ಐಫೋನ್ 15 ಕೊಡಿಸಲು ನಿರಾಕರಿಸಿದ ತಂದೆಗೆ 11 ವರ್ಷದ ಮಗಳ ಬಾಯಿಂದ ಬಂತು ಇಂಥ ಮಾತು!
ಈಗಿನ ಕಾಲದಲ್ಲಿ ಮಕ್ಕಳಿಗೆ ಪಾಲಕರು, ಆಪ್ತರಿಗಿಂತ ಮೊಬೈಲ್ ಆಪ್ತವಾಗಿದೆ. ಮೊಬೈಲ್ ಗಾಗಿ ಅವರು ಏನು ಮಾಡಲೂ ಸಿದ್ಧ. ಅಪ್ಪ ಅಮ್ಮನ ಕಷ್ಟದ ಬಗ್ಗೆ ಅರಿಯದ ಮಕ್ಕಳು, ಪಾಲಕರ ಮನಸ್ಸಿಗೆ ನೋವಾಗುವ ಮಾತನಾಡ್ತಾರೆ.
ಕೈನಲ್ಲಿ ಯಾವ ಮೊಬೈಲ್ ಇದೆ ಎನ್ನುವುದರ ಮೇಲೆ ಸ್ಟೇಟಸ್ ನಿರ್ಧಾರವಾಗುವ ಸಮಯ ಇದಲ್ಲ. ಯಾಕೆಂದ್ರೆ ಸಂಬಳ ಎಷ್ಟೇ ಇರಲಿ ಸಾಲ ಮಾಡಿ ಆದ್ರೂ ಜನರು ಸಂಬಳಕ್ಕಿಂತ ಡಬಲ್ ಬೆಲೆಯ ಮೊಬೈಲ್ ಖರೀದಿ ಮಾಡ್ತಾರೆ. ಬಹುತೇಕ ಎಲ್ಲರ ಕೈನಲ್ಲಿ ಹಿಂದೆ ಸ್ಮಾರ್ಟ್ಫೋನ್ ಇರ್ತಾ ಇತ್ತು. ಈಗ ಐಫೋನ್ ಬಂದಿದೆ. ಹೊಸ ಹೊಸ ಐಫೋನ್ ಮಾರುಕಟ್ಟೆಗೆ ಬರ್ತಿದ್ದಂತೆ ಜನರು ಅದನ್ನು ಖರೀದಿ ಮಾಡಲು ಮುಂದಾಗ್ತಾರೆ. ಮಕ್ಕಳಿಗೂ ಮೊಬೈಲ್ ಮೇಲೆ ಅತಿಯಾದ ಪ್ರೀತಿ ಹುಟ್ಟಿದೆ. ಗೇಮಿಂಗ್, ಸಾಮಾಜಿಕ ಜಾಲತಾಣದಲ್ಲಿ ಸದಾ ಇರುವ ಮಕ್ಕಳು ಯಾವ್ ಯಾವುದೋ ಮೊಬೈಲ್ ಬಳಕೆ ಮಾಡೋದಿಲ್ಲ. ಐಫೋನ್ ಬೇಕೆನ್ನುವ ಬೇಡಿಕೆ ಈಗೀಗ ಹೆಚ್ಚಾಗ್ತಿದೆ. ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಮೊಬೈಲ್ ನೀಡೋದು ದೊಡ್ಡ ತಪ್ಪು. ಅದ್ರಲ್ಲೂ ಅವರು ಹೇಳಿದಂತೆ ಹೊಸ ಹೊಸ ಮೊಬೈಲ್ ಕೊಡಿಸೋದು ಮತ್ತೂ ದೊಡ್ಡ ತಪ್ಪು. ಇದು ಗೊತ್ತಾದ್ಮೇಲೂ ಒಬ್ಬ ತಂದೆ ಮತ್ತೆ ಯಡವಟ್ಟು ಮಾಡಲು ಮುಂದಾಗಿದ್ದಾನೆ. ರೆಡ್ಡಿಟ್ ನಲ್ಲಿ ತನ್ನ ಕಥೆಯನ್ನು ಹೇಳಿಕೊಂಡಿದ್ದು, ಅದಕ್ಕೆ ಸಾಕಷ್ಟು ಕಮೆಂಟ್ ಬಂದಿದೆ.
ಆತನ ಮಗಳಿಗೆ ಹನ್ನೊಂದು ವರ್ಷ. ಆಕೆಗೆ iPhone 15 Pro Max ಮೊಬೈಲ್ ಬೇಕಂತೆ. ಎರಡು ವರ್ಷಗಳ ಹಿಂದೆ ತಂದೆ ಮಗಳಿಗಾಗಿ ಐಫೋನ್ 8 ನೀಡಿದ್ದ. ಮಗಳು ಅದನ್ನು ಸಾಮಾಜಿಕ ಜಾಲತಾಣ ಬಳಸಲು ಹಾಗೂ ಸ್ನೇಹಿತರ ಜೊತೆ ಮಾತನಾಡಲು ಬಳಸುತ್ತಿದ್ದಳು. ಆದ್ರೆ ಈಗ ಈ ಮೊಬೈಲ್ ಹಳೆಯದಾಗಿದೆ. ಅದನ್ನು ಬಳಸಲು ಕಷ್ಟವಾಗ್ತಿದೆ. ಹೊಸ ಫೋನ್ ನನಗೆ ಬೇಕು ಎಂದು ತಂದೆಗೆ ಹೇಳಿದ್ದಾಳೆ.
18 ವರ್ಷದೊಳಿಗಿನ ಹುಡುಗಿ ಮದುವೆಯಾಗಿದ್ದಕ್ಕೆ 20 ವರ್ಷ ಜೈಲು ಶಿಕ್ಷೆ
ಮಗಳಿಗೆ ತಂದೆಯ ಹಳೆ ಫೋನ್ ನೀಡಿದ್ದ ಕಾರಣ ಅದು ಹಾಳಾಗಿದೆ ಎಂಬ ವಿಷ್ಯ ಪಾಲಕರಿಗೂ ತಿಳಿದಿತ್ತು. ಇದೇ ಕಾರಣಕ್ಕೆ ಹೊಸ ಫೋನ್ ನೀಡುವ ನಿರ್ಧಾರಕ್ಕೆ ಬಂದಿದ್ದರು. ಮಗಳಿಗೆ, ತಂದೆ ಐಫೋನ್ 13 ನೀಡೋದಾಗಿ ಹೇಳಿದ್ದ. iPhone 15 Pro Max ಬೆಲೆ 1,200 ಡಾಲರ್ ಅಂದ್ರೆ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಬೆಲೆ ಇದೆ. ಐಫೋನ್ 13 ಐವತ್ತು ಸಾವಿರ ಇರೋದ್ರಿಂದ ಇದನ್ನು ಖರೀದಿಸಿ ನೀಡಲು ಪಾಲಕರು ಮುಂದಾಗಿದ್ದರು. ಆದ್ರೆ ಮಗಳಿಗೆ ಇದು ಇಷ್ಟವಿರಲಿಲ್ಲ. ಐಫೋನ್ 13 ನನಗೆ ಬೇಡ. ನೀವು ನನಗೆ iPhone 15 Pro Max ನೀಡದೆ ನನ್ನ ಜೀವನ ಹಾಳು ಮಾಡ್ತಿದ್ದೀರಿ ಎಂದು ಪಾಲಕರ ಮೇಲೆ ಆರೋಪ ಹೊರಿಸಿದ್ದಾಳೆ. ಇಷ್ಟೇ ಅಲ್ಲ ನನ್ನೆಲ್ಲ ಸ್ನೇಹಿತರ ಬಳಿ ಐಫೋನ್ 15 ಇದೆ. ನನ್ನ ಆಪ್ತ ಸ್ನೇಹಿತೆ ಬಳಿಯೂ ಇದೇ ಫೋನ್ ಇದೆ ಎಂದು ಮಗಳು ಹಠ ಮಾಡ್ತಿದ್ದಾಳೆ. ಐಫೋನ್ 15 ಕನ್ಸೋಲ್ ಮಟ್ಟದ ಆಟಗಳಿಗೆ ಹೆಚ್ಚು ಪ್ರಸಿದ್ಧಿ ಪಡೆದಿದೆ. 120Hz ಡಿಸ್ಪ್ಲೇ ಹೊಂದಿದೆ. ಹಾಗಾಗಿಯೇ ನನಗೆ ಈ ಫೋನ್ ಬೇಕೆಂದು ಮಗಳು ಪಟ್ಟು ಹಿಡಿದಿದ್ದಾಳೆ ಎಂದು ತಂದೆ ರೆಡ್ಡಿಟ್ ನಲ್ಲಿ ಬರೆದಿದ್ದಾನೆ.
ಓವ್ಯುಲೇಶನ್ ಆಗೋವಾಗ ಮಾತ್ರವಲ್ಲ, ವೀಕೆಂಡ್ ಗಳಲ್ಲೂ ಮಹಿಳೆಯರ ಕಾಮಾಸಕ್ತಿ ಹೆಚ್ಚುತ್ತಂತೆ!
ಅಂತಿಮವಾಗಿ ಮಗಳಿಗೆ iPhone 15 Pro Max ಖರೀದಿಸಿ, ಉಡುಗೊರೆಯಾಗಿ ನೀಡಲು ನಾವು ನಿರ್ಧರಿಸಿದ್ದೇವೆ. ನೀವು ಏನು ಹೇಳ್ತೀರಿ ಎಂದು ಆತ ಪ್ರಶ್ನೆ ಕೇಳಿದ್ದಾನೆ.ತಂದೆಯ ರೆಡ್ಡಿಟ್ ಪೋಸ್ಟ್ ವೈರಲ್ ಆಗಿದೆ. 9,000 ಕ್ಕೂ ಹೆಚ್ಚು ಕಮೆಂಟ್ಸ್ ಬಂದಿದೆ. ಮಕ್ಕಳಿಗೆ ಫೋನ್ ನೀಡೋದು ಒಳ್ಳೆಯದಲ್ಲ ಎಂದು ಕೆಲವರು ಹೇಳಿದ್ರೆ ಮತ್ತೆ ಕೆಲವರು, ಇಂಥ ಸಣ್ಣ ವಿಷ್ಯಕ್ಕೆ ಮಕ್ಕಳು, ಪೋಷಕರಿಗೆ ಇಂಥ ಮಾತನ್ನಾಡಬಾರದು ಎಂದಿದ್ದಾರೆ. ಐಫೋನ್ 13 ಕೂಡ ಹೊಸ ಫೋನ್. ಅದ್ರಲ್ಲೂ ಸಾಕಷ್ಟು ವೈಶಿಷ್ಟ್ಯವಿದೆ ಎಂದು ಕೆಲವರು ಸಲಹೆ ನೀಡಿದ್ದಾರೆ.