ಪುರುಷರು ಮನೆಯಲ್ಲಿ ಒಬ್ಬರೇ ಇದ್ದಾಗ ಹೀಗೆಲ್ಲಾ ಮಾಡುತ್ತಾರಂತೆ !

ಹೆಂಡ್ತಿ (Wife) ಮನೇಲಿದ್ರೆ ಸಾಕು ಗಂಡಂದಿರಿಗೆ (Husband) ಏನ್ ಮಾಡೋಕು ಭಯ. ಹೆಚ್ಚು ಹೊತ್ತು ಟಿವಿ ನೋಡಂಗಿಲ್ಲ. ಹಗಲಲ್ಲಿ ಗೊರಕೆ ಹೊಡೀತಾ ಮಲಗೋ ಹಾಗಿಲ್ಲ. ಸ್ಪಲ್ಪ ಹೊತ್ತು ಮೊಬೈಲ್‌ (Mobile) ಯೂಸ್ ಮಾಡೋ ಹಾಗೂ ಇಲ್ಲ. ಹೀಗಾಗಿಯೇ ಹೆಂಡ್ತಿ ಮನೇಲಿಲ್ಲಾಂದ್ರೆ ಗಂಡಂದಿರಿಗೆ ಹಬ್ಬ. ಹಾಗಿದ್ರೆ ಹೆಂಡ್ತಿ ಮನೇಲಿ ಇಲ್ಲದಿದ್ದಾಗ ಗಂಡಸರು ಒಬ್ರೇ ಏಕಾಂತದಲ್ಲಿ (Alone) ಏನೇನ್ ಮಾಡ್ತಾರೆ. ಇಲ್ಲಿದೆ ಕೆಲವು ವಿಚಿತ್ರ ಸಂಗತಿಗಳು.

Funny Weird Things Men Do When You Are Not Around Vin

ಮನುಷ್ಯನ ವ್ಯಕ್ತಿತ್ವ (Personality) ಎಲ್ಲಾ ಸಮಯದಲ್ಲಿ ಒಂದೇ ಆಗಿರುವುದಿಲ್ಲ. ಪರಿಸ್ಥಿತಿ, ಜನಸಂದಣಿ, ಏಕಾಂಗಿ (Alone)ಯಾಗಿದ್ದಾಗ ಮನುಷ್ಯನ ವರ್ತನೆ (Behaviour) ಒಬ್ಬರಿಗಿಂತ ಒಬ್ಬರಿಗೆ ವಿಭಿನ್ನವಾಗಿರುತ್ತದೆ. ಅದರಲ್ಲೂ ವ್ಯಕ್ತಿ ಒಬ್ಬನೇ ಇದ್ದಾಗ ಅವನ ವರ್ತನೆ ಸಂಪೂರ್ಣ ವಿಭಿನ್ನವಾಗಿರುತ್ತದೆ. ಮಹಿಳೆಯರು (Woman) ಒಬ್ಬರೇ ಇದ್ದಾಗ ಮೆನಿಕ್ಯೂರ್, ಪೆಡಿಕ್ಯೂರ್ ಮಾಡಿಕೊಳ್ಳುತ್ತಾರೆ. ಹೊಸ ರೆಸಿಪಿ (Recipe) ಟ್ರೈ ಮಾಡ್ತಾರೆ ಅನ್ನೋದು ಹಲವರಿಗೆ ತಿಳಿದಿದೆ. ಹಾಗಿದ್ರೆ ಪುರುಷರು (Men) ಮನೆಯಲ್ಲಿ ಒಬ್ಬರೇ ಇದ್ದಾಗ ಏನ್ ಮಾಡ್ತಾರೆ ತಿಳಿಯೋಣ.

ಮೊಬೈಲ್, ಲ್ಯಾಪ್‌ಟಾಪ್‌ನಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ: ಹೆಂಡತಿ ಅಥವಾ ಕುಟುಂಬ ಸದಸ್ಯರು ಮನೆಯಲ್ಲಿಲ್ಲದ ಸಮಯದಲ್ಲಿ ಗಂಡಸರು ಹೆಚ್ಚಾಗಿ ಮೊಬೈಲ್ (Mobile), ಟ್ಯಾಬ್ಲೆಟ್ ಅಥವಾ ಲ್ಯಾಪ್‌ಟಾಪ್‌ (Laptop)ನಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತ ಹುಡುಗಿಯರ ಪ್ರೊಫೈಲ್ ಚೆಕ್‌ ಮಾಡುತ್ತಾರೆ. ಅವರೊಂದಿಗೆ ಮೆಸೇಜ್ ಮಾಡಿ ಫ್ಲರ್ಟ್‌ ಮಾಡಲು ಪ್ರಯತ್ನಿಸುತ್ತಾರೆ. ಕರೆ ಮಾಡಿ ಮಾತನಾಡಿ ತಾವು ಅವಿವಾಹಿತರೆಂದು ತೋರಿಸಿಕೊಳ್ಳಲು ಯತ್ನಿಸುತ್ತಾರೆ. ಡೇಟಿಂಗ್ ಅಪ್ಲಿಕೇಶನ್‌ಗಳಲ್ಲೂ ಹುಡುಗಿಯರನ್ನು ಕಾಂಟಾಕ್ಟ್ ಮಾಡಲು ಪ್ರಯತ್ನಿಸುತ್ತಾರೆ.

ಫ್ರಾನ್ಸ್‌ನ ಪುರುಷರನ್ನು ಅತ್ಯಂತ ರೋಮ್ಯಾಂಟಿಕ್ ಎಂದು ಹೇಳುವುದು ಯಾಕೆ ?

ಆರಾಮವಾಗಿ ಗಂಟೆಗಟ್ಟಲೆ ಟಿವಿ ನೊಡುತ್ತಾರೆ: ಮನೆಯಲ್ಲಿದ್ದಾಗ ಗಂಡಸರು ದಿನವಿಡೀ ಟಿವಿ (Television) ನೋಡುವುದು ಅಭ್ಯಾಸ. ಇಂಥಾ ಸಂದರ್ಭದಲ್ಲಿ ಹೆಂಡ್ತಿ ಯಾವಾಗಲೂ ಬಯ್ಯುತ್ತಲೇ ಇರುತ್ತಾಳೆ. ಈರುಳ್ಳಿ ಹೆಚ್ಚುವುದು, ಗ್ಯಾಸ್ ಆಫ್‌ ಮಾಡಲು ಹೇಳುವುದು ಮೊದಲಾದ ಕೆಲಸವನ್ನು ಒಪ್ಪಿಸುತ್ತಾಳೆ. ಆದರೆ ಹೆಂಡತಿ ಮನೆಯಲ್ಲಿಲ್ಲದಿದ್ದಾಗ ಗಂಡನಿಗೆ ಯಾರನ್ನೂ ಭಯಪಡುವ ಅವಶ್ಯಕತೆಯಿರುವುದಿಲ್ಲ. ನೆಚ್ಚಿನ ಇಂಗ್ಲಿಷ್ ಚಾನೆಲ್ ಅಥವಾ ಸ್ಪೋಟ್ಸ್ ಚಾನೆಲ್ ಹಾಕಿ ಗಂಟೆಗಟ್ಟಲೆ ಟಿವಿ ನೋಡುತ್ತಾರೆ.

ಕಾಮಪ್ರಚೋದಕ ಚಿತ್ರಚನ್ನು ವೀಕ್ಷಿಸುತ್ತಾರೆ: ಅನೇಕ ಪುರುಷರು ಮನೆಯಲ್ಲಿ ಹೆಂಡ್ತಿ ಇಲ್ಲವೆಂದ ತಕ್ಷಣ ಪೋರ್ನ್ ವೀಡಿಯೋ (Porn video)ಗಳನ್ನು ನೋಡುತ್ತಾರೆ. ಕಾಮಪ್ರಚೋದಕತೆಯ ಹೆಚ್ಚು ದೃಶ್ಯವನ್ನು ಒಳಗೊಂಡಿರುವ ಸಿನಿಮಾವನ್ನು ವೀಕ್ಷಿಸುತ್ತಾರೆ. ನೀವು ಹಿಂತಿರುಗಿದ ನಂತರ ನೀವು ಹೊಸದನ್ನು ಪ್ರಯತ್ನಿಸಲು ಸಿದ್ಧರಿದ್ದೀರಾ ಎಂದು ಅವರು ನಿಮ್ಮನ್ನು ಕೇಳಬಹುದು.

ಅಸಹ್ಯವಾಗಿ ವರ್ತಿಸುತ್ತಾರೆ: ಒಂಟಿಯಾಗಿದ್ದಾಕ ಪುರುಷರು ಅಸಹ್ಯಕರವಾಗಿಯೂ ವರ್ತಿಸುತ್ತಾರೆ. ಏಕಾಂತದಲ್ಲಿದ್ದಾಗ ಅನೇಕ ಪುರುಷರು ತಮ್ಮ ಕಂಕುಳನ್ನು, ಅವರ ಒಳ ಉಡುಪು ಅಥವಾ ನಿಮ್ಮ ಒಳ ಉಡುಪುಗಳನ್ನು ವಾಸನೆ ಮಾಡುವ ಅಭ್ಯಾಸವನ್ನು ಹೊಂದಿದ್ದಾರೆ.

ಬೇಸಿಗೆಯಲ್ಲಿ ಪುರುಷರಿಗೆ ಹೃದಯಾಘಾತದ ಅಪಾಯ ಹೆಚ್ಚು !

ವಿಲಕ್ಷಣ ಸಂಯೋಜನೆಯ ಆಹಾರ ತಿನ್ನುವುದು: ವಿಲಕ್ಷಣವಾದ ಆಹಾರ (Food) ಸಂಯೋಜನೆಗಳನ್ನು ಪ್ರಯತ್ನಿಸುವ ಅಭ್ಯಾಸ ಹಲವರಿಗೆ ಇರುತ್ತದೆ. ಇದರಿಂದ ಪುರುಷರು ಸಹ ಹೊರತಾಗಿಲ್ಲ. ಆದರೆ ಇಂಥಾ ಅಭ್ಯಾಸವನ್ನು ಅವರು ಹೆಂಡತಿಯ ಮುಂದೆ ಬಹಿರಂಗಪಡಿಸುವುದಿಲ್ಲ. ದಾಲ್ ಜೊತೆ ಚೈನೀಸ್ ನೂಡಲ್ಸ್ ಮಿಶ್ರಣ, ಸ್ಪ್ರಿಂಗ್ ರೋಲ್‌ನೊಂದಿಗೆ ದಾಲ್ ಅಥವಾ ಚೀಸ್ ಮೊದಲಾದವುಗಳನ್ನು ಸವಿಯುತ್ತಾರೆ.

ಅಳುವುದು: ಪುರುಷರು ಯಾವುದೇ ಕಾರಣಕ್ಕೆ ಅಳಲು (Cry) ಬಯಸಿದರೆ ಅದನ್ನು ಮನೆಮಂದಿಯ ಅನುಪಸ್ಥಿತಿಯಲ್ಲಿ ಮಾಡುತ್ತಾರೆ. ಅದಕ್ಕೆ ಜೀವನದಲ್ಲಿ ಯಾವುದೋ ನಡೆದ ಘಟನಯೂ ಕಾರಣವಾಗಿರಬಹುದು, ಜೀವನದಲ್ಲಿ ಈಗಿರುವ ಸಮಸ್ಯೆಗಳು ಆಗಿರಬಹುದು. ಯಾವತ್ತಿನಿಂದಲೂ ತಡೆದು ಹಿಡಿದಿಟ್ಟ ಕಣ್ಣೀರು ಏಕಾಂತವಾಗಿರುವಾಗ ಮಾತ್ರ ಹೊರಬರುತ್ತದೆ. ಪುರುಷರು ಒಬ್ಬರೇ ಇದ್ದಾಗ ಮನಸ್ಸು ಬಿಚ್ಚಿ ಅಳಲು ಸಾಧ್ಯವಾಗುತ್ತದೆ.

ಮೇಕ್ಅಪ್  ಮಾಡಲು ಪ್ರಯತ್ನಿಸುತ್ತಾರೆ: ಕೆಲವು ಪುರುಷರು ಮೇಕ್ಅಪ್ (Makeup) ಮಾಡಲು ಇಷ್ಟಪಡುತ್ತಾರೆ ಎಂದು ನಿಮಗೆ ತಿಳಿದಿದೆಯೇ? ಅವರು ನಿಮ್ಮ ವರ್ಣರಂಜಿತ ಲಿಪ್‌ಸ್ಟಿಕ್‌ಗಳನ್ನು ಪ್ರಯತ್ನಿಸುತ್ತಾರೆ. ಐಲೈನರ್‌, ಪರ್ಫ್ಯೂಮ್‌, ಬಾಡಿ ಲೋಶನ್ ಮೊದಲಾದವುಗಳನ್ನು ಹಚ್ಚಲು ಇಷ್ಟಪಡುತ್ತಾರೆ.

ಸೋಮಾರಿಯಂತೆ ಮಲಗಿಕೊಳ್ಳುತ್ತಾರೆ: ಮಲಗುವುದು ಗಂಡಸರ ನೆಚ್ಚಿನ ಅಭ್ಯಾಸ. ಆದರೆ ಹೆಂಡತಿ ಮನೆಯಲ್ಲಿದ್ದಾಗ ಹಗಲ್ಲೆಲ್ಲಾ ಮಲಗಿದರೆ ಬೈಗುಳ ತಿನ್ನಬೇಕಾಗುತ್ತದೆ. ಹೀಗಾಗಿ ಗಂಡಸರು ಅಕೆ ಮನೆಯಲ್ಲಿ ಇಲ್ಲದಿದ್ದಾಗ ಅದನ್ನು ಮಾಡುತ್ತಾರೆ. ಯಾವುದೇ ಚಿಂತೆಯಿಲ್ಲದೆ ಸೋಮಾರಿಯಂತೆ (Lazy) ಬಿದ್ದುಕೊಳ್ಳುತ್ತಾರೆ. ಎಚ್ಚರವಾದಾಗಲೊಮ್ಮೆ ಫುಡ್ ಆರ್ಡರ್ ಮಾಡಿ ತಿಂದು ಮತ್ತೆ ಸೋಮಾರಿಯಂತೆ ಬಿದ್ದುಕೊಳ್ಳುತ್ತಾರೆ.

Latest Videos
Follow Us:
Download App:
  • android
  • ios