ನನ್ನ ಗಂಡ ಮಕ್ಳಂತೆ ಆಡ್ತಾನೆ ಏನ್ ಮಾಡ್ಲಿ?: ಪತ್ನಿ ಸಮಸ್ಯೆಗೇ ಪರಿಹಾರವೇನು?
ಜವಾಬ್ದಾರಿಯುತ ವ್ಯಕ್ತಿ ಎಲ್ಲರಿಗೂ ಇಷ್ಟವಾಗ್ತಾರೆ. ಮದುವೆಯಾದ್ಮೇಲೆ ಗಂಡಸ್ರಿಗೆ ಜವಾಬ್ದಾರಿ ಬರುತ್ತೆ ಎನ್ನುವ ಮಾತೊಂದಿದೆ. ಆದ್ರೆ ಈ ಪುಣ್ಯಾತ್ಮನಿಗೆ ಮದುವೆಯಾದ್ರೂ ಇನ್ನೂ ಬುದ್ಧಿ ಬಂದಿಲ್ಲ. ಮಕ್ಕಳಂತೆ ಮಾಡುವ ಹುಡುಗನ್ನ ಕಟ್ಕೊಂಡು ಮಹಿಳೆ ಹೆಣಗಾಡ್ತಿದ್ದಾಳೆ.
ವಯಸ್ಸು ಹೆಚ್ಚಾಗ್ತಿದ್ದಂತೆ ಬುದ್ಧಿ ಬೆಳೆಯುತ್ತ ಹೋಗುತ್ತೆ. ಜವಾಬ್ದಾರಿಗಳು ತಲೆ ಮೇಲೆ ಬರುತ್ವೆ. ಜವಾಬ್ದಾರಿ ಹೆಚ್ಚಾಗ್ತಿದ್ದಂತೆ ವ್ಯಕ್ತಿಯ ಸ್ವಭಾವ ಬದಲಾಗುತ್ತದೆ. ಮೊದಲಿದ್ದ ಹುಡುಕು ಬುದ್ಧಿ ಅಥವಾ ಚಂಚಲತೆ ಇರೋದಿಲ್ಲ. ದುಡಿಮೆ, ಕುಟುಂಬ, ಮಕ್ಕಳು, ಭವಿಷ್ಯದ ಬಗ್ಗೆ ಎಲ್ಲರೂ ಆಲೋಚನೆ ಮಾಡುತ್ತಾರೆ. ಮನುಷ್ಯನಿಗೆ ಎಷ್ಟೇ ವಯಸ್ಸಾದ್ರೂ ಆತನಲ್ಲಿ ಮಕ್ಕಳ ಸ್ವಭಾವ ಅಡಗಿರುತ್ತದೆ. ಅದನ್ನು ಯಾರೂ ಸಾರ್ವಜನಿಕಗೊಳಿಸಲು ಮುಂದಾಗೋದಿಲ್ಲ. ಅವಕಾಶ ಸಿಕ್ಕಾಗ ಮಕ್ಕಳ ಜೊತೆ ಕುಣಿದು ಕುಪ್ಪಳಿಸೋದು ಬಿಟ್ರೆ ಎಲ್ಲ ಸಂದರ್ಭದಲ್ಲೂ ಮಕ್ಕಳಂತೆ ನಡೆದುಕೊಳ್ಳೋದು ಯೋಗ್ಯ ಎನ್ನಿಸುವುದಿಲ್ಲ. ವ್ಯಕ್ತಿಯೊಬ್ಬನ ಮಕ್ಕಳ ಸ್ವಭಾವವೇ ಈಗ ಪತ್ನಿಗೆ ತಲೆನೋವು ತಂದಿದೆ. ಇನ್ನೂ ಬೇಜವಾಬ್ದಾರಿಯಿಂದ ವರ್ತಿಸುವ ಪತಿ ನೋಡಿ ಪತ್ನಿ ಟೆನ್ಷನ್ ಮಾಡಿಕೊಂಡಿದ್ದಾಳೆ.
ಆಕೆಗೆ ಮದುವೆ (Marriage) ಯಾಗಿ ಕೆಲ ವರ್ಷ ಕಳೆದಿದೆ. ದಾಂಪತ್ಯದಲ್ಲಿ ಯಾವುದೇ ಕೊರತೆಯಿಲ್ಲ. ಆದ್ರೆ ಪತಿ (Husband) ಯ ಒಂದು ಸ್ವಭಾವವೇ ಕಿರಿಕಿರಿಯುಂಟು ಮಾಡ್ತಿದೆ. ಮದುವೆಯಾಗಿ ಇಷ್ಟು ವರ್ಷ ಕಳೆದ್ರು ಪತಿ ಮಕ್ಕಳಂತೆ ವರ್ತಿಸ್ತಾನಂತೆ. ಜವಾಬ್ದಾರಿಯನ್ನು ಅರಿಯದೆ ನಡೆದುಕೊಳ್ತಾನಂತೆ. ಈ ಬಗ್ಗೆ ಅನೇಕ ಬಾರಿ ಪತಿಗೆ ಹೇಳಲು ಪ್ರಯತ್ನಿಸಿ ವಿಫಲನಾಗಿದ್ದೇನೆ ಎನ್ನುತ್ತಾಳೆ ಮಹಿಳೆ.
ಜವಾಬ್ದಾರಿಯಿಂದ ವರ್ತಿಸುವಂತೆ ಹೇಳಿದ್ರೆ ಪತಿ ಮಾತು ಬಿಡ್ತಾನಂತೆ. ಯಾವುದಕ್ಕೂ ಪ್ರತಿಕ್ರಿಯೆ ನೀಡೋದಿಲ್ಲವಂತೆ. ಅವನಿಗೆ ಹೇಗೆ ಹೇಳ್ಬೇಕು ತಿಳಿತಿಲ್ಲ ಎನ್ನುತ್ತಾಳೆ ಮಹಿಳೆ. ಆತನ ಈ ವರ್ತನೆಗೆ ಆತನ ತಾಯಿಯೇ ಒಂದು ರೀತಿಯಲ್ಲಿ ಕಾರಣ ಎನ್ನುತ್ತಾಳೆ ಮಹಿಳೆ. ಮಗ ಬೇಜವಾಬ್ದಾರಿ (Irresponsible) ಯಿಂದ ವರ್ತಿಸೋದನ್ನು ಆತನ ತಾಯಿ ಪ್ರೋತ್ಸಾಹಿಸ್ತಾಳಂತೆ. ಗಂಡನ ಈ ವರ್ತನೆಯಿಂದ ನಮ್ಮಿಬ್ಬರ ಸಂಬಂಧ (Relationship) ಹದಗೆಟ್ರೆ ಎಂಬ ಭಯ ನನಗೆ ಕಾಡ್ತಿದೆ ಎನ್ನುತ್ತಾಳೆ ಮಹಿಳೆ.
ಬೆತ್ತಲೆ ಮಲಗುವ ಪತಿ, ಪತ್ನಿಗೆ ಮುಜುಗರ ! ಮನೆ ಕೆಲಸದಾಕೆ ನೋಡಿದ್ದೇನು ?
ತಜ್ಞರ ಸಲಹೆ : ಒಬ್ಬೊಬ್ಬರು ಒಂದೊಂದು ರೀತಿ ಬೆಳೆಯುತ್ತಾರೆ. ಕೆಲವರು ಪ್ರೀತಿಯಲ್ಲೇ ಬೆಳೆದ್ರೆ ಮತ್ತೆ ಕೆಲವರು ಜವಾಬ್ದಾರಿ ಅರಿತು ಬೆಳೆಯುತ್ತಾರೆ. ಈತನಿಗೆ ಬರೀ ಪ್ರೀತಿ ಸಿಕ್ಕಿದೆ. ಸುತ್ತಮುತ್ತ ಅತಿಯಾಗಿ ಪ್ರೀತಿಸುವ ವ್ಯಕ್ತಿಗಳಿದ್ದ ಕಾರಣ ಆತನಿಗೆ ಜವಾಬ್ದಾರಿಯನ್ನು ಕಲಿಸಿಲ್ಲ. ಹಾಗಾಗಿಯೇ ಮದುವೆ ನಂತ್ರವೂ ತನ್ನ ಜವಾಬ್ದಾರಿಯನ್ನು ಬೇರೆಯವರ ಮೇಲೆ ಹಾಕಿ ಜೀವನ ನಡೆಸಲು ಮುಂದಾಗಿದ್ದಾನೆ ಎನ್ನುತ್ತಾರೆ ತಜ್ಞರು. ಮನೆಯಲ್ಲಿ ಎಲ್ಲರೂ ಅವನನ್ನು ಅತಿಯಾಗಿ ಪ್ರೀತಿ (Love) ಮಾಡುವ ಕಾರಣ ಆತ ಈಗ್ಲೂ ದೊಡ್ಡವನಾಗಲು ಇಷ್ಟಪಡ್ತಿಲ್ಲ. ಆ ಪ್ರೀತಿಯಲ್ಲೇ ಜೀವನ ನಡೆಸಲು ಬಯಸ್ತಿದ್ದಾನೆ ಎಂಬುದು ತಜ್ಞರ ಅಭಿಪ್ರಾಯ.
ಮೊದಲು ನಿಮ್ಮ ಪತಿಯ ಯಾವ ಸ್ವಭಾವದಲ್ಲಿ (Nature) ಬದಲಾವಣೆ ತರಬೇಕು ಎಂಬುದನ್ನು ನೀವು ನಿರ್ಧರಿಸಬೇಕು. ಅದರ ಪಟ್ಟಿ ಸಿದ್ಧಪಡಿಸಬೇಕು. ನಂತ್ರ ಇದನ್ನು ಪತಿ ಮುಂದೆ ನಿಧಾನವಾಗಿ ಹೇಳ್ಬೇಕು. ನೀವು ಹೇಳದೆ ನಿಮ್ಮ ಪತಿಗೆ ನಿಮ್ಮ ಮನಸ್ಥಿತಿ (Mind Set) ತಿಳಿಯಲು ಸಾಧ್ಯವಿಲ್ಲ. ನಿಮ್ಮ ಮಾತನ್ನು ಆತ ಸ್ವೀಕರಿಸಿ ನಿಧಾನವಾಗಿ ಬದಲಾಗ್ತಿದ್ದಾನೆ ಎನ್ನಿಸಿದ್ರೆ ಆತನ ಪ್ರತಿ ಹೆಜ್ಜೆಯನ್ನು ನೀವು ಪ್ರೋತ್ಸಾಹಿಸಿ. ಇದ್ರಿಂದ ಅವನ ಆತ್ಮಸ್ಥೈರ್ಯ (Confidence) ಹೆಚ್ಚಾಗುವ ಜೊತೆಗೆ ನಿಮಗೆ ಯಾವುದು ಇಷ್ಟ, ಯಾವುದು ಇಷ್ಟವಿಲ್ಲ ಎಂಬುದು ಆತನಿಗೆ ತಿಳಿಯಲು ಶುರುವಾಗುತ್ತದೆ ಎನ್ನುತ್ತಾರೆ ತಜ್ಞರು.
Sexual Health: ಸಂಗಾತಿ ಕಾಂಡೋಮ್ ಬೇಡ ಅಂತಾರ ? ಹೀಗೆ ಮಾಡಿ ಮನವೊಲಿಸಿ
ಪತಿ ಜೊತೆ ಕಾಲ ಕಳೆಯುವುದು ಕೂಡ ಇಲ್ಲಿ ಮುಖ್ಯವಾಗುತ್ತದೆ. ಮೌನವಾಗಿದ್ದು ಎಲ್ಲವನ್ನು ಎದುರಿಸುವ ಬದಲು, ನಿಮ್ಮ ಮುಂದೆ ಏನೆಲ್ಲ ಸವಾಲುಗಳಿವೆ, ನೀವು ಅವುಗಳನ್ನು ಹೇಗೆ ಎದುರಿಸುತ್ತಿದ್ದೀರಿ ಎಂಬುದನ್ನೆಲ್ಲ ಪತಿಗೆ ಹೇಳ್ಬೇಕು. ಅವರು ಮಾಡ್ಬೇಕಾಗಿದ್ದ ಯಾವ ಕೆಲಸವನ್ನು ನೀವು ಮಾಡ್ತಿದ್ದೀರಿ ಎಂಬುದನ್ನು ಅವರಿಗೆ ತಿಳಿಸಿ ಹೇಳಿ. ನಿಧಾನವಾಗಿ ಅವರು ಜವಾಬ್ದಾರಿ ತಿಳಿಯುತ್ತಾರೆ. ಅದಕ್ಕೆ ತಕ್ಕಂತೆ ಕೆಲಸ ಶುರು ಮಾಡ್ತಾರೆ. ಒಂದ್ವೇಳೆ ನೀವು ಇಷ್ಟು ಮಾಡಿಯೂ ಆತ ತನ್ನ ವರ್ತನೆ ಬದಲಿಸಿಲ್ಲವೆಂದ್ರೆ ಆತನ ತಾಯಿಗೆ ಹೇಳಿ. ಪತಿ ಬದಲಿಸಲು ಅವರ ಸಹಾಯ ಪಡೆಯಿರಿ ಎನ್ನುತ್ತಿದ್ದಾರೆ ತಜ್ಞರು.