‌ ಅನ್ನೋ ಸಿನಿಮಾ ಏಕಾಏಕಿ ಫೇಮಸ್ ಆಯ್ತು. ಅಷ್ಟಕ್ಕೂ ಈ ಸಿನಿಮಾದಲ್ಲಿ ಅಂಥದ್ದೇನಿದೆ ಅಂತ ಮೂತಿ ತಿರುವೋರಿಗೆ ಮುತ್ತೇ ಉತ್ತರ. ಐ ಮೀನ್‌ ಈ ಸಿನಿಮಾದಲ್ಲಿ ಮುತ್ತೇ ಪ್ರಧಾನ. ಯೆಸ್‌, ಈ ಸಿನಿಮಾದ ನಾಯಕ ಹಾಗೂ ನಾಯಕಿ ಸುದೀರ್ಘ 3 ನಿಮಿಷ 23 ಸಕೆಂಡ್‌ ತೆರೆಯ ಮೇಲೆ ಚುಂಬಿಸಿಕೊಂಡರು. ಇದೊಂದು ಆನ್‌ಸ್ಕ್ರೀನ್ ದಾಖಲೆ ಆಯ್ತು. ಮುತ್ತಿನ ಕಾರಣಕ್ಕೇ ಈ ಸಿನಿಮಾ ಸಖತ್ ಫೇಮಸ್ ಆಯ್ತು. ಆಫ್‌ಸ್ಕ್ರೀನ್‌ನಲ್ಲಿ ಅತಿದೀರ್ಘ ಸಮಯದ ಚುಂಬನದ ದಾಖಲೆ ಮಾಡಿರುವುದು ಥಾಯ್ಲೆಂಡ್‌ನ ಜೋಡಿ. ಎಕ್ಕಾಚಾಯ್ ಮತ್ತು ಲಕ್ಸಾನಾ ತಿರನರತ್ ಎಂಬ ಜೋಡಿ 58 ಗಂಟೆ, 35 ನಿಮಿಷ, 58 ಸೆಕೆಂಡ್ ಮುತ್ತಿಟ್ಟುಕೊಂಡರಂತೆ.

Add Asianetnews Kannada as a Preferred SourcegooglePreferred

ಇದೆಲ್ಲ ನಮ್ಮ ನಿಮ್ಮಂಥಾ ಸಾಮಾನ್ಯರಿಂದ ಆಗೋ ಹೋಗೋ ಮಾತಾ.. ಮಾತಲ್ಲ, ಮುತ್ತಿನ ವಿಚಾರಕ್ಕೇ ನೇರವಾಗಿ ಬರೋಣ. ಮುತ್ತು ಅಂದರೆ ನಾಚಿ ನೀರಾಗೋರೇ ಅಧಿಕ. ಆದರೆ ಮುತ್ತಿಕ್ಕಿದರೆ ಮಾತ್ರ ಎಷ್ಟೋ ಪ್ರಯೋಜನಗಳು ಇವೆ. ಈಗಂತೂ ಮುತ್ತಿನ ದಿನದ ನೆವ ಸಿಕ್ಕಿದೆ. ಯುವಪ್ರೇಮಿಗಳು ಸಿಕ್ಕಿದ್ದೇ ಸೀರುಂಡೆ ಎಂದು ತಮ್ಮ ಸಂಗಾತಿಯನ್ನು ಇಂಪ್ರೆಸ್‌ ಮಾಡಲು ನಾನಾ ವಿಧದ ಕಿಸ್ ವೆರೈಟಿಗಳನ್ನೆಲ್ಲಾ ಕಲಿತುಕೊಂಡು ಬಂದು, ಅದನ್ನು ಸಂಗಾತಿಯ ಜೊತೆ ಪ್ರಾಕ್ಟೀಸ್ ಮಾಡುತ್ತಾರೆ. ಅದಿರಲಿ. ಮುತ್ತನ್ನು ಜಸ್ಟ್ ಕಿಸ್ ಅಂತ ನೆಗ್ಲೆಕ್ಟ್‌ ಮಾಡಬೇಡಿ, ಅವಾಯ್ಡ್‌ ಮಾಡಬೇಡಿ. ಏಕೆಂದರೆ ಮುತ್ತಿಗೆ ಆ ಪಾಟಿ ತಾಕತ್ತಿದೆ.

ಸೌಂದರ್ಯ ಹೆಚ್ಚು, ಇದು ಬೆಸ್ಟ್ ಆ್ಯಂಟಿ ಏಜಿಂಗ್ ಟ್ರಿಕ್
ದಾಂಪತ್ಯದಲ್ಲಿರುವವರು, ಪ್ರೇಮದಲ್ಲಿ ಇರುವವರು ಸಾಧ್ಯವಾದಷ್ಟು ಚುಂಬಿಸುತ್ತಿರಿ. ಅದಕ್ಕೆ ಕಾರಣ- ಚುಂಬಿಸಿದಾಗ ಮುಖಕ್ಕೆ ರಕ್ತ ನುಗ್ಗಿ ಬರುತ್ತದೆ. ನಿಮ್ಮ ಮುಖಕ್ಕೆ ಹೆಚ್ಚಿನ ರಕ್ತದ ಹರಿವು ಕಾಲಜನ್‌ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಈ ಕಾಲಜೆನ್‌ ಹಾರ್ಮೋನ್‌ ಇದೆಯಲ್ಲ, ಇದು ವಯಸ್ಸಾಗುವುದನ್ನು ತಡೆಯುವಂಥ ಹಾರ್ಮೋನ್‌. ಹೆಚ್ಚಿನ ರಕ್ತದ ಹರಿವು, ರಕ್ತನಾಳಗಳ ಹಿಗ್ಗುವಿಕೆಯ ವೇಳೆ ಕಾಲಜನ್‌ ಮತ್ತು ಎಲಾಸ್ಟಿನ್‌ ಉತ್ಪಾದನೆ ಹೆಚ್ಚಾಗುತ್ತದೆ. ಇದಲ್ಲದೆ ಕಿಸ್ಸಿಂಗ್‌ನಿಂದ ಇನ್ನೂ ಹಲವಾರು ಪ್ರಯೋಜನಗಳಿವೆ. 

ದೆಹಲಿ ಮೆಟ್ರೋದಲ್ಲಿ ಮೈ ಮರೆತು ಕಿಸ್ ಮಾಡಿದ ಜೋಡಿ, ಮುಜುಗರದಿಂದ ತಬ್ಬಿಬ್ಬಾದ ಪ್ರಯಾಣಿಕರು!

ಸೆಕ್ಸ್‌ ಆಸಕ್ತಿ ಹೆಚ್ಚಾಗುತ್ತೆ
ಇದು ಸ್ಪಷ್ಟವಾಗಿಯೇ ಇದೆಯಲ್ಲ! ಆಳವಾದ, ಪ್ಯಾಷನೇಟ್‌ ಆಗಿ ಮಾಡುವ ಕಿಸ್ಸಿಂಗ್‌ನಿಂದ ಮಿಲನ ಬಹಳ ಸುಖ, ಸಂತೃಪ್ತಿಕರವಾಗಿರುತ್ತದೆ. ಪುರುಷ ಲಾಲಾರಸವು ಟೆಸ್ಟೋಸ್ಟೆರಾನ್‌ ಎಂಬ ಲೈಂಗಿಕ ಹಾರ್ಮೋನ್‌ ಹೊಂದಿರುತ್ತದೆ, ಇದು ಕಾಮಾಸಕ್ತಿ (Libido) ಮೇಲೆ ಪರಿಣಾಮ ಬೀರುತ್ತದೆ. ಇದು ಖಿನ್ನತೆ ಶಮನಕಾರಿ ಕೂಡ. ಮಹಿಳೆಯರಲ್ಲೂ ಇದು ವಿನಿಮಯವಾಗುತ್ತದೆ.

ಬಾಯಿ ದುರ್ವಾಸನೆ ಬರಲ್ಲ, ಹಲ್ಲುಗಳ ಆರೋಗ್ಯಕ್ಕೆ ಒಳ್ಳೆಯದು
ಕೆಲವು ಕಾಸ್ಮೆಟಿಕ್‌ ವೈದ್ಯರ ಪ್ರಕಾರ, ಕಿಸ್ಸಿಂಗ್‌ ಲಾಲಾರಸದ ಉತ್ಪಾದನೆಯನ್ನು ಹೆಚ್ಚಿಸುತ್ತದೆ, ಇದು ನಮ್ಮ ಹಲ್ಲುಗಳಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಕಡಿಮೆ ಮಾಡುತ್ತದೆ. ಲಾಲಾರಸದ ಖನಿಜ ಅಯಾನುಗಳು ಹಲ್ಲಿನ ಕವಚದಲ್ಲಿನ ಸಣ್ಣ ಗಾಯಗಳ ದುರಸ್ತಿಗೆ ಉತ್ತೇಜನ ನೀಡುತ್ತವಂತೆ. ಆದರೆ ಚುಂಬಿಸಿಕೊಳ್ಳುವ ಮುನ್ನ ನಿಮ್ಮ ಬಾಯಿ ದುರ್ವಾಸನೆ ಹೊಂದಿಲ್ಲ ಎಂದು ಗ್ಯಾರಂಟಿ ಮಾಡಿಕೊಳ್ಳಬೇಕು.

Mental Health: ವಯಸ್ಸಾದ್ರೂ ಖುಷಿಯಾಗಿರ್ಬೇಕಾ? ಮಿದುಳನ್ನ ಫ್ರೆಶ್‌ ಆಗಿಟ್ಕೊಳಿ

ಇಮ್ಯೂನಿಟಿ ಬೂಸ್ಟರ್ (Immunity Booster)
ಮಾನವನ ಬಾಯಿಯಲ್ಲಿ 700 ಕ್ಕೂ ಹೆಚ್ಚು ಬಗೆಯ ಬ್ಯಾಕ್ಟೀರಿಯಾಗಳಿರುತ್ತವೆ. ಆದರೆ ಇಬ್ಬರ ಬಾಯಿಯೂ ಒಂದೇ ರೀತಿ ಇರುವುದಿಲ್ಲ. ಆದ್ದರಿಂದ ಚುಂಬನದ ಮೂಲಕ ಲಾಲಾರಸದ ವಿನಿಮಯ ನಿಮ್ಮ ದೇಹಕ್ಕೆ ಹೊಸ ಬ್ಯಾಕ್ಟೀರಿಯಾವನ್ನು ಪರಿಚಯಿಸಬಹುದು, ಇತ್ತೀಚಿನ ಡಚ್‌ ಅಧ್ಯಯನವೊಂದರ ಪ್ರಕಾರ, ನಾವು 10 ಸೆಕೆಂಡುಗಳಿಗಿಂತ ಹೆಚ್ಚು ಕಾಲ ಚುಂಬಿಸಿದಾಗ, ಸುಮಾರು 80 ಮಿಲಿಯ ಬ್ಯಾಕ್ಟೀರಿಯಾಗಳು ನಮ್ಮ ಮತ್ತು ನಮ್ಮ ಸಂಗಾತಿಯ ನಡುವೆ ವರ್ಗಾವಣೆಯಾಗುತ್ತವೆ, ಇದು ಹೊಸ ಮತ್ತು ಕೆಲವೊಮ್ಮೆ ಒಳ್ಳೆಯ ಬ್ಯಾಕ್ಟೀರಿಯಾವನ್ನು ನಮ್ಮ ಬಾಯಿಗೆ ಪರಿಚಯಿಸುತ್ತದೆ.

ಟೆನ್ಶನ್, ಸ್ಟ್ರೆಸ್ ಗೆ ಗುಡ್‌ಬೈ (No stress and Tension)
ಚುಂಬನದ ಪ್ರಾಥಮಿಕ ಆರೋಗ್ಯ ಪ್ರಯೋಜನಗಳಲ್ಲಿ ಒಂದು ಆಕ್ಸಿಟೋಸಿನ್‌ ಎಂಬ ಹಾರ್ಮೋನ್‌ ಬಿಡುಗಡೆ ಮಾಡುವ ಸಾಮರ್ಥ್ಯ‌. ಇದನ್ನು ಲವ್‌ ಹಾರ್ಮೋನ್‌ ಎಂದೇ ಕರೆಯಲಾಗುತ್ತದೆ. ವ್ಯಕ್ತಿಗಳಲ್ಲಿ ಶಾಂತತೆ, ವಿಶ್ರಾಂತಿ ಮತ್ತು ಅನುರಾಗದ ಭಾವನೆಯನ್ನು ಇದು ಉಂಟುಮಾಡುತ್ತದೆ. ಸಾಮಾನ್ಯವಾಗಿ ಮುನ್ನಲಿವು ಮತ್ತು ಮಿಲನದ ಉತ್ಕರ್ಷದ ಸಮಯದಲ್ಲಿ ಬಿಡುಗಡೆಯಾಗುತ್ತದೆ. ಒತ್ತಡಕ್ಕೆ ಸಂಬಂಧಿಸಿದ ಕಾರ್ಟಿಸೋಲ್‌ ಎಂಬ ರಾಸಾಯನಿಕ, ಕಿಸ್ಸಿಂಗ್‌ನಿಂದಾಗಿ ಕಡಿಮೆಯಾಗುವುದೂ ಕಂಡುಬಂದಿದೆಯಂತೆ.

ತುರಿಕೆ ಕಡಿಮೆ ಆಗುತ್ತಂತೆ (No Itching)
ಮೂಗಿನ ಅಥವಾ ಚರ್ಮದ ಅಲರ್ಜಿ, ತುರಿಕೆಯನ್ನು ಕಡಿಮೆ ಮಾಡುತ್ತದೆ. ಇದನ್ನು 2006ರಲ್ಲಿ ಅಲರ್ಜಿಸ್ಟ್‌ ಹಜೀಮ್‌ ಕಿಮಾಟಾ ಎಂಬವರು 24 ರೋಗಿಗಳನ್ನು ಅಧ್ಯಯನ ಮಾಡಿ ಕಂಡುಕೊಂಡರು. ಸಾಮಾನ್ಯವಾಗಿ ಅಲರ್ಜಿ ಇದ್ದಾಗ, ನಿರ್ದಿಷ್ಟ ಅಲರ್ಜಿಕಾರಕಕ್ಕೆ ಆ್ಯಂಟಿಬಾಡಿಯನ್ನು ದೇಹ ಉತ್ಪಾದಿಸುತ್ತೆ. ಚುಂಬನದ ನಂತರ, ಈ ಆ್ಯಂಟಿಬಾಡಿ ಕಡಿಮೆಯಾಗಿದ್ದು ಕಂಡುಬಂತು.

ಬಿಪಿ ಕಂಟ್ರೋಲಲ್ಲಿ ಇರುತ್ತೆ

ನಮ್ಮ ತುಟಿಗಳಲ್ಲಿ ಹಲವಾರು ಸೂಕ್ಷ್ಮ ರಕ್ತನಾಳಗಳಿವೆ. ಚುಂಬನದ ಸಮಯದಲ್ಲಿ ತುಟಿ ಹಿಗುತ್ತದೆ ಅರ್ಥಾತ್‌ ರಕ್ತನಾಳಗಳು ಹಿಗ್ಗುತ್ತವೆ. ಮುಖದ ಕಡೆಗೆ ಹೆಚ್ಚು ರಕ್ತ ಪಂಪ್‌ ಆಗುತ್ತದೆ. ಹೀಗಾಗಿ ದೇಹದ ಉಳಿದೆಡೆಗೆ ರಕ್ತ ಪರಿಚಲನೆ ಕಡಿಮೆಯಾಗುತ್ತದೆ. ಹೃದಯದ ಮೇಲಿನ ಹೊರೆ ಕಡಿಮೆಯಾಗುತ್ತದೆ, ಇದರ ಪರಿಣಾಮವಾಗಿ ರಕ್ತದೊತ್ತಡ ಕಡಿಮೆಯಾಗುತ್ತದೆ. ದೇಹದಲ್ಲಿ ಕಾರ್ಟಿಸೋಲ್‌ ಹಾರ್ಮೋನ್‌ ಮಟ್ಟವು ಕಡಿಮೆಯಾದಾಗ, ಬಿಪಿಯೂ ಇಳಿಯುತ್ತದೆ.

30 ವರ್ಷವಾದ್ರೂ ಮದ್ವೆಯಾಗಲು ಹಿಂದೇಟೇಕೆ? ಈ ಹೆಣ್ಣುಮಕ್ಕಳು ಏನು ಹೇಳಿದ್ದಾರೆ ಕೇಳಿ...

ಮುಖಕ್ಕೆ ಒಳ್ಳೆ ಎಕ್ಸರ್‌ಸೈಸ್‌ (Good Facial Exercise)
ನಿಮ್ಮ ತುಟಿಗಳನ್ನು ಅಲುಗಾಡಿಸಬೇಕಾದರೆ ಇಡೀ ಮುಖದ ಸ್ನಾಯುಗಳೇ ವ್ಯಾಯಾಮ ಮಾಡಬೇಕಾಗುತ್ತದೆ. ಕಾಲಜನ್‌ ಸ್ರಾವ ಹೆಚ್ಚಿಸುವುದಕ್ಕಾಗಿ ಸೌಂದರ್ಯಶಾಸ್ತ್ರಜ್ಞರು ಮತ್ತು ಚರ್ಮರೋಗ ತಜ್ಞರು ಮುಖಕ್ಕೆ ವ್ಯಾಯಾಮ ಮಾಡಲು ತರಬೇತಿ ನೀಡುತ್ತಾರೆ. ಭಾವೋದ್ರಿಕ್ತ ಚುಂಬನವು ಮುಖದ ವ್ಯಾಯಾಮವಲ್ಲದೆ ಇನ್ನೇನೂ ಅಲ್ಲ, ಸರಳವಾದ ಮುತ್ತಿನಿಂದಲೇ ಎರಡು ಕ್ಯಾಲೊರಿ ಬರ್ನ್‌ ಆಗುತ್ತೆ. ಇನ್ನು ನಾಲಿಗೆಯನ್ನೂ ಬಳಸಿ ದೀರ್ಘ, ಆಳವಾದ ಮುತ್ತು ನೀಡಿದರೆ ನಿಮಿಷಕ್ಕೆ ಸುಮಾರು 26 ಕ್ಯಾಲೊರಿ ಸುಡುತ್ತದೆ. ಮುಖದಲ್ಲಿ 43 ಮತ್ತು ನಾಲಿಗೆಯಲ್ಲಿ ಎಂಟು ಸ್ನಾಯುಗಳಿದ್ದು, ಅವುಗಳೆಲ್ಲವೂ ವ್ಯಾಯಾಮವಾಗುತ್ತದೆ.