ಹದಿ ವಯಸ್ಸಿನ ಮಗಳೊಂದಿಗೆ ಹೇಗಿರಬೇಕು ಒಡನಾಟ, ಸಂಬಂಧದ ಪಾಠ ಹೇಳಿದ ಶ್ರುತಿ!
ನಟಿ ಶ್ರುತಿ ರೀಲ್ಸ್ ನೋಡಿ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೀವಿಬ್ಬರೂ ಒಳ್ಳೆಯ ಸ್ನೇಹಿತೆಯರಂತೆ ಕಾಣುತ್ತಿದ್ದೀರಾ ಎಂದು ಕೆಲವರು ಕಾಮೆಂಟ್ ಮಾಡಿದ್ದರೆ, ಹಲವರು, 'ಯಾವತ್ತೂ ಹೀಗೇ ಜೊತೆಜೊತೆಯಾಗಿ ಹಿತಹಿತವಾಗಿ ಇರಿ' ಎಂದಿದ್ದಾರೆ.
ಕನ್ನಡ ಚಿತ್ರರಂಗದ ಹಿರಿಯ ನಟಿ, ಬಿಗ್ ಬಾಸ್ ವಿನ್ನರ್ ಖ್ಯಾತಿಯ ಶ್ರುತಿ (Shruti) ಅವರ ರೀಲ್ಸ್ ಒಂದು ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಶ್ರುತಿ ತಮ್ಮ ಮಗಳು ಗೌರಿ ಜತೆ ಟ್ರಕ್ಕಿಂಗ್ ಹೋಗಿದ್ದು, ಅಲ್ಲಿ 'ಹಸಿರು ಸಿರಿಯಲು ಮನಸುಮರೆಯಲಿ' ಎಂದು ಹಾಡುತ್ತ ಮೈಮರೆಯುತ್ತಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಗಮನಸೆಳೆಯುತ್ತಿದೆ. ಶ್ರುತಿ ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದ ನಟಿ ಶ್ರುತಿ, ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ, ಈಗಲೂ ನಟಿಸುತ್ತಿದ್ದಾರೆ.
ನಟಿ ಶ್ರುತಿ ರೀಲ್ಸ್ ನೋಡಿ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೀವಿಬ್ಬರೂ ಒಳ್ಳೆಯ ಸ್ನೇಹಿತೆಯರಂತೆ ಕಾಣುತ್ತಿದ್ದೀರಾ ಎಂದು ಕೆಲವರು ಕಾಮೆಂಟ್ ಮಾಡಿದ್ದರೆ, ಹಲವರು, 'ಯಾವತ್ತೂ ಹೀಗೇ ಜೊತೆಜೊತೆಯಾಗಿ ಹಿತಹಿತವಾಗಿ ಇರಿ' ಎಂದಿದ್ದಾರೆ. ಸೋಷಿಯಲ್ ಮೀಡಿಯಾ ಎಂದ ಮೇಲೆ ಅಲ್ಲಿ ವಿಭಿನ್ನತೆ ಇರಲೇಬೇಕು ಎಂಬಂತೆ ಕೆಲವರು ನಟಿ ಶ್ರುತಿಯವರ ರಾಜಕೀಯ ನಿಲುವನ್ನು ಖಂಡಿಸಿ ಕಾಲೆಳೆದಿದ್ದಾರೆ. ಒಟ್ಟಿನಲ್ಲಿ, ಅಮ್ಮ ಹಾಗೂ ಮಗಳು ಒಟ್ಟಾಗಿ ಪ್ರಕೃತಿಯ ಮಡಿಲಲ್ಲಿ ಓಡಾಡಿರುವ ರೀಲ್ಸ್, ಅಂತರ್ಜಾಲದಲ್ಲಿ ಸುತ್ತಾಡುತ್ತಿದೆ.
ನಾನು ನಿವಿ ವರ್ಷದಿಂದ ಬೇರೆ ಇದ್ವಿ, ಪರ್ಸನಲ್ ವಿಷ್ಯಕ್ಕೆ ಪಬ್ಲಿಕ್‌ನಲ್ಲಿ ಉತ್ತರ ಕೊಡ್ಬೇಕಾಯ್ತು; ಚಂದನ್ ಶೆಟ್ಟಿ
'ರೇಣುಕಾ ಸ್ವಾಮಿ ಕೊಲೆ ಪ್ರಕರಣ, ಅದರಲ್ಲಿ ಕನ್ನಡದ ಸ್ಟಾರ್ ನಟ ದರ್ಶನ್ ಆರೋಪಿಯಾಗಿ ಪರಪ್ಪನ ಅಗ್ರಹಾರದಲ್ಲಿರುವ ಬಗ್ಗೆ ಹಿರಿಯ ನಟಿ ಶೃತಿ ಹೇಳಿಕೆ ನೀಡಿದ್ದಾರೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ಕಾಟೇರ ಸಿನಿಮಾದಲ್ಲಿ ದರ್ಶನ್ ಜೊತೆಗೆ ಕೆಲಸ ಮಾಡೋ ಅವಕಾಶ ಸಿಕ್ತು.. ಅದಕ್ಕೂ ಮೊದಲು ಎಲ್ಲರ ಮನೆ ದೋಸೆ ತೂತು ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ವಿ..
ಸ್ಟಾರ್‌ಡಂ ಇದ್ರೂ ಸರಳತೆಯೂ ಇತ್ತು, ಕಷ್ಟದಿಂದ ಬೆಳೆದವರು ನಟ ದರ್ಶನ್; ಬಿಗ್ ಬಾಸ್ ವಿನ್ನರ್ ಶ್ರುತಿ
ಸ್ಟಾರ್ ಡಮ್ ಇದ್ರೂ ದರ್ಶನ್ ಬಳಿ ಸರಳತೆ ಇತ್ತು.. ಕಷ್ಟದಿಂದ ಬೆಳೆದ ನಟ ದರ್ಶನ್ ಹಾರ್ಡ್ ವರ್ಕ್ ಮಾಡುತ್ತಾರೆ.. ಜನ ಕೊಡೋ ದುಡ್ಡಿಗೆ ಮೋಸ ಮಾಡಬಾರ್ದು ಅನ್ನೋ ಜವಾಬ್ದಾರಿ ಇತ್ತು.. ಮೈ ಕಟ್ಟಿನ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ರು.. ಈ ಪ್ರಕರಣಲ್ಲಿ ಸಿಕ್ಕಿಕೊಂಡಿರೊದು ನೋವು ಮಾಡುತ್ತೆ.. ಸೋಷಿಯಲ್ ಮೀಡಿಯಾದಲ್ಲಿ ಹೆಣ್ಣು ಮಕ್ಕಳನ್ನ ತುಂಬಾ ಕೆಟ್ಟದಾಗಿ ಕಮೆಂಟ್ ಮಾಡುತ್ತಾರೆ.. ಇದರಿಂದ ಎಷ್ಟೋ ಹೆಣ್ಣು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಅವರು ಬಳಸೋ ಪದಗಳನ್ನ ಜೀರ್ಣಿಸಿಕೊಳ್ಳೋದು ಕಷ್ಟ.
ವಿಷ್ಣುವರ್ಧನ್‌ರನ್ನು 'ಅಪ್ಪಾಜಿ' ಅಂತಿದ್ದ ನಟ ದರ್ಶನ್ 'ಈ ಬಂಧನ' ಬಳಿಕ ಏನು ಹೇಳಿದ್ರು?
ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುವವರ ಪದಗಳಿಂದ ಆಗುವ ತೀವ್ರ ನೋವಿನಿಂದ ಆಚೆ ಬರೋಕೆ ತುಂಬಾ ಕಷ್ಟ ಆಗುತ್ತೆ.. ಫೇಖ್ ಅಕೌಂಟ್ ನಿಂದ ಬರೋ ಪದಗಳನ್ನ ನೋಡಿ ಒಂದು ವಾರ ನೋವು ತಿಂದ ದಿನಗಳಿವೆ. ಸೋಷಿಯಲ್ ಮೀಡಿಯಾಗೆ ಕೆ ವೈ ಸಿ ಮಾಡಬೇಕು.. ಈ ಪ್ರಕರಣದ ಹಾದಿ ನೋಡಿದ್ರೆ ದರ್ಶನ್ ದುಡುಕಿದ್ರು ಅನ್ನಿಸುತ್ತೆ. ಸದ್ಯ ವಿಚಾರಣೆ ನಡೀತಿದೆ ಏನಾಗುತ್ತೋ ನೋಡೋಣ. ಮಾನಸಿಕವಾಗಿ ಚಿತ್ರರಂಗ ಕುಗ್ಗಿದೆ.. ಈ ಪ್ರಕರಣದ ದುಷ್ಪರಿಣಾಮ ಚಿತ್ರರಂಗದ ಮೇಲಾಗಿದೆ' ಎಂದಿದ್ದಾರೆ ಹಿರಿಯ ನಟಿ ಶ್ರುತಿ.
ಪಾಠ ಹೇಳಿಕೊಟ್ಟ ಪ್ರಿಯಾಂಕಾ ಚೋಪ್ರಾ: ಅತೃಪ್ತರು ಎಲ್ಲಾ ಕಡೆ ಇರ್ತಾರೆ, ಯಾಕೆ ತಲೆ ಕೆಡಿಸ್ಕೋತೀರಿ!
ಕನ್ನಡ ಚಿತ್ರರಂಗದ ಸ್ಟಾರ್ ನಟರಾಗಿರುವ ದರ್ಶನ್, ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಪರಪ್ಪನ ಅಗ್ರಹಾರ ಸೇರಿದ್ದಾರೆ. ಸದ್ಯಕ್ಕೆ ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ, ಹದಿನೇಳು ಜನರು ಆರೋಪಿಯಾಗಿದ್ದಾರೆ. ಕೇಸ್ ವಿಚಾರಣೆ ಮುಗಿದು ಅಪರಾಧಿ-ನಿರಪರಾಧಿ ಘೋಷಣೆ ಆಗುವವರೆಗೂ ದರ್ಶನ್ ಅಭಿಮಾನಿಗಳು ಹಾಗೂ ಚಿತ್ರರಂಗಕ್ಕೆ ಯಾವುದೇ ಉತ್ತರ ಸಿಗುವುದು ಕಷ್ಟ ಎನ್ನಲಾಗುತ್ತಿದೆ.
ನಾನು ನೋಡಿದ್ದು ಅಪ್ಪು ಅಲ್ಲ ಭಾಗ್ಯವಂತ; ಕಿಚ್ಚ ಸುದೀಪ್ ಪುನೀತ್ ಬಗ್ಗೆ ಹೀಗ್ ಯಾಕ್ ಅಂದ್ರು..?
ಕಾರಣ, ಫ್ಯಾನ್ಸ್ ಸಹಜವಾಗಿಯೇ ತಮ್ಮ 'ಡಿ ಬಾಸ್'ಗೆ ಕಾಯುತ್ತಾ ಇರುತ್ತಾರೆ. ಆದರೆ, ಸ್ಯಾಂಡಲ್‌ವುಡ್ ಚಿತ್ರೋದ್ಯಮದ ಹಲವಾರು ನಿರ್ಮಾಪಕರು ನಟ ದರ್ಶನ್ ಅವರ ಮೇಲೆ ಸಾಕಷ್ಟು ಬಂಡವಾಳ ಹೂಡಿದ್ದು, ಅಡ್ವಾನ್ಸ್ ಸಹ ಕೊಟ್ಟಾಗಿದೆ. ಈ ಹಂತದಲ್ಲಿ, ಸಹಜವಾಗಿಯೇ ಹಣ ಕೊಟ್ಟು, ಕಾಲ್ ಶೀಟ್ ತೆಗೆದುಕೊಂಡವರು ಚಿಂತೆಗೀಡಾಗಿದ್ದಾರೆ. ಈ ಸಂಗತಿಯನ್ನೂ ಸೇರಿಸಿಯೇ ಹಿರಿಯ ನಟಿ ಶ್ರುತಿ ಮಾತನಾಡಿದ್ದಾರೆ. ನಟಿ ಶ್ರುತಿ ಅವರಂತೆ ಚಿತ್ರೋದ್ಯಮದಲ್ಲಿ ತುಂಬಾ ವರ್ಷಗಳಿಂದ ತೊಡಗಿಸಿಕೊಂಡವರಿಗೆ ಸ್ಟಾರ್ ನಟರೊಬ್ಬರ ಬಂಧನದಿಂದ ಚಿತ್ರರಂಗಕ್ಕಾಗುವ ನಷ್ಟದ ಅರಿವಿದೆ ಎನ್ನಬಹುದು.
ಇದೇನು ಪ್ರೀತಿ ತೋರಿಸೋ ಅವತಾರವೋ ಅವಮಾನವೋ ಗೊತ್ತಿಲ್ಲ; ನಟ ಶಂಕರ್ ಅಶ್ವಥ್ ಬೇಸರ!