Asianet Suvarna News Asianet Suvarna News

ಅತೀಯಾಗಿ ಟಿವಿ ನೋಡುತ್ತಿದ್ದ 3 ವರ್ಷದ ಮಗಳಿಗೆ ತಂದೆ ಕೊಟ್ಟ ಶಿಕ್ಷೆಗೆ ಭಾರಿ ಆಕ್ರೋಶ!

3 ವರ್ಷದ ಮಗಳು ಅತೀಯಾಗಿ ಟಿವಿ ನೋಡುತ್ತಿದ್ದಾಳೆ ಅನ್ನೋ ಕಾರಣಕ್ಕೆ ತಂದೆ ಘನಘೋರ ಶಿಕ್ಷೆ ನೀಡಿದ್ದಾನೆ. ತಂದೆಯ ಈ ನಡೆದೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಮುಗ್ದ ಮನಸ್ಸಿನ ಕಂದಮ್ಮನಿಗೆ ಅಪ್ಪನೆಂದರೆ ಭಯ ಶುರುವಾಗಿದೆ.
 

Father punished his 3 year old daughter fill bowl with tears for watching tv at china ckm
Author
First Published Jul 9, 2024, 6:54 PM IST

ಬೀಜಿಂಗ್(ಜು.09) ಮಕ್ಕಳು ಮೊಬೈಲ್ ನೋಡುತ್ತಾರೆ. ಮೊಬೈಲ್ ಇಲ್ಲದೆ ಊಟ ಮಾಡಲ್ಲ, ಟಿವಿ ಮೊಬೈಲ್ ಗೀಳು ಹತ್ತಿಕೊಂಡಿದೆ ಅನ್ನೋ ಮಾತು ಭಾರತದ ಬಹುತೇಕ ಎಲ್ಲಾ ಮನೆಗಳಲ್ಲಿ ಕೇಳಿರುತ್ತೀರಿ. ಇದು ಭಾರತದ ಮಾತ್ರವಲ್ಲ, ವಿಶ್ವದ ಬಹುತೇಕ ಕಡೆಗಳಲ್ಲಿ ಇದೇ ಕೂಗು. ಹೀಗೆ ಟಿವಿ ನೋಡುತ್ತಿದ್ದ ಮೂರು ವರ್ಷದ ಪುಟ್ಟ ಮಗಳಿಗೆ ಟಿವಿ ಗೀಳು ಹತ್ತಿಕೊಂಡಿದೆ. ಆದರೆ ಮಗಳ ಟಿವಿ ಗೀಳಿನಿಂದ ರೊಚ್ಚಿಗೆದ್ದ ತಂದೆ ಆಕೆಗೆ ಕಠಿಣ ಶಿಕ್ಷೆ ನೀಡಿ ಇದೀಗ ಎಲ್ಲ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಹೌದು, ಟಿವಿ ನೋಡುತ್ತಿದ್ದ ಮಗಳನ್ನು ಕೂರಿಸಿ ಗದರಿಸಿದ್ದು ಮಾತ್ರವಲ್ಲ, ಅತ್ತು ಅತ್ತು ಪಾತ್ರೆಯಲ್ಲಿ ಕಣ್ಮೀರು ತುಂಬಿಸಬೇಕು ಎಂದು ಆಜ್ಞೆ ವಿಧಿಸಿದ ಘಟನೆ ಚೀನಾದ ಯುಲಿನ್‌ನಲ್ಲಿ ನಡೆದಿದೆ.

ಟಿವಿ, ಮೊಬೈಲ್‌ ನೆಚ್ಚಿಕೊಂಡಿರುವುದು ಮಕ್ಕಳ ಸಮಸ್ಯೆಯಲ್ಲ. ಪೋಷಕರು ಅವರ ಜೊತೆ ಗುಣಮಟ್ಟದ ಸಮಯ ಕಳೆಯದ ಸಮಸ್ಯೆ. ಇಲ್ಲೂ ಕೂಡ ಇದೇ ಸಮಸ್ಯೆ. ಮೂರು ವರ್ಷದ ಪುಟ್ಟ ಕಂದಮ್ಮ. ತಂದೆ, ತಾಯಿ ಇಬ್ಬರಿಗೂ ಕೆಲಸ. ಮಗುವಿನ ಜೊತ ಒಂದಷ್ಟು ಹೊತ್ತು ಕಳೆಯಲು ಸಮಯವಿಲ್ಲ. ಇತ್ತ ಮಗಳಿಗೆ ಟಿವಿ ಆಪ್ತವಾಗಿದೆ. ಹೀಗಾಗಿ ಟಿವಿ ತುಸು ಹೆಚ್ಚೆ ನೋಡಿದ್ದಾಳೆ.

ಹದಿ ವಯಸ್ಸಿನ ಮಗಳೊಂದಿಗೆ ಹೇಗಿರಬೇಕು ಒಡನಾಟ, ಸಂಬಂಧದ ಪಾಠ ಹೇಳಿದ ಶ್ರುತಿ!

ಆಹಾರ ತಯಾರಿಸಿ ಡೈನಿಂಗ್ ಟೇಬಲ್ ಮೇಲೆ ಇಡಲಾಗಿತ್ತು. ಬಳಿಕ ಟಿವಿ ನೋಡುತ್ತಿದ್ದ ಮಗಳನ್ನು ತಂದೆ ಕರೆದಿದ್ದಾನೆ. ಆದರೆ ಟಿವಿ ನೋಡುತ್ತಾ ತಲ್ಲೀನಳಾಗಿದ್ದ ಪುಟ್ಟ ಮಗಳಿಗೆ ಇದು ಕೇಳಿಸಿಲ್ಲ. ಇಷ್ಟೇ ನೋಡಿ, ಅಪ್ಪನ ಪಿತ್ತ ನೆತ್ತಿಗೇರಿದೆ. ಟಿವಿ ಅತೀಯಾಗಿದೆ ಎಂದು ಗದರಿಸಿದ ತಂದೆ, ನೇರವಾಗಿ ಬಂದು ಟಿವಿ ಆಫ್ ಮಾಡಿದ್ದಾನೆ. ಅಷ್ಟರಲ್ಲೇ ಏನೋ ಎಡವಟ್ಟಾಗಿದೆ ಎಂದು ಮಗಳಿಗೆ ಅರವಾಗಿದೆ.

ಆತಂಕದಿಂದ ತಂದೆ ಮುಖ ನೋಡಿದ್ದಾಳೆ. ಗದರಿಸಿದ ಅಪ್ಪ, ಒಂದೆಡೆ ಕುಳಿತುಕೊಳ್ಳಲು ಹೇಳಿದ್ದಾನೆ. ಬಳಿಕ ಟಿವಿ ಹೆಚ್ಚು ನೋಡುತ್ತಿದ್ದಿಯಾ ಎಂದು ಬೈದಿದ್ದಾನೆ. ಇಷ್ಟೇ ಅಲ್ಲ ಒಂದು ಪಾತ್ರೆಯನ್ನು ಮಗಳಿಗೆ ನೀಡಿ ಟಿವಿ ನೋಡಿದರೆ ನಿನ್ನ ಕಣ್ಣೀರಿನಲ್ಲಿ ಈ ಪಾತ್ರೆ ತುಂಬಿಸಿಕೊಡಬೇಕು ಎಂದು ಬೆದರಿಸಿದ್ದಾನೆ. ಪಾತ್ರೆ ಹಿಡಿದು ಭಯ, ಆತಂಕದಿಂದ ಕಣ್ಣೀರು ಹಾಕಿದ ಮಗಳು ಅಕ್ಷರಶಃ ನಡುಗಿ ಹೋಗಿದ್ದಾಳೆ.

ಈ ಘಟನೆ ವಿಡಿಯೋ ಹರಿದಾಡುತ್ತಿದ್ದಂತೆ ತಂದೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ನಿಮ್ಮ ತಪ್ಪನ್ನು ಮುಚ್ಚಿಹಾಕಲು, ಮಕ್ಕಳ ಮೇಲೆ ಇದೆಂತಾ ಶಿಕ್ಷೆ ಎಂದು ಆಕ್ರೋಶ ಹೊರಹಾಕಿದ್ದಾರೆ. 3 ವರ್ಷದ ಮಗಳ ಜೊತೆ ನೀವು ಸಮಯ ಕಳೆಯಬೇಕು. ಆಕೆಯನ್ನು ಇತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಏಕಾಂಗಿಯಾಗಿ ಬಿಟ್ಟರೆ ಟಿವಿ ಅಲ್ಲದೆ ಮತ್ತೇನು ಎಂದು ಪ್ರಶ್ನಿಸಿದ್ದಾರೆ.

ಭಾಗ್ಯಲಕ್ಷ್ಮಿ ಅಮ್ಮ-ಮಗಳ ಸಕತ್​ ರೀಲ್ಸ್​: ಇವರಿಬ್ಬರ ನಿಜ ಜೀವನದ ಕುತೂಹಲ ವಿಷ್ಯ ಇಲ್ಲಿದೆ...

Latest Videos
Follow Us:
Download App:
  • android
  • ios