Asianet Suvarna News Asianet Suvarna News

ಭಾಗ್ಯಲಕ್ಷ್ಮಿ ಅಮ್ಮ-ಮಗಳ ಸಕತ್​ ರೀಲ್ಸ್​: ಇವರಿಬ್ಬರ ನಿಜ ಜೀವನದ ಕುತೂಹಲ ವಿಷ್ಯ ಇಲ್ಲಿದೆ...

ಭಾಗ್ಯಲಕ್ಷ್ಮಿ ಸೀರಿಯಲ್​ ಅಮ್ಮ ಮಗಳು ಭಾಗ್ಯ ಮತ್ತು ತನ್ವಿ ರೀಲ್ಸ್​ ಮಾಡಿದ್ದು ಕಮೆಂಟಿಗರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಇವರಿಬ್ಬರ ರಿಯಲ್​ ಲೈಫ್ ಹೇಗಿದೆ?
 

Bhagyalakshmi serial mother  and daughter Bhagya and Tanvi reels fans reacts suc
Author
First Published Jun 26, 2024, 4:06 PM IST

ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ಸದ್ಯ ಭಾಗ್ಯಳ ಗೋಳು ಮುಗಿದಿದೆ. ಫೈವ್​ಸ್ಟಾರ್​ ಹೋಟೆಲ್​ನಲ್ಲಿ ಲಕ್ಷ ರೂಪಾಯಿ ಸಂಬಳ ಪಡೆಯುವ ಉದ್ಯೋಗ ಸಿಕ್ಕಿದೆ ಭಾಗ್ಯಳಿಗೆ. ಮಕ್ಕಳೆದುರು ಕೆಲಸದ ವಿಷಯ ಹೇಳಿದರೂ ಅತ್ತೆಯ ಎದುರು ಸತ್ಯ ಹೇಳಲಾಗದೇ ಒದ್ದಾಡುತ್ತಿದ್ದಾಳೆ ಭಾಗ್ಯ. ಏಕೆಂದರೆ ಅವಳು ನೌಕರಿಗೆ ಹೋಗುವುದು ಅಲ್ಲಿ ಯಾರಿಗೂ ಇಷ್ಟವಿಲ್ಲ. ಇನ್ನು ಭಾಗ್ಯಳ ಮಗಳು ತನ್ವಿ ಈಗ ಬದಲಾಗಿದ್ದಾರೆ. ಪೆದ್ದು ಅಮ್ಮ ಎಂದು ಅಮ್ಮನ ಕಂಡರೆ ಆಗದಿದ್ದ ತನ್ವಿ ತನ್ನ ಅಪ್ಪ ತಾಂಡವ್​ನ ಅವತಾರ, ಅಮ್ಮ ಕಷ್ಟಪಡುತ್ತಿರುವ ರೀತಿ ಎಲ್ಲವನ್ನೂ ನೋಡಿ ಬದಲಾಗಿದ್ದಾಳೆ. ಈಗ ಅವಳಿಗೂ ಅಮ್ಮ ಎಂದರೆ ಅಚ್ಚುಮೆಚ್ಚು.  ಇದೀಗ ಈ ಇಬ್ಬರೂ ಅಮ್ಮ-ಮಗಳು ಸೇರಿ ರೀಲ್ಸ್​ ಮಾಡಿದ್ದು, ಇದಕ್ಕೆ ಥಹರೇವಾರಿ ಕಮೆಂಟ್ಸ್​ ಸುರಿಮಳೆಯಾಗಿದೆ. 

ಅಷ್ಟಕ್ಕೂ ಭಾಗ್ಯಲಕ್ಷ್ಮಿ ಮತ್ತು ತನ್ವಿಯ ರಿಯಲ್​ ಸ್ಟೋರಿಯೇ ಬೇರೆ ಇದೆ. ಭಾಗ್ಯಲಕ್ಷ್ಮಿಯ ಪಾತ್ರಧಾರಿ ಸುಷ್ಮಾ ಕೆ.ರಾವ್​. ಇವರ ನಿರೂಪಣಾ ಶೈಲಿ ಟಿ.ವಿ. ವೀಕ್ಷಕರಿಗೆ ಚಿರಪರಿಚಿತ.  ಚಿಕ್ಕಮಗಳೂರಿನ ಕೊಪ್ಪ ಸುಷ್ಮಾ ಅವರು,  ಬೆಂಗಳೂರು ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದಾರೆ. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ಹಿಂದಿಯಲ್ಲಿ ಪದವಿ ಪಡೆದಿದ್ದಾರೆ.  ಭರತನಾಟ್ಯ ಮತ್ತು ಕೂಚುಪುಡಿ ಕಲಾವಿದೆ. ನೃತ್ಯಕ್ಕಾಗಿ  1997ರಲ್ಲಿ  ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. 2005ರಲ್ಲಿ ನಟನೆಗಾಗಿಯೂ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. ಇವರಿಗೆ ಈಗ 38 ವರ್ಷ ವಯಸ್ಸು. ಸುಷ್ಮಾ ರಾವ್ ಎಸ್‌.ನಾರಾಯಣ್ ನಿರ್ದೇಶನದ ಭಾಗಗೀರಥಿ ಧಾರಾವಾಹಿಯಲ್ಲಿ ಹೇಮಾ ಪ್ರಭಾತ್ ಅವರ ತಂಗಿಯ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ಯಾವ ಜನ್ಮದ ಮೈತ್ರಿ, ಗುಪ್ತಗಾಮಿನಿ, ಸೊಸೆ ತಂದ ಭಾಗ್ಯ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದರು. 

ಸೀತಾಳ ಮನೆಯಲ್ಲಿ ಕೊನೆಯ ದಿನದ ಶೂಟಿಂಗ್​ ಹೀಗಿತ್ತು ನೋಡಿ... ಸೀತಾರಾಮ ವೈಷ್ಣವಿ ಗೌಡ ಮಾಹಿತಿ

ಸುಷ್ಮಾ ರಾವ್ ನಿರ್ದೇಶಕ ಪ್ರೀತಂ ಗುಬ್ಬಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ, ಹಲವು ವರ್ಷಗಳ ಅವರಿಂದ ವಿಚ್ಛೇದನ ಪಡೆದರು. ಕಳೆದ ಹತ್ತು ವರ್ಷಗಳಿಂದ ವೈಯಕ್ತಿಕ ಕಾರಣಗಳಿಂದ ನಟನೆಯಿಂದ ದೂರವಿದ್ದಾರೆ. ಇನ್ನು ತನ್ವಿಯ ಬಗ್ಗೆ ಹೇಳುವುದಾದರೆ ಈಕೆಯ ರಿಯಲ್​ ಹೆಸರು ಅಮೃತಾ ಗೌಡ. ಅಮೃತಾ ಗೌಡ ನಿಜ ಜೀವನದಲ್ಲೂ ಶಾಲಾ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಎಜುಕೇಶನ್ ಜೊತೆಗೆ ಶೂಟಿಂಗ್ ಎರಡನ್ನೂ ಜೊತೆಯಾಗಿ ಮ್ಯಾನೇಜ್ ಮಾಡುವ ಈ ಬಾಲನಟಿ, ಸೋಶಿಯಲ್ ಮೀಡಿಯಾದಲ್ಲೂ (social media) ಆಕ್ಟೀವ್ ಆಗಿದ್ದಾರೆ. 

ಅಮೃತಾ ಹೆಚ್ಚಾಗಿ ತನ್ನ ತಮ್ಮನ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಿಹಾರ್ ಗೌಡ ಜೊತೆ, ಭಾಗ್ಯಲಕ್ಷ್ಮಿ ತಂಡದ ಜೊತೆ ರೀಲ್ಸ್ ಮಾಡುತ್ತಾ, ಡ್ಯಾನ್ಸ್ ಗೆ ಹೆಜ್ಜೆ ಹಾಕುತ್ತಾ ಎಂಜಾಯ್ ಮಾಡುವ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫಾಲೋವರ್ಸ್ ಗಳನ್ನು ಪಡೆದಿರುವ ಈ ಬಾಲಕಲಾವಿದೆ ನೆಗೆಟಿವ್ ಪಾತ್ರದಲ್ಲಿ ನಟಿಸಿದ್ರೂ ಈಕೆಯ ನಟನೆಗೆ ಅಭಿಮಾನಿಗಳು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಇದೀಗ ಸೀರಿಯಲ್​ ಅಮ್ಮ-ಮಗಳ ರೀಲ್ಸ್​ ನೋಡಿ ಮುಂದೊಂದು ದಿನ ನಾಯಕಿಯಾಗಿ ಕಾಣಿಸಿಕೊಳ್ಳೋದ್ರಲ್ಲಿ ಡೌಟೇ ಇಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು. 

ಕನ್ನಡದಲ್ಲಿ ಟೊಮ್ಯಾಟೊಗೆ ಏನು ಹೇಳ್ತಾರೆ? ಸೀತಾರಾಮ ಪ್ರಿಯಾಳ ಉತ್ತರಕ್ಕೆ ಫ್ಯಾನ್ಸ್​ ಸುಸ್ತು...!
 

Latest Videos
Follow Us:
Download App:
  • android
  • ios