MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • KGF ಬ್ಯೂಟಿ ರವೀನಾ ರೋಚಕ ಲವ್​ಸ್ಟೋರಿ: ಉದ್ಯಮಿಯ ಪತ್ನಿ ಜೊತೆ ಫೈಟ್ ಮಾಡಿ ಗೆದ್ದ ನಟಿ​- ಮದುವೆಗೆ ಈಗ 22 ವರ್ಷ!

KGF ಬ್ಯೂಟಿ ರವೀನಾ ರೋಚಕ ಲವ್​ಸ್ಟೋರಿ: ಉದ್ಯಮಿಯ ಪತ್ನಿ ಜೊತೆ ಫೈಟ್ ಮಾಡಿ ಗೆದ್ದ ನಟಿ​- ಮದುವೆಗೆ ಈಗ 22 ವರ್ಷ!

ನಟಿ ರವೀನಾ ಟಂಡನ್ ಇತ್ತೀಚೆಗೆ 22ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡರು. ತಮ್ಮ ಪತಿ ಅನಿಲ್ ಥಡಾನಿಗಾಗಿ ಅವರ ಮೊದಲ ಪತ್ನಿ ನತಾಶಾ ಸಿಪ್ಪಿ ಜೊತೆ ರವೀನಾ ಜಗಳವಾಡಿದ್ದ ಘಟನೆಯೊಂದು ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಪಾರ್ಟಿಯೊಂದರಲ್ಲಿ ನಡೆದ ಈ ಗಲಾಟೆಯ ಕುತೂಹಲಕಾರಿ ಕಥೆ ಇಲ್ಲಿದೆ.

3 Min read
Author : Suchethana D
Published : Feb 28 2026, 05:52 PM IST
Share this Photo Gallery
  • FB
  • TW
  • Linkdin
  • Whatsapp
16
ರವೀನಾ ವಿವಾಹ ವಾರ್ಷಿಕೋತ್ಸವ
Image Credit : Social Media

ರವೀನಾ ವಿವಾಹ ವಾರ್ಷಿಕೋತ್ಸವ

ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ ಅವರ ಮದುವೆ (Rashmika Mandanna and Vijaya Devarakonda marriage) ರಾಜಸ್ಥಾನದ ಜೈಪುರದಲ್ಲಿ ನಡೆದಿರುವುದಕ್ಕಿಂತಲೂ ಮುಂಚಿತವಾಗಿ ಹಲವು ಸೆಲೆಬ್ರಿಟಿಗಳು ಇಲ್ಲಿಯೇ ಮದುವೆಯಾಗಿದ್ದಾರೆ. ಅವರಲ್ಲಿ ಒಬ್ಬರು ಕೆಜಿಎಫ್​ ಬ್ಯೂಟಿ ರವೀನಾ ಟಂಡನ್​. ರವೀನಾ ಅವರು ಅನಿಲ್ ಥಡಾನಿ (Anil Thadani) ಅವರನ್ನು ಮದುವೆಯಾಗಿದ್ದು, ಮೊನ್ನೆಯಷ್ಟೇ ಅರ್ಥಾತ್​ ಫೆ.22ರಂದು 22ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು.

26
ರಶ್ಮಿಕಾ ಬೆನ್ನಲ್ಲೇ ರವೀನಾ ಮದುವೆ ಸದ್ದು
Image Credit : Social Media

ರಶ್ಮಿಕಾ ಬೆನ್ನಲ್ಲೇ ರವೀನಾ ಮದುವೆ ಸದ್ದು

ಇದೀಗ ರಶ್ಮಿಕಾ ಮದುವೆ ಹಿನ್ನೆಲೆಯಲ್ಲಿ ರವೀನಾ ಅವರ ಮದುವೆಯೂ ಸದ್ದು ಮಾಡುತ್ತಿರಲು ಕಾರಣ, ಇವರ ಪತಿ ಅನಿಲ್​ ಥಡಾನಿ. ರಶ್ಮಿಕಾ ಮತ್ತು ರಕ್ಷಿತ್​ ಶೆಟ್ಟಿ ಅವರು ಮದುವೆಗೆ ಸಿದ್ಧ ನಡೆಸಿದ್ದರೆ, ಇಲ್ಲಿ ಅನಿಲ್​ ಅವರು ರವೀನಾಗಾಗಿ ತಮ್ಮ ಮೊದಲ ಪತ್ನಿ ನತಾಶಾ ಸಿಪ್ಪಿಗೆ ಡಿವೋರ್ಸ್​ ಕೊಟ್ಟು ಬಂದಿದ್ದರು. ಮದುವೆ, ಡಿವೋರ್ಸ್​ ಎಲ್ಲವೂ ಬಣ್ಣದ ಲೋಕದಲ್ಲಿ ಮಾಮೂಲಾಗಿದ್ದರೂ ರವೀನಾ ಟಂಡನ್ (Raveena Tandon) ಮತ್ತು ಅನಿಲ್ ಥಡಾನಿ ಅವರ ಲವ್​ಸ್ಟೋರಿ ಮಾತ್ರ ಸಕತ್​ ಇಂಟರೆಸ್ಟಿಂಗ್​ ಆಗಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಬೆಳಕಿಗೆ ಬಂದಿದೆ.

Related Articles

Related image1
ಸಿಎಂ ಸಾಹೆಬ್ರೇ, ಆ ಪರಭಾಷೆಯ 'ತಮ್ಮಣ್ಣ'ನೇ ಬೇಕಿತ್ತಾ? ಯಶ್​ಗೆ 5 ಕೋಟಿ ಕೊಟ್ಟಿದ್ರೆ ಪತ್ನಿ-ಮಕ್ಕಳೂ ಬರ್ತಿದ್ರು!
Related image2
ಎಲ್ಲರೂ ಸರಿ ಎಂದ್ಕೊಂಡೆ, ಆಮೇಲೆ ಜ್ಞಾನೋದಯ ಆಯ್ತು: ಸಂದರ್ಶನದಲ್ಲಿ ಅಂದೇ ಹೇಳಿದ್ರು Rakshit Shetty!
36
ನಟಿಯ ಕುತೂಹಲದ ಸ್ಟೋರಿ
Image Credit : @raveena tandon

ನಟಿಯ ಕುತೂಹಲದ ಸ್ಟೋರಿ

ಇತ್ತೀಚಿಗೆ ನೀಡಿದ ಸಂದರ್ಶನದಲ್ಲಿ ರವೀನಾ ತಮ್ಮ ಜೀವನದ ಸಾಕಷ್ಟು ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ. ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಜೊತೆಗಿನ ಸಂಬಂಧದ ಬಗ್ಗೆಯೂ ಅವರು ಮಾತನಾಡಿದ್ದಾರೆ. ಇವರಿಬ್ಬರೂ ಡೇಟಿಂಗ್ ಮಾಡುತ್ತಿರುವ ವಿಷಯ ಇಡೀ ಇಂಡಸ್ಟ್ರಿಗೆ (Industry) ತಿಳಿದಿತ್ತು. ಇಬ್ಬರೂ ಮದುವೆ ಆಗ್ತಾರೆ ಎನ್ನುವ ಸುದ್ದಿ ಬಾಲಿವುಡ್ ಅಂಗಳದಲ್ಲಿ ಗುಲ್ಲಾಗಿತ್ತು. ಮೊಹ್ರಾ ಸಿನಿಮಾದಲ್ಲಿ 'ಟಿಪ್ ಟಿಪ್ ಬರ್ಸಾ ಪಾನಿ..' ಹಾಡಿನಲ್ಲಿ ಅಕ್ಷಯ್ ಮತ್ತು ರವೀನಾ ಕೆಮಿಸ್ಟ್ರಿ ಇಂದಿಗೂ ಅಭಿಮಾನಿಗಳ ಹಾಟ್ ಫೇವರಿಟ್ ಜೋಡಿಗಳಲ್ಲಿ ಒಂದಾಗಿದೆ. ಈ ಹಾಡಿನ ಬಳಿಕ ಇಬ್ಬರ ಪ್ರೀತಿ, ಪ್ರೇಮದ ವಿಚಾರ ಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಆದರೆ ತಮ್ಮಿಬ್ಬರ ಈ ಜೋಡಿ ಹೆಚ್ಚು ಕಾಲ ಉಳಿಯಲಿಲ್ಲ ಎಂದು ನೋವು ತೋಡಿಕೊಂಡಿದ್ದರು. ಇದರ ಬೆನ್ನಲ್ಲೇ ಈಗ ರವೀನಾ ಪತಿ ಅನಿಲ್ ಥಡಾನಿ ಕುರಿತು ಒಂದಿಷ್ಟು ಮಾಹಿತಿ ಹೊರಬರುತ್ತಿದೆ.

46
ಬೇರೊಂದು ಮದುವೆಯಾಗಿದ್ದ ಪತಿ
Image Credit : @raveena tandon

ಬೇರೊಂದು ಮದುವೆಯಾಗಿದ್ದ ಪತಿ

ಅದೇನೆಂದರೆ, ರವೀನಾ ಟಂಡನ್ ಅನಿಲ್​ ಥಡಾನಿ ಅವರನ್ನು ಭೇಟಿಯಾಗುವುದಕ್ಕೂ ಮುನ್ನ ಅನಿಲ್ ಅವರಿಗೆ ಇದಾಗಲೇ ಮದುವೆಯಾಗಿತ್ತು. ಅವರು ರೊಮಿಯು ಸಿಪ್ಪಿಯ ಮಗಳು ನತಾಶಾ ಸಿಪ್ಪಿಯನ್ನು (Natasha Sippi) ವಿವಾಹವಾಗಿದ್ದರು. ಆದರೆ ಅವರ ದಾಂಪತ್ಯ ಜೀವನ ಅಷ್ಟು ಸರಿಯಿರಲಿಲ್ಲ ಎನ್ನಲಾಗಿದೆ. ಇಂಥ ಪರಿಸ್ಥಿತಿಯಲ್ಲಿ, ಅನಿಲ್ ಥಡಾನಿ ರವೀನಾ ಟಂಡನ್ ಅವರನ್ನು ಭೇಟಿಯಾದಾಗ, ಇಬ್ಬರ ನಡುವೆ ಪ್ರೀತಿ ಮೊಳಗಿತು. ಇಬ್ಬರೂ ಮದುವೆಯಾಗುವ ನಿರ್ಧಾರಕ್ಕೆ ಬಂದರು. 2003 ರಲ್ಲಿ ರವೀನಾ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ, ಅನಿಲ್ ಥಡಾನಿ ಈ ಬಗ್ಗೆ ವಿಷಯ ಪ್ರಸ್ತಾಪಿಸಿದರು, ಪ್ರೇಮ ನಿವೇದನೆ ಮಾಡಿದರು. ಇದನ್ನೇ ಬಯಸಿದ್ದ ರವೀನಾ ಕೂಡ ಇದನ್ನು ಒಪ್ಪಿಕೊಂಡರು.

56
ಇಬ್ಬರ ಫೈಟಿಂಗ್​
Image Credit : @raveena tandon

ಇಬ್ಬರ ಫೈಟಿಂಗ್​

ರವೀನಾ ಟಂಡನ್ ಮತ್ತು ಅನಿಲ್ ಥಡಾನಿ 22 ಫೆಬ್ರವರಿ 2004 ರಂದು ವಿವಾಹವಾದರು. ಆದರೆ, ಮದುವೆಗೆ ಕೆಲ ವರ್ಷಗಳ ಹಿಂದೆ ಅನಿಲ್ ಥಡಾನಿಯ ಮಾಜಿ ಪತ್ನಿ ನತಾಶಾ ಸಿಪ್ಪಿಯನ್ನು ರವೀನಾ ಟಂಡನ್ ಗ್ಲಾಸ್ ಎಸೆದು ಹಲ್ಲೆ ಮಾಡಿರುವ ಆರೋಪವೂ ಕೇಳಿಬಂತು. ವರದಿಗಳ ಪ್ರಕಾರ, ಒಮ್ಮೆ ರವೀನಾ ಟಂಡನ್ ಹೊಸ ವರ್ಷದ ಪಾರ್ಟಿಗಾಗಿ ರಿತೇಶ್ ಸಿಧ್ವಾನಿ (Ritesh Sidhwani) ಅವರ ಮನೆಗೆ ಬಂದರು. ಈ ಪಾರ್ಟಿಯಲ್ಲಿ ಅನಿಲ್ ಥಡಾನಿ ಅವರ ಮಾಜಿ ಪತ್ನಿ ನತಾಶಾ ಸಿಪ್ಪಿ ಕೂಡ ಉಪಸ್ಥಿತರಿದ್ದರು. ಅಷ್ಟರಲ್ಲಿ ರವೀನಾ ಟಂಡನ್ ಮತ್ತು ನತಾಶಾ ನಡುವೆ ವಾಗ್ವಾದ ನಡೆದಿದ್ದು, ರವೀನಾ ಗ್ಲಾಸ್ ಎತ್ತಿಕೊಂಡು ನತಾಶಾ ಮೇಲೆ ಎಸೆದಿದ್ದಾರೆ ಎನ್ನಲಾಗಿದೆ. ಈ ಸುದ್ದಿ ಸಿನಿ ಜಗತ್ತಿನಲ್ಲಿ ಭಾರಿ ಕೋಲಾಹಲವನ್ನೇ ಸೃಷ್ಟಿಸಿತ್ತು.

66
ನಟಿ ಹೇಳಿದ್ದೇನು?
Image Credit : Twitter

ನಟಿ ಹೇಳಿದ್ದೇನು?

ಸಂದರ್ಶನವೊಂದರಲ್ಲಿ, ರವೀನಾ ಟಂಡನ್, ದೇವರು ಮತ್ತು ನನ್ನ ತಂದೆಯ ನಂತರ ನನಗೆ ಎಲ್ಲವೂ ಅನಿಲ್ ಎಂದು ಹೇಳಿದ್ದರು. ಒಂದು ವೇಳೆ ಅನಿಲ್​ ಅವರ ಮೇಲೆ ಯಾರಾದರೂ ಅನಗತ್ಯ ಆರೋಪ ಮಾಡುವುದನ್ನು ನಾನು ಸಹಿಸಲಾರೆ. ಅವರಿಗೆ ಮಾಡಿದ ಅವಮಾನ ನನಗೆ ಮಾಡಿದ ಅವಮಾನದಂತೆ ಎಂದು ಹೇಳಿದ್ದರು. ಇದೇ ಸಮಯದಲ್ಲಿ, ನತಾಶಾ ಸಿಪ್ಪಿ ರವೀನಾ ಮತ್ತು ಅನಿಲ್​ ಮೇಲೆ ದ್ವೇಷ ಸಾಧಿಸುತ್ತಿದ್ದರು ಎನ್ನಲಾಗಿದೆ. ಅದಕ್ಕಿಂತ ಹೆಚ್ಚಾಗಿ ತಮ್ಮ ಪತಿಯನ್ನು ಮದುವೆಯಾದ ರವೀನಾ ಮೇಲೆ ಅವರಿಗೆ ಅಸೂಯೆ ಉಂಟಾಗಿತ್ತು ಎನ್ನಲಾಗಿದೆ. ಇದೇ ಸಮಯದಲ್ಲಿ ಪಾರ್ಟಿಯಲ್ಲಿ ಅನಿಲ್​ ಅವರ ಬಳಿ ನತಾಶಾ ಬಂದಾಗ ರವೀನಾ ಅವರಿಗೆ ಕೋಪ ಮಿತಿ ಮೀರಿದೆ. ಹಾಲಿ, ಮಾಜಿ ಪತ್ನಿಯರ ನಡುವೆ ಜಪಾಪಟಿಯಾಗಿದೆ. ಇದೇ ಸಿಟ್ಟಿನಲ್ಲಿ ರವೀನಾ ಗ್ಲಾಸ್​ನಲ್ಲಿ (Glass) ನತಾಶಾ ಅವರಿಗೆ ಹೊಡೆದಿದ್ದಾರೆ ಎನ್ನಲಾಗಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಬಾಲಿವುಡ್
ರಶ್ಮಿಕಾ ಮಂದಣ್ಣ
ವಿಜಯ್ ದೇವರಕೊಂಡ
ಮದುವೆ
ಪ್ರೀತಿ
ಪ್ರೇಮ ವಿವಾಹ

Latest Videos
Recommended Stories
Recommended image1
8 ತಿಂಗಳ ಗರ್ಭಿಣಿಯಾಗಿದ್ದಾಗಲೂ ಹೋಳಿ ಹಾಡಿಗೆ ಹೆಜ್ಜೆ ಹಾಕಿದ್ದ ನಟಿ; ಬೇಬಿ ಬಂಪ್ ಮರೆಮಾಚಿದ್ದು ಸ್ವಾರಸ್ಯವಾಗಿತ್ತು
Recommended image2
ಎಲ್ಲರೂ ಸರಿ ಎಂದ್ಕೊಂಡೆ, ಆಮೇಲೆ ಜ್ಞಾನೋದಯ ಆಯ್ತು: ಸಂದರ್ಶನದಲ್ಲಿ ಅಂದೇ ಹೇಳಿದ್ರು Rakshit Shetty!
Recommended image3
ದಳಪತಿ ವಿಜಯ್ ಪತ್ನಿ ಸಂಗೀತಾ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ ಬೆನ್ನಲ್ಲೇ ನಟಿ ತ್ರಿಷಾ ಕೃಷ್ಣನ್ ವಿರುದ್ಧ ಭಾರೀ ಸೈಬರ್ ದಾಳಿ
Related Stories
Recommended image1
ಸಿಎಂ ಸಾಹೆಬ್ರೇ, ಆ ಪರಭಾಷೆಯ 'ತಮ್ಮಣ್ಣ'ನೇ ಬೇಕಿತ್ತಾ? ಯಶ್​ಗೆ 5 ಕೋಟಿ ಕೊಟ್ಟಿದ್ರೆ ಪತ್ನಿ-ಮಕ್ಕಳೂ ಬರ್ತಿದ್ರು!
Recommended image2
ಎಲ್ಲರೂ ಸರಿ ಎಂದ್ಕೊಂಡೆ, ಆಮೇಲೆ ಜ್ಞಾನೋದಯ ಆಯ್ತು: ಸಂದರ್ಶನದಲ್ಲಿ ಅಂದೇ ಹೇಳಿದ್ರು Rakshit Shetty!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved