18 ವರ್ಷದೊಳಿಗಿನ ಹುಡುಗಿ ಮದುವೆಯಾಗಿದ್ದಕ್ಕೆ 20 ವರ್ಷ ಜೈಲು ಶಿಕ್ಷೆ
ಕಲಬುರಗಿಯಲ್ಲಿ 18 ವರ್ಷದೊಳಗಿನ ಹುಡುಗಿಯನ್ನು ಮದುವೆಯಾದ ವ್ಯಕ್ತಿಗೆ ನ್ಯಾಯಾಲಯವು ಬರೋಬ್ಬರಿ 20 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದೆ.
ಕಲಬುರಗಿ (ಜ.29): ನಮ್ಮ ದೇಶದಲ್ಲಿ 18 ವರ್ಷದೊಳಗಿನ ಹುಡುಗಿಯರನ್ನು ಮದುವೆಯಾಗುವುದು ಕಾನೂನು ಬಾಹಿರವೆಂದು ಗೊತ್ತಿದ್ದರೂ, ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿ ಫಸ್ಟ್‌ನೈಟ್ ಮಾಡಿಕೊಂಡ ವ್ಯಕ್ತಿಗೆ ನ್ಯಾಯಾಲಯ ಬರೋಬ್ಬರಿ 20 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದೆ. ಜೊತೆಗೆ, ಆಕೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಕ್ಕಾಗಿ ಪೋಕ್ಸೋ ಪ್ರಕರಣವನ್ನು ಕೂಡ ದಾಖಲಿಸಿದಾಗಿದ್ದು, ಶಿಕ್ಷೆಯನ್ನು ನೀಡಲಾಗಿದೆ.
ಹೌದು, ನಮ್ಮ ದೇಶದಲ್ಲಿ ಗಂಡಸಿಗೆ 21 ವರ್ಷ ಹಾಗೂ ಹೆಣ್ಣಿಗೆ 18 ವರ್ಷ ಪೂರ್ಣಗೊಂಡಲ್ಲಿ ಮಾತ್ರ ಮದುವೆಗೆ ಅರ್ಹತೆ ಪಡೆಯುತ್ತಾರೆ. ಅಂದರೆ 18 ವರ್ಷದೊಳಿನ ಹುಡುಗಿಯರನ್ನು ಮದುವೆಯಾಗುವಂತಿಲ್ಲ ಎಂಬ ಕಾನೂನು ಇದೆ. ಒಂದು ವೇಳೆ ಮದುವೆಯಾದರೆ ಭಾರಿ ಕಠಿಣ ಶಿಕ್ಷೆಯನ್ನು ನೀಡಲಾಗುತ್ತದೆ. ಆದರೆ, ಇಲ್ಲೊಬ್ಬ ಯುವಕ ಅಪ್ರಾಪ್ತ ಬಾಲಕಿಯ ಮದುವೆಯಾಗಿದ್ದೂ ಅಲ್ಲದೇ ಆಕೆಯೊಂದಿಗೆ ಮೊದಲ ರಾತ್ರಿ ಶಾಸ್ತ್ರವನ್ನೂ ಮಾಡಿಕೊಂಡಿದ್ದರಿಂದ ಆತನ ಮೇಲೆ ಪೋಕ್ಸೋ ಪ್ರಕರಣ ದಾಖಲಿಸಲಾಗಿತ್ತು. ಈ ಬಗ್ಗೆ ವಿಚಾರಣೆ ಮಾಡಿದ ನ್ಯಾಯಾಲಯ ಆರೋಪಿಗೆ 20 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿ ಆದೇಶಿಸಿದೆ.
ಬಾಗಲಕೋಟೆ: ಶಾಲಾ ವಾಹನ ಭೀಕರ ಅಪಘಾತ ನಾಲ್ವರು ಮಕ್ಕಳು ದುರ್ಮರಣ!
ಕಲಬುರಗಿಯ ಅಪರ ಜಿಲ್ಲಾ ಮತ್ತು ಸತ್ರ ವಿಶೇಷ ಪೋಕ್ಸೋ ನ್ಯಾಯಾಲಯದ ನ್ಯಾಯಾದೀಶರಾದ ಯಮನಪ್ಪ ಬಮ್ಮಣಗಿ ಅವರಿಂದ ಮಹತ್ವದ ತೀರ್ಪು ನೀಡಲಾಗಿದೆ. ಅಪ್ರಾಪ್ತ ಬಾಲಕಿಯನ್ನು ಅಕ್ರಮವಾಗಿ ಮದುವೆಯಾಗಿದ್ದೂ ಅಲ್ಲದೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಹಾಗಾಗಿ, ಪೋಕ್ಸೋ ಕೇಸ್ ಅಡಿ ಆರೋಪಿಗೆ 20 ವರ್ಷ ಜೈಲು ಶಿಕ್ಷೆ ಮತ್ತು 20 ಸಾವಿರ ರೂ. ದಂಡವನ್ನು ವಿಧಿಸಲಾಗಿದೆ. ಇನ್ನು ಈ ಘಟನೆಯು ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ತೆಲ್ಕೂರ ಗ್ರಾಮದಲ್ಲಿ ಕಳೆದ 2022ರ ಏಪ್ರಿಲ್‌ನಲ್ಲಿ ನಡೆದಿರುವ ಕೃತ್ಯವಾಗಿದೆ. ತೇಲ್ಕೂರ ಗ್ರಾಮದ ವ್ಯಕ್ತಿ ಶಿಕ್ಷೆಗೊಳಗಾಗಿರುವ ಆರೋಪಿಯಾಗಿದ್ದಾನೆ.
ಸರ್ಕಾರಿ ನೌಕರಿ ಕೊಡಿಸೋದಾಗಿ ಲಕ್ಷ ಲಕ್ಷ ವಂಚನೆ; ಬಗೆದಷ್ಟು ಬಯಲಾಗ್ತಿದೆ ಕಾಂಗ್ರೆಸ್ ನಾಯಕಿ ಕರ್ಮಕಾಂಡ!
ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದಾಗ ಆರೋಪಿ ಪೋಕ್ಸೋ ಮತ್ತು ಬಾಲ್ಯವಿವಾಹ ಕಾಯ್ದೆಯಡಿ ಆರೋಪವೆಸಗಿರುವುದು ಸಾಬೀತಾದ ಕಾರಣ ನ್ಯಾಯಾಲಯ ಕಠಿಣ ಶಿಕ್ಷೆ ನೀಡಿದೆ. ಈತ ಬಾಲಕಿಯನ್ನು ಅಪ್ರಾಪ್ತ ಬಾಲಕಿಯನ್ನು ದೇಸ್ಥಾನದಲ್ಲಿ ಮದುವೆಯಾಗಿದ್ದನು. ಮದುವೆಯಾದ ನಂತರ ಬಾಲಕಿ ಲೈಂಗಿಕ ಕ್ರಿಯೆಗೆ ವಿರೋಧಿಸಿದರೂ 15 ದಿನಗಳ ಕಾಲ ಅಕ್ರಮವಾಗಿ ಬಂಧನದಲ್ಲಿಟ್ಟುಕೊಂಡು ನಿರಂತರ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಸೇಡಂ ಪೊಲೀಸ್ ಠಾಣೆಯ ಸಿಪಿಐ ಆನಂದರಾವ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಚಾರ್ಜಶೀಟ್ ಉಲ್ಲೇಖ ಮಾಡಲಾಗಿದೆ. ಆರೋಪಿಯ ಕಾನೂನು ಉಲ್ಲಂಘನೆ ಮತ್ತು ನೀಚ ಕೃತ್ಯಕ್ಕಾಗಿ ನ್ಯಾಯಾಲಯದ ಈ ತೀರ್ಪು ನೀಡಿದೆ.