ಏಳನೇ ಕ್ಲಾಸಿನಲ್ಲಿ ಆರಂಭವಾದ ಪ್ರೀತಿ, 80ರ ವಯಸ್ಸಿನಲ್ಲೂ ಅನುರೂಪ ಜೋಡಿ
ಪ್ರೀತಿಯೆಂಬುದು ಒಂದು ಸುಂದರ ಭಾವನೆ. ಮನಸ್ಸಿನಲ್ಲಿ ಒಬ್ಬ ವ್ಯಕ್ತಿಯ ಬಗೆಗೆ ಮೂಡುವ ಆರಾಧನೆ. ಆದ್ರೆ ಈಗೆಲ್ಲಾ ಪ್ರೀತಿಯೆನ್ನುವುದು ಟೆಂಪರರಿಯಾಗಿಬಿಟ್ಟಿದೆ. ದಿನಕ್ಕೊಂದರಂಯೆ ಸಂಗಾತಿ ಬದಲಾಗುತ್ತಿರುತ್ತಾರೆ. ಆದ್ರೆ ಇಲ್ಲೊಂದು ಅಪರೂಪದ ಜೋಡಿ ಬರೋಬ್ಬರಿ ಅರವತ್ತು ವರ್ಷಗಳಿಂದ ಜೊತೆಗಿದ್ದಾರೆ.
ಪ್ರೀತಿಯೆಂಬುದು ಒಂದು ಸುಂದರವಾದ ಸಂಬಂಧ. ಒಬ್ಬ ವ್ಯಕ್ತಿಯ ಬಗ್ಗೆ ಮೂಡುವ ಮಧುರ ಭಾವನೆ. ಪ್ರೀತಿಯಲ್ಲಿದ್ದಾಗ ಜಗತ್ತೇ ಸುಂದರವಾಗಿ ಕಾಣುತ್ತದೆ. ಪ್ರೀತಿ ಮಾಡುವ ವ್ಯಕ್ತಿಗೋಸ್ಕರ ನಾವು ಎಂಥಾ ಕೆಲಸವನ್ನು ಮಾಡಲು ಸಿದ್ಧರಾಗುತ್ತೇವೆ. ಪ್ರೀತಿಯ ಮ್ಯಾಜಿಕ್ಕೇ ಅಂಥದ್ದು. ಪ್ರೀತಿಗಾಗಿ ಆಸ್ತಿ, ಅಂತಸ್ತು, ಮನೆ ಬಂಧುಗಳು ಎಲ್ಲವನ್ನೂ ಬಿಟ್ಟು ಬಂದವರೂ ಇದ್ದಾರೆ. ಆದ್ರೆ ಇತ್ತೀಚಿಗೆ ಪ್ರೀತಿಯ ವ್ಯಾಖ್ಯಾನ ಬದಲಾದಂತಿದೆ. ಈಗೇನಿದ್ದರೂ ಬಾಹ್ಯ ಸೌಂದರ್ಯ, ಆಸ್ತಿ, ಅಂತಸ್ತನ್ನು ನೋಡಿ ಪ್ರೀತಿ ಮಾಡುತ್ತಾರೆ. ಮದುವೆಯಾಗುತ್ತಾರೆ. ಆ ನಶೆಯೆಲ್ಲಾ ಇಳಿದುಹೋದ ಬಳಿಕ ಬಿಟ್ಟು ಹೋಗುತ್ತಾರೆ. ಇಂಥಾ ಮೋಸದ ಜಮಾನದಲ್ಲಿ ಇಲ್ಲೊಂದು ಪ್ರೀತಿ ಇದೆಲ್ಲಕ್ಕಿಂತಲೂ ವಿಭಿನ್ನವಾಗಿ ನಿಂತಿದ್ದು, ಅಪರೂಪದ ಪ್ರೇಮಕಥೆಯಂತೆ ಸ್ಪೂರ್ತಿಯಾಗುತ್ತಿದೆ.
ಇಂದಿನ ಕಾಲದಲ್ಲಿ ದಾಂಪತ್ಯ ಜೀವನ (Married life) ಸಾಯುವವರೆಗೆ ಉಳಿಯುವ ಬಂಧವಾಗಿ ಉಳಿದಿಲ್ಲ. ಅದಾಗ್ಯೂ ಜೊತೆಯಲ್ಲೇ ಹೊಂದಿಕೊಂಡು ಇರುವ ಅನೇಕರು ನಮ್ಮ ಜೊತೆ ಇದ್ದಾರೆ. ಅದಾಗ್ಯೂ ಜೊತೆ ಇರುವವರೆಲ್ಲಾ ಚೆನ್ನಾಗಿಯೇ ಇದ್ದಾರೆ ಎಂಬ ಅರ್ಥವೂ ಅಲ್ಲ. ಬಹುತೇಕ ಸಂಬಂಧ (Relationship)ಗಳು ತೋರಿಕೆಗಷ್ಟೇ ಚೆನ್ನಾಗಿರುತ್ತವೆ. ಒಳಗೆ ಹಳಸಿದ ಹೂರಣದಂತೆ ಮೆಲ್ನೋಟಕ್ಕೆ ಸಿಹಿಯಾದ ಹೋಳಿಗೆಯಂತೆ ಅನೇಕರ ಬದುಕಿದೆ. ಬದುಕಿನ ಬಂಡಿಯಲ್ಲಿ ಕಷ್ಟ ಇಲ್ಲದವರಿಲ್ಲ. ಹಾಗೆಯೇ ತಮ್ಮ ವೃದ್ಧಾಪ್ಯದ ಕೊನೆಯವರೆಗೂ ಖುಷಿ ಖುಷಿಯಾಗಿ ಇರುವ ಜೋಡಿಗಳು ನಮ್ಮ ಸಮಾಜ (Society)ದಲ್ಲಿ ತುಂಬಾ ವಿರಳ. ಅಂಥಾ ಒಂದು ಜೋಡಿಯೊಂದು ಇನ್‌ಸ್ಟಾಗ್ರಾಂನಲ್ಲಿ ಫುಲ್ ವೈರಲ್ ಆಗುತ್ತಿದೆ.
ಅಜ್ಜ-ಅಜ್ಜಿ ಮನೆ: ಜಸ್ಟ್ 50 ರೂ.ಗೆ ಅನ್‌ಲಿಮಿಟೆಡ್ ಮನೆಯೂಟ ನೀಡ್ತಾರೆ ವೃದ್ಧ ದಂಪತಿ
ಏಳನೇ ಕ್ಲಾಸಿನ ಪ್ರೀತಿ, 60ನೇ ಮದುವೆ ವಾರ್ಷಿಕೋತ್ಸವದಲ್ಲಿ ದಂಪತಿ
ಏಳನೇ ಕ್ಲಾಸಿನಲ್ಲಿ ಪರಸ್ಪರ ಪ್ರೀತಿ (Love)ಸುತ್ತಿದ್ದವರು 80ರ ವಯಸ್ಸಿನಲ್ಲಿಯೂ ಅಷ್ಟೇ ಪ್ರೀತಿಯಿಂದ ಜೀವನ ನಡೆಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಈ ವಿಡಿಯೋ. 6 ಲಕ್ಷಕ್ಕೂ ಹೆಚ್ಚು ಜನರು ಈ ಜೋಡಿ (Couple)ಯನ್ನು ಇಷ್ಟಪಟ್ಟಿದ್ದಾರೆ. ಪ್ರೀತಿಯಲ್ಲಿ ಬೀಳುವುದು ಸುಲಭ ಆದರೆ ಬಹುಕಾಲದವರೆಗೆ ಸಂಬಂಧದೊಳಗೆ ಪರಸ್ಪರ ಪ್ರೀತಿಯಿಂದ ಇರಬೇಕೆಂದರೆ ಅಪಾರ ತಾಳ್ಮೆ ಬೇಕಾಗುತ್ತದೆ. ಆದರೆ ಈ ಜೋಡಿ ಕಳೆದ ಅರವತ್ತು ವರ್ಷದಿಂದ ಪ್ರೀತಿ, ನಂಬಿಕೆಯನ್ನು ಉಳಿಸಿಕೊಂಡು ಅನ್ಯೋನ್ಯತೆಯಿಂದ ಜೀವನ ನಡೆಸುತ್ತಿದೆ.
ಟಿಕ್‌ಟಾಕ್‌ನಲ್ಲಿ ಹಂಚಿಕೊಳ್ಳಲಾದ ಮತ್ತು ಇನ್‌ಸ್ಟಾಗ್ರಾಂನ ಟುಡೇ ಓಲ್ಸ್ ಇಯರ್ಸ್ ಪೇಜ್‌ನಲ್ಲಿ ಹಂಚಿಕೊಂಡಿರುವ ವೀಡಿಯೋದಲ್ಲಿ ವೃದ್ಧ ದಂಪತಿ ಖುಷಿಯಿಂದ ವಿವಾಹದ ಅರವತ್ತನೇ ವಾರ್ಷಿಕೋತ್ಸವ ಆಚರಿಸುವುದನ್ನು ನಾವು ನೋಡಬಹುದಾಗಿದೆ. ಇಲ್ಲಿರುವ ಅಜ್ಜ-ಅಜ್ಜಿ ಏಳನೇ ತರಗತಿಯಲ್ಲಿದ್ದಾಗ ಪರಿಚಯವಾದರು. ಕಾಲಕ್ರಮೇಣ ಪ್ರೀತಿಸಿ ಮದುವೆಯಾದರು. ಇವರಿಬ್ಬರು ಮದುವೆಯಾಗಿ ಅರವತ್ತು ವರ್ಷಗಳು ಕಳೆದಿದ್ದು, ಇಬ್ಬರೂ ಅದೇ ನವಿರಾದ ಪ್ರೀತಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಇವತ್ತಿನ ದಿನಗಳಲ್ಲಿ ಇಂಥಾ ಜೋಡಿ ಅಪರೂಪ ಎಂದು ನೆಟ್ಟಿಗರು ಪ್ರಶಂಸಿದ್ದಾರೆ.
ಭಾವನಾತ್ಮಕ ಸಂಬಂಧವನ್ನು ಉಳಿಸಿಕೊಳ್ಳೋದು ಹೇಗೆ?
ಸುಮಾರು ಆರು ದಿನಗಳ ಹಿಂದೆ ಪೋಸ್ಟ್ ಮಾಡಲಾದ ಈ ವೀಡಿಯೋಗೆ ಈವರೆಗೆ ಆರು ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ. ಇಬ್ಬರದೂ ಅನುರೂಪದ ಜೋಡಿ. ಅದ್ಭುತವಾಗಿ ಕಾಣುತ್ತಿದ್ದಾರೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಅಭಿನಂದನೆಗಳು ಹೀಗೆ ಜೊತೆಯಾಗಿ ಜೀವನ ನಡೆಸಿ ಎಂದು ಇನ್ನು ಕೆಲವರು ಕಮೆಂಟಿಸಿದ್ದಾರೆ.
ವೃದ್ಧ ದಂಪತಿ ಜೊತೆ ಸಾಗುವ ವಿಡಿಯೋ ವೈರಲ್
ಮ್ಮ ವೃದ್ಧಾಪ್ಯದ ಕೊನೆಯವರೆಗೂ ಖುಷಿ ಖುಷಿಯಾಗಿ ಇರುವ ಜೋಡಿಗಳು ನಮ್ಮ ಸಮಾಜದಲ್ಲಿ ತುಂಬಾ ವಿರಳ. ಹೀಗಾಗಿಯೇ ವೃದ್ಧ ದಂಪತಿ ಜೊತೆಯಾಗಿ ಸಾಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸುರಿಯುತ್ತಿರುವ ಮಳೆಯಲ್ಲಿ ಒಂದೇ ಛತ್ರಿಯ ಕೆಳಗೆ ವೃದ್ಧ ದಂಪತಿ ಜೊತೆಯಾಗಿ ಸಾಗುತ್ತಿದ್ದಾರೆ. ಈ ವಿಡಿಯೋವನ್ನು ನೋಡಿ ಅನೇಕರು ಭಾವುಕರಾಗಿದ್ದಾರೆ. ಈ ವಿಡಿಯೋದ ಹಿನ್ನೆಲೆಯಲ್ಲಿ ಪಾಶ್ಚಾತ್ಯ ಹಾಡೊಂದು ಕೇಳಿ ಬರುತ್ತಿದೆ. ನಾನು ನಿನ್ನನ್ನು ಪ್ರೀತಿಸುತ್ತೇನೆ. ಮತ್ತು ಅದು ನಿನನಗೆ ತಿಳಿದಿದೆ ನಾನು ಯಾವಾಗಲೂ ನಿನ್ನನ್ನು ಪ್ರೀತಿಸುತ್ತೇನೆ. ಕೊನೆಯವರೆಗೂ ನಾನು ನಿನ್ನನ್ನೇ ಪ್ರೀತಿಸುತ್ತೇನೆ. ನಾನು ನನ್ನ ಮನಸ್ಸನ್ನು ಬದಲಿಸುವುದಿಲ್ಲ ಎಂಬ ಅರ್ಥ ನೀಡುವ ಹಾಡು ಇದಾಗಿದೆ.