ನಿನಗೆ ನಾನು ನನಗೆ ನೀನು: ವೃದ್ಧ ಜೋಡಿಯ ಅನುರಾಗ ತುಂಬಿದ ವಿಡಿಯೋ ವೈರಲ್
ಹಣ್ಣು ಹಣ್ಣು ಎನಿಸುವಷ್ಟು ವಯಸಾಗಿರುವ ವೃದ್ಧ ದಂಪತಿಗಳ ವಿಡಿಯೋವೋಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ನೆಟ್ಟಿಗರನ್ನು ಸೆಳೆಯುತ್ತಿದೆ.
ಬೆಂಗಳೂರು: ಜೊತೆಯಾಗಿ ಹಿತವಾಗಿ ಕೂಡಿ ನಡೆವ ಕೂಡಿ ನಲಿವ ಎಂದು ಹೇಳುವ ಜೋಡಿಗಳು ಇತ್ತೀಚಿನ ದಿನಗಳಲ್ಲಿ ಕಾಣಲು ಸಿಗುವುದು ಬಲು ಅಪರೂಪ. ಯೌವ್ವನದಲ್ಲಿ ಎಲ್ಲ ಗಂಡ ಹೆಂಡತಿ ಚೆನ್ನಾಗಿಯೇ ಇರುತ್ತಾರೆ. ಆದರೆ ಮಕ್ಕಳಾಗುತ್ತಿದ್ದಂತೆ ಅಥವಾ ವರ್ಷಗಳು ಮಾಗಿದಂತೆ ಗಂಡ ಹೆಂಡತಿಯ ನಡುವಿನ ಅನುಬಂಧದಲ್ಲಿ ಬಿರುಕು ಮೂಡಲು ಶುರುವಾಗುತ್ತದೆ. ಬಹುತೇಕ ಗಂಡ ಹೆಂಡತಿ ಜಗಳ ಮಾಡುತ್ತಲೇ ದಿನ ಕಳೆಯುತ್ತಾರೆ. ಆದಾಗ್ಯೂ ಸಾಮಾಜಿಕ ಜಾಲತಾಣಗಳಲ್ಲಿ(Social Media) ವೃದ್ಧಜೋಡಿಯ ಪ್ರೀತಿ ತುಂಬಿದ ವಿಡಿಯೋವೊಂದು ವೈರಲ್ ಆಗಿದೆ.
ಐಎಎಸ್ ಅಧಿಕಾರಿಯಾಗಿರುವ (IAS Officer) ಡಾಕ್ಟರ್ ಸುನೀತಾ ಮಿಶ್ರಾ (Sunita Mishra) ವೃದ್ಧ ದಂಪತಿಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪ್ರೀತಿ ಎಂದರೇನು ಎಂದು ಯಾರಾದರೂ ಕೇಳಿದರೆ ಅವರಿಗೆ ಈ ವಿಡಿಯೋವನ್ನು ತೋರಿಸಿ ಎಂದು ಅವರು ಹೇಳಿದ್ದಾರೆ. ವಿಡಿಯೋದಲ್ಲಿ ವೃದ್ಧ ದಂಪತಿಗಳು ನೆಲದ ಮೇಲೆ ಕುಳಿತು ಆಹಾರ ಸೇವಿಸುತ್ತಿದ್ದಾರೆ. ಇಬ್ಬರ ತಲೆಕೂದಲು ಕೂಡ ಬೆಳ್ಳಗಾಗಿದೆ. ಇಬ್ಬರು ದೈಹಿಕವಾಗಿ ವಯೋಸಹಜವಾಗಿ ಅಸಕ್ತರಾಗಿದ್ದಾರೆ, ಅಜ್ಜಿ ಅಜ್ಜನಿಗೆ ಆಹಾರ ತಿನ್ನಿಸುತ್ತಿದ್ದಾರೆ. ಅಜ್ಜ ಆಹಾರವನ್ನು(Food) ಬಹಳ ಕಷ್ಟಪಟ್ಟು ತಿನ್ನುತ್ತಿದ್ದಾರೆ. ಆಹಾರದ ಮಧ್ಯೆ ಮಧ್ಯೆ ಅಜ್ಜನಿಗೆ ಆಹಾರ ನುಂಗಲು ಸಹಾಯವಾಗುವಂತೆ ಅಜ್ಜಿ ನೀರು ಕುಡಿಸುತ್ತಿದ್ದಾರೆ. ಈ ಅಜ್ಜ ಅಜ್ಜಿಯ ವಿಡಿಯೋದ ಹಿನ್ನೆಲೆಯಲ್ಲಿ ಬಾಲಿವುಡ್‌ನ ಖ್ಯಾತ ಹಾಡು ಏಕ್ ಪ್ಯಾರ್ ಕ ನಗ್ಮಾ ಹೆ ಕೇಳಿ ಬರುತ್ತಿದೆ.
ಈ ವಿಡಿಯೋವನ್ನು ಆರು ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. 5 ಸಾವಿರಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ರಿಟ್ವಿಟ್ ಮಾಡಿದ್ದಾರೆ. ಜೊತೆಗೆ ಕಾಮೆಂಟ್‌ಗಳನ್ನು ಕೂಡ ಮಾಡಿದ್ದು, ಇದನ್ನು ನೋಡುತ್ತಿದ್ದರೆ ಮೈ ರೋಮಾಂಚನವಾಗುತ್ತದೆ. ಇದು ನಿಜವಾದ ಪ್ರೀತಿ ಎಂದು ಕಾಮೆಂಟ್ ಮಾಡಿದ್ದಾರೆ. ನಿಜವಾದ ಪ್ರೀತಿ ಇದ್ದರೆ ಮಾತ್ರ ಹೀಗೆ ಪ್ರೀತಿಸಲು ಸಾಧ್ಯ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಪ್ರೀತಿಗೆ ವಯಸ್ಸಿನ ಹಂಗಿಲ್ಲ, ಅದು ಭಾವನೆಗಳ ವಿಚಾರ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಸಾಯುವವರಗೂ ಹೀಗೆ ಜೊತೆಗಿರುವ ಒಡನಾಡಿ ಬೇಕು ಎಂದು ಮಗದೊಬ್ಬರು ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ ವೃದ್ಧ ಜೋಡಿಯ ಅನುರಾಗದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಪ್ರೀತಿ ಎಂದರೆ ಏನು ಎಂದು ಕೇಳುವವರಿಗೆ ಮಾದರಿಯಾಗಿದೆ.
ಏಳನೇ ಕ್ಲಾಸಿನಲ್ಲಿ ಆರಂಭವಾದ ಪ್ರೀತಿ, 80ರ ವಯಸ್ಸಿನಲ್ಲೂ ಅನುರೂಪ ಜೋಡಿ
ಇಂದಿನ ಕಾಲದಲ್ಲಿ ದಾಂಪತ್ಯ ಜೀವನ ಸಾಯುವವರೆಗೆ ಉಳಿಯುವ ಬಂಧವಾಗಿ ಉಳಿದಿಲ್ಲ. ಅದಾಗ್ಯೂ ಜೊತೆಯಲ್ಲೇ ಹೊಂದಿಕೊಂಡು ಇರುವ ಅನೇಕರು ನಮ್ಮ ಜೊತೆ ಇದ್ದಾರೆ. ಅದಾಗ್ಯೂ ಜೊತೆ ಇರುವವರೆಲ್ಲಾ ಚೆನ್ನಾಗಿಯೇ ಇದ್ದಾರೆ ಎಂಬ ಅರ್ಥವೂ ಅಲ್ಲ. ಬಹುತೇಕ ಸಂಬಂಧಗಳು ತೋರಿಕೆಗಷ್ಟೇ ಚೆನ್ನಾಗಿರುತ್ತವೆ. ಒಳಗೆ ಹಳಸಿದ ಹೂರಣದಂತೆ ಮೆಲ್ನೋಟಕ್ಕೆ ಸಿಹಿಯಾದ ಹೋಳಿಗೆಯಂತೆ ಅನೇಕರ ಬದುಕಿದೆ. ಬದುಕಿನ ಬಂಡಿಯಲ್ಲಿ ಕಷ್ಟ ಇಲ್ಲದವರಿಲ್ಲ. ಹಾಗೆಯೇ ತಮ್ಮ ವೃದ್ಧಾಪ್ಯದ ಕೊನೆಯವರೆಗೂ ಖುಷಿ ಖುಷಿಯಾಗಿ ಇರುವ ಜೋಡಿಗಳು ನಮ್ಮ ಸಮಾಜದಲ್ಲಿ ತುಂಬಾ ವಿರಳ. ಹೀಗಾಗಿಯೇ ವೃದ್ಧ ದಂಪತಿಯ ಸಹಬಾಳ್ವೆಯ ಸುಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪತಿ ಅಗಲಿಕೆ ನೋವಲ್ಲೇ ಜೀವಬಿಟ್ಟ ಪತ್ನಿ, ಸಾವಿನಲ್ಲೂ ಒಂದಾದ ವೃದ್ಧ ದಂಪತಿ
ಕೆಲ ದಿನಗಳ ಹಿಂದೆ ಸುರಿಯುತ್ತಿರುವ ಮಳೆಯಲ್ಲಿ ಒಂದೇ ಛತ್ರಿಯ ಕೆಳಗೆ ವೃದ್ಧ ದಂಪತಿ ಜೊತೆಯಾಗಿ ಸಾಗುತ್ತಿರುವ ವಿಡಿಯೋವೊಂದು ಸಾಕಷ್ಟು ವೈರಲ್ ಆಗಿತ್ತು. ವೃದ್ಧ ದಂಪತಿಯಲ್ಲಿ ಪತ್ನಿ ಕಷ್ಟಪಟ್ಟ ಹೆಜ್ಜೆ ಹಾಕುತ್ತಿದ್ದರೆ, ಪತಿ ಆಕೆಗೆ ಕೊಡೆ ಹಿಡಿಯುತ್ತಾ ಸಾಗುತ್ತಿದ್ದಾರೆ. ಪಟಪಟನೇ ಸುರಿಯುತ್ತಿರುವ ಮಳೆಯ ನಡುವೆ ನಗರದ ರಸ್ತೆಗಳಲ್ಲಿ ಟ್ರಾಫಿಕ್‌ನ್ನು ಹಾದು ಈ ಜೋಡಿ ಸಾಗುತ್ತಿದೆ. ಏನೂ ಉಳಿಯದ ಜಗತ್ತಿನಲ್ಲಿ ಶಾಶ್ವತ ಪ್ರೀತಿಯ ಕಲ್ಪನೆ ಮೋಡಿ ಮಾಡುತ್ತದೆಯೇ ಎಂದು ಈ ಬರೆದು ಇನ್ಸ್ಟಾಗ್ರಾಮ್‌ನಲ್ಲಿ(Instagram) ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿತ್ತು. ಈ ವಿಡಿಯೋ ಕೂಡ ಸಖತ್ ವೈರಲ್ ಆಗಿತ್ತು.