Asianet Suvarna News Asianet Suvarna News

ಹದಿ ಹರೆಯದ ಮಗಳ ಜೊತೆ ಅಪ್ಪನ ಬಿಹೇವಿಯರ್ ಹೇಗಿರಬೇಕು?

ಮಗಳು ಟೀನೇಜ್‌ಗೆ ಬಂದಳು ಅಂದಕೂಡಲೇ ಎಷ್ಟೋ ಕಡೆ ಅಪ್ಪ ಮಗಳಿಂದ ಅಂತರ ಕಾಯ್ದುಕೊಳ್ಳೋದನ್ನು ಗಮನಿಸಿರಬಹುದು. ಅಲ್ಲೀವರೆಗೆ ಫ್ರೆಂಡ್ಲಿ ಆಗಿದ್ದ ಅಪ್ಪ ಮಗಳ ಜೊತೆಗೆ ಹೇಳಬೇಕಾದ್ದನ್ನು ಹೇಳದೇ ಕಿರಿಕಿರಿ ಪಟ್ಟು ಅವಳ ಜೊತೆಗೂ ಕಟುವಾಗಿ ವರ್ತಿಸುತ್ತಾರೆ. ವೈಜ್ಞಾನಿಕವಾಗಿ ಅಪ್ಪ ತನ್ನ ಹರೆಯದ ಮಗಳ ಜೊತೆಗೆ ಹೇಗಿರಬೇಕು..

Fathers behavior with Teen Daughter parental tips
Author
First Published Sep 5, 2022, 2:42 PM IST

ಮಗಳಿಗೆ ಮೊದಲ ಸಲ ಪೀರಿಯೆಡ್ಸ್ ಆದಾಗ ಅಪ್ಪನಿಗೆ ಸಣ್ಣಗೆ ಟೆನ್ಶನ್ ಶುರುವಾಗುತ್ತೆ. ಇನ್ನೂ ಮಗುವಿನ ಹಾಗಿರುವ ತನ್ನ ಮಗಳು ದೊಡ್ಡವಳಾಗಿದ್ದಾಳೆ. ಅವಳ ಜೊತೆಗೆ ತಾನು ಮೊದಲಿನ ಹಾಗೆ ಇರೋದಕ್ಕಾಗಲ್ಲ ಅನ್ನೋ ಯೋಚನೆ ಬರುತ್ತೆ. ಆತನಿಗೆ ಅರಿವಿಲ್ಲದ ಹಾಗೆ ಮಗಳ ಜೊತೆಗೆ ಅಂತರ ಬೆಳೆಯುತ್ತಾ ಹೋಗುತ್ತದೆ. ತಾನು ಹೇಳಬೇಕಾದ್ದನ್ನು ಹೇಳಲಿಕ್ಕಾಗದೇ ಆತ ಚಡಪಡಿಸುತ್ತಾನೆ. ಜೊತೆಗೆ ಮಗಳ ಮೇಲೆ ರೇಗುವುದು, ಅವಳ ಜೊತೆಗೆ ಸೀರಿಯಲ್ ಆಗಿ ಬಿಹೇವ್ ಮಾಡೋದನ್ನೆಲ್ಲ ಮಾಡುತ್ತಿರುತ್ತಾನೆ. ಆದರೆ ಮಗಳಿಗೆ ಹುಡುಗರ ಬಗ್ಗೆ, ಅವರ ಸ್ವಭಾವಗಳ ಬಗ್ಗೆ, ಲೈಂಗಿಕತೆ ಬಗ್ಗೆ ಅಪ್ಪನೇ ಅರಿವು ಮೂಡಿಸಿದರೆ ಬೆಸ್ಟ್. ಬದಲಾಗುತ್ತಿರುವಂತಹ ಯುಗದಲ್ಲಿ ಲೈಂಗಿಕ ಶಿಕ್ಷಣವೆನ್ನುವುದು ಅತೀ ಅಗತ್ಯ, ಇಲ್ಲವಾದಲ್ಲಿ ಅವರು ಜೀವನದಲ್ಲಿ ದೊಡ್ಡ ಸಮಸ್ಯೆಯನ್ನು ಎದುರಿಸಬಹುದು. ನೀವು ಹದಿಹರೆಯದ ಮಗಳ ತಂದೆ ಆಗಿದ್ದರೆ ಮುಕ್ತ ಮನಸ್ಸಿಂದ ಮಗಳಿಗೆ ಹೇಳಬೇಕಾದ ಕೆಲವು ಪಾಠಗಳು ಇಲ್ಲಿವೆ.

ಲೈಂಗಿಕತೆ ತಪ್ಪಲ್ಲ, ಆದರೆ ಅದು ಸರಿಯಾದ ಕ್ರಮದಲ್ಲಿರಲಿ
ಹೆಚ್ಚಿನ ತಂದೆಯನ್ನು ಗಮನಿಸಿ, ಅವರು ಮಗಳಿಗೆ ಹೇಳುವ ಮೊದಲನೇ ಪಾಠವೇ ಹುಡುಗರು ಕೆಟ್ಟವರಿರ್ತಾರೆ, ಅವರ ಜೊತೆಗೆ ಹೆಚ್ಚು ಒಡನಾಟ ಒಳ್ಳೆಯದಲ್ಲ ಅನ್ನೋ ರೀತಿಯದ್ದು. ಈ ಥರದ ಮಾತುಗಳು ಹರೆಯದ ಮಗಳಿಗೆ (Teenage Daughter) ಪುರುಷರ ಬಗ್ಗೆ ಪೂರ್ವಾಗ್ರಹ (Prejudiced) ಮೂಡಿಸಬಹುದು. ಮಗಳಲ್ಲಿ ಹುಡುಗರ ಬಗ್ಗೆ ಭಯ ಉಂಟಾಗಬಹುದು ಮತ್ತು ಆಕೆಯ ಸ್ನೇಹಿತರು ಅಥವಾ ಸಂಗಾತಿಯಲ್ಲಿ ನಂಬಿಕೆ ಮೂಡಲು ಕಷ್ಟವಾಗಬಹುದು. ಹುಡುಗರ ಬಗ್ಗೆ ಆಕೆಯ ಅಭಿಪ್ರಾಯ ಏನು ಎನ್ನುವುದನ್ನು ಮೊದಲಿಗೆ ನೀವು ಕೇಳಿ. ನಿಮ್ಮ ಬಗ್ಗೆ ಮಾತನಾಡಿ ಮತ್ತು ಕೆಲವೊಂದು ವಿಚಾರಗಳನ್ನು ಹೇಳಿ. ಹುಡುಗರು ಯಾವ ವಿಚಾರವನ್ನು ಗ್ರಹಿಸುವರು, ಯಾವುದನ್ನು ಇಷ್ಟಪಡುವುದಿಲ್ಲ ಮತ್ತು ಯಾವುದನ್ನು ಇಷ್ಟಪಡುವರು ಎಂದು ಹೇಳಬೇಕು. ಇದೆಲ್ಲವನ್ನು ನೀವು ಮುಕ್ತ ಮನಸ್ಸಿನಿಂದ ಹೇಳಬೇಕು. ನೀವು ಅವರಲ್ಲಿ ಲಿಂಗಭೇದವನ್ನು ಉಂಟು ಮಾಡಬಾರದು.

ಮಾನಸಿಕ, ದೈಹಿಕ ಬದಲಾವಣೆ ಬಗ್ಗೆ ಹೇಳಿ
ಹದಿಹರೆಯಲ್ಲಿರುವಾಗ ಲೈಂಗಿಕ ಆಕರ್ಷಣೆ ಸರ್ವೇ ಸಾಮಾನ್ಯ. ಮಗಳು ಆಕರ್ಷಣೆಗೆ ಒಳಗಾಗಬಹುದು ಅಥವಾ ಪ್ರೀತಿಯಲ್ಲಿ ಬೀಳಬಹುದು. ಇಲ್ಲಿ ನಿಮ್ಮ ಇಷ್ಟ, ಕಷ್ಟಗಳು ಯಾವುದೂ ಗಣನೆಗೆ ಬರುವುದಿಲ್ಲ. ಹದಿಹರೆಯದಲ್ಲಿ ಅವರ ದೇಹದಲ್ಲಿ ಆಗುವಂತಹ ಹಾರ್ಮೋನ್ ಬದಲಾವಣೆಯು ಯಾವುದೇ ನಿಯಂತ್ರಣಕ್ಕೂ ಬಗ್ಗದು. ಈ ಬಗ್ಗೆ ಮಗಳಿಗೆ ಅರಿವು ಮೂಡಿಸಿ. ಯಾವಾಗ ಸಂಗಾತಿಯ ಆಯ್ಕೆ ಮಾಡಬೇಕು, ಆಯ್ಕೆ ಹೇಗಿರಬೇಕು. ಅದಕ್ಕೂ ಮುನ್ನ ಮನಸ್ಸಿನ ನಿಯಂತ್ರಣ ಹೇಗೆ ಮಾಡಬೇಕು ಅನ್ನೋದನ್ನು ತಿಳಿಸಿ ಹೇಳಿ. ಮುಕ್ಯವಾಗಿ ಅವಳು ತನ್ನ ವಿರುದ್ಧ ಲಿಂಗದವರ ಜೊತೆಗೆ ವ್ಯವಹರಿಸುವಾಗ ಗೌರವ ಪಡೆದುಕೊಳ್ಳೋದು ಹೇಗೆ ಅನ್ನೋದನ್ನೂ ತಿಳಿಸಿ.

ನನ್ನ ಗಂಡ ಮಕ್ಳಂತೆ ಆಡ್ತಾನೆ ಏನ್ ಮಾಡ್ಲಿ?: ಪತ್ನಿ ಸಮಸ್ಯೆಗೇ ಪರಿಹಾರವೇನು?

ಕೆಟ್ಟ ಸ್ನೇಹಿತರಿಂದ ದೂರವಿರಿಸಿ
ಹದಿಹರೆಯದಲ್ಲಿ ಲೈಂಗಿಕ ಆಕಾಂಕ್ಷೆ (Sexual Urge) ಅಧಿಕ. ಇದರ ಪರಿಣಾಮ ಏನು ಬೇಕಾದರೂ ಆಗಬಹುದು. ಹೀಗಾಗಿ ಸಾಧ್ಯವಾದಷ್ಟು ಕೆಲವು ಕೆಟ್ಟ ಸ್ನೇಹಿತರಿಂದ ಮಗಳನ್ನು ದೂರವಿಡಬೇಕು. ಕೆಲವು ಸ್ನೇಹಿತರು ಮತ್ತು ಬಾಯ್ ಫ್ರೆಂಡ್ ತುಂಬಾ ಒಳ್ಳೆಯವರಾಗಿರಬಹುದು. ಕೆಲವರು ದೈಹಿಕ ಆಕರ್ಷಣೆಗೆ ಒಳಗಾಗಿ ದುರ್ಲಾಭ ಪಡೆಯಲು ಬಯಸುಬಹುದು. ಇಂತಹ ಸ್ನೇಹಿತರು ಅಥವಾ ಹುಡುಗರಿಂದ ದೂರ ಇರುವುದು ಹೇಗೆ ಎಂದು ತಿಳಿಸಲು ನೀವು ಮಗಳ ಜತೆಗೆ ಮಾತನಾಡಬೇಕು. ಆಕೆಯು ಬೇರೆಯವರ ಪ್ರೀತಿ (Love) ಅಥವಾ ಭೀತಿಯಿಂದ ದೇಹವನ್ನು ಅರ್ಪಿಸುತ್ತಿದ್ದರೆ ಅದು ತಪ್ಪು ನಿರ್ಧಾರ ಎಂದು ಹೇಳಿ. ಭೀತಿಯಿಂದ ಮಾಡುವಂತಹ ಕ್ರಿಯೆಗಿಂತಲೂ ಏಕಾಂಗಿತನವು (Loneliness) ಒಳ್ಳೆಯದು ಎಂದು ಹೇಳಿ.

ಇದರ ಜೊತೆಗೆ ಅವಳಿಗೆ ನೀವು ಮಾರ್ಗದರ್ಶಕರಾಗಬೇಕೋ ಹೊರತು ಆಕೆಯ ಕ್ರಮಕ್ಕೆ ತೀರ್ಪು ನೀಡಲು ಹೋಗಬೇಡಿ. ತನ್ನ ಒಳಮನಸ್ಸು ಇಲ್ಲವೆಂದು ಹೇಳಿದರೆ, ಆಗ ಅದನ್ನು ಪಾಲಿಸಬೇಕು ಎಂದು ಹೇಳಿ. ಪುರುಷರ ವಿಚಾರದಲ್ಲಿ ಸಂಬಂಧ, ಲೈಂಗಿಕತೆ ಬಗ್ಗೆ ತನ್ನ ನಿರ್ಧಾರಗಳನ್ನು ಬಲಪಡಿಸಲು ಹೇಳಿ. ದೈಹಿಕ ಮತ್ತು ಮಾನಸಿಕವಾಗಿ ಬಲಿಷ್ಠವಾಗುವ ವಯಸ್ಸು ಯಾವುದು ಎಂದು ಹೇಳಿ. ಬೀದಿ ಕಾಮಣ್ಣರ ಬಗ್ಗೆ ಜಾಗ್ರತರಾಗಿರುವುದು ಹೇಗೆ ಅಂತ ತಿಳಿಸಿ. ಅವರನ್ನು ಎದುರಿಸಲು ಮಾನಸಿಕವಾಗಿ ಹೇಗೆ ಬಲಿಷ್ಠವಾಗಿರಬೇಕು ಎಂದು ತಿಳಿಸಿ ಮತ್ತು ಆಕೆಯು ದೈಹಿಕವಾಗಿ ಬಲಿಷ್ಠವಾಗಿರಲು ಪ್ರೋತ್ಸಾಹಿಸಿ, ಆತ್ಮರಕ್ಷಣೆ ಮಾಡುವಂತಹ ಯಾವುದಾದರೂ ತರಗತಿಗಳಿಗೆ ಆಕೆಯನ್ನು ಸೇರಿಸಿ. ಯಾರನ್ನೇ ಆದರೂ ಎದುರಿಸುವಂತಹ ಧೈರ್ಯವು ಆಕೆಯಲ್ಲಿ ಇರಬೇಕು.

ಪಾಲಕರನ್ನು ಮುಜುಗರಕ್ಕೊಳಪಡಿಸುತ್ತೆ ಮಕ್ಕಳ ಈ Bad Habits

ಲೈಂಗಿಕತೆ ಬಗ್ಗೆ ಮಾತನಾಡಿ
ಹೆಚ್ಚಾಗಿ ಇಂತಹ ವಿಚಾರಗಳ ಬಗ್ಗೆ ಮಗಳೊಂದಿಗೆ ಮಾತನಾಡಲು ಪ್ರತಿಯೊಬ್ಬರು ತಂದೆಯಂದಿರುವ ಕೂಡ ಹಿಂಜರಿಯುವರು. ಆದರೆ ನೀವು ಮನೆಯಲ್ಲೇ ಆಕೆಗೆ ಲೈಂಗಿಕ ಶಿಕ್ಷಣ ನೀಡಬೇಕು. ನೀವು ಆಕೆಗೆ ಇದರ ಬಗ್ಗೆ ತಿಳಿಸದೆ ಇದ್ದರೆ, ಆಗ ಆಕೆಯು ಇಂಟರ್ನೆಟ್ ಮತ್ತು ಸ್ನೇಹಿತೆಯರಿಂದ ತಿಳಿಯುವಳು. ಇದು ಆಕೆಗೆ ತುಂಬಾ ಕೆಟ್ಟ ಪರಿಣಾಮ ಬೀರಬಹುದು. ಅಲ್ಲಿ ಸಿಗುವ ಮಾಹಿತಿಯು ಸರಿಯಾಗಿಲ್ಲದೆ ಇರಬಹುದು. ನೀವು ಆಕೆಗ ಲೈಂಗಿಕ ಶಿಕ್ಷಣದ ಬಗ್ಗೆ ಕೆಲವು ಪುಸ್ತಕಗಳನ್ನು ಓದಲು ನೀಡಬೇಕು. ಇದು ಸ್ವಲ್ಪ ಕಷ್ಟವಾದರೂ ಆರಂಭ ಮಾಡಬೇಕು.

ಲೈಂಗಿಕ ಕ್ರಿಯೆ ಮತ್ತು ಅದರಿಂದ ಆಗುವಂತಹ ಕೆಟ್ಟ ಪರಿಣಾಮಗಳ ಬಗ್ಗೆ ನೀವು ತಿಳಿಸಿ. ಅದರಲ್ಲೂ ನಿಮ್ಮ ಪತ್ನಿಯು ಇಲ್ಲದೆ ಇದ್ದರೆ, ಆಗ ಮಗಳಿಗೆ ಲೈಂಗಿಕ ಶಿಕ್ಷಣ ನೀಡುವುದು ಅತೀ ಅಗತ್ಯ. ಗರ್ಭಧಾರಣೆ, ಗರ್ಭನಿರೋಧಕ ಮತ್ತು ಹೆರಿಗೆ ಬಗ್ಗೆ ಕೂಡ ತಿಳಿಸಿ. ಇದೆಲ್ಲವೂ ಆಕೆಗೆ ತುಂಬಾ ನೆರವಾಗಲಿದೆ.

ಲೈಂಗಿಕತೆ ಕೊಡುವ ಆನಂದದ ಬಗ್ಗೆ ತಿಳಿಸಿ
ಲೈಂಗಿಕ ಕ್ರಿಯೆಯು ಕೊಳಕು ಎಂದು ಯಾವತ್ತಿಗೂ ನಿಮ್ಮ ಮಗಳಿಗೆ ಹೇಳಬೇಡಿ. ಇದರಿಂದ ಆಕೆಯಲ್ಲಿ ಅಸಹ್ಯ ಭಾವನೆ ಮೂಡಬಹುದು ಮತ್ತು ರೇಜಿಗೆ ಹುಟ್ಟಬಹುದು. ಇದಕ್ಕಾಗಿ ನೀವು ಲೈಂಗಿಕ ಕ್ರಿಯೆಯು ಸುಂದರ ಎಂದು ವಿವರಿಸಿ, ಆದರೆ ಇದನ್ನು ನಮಗೆ ತುಂಬಾ ಇಷ್ಟವಾದವರು ಮತ್ತು ಮಾನಸಿಕ ಹಾಗೂ ದೈಹಿಕವಾಗಿ ತಯಾರಾದ ವೇಳೆ ಮಾತ್ರ ನಡೆಸಬೇಕು ಎಂದು ಹೇಳಿ. ಇದು ಆಯ್ಕೆಯಾಗಿರಬೇಕೇ ಹೊರತು, ಒಂದು ಕಟ್ಟುಪಾಡು ಆಗಿರಬಾರದು ಎಂದು ಹೇಳಿ. ಯಾರದೇ ಒತ್ತಡದಲ್ಲಿ ಲೈಂಗಿಕ ಕ್ರಿಯೆ ನಡೆಸಬಾರದು ಎನ್ನುವುದನ್ನು ಕೂಡ ಹೇಳಿ. ಇಂತಹ ವಿಚಾರಗಳು ಕೆಲವು ತಪ್ಪು ನಿರ್ಧಾರಗಳು ಮತ್ತು ಬೇರೆಯವರ ಒತ್ತಡಕ್ಕೆ ಒಳಗಾಗುವುದನ್ನು ತಪ್ಪಿಸುವುದು.

World Sexual Health Day: ಹವಾಮಾನ ಬದಲಾವಣೆಗೂ ಮಹಿಳೆಯರ ಲೈಂಗಿಕ ಆರೋಗ್ಯಕ್ಕೂ ಇದೆ ನಂಟು!

ಇಂಥಾ ವಿಚಾರಗಳು ಅಪ್ಪನಿಂದ ಮಗಳಿಗೆ ತಿಳಿಸಲ್ಪಟ್ಟರೆ ಅತ್ಯುತ್ತಮ. ಅಂಥಾ ಸ್ನೇಹವೂ ಅಪ್ಪ ಮಗಳ ಮಧ್ಯೆ ಬೆಳೆಯಬೇಕು.

Follow Us:
Download App:
  • android
  • ios