ಗ್ರಿಂಡರ್ ಡೇಟಿಂಗ್ ಆ್ಯಪ್ ಡೌನ್ಲೋಡ್ ಮಾಡಿ ತನ್ನ ಪ್ರೊಫೈಲ್ ಕ್ರಿಯೇಟ್ ಮಾಡಿದ್ದ. ಆದರೆ ಕೆಲವೇ ದಿನಗಳಲ್ಲಿ ನರಕ ಯಾತನೆ ಅನುಭವಿಸಿದ್ದಾರೆ. ತನ್ನ ವಿಡಿಯೋ, ಫೋಟೋ ಬ್ಲಾಕ್‌ಮೇಲ್ ಜೊತೆ ಇದ್ದ ಹಣವನ್ನೂ ಕಳೆದುಕೊಂಡಿದ್ದಾನೆ.

ಮುಂಬೈ (ಆ.06) ಡೇಟಿಂಗ್‌ಗಾಗಿ ಹಲವು ಆ್ಯಪ್‌ಗಳಿವೆ. ಆ್ಯಪ್ ಮೂಲಕ ಡೇಟ್ ಮಾಡಿ ರಿಲೇಶನ್‌ಶಿಪ್‌ನಲ್ಲಿರುವ ಹಲವು ಮಂದಿ ಇದ್ದಾರೆ. ಹೀಗೆ ಡೇಟಿಂಗ್ ಆ್ಯಪ್ ಮೂಲಕ ಡೇಟ್ ಪ್ಲಾನ್ ಮಾಡಿದ್ದ 31ರ ಹರೆಯದ ಯುವಕ ಸಂಕಷ್ಟಕ್ಕೆ ಸಿಲುಕಿದ್ದಾನೆ. ಒಂದೆಡೆ ತನ್ನ ಫೋಟೋ, ವಿಡಿಯೋ ಹರಿದಾಡುವ ಆತಂಕ, ಮತ್ತೊಂದೆಡೆ ಖಾತೆಯಲ್ಲಿ 30 ಸಾವಿರ ರೂಪಾಯಿ ಕಳೆದುಕೊಂಡಿದ್ದಾನೆ. ಇತ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾಲ್ವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಜುಲೈ 30 ರಂದು ಡೇಟಿಂಗ್ ಆ್ಯಪ್ ಡೌನ್ಲೋಡ್

ಡೇಟಿಂಗ್ ಆ್ಯಪ್ ಬಳಕೆ ಮಾಡುವ ಮುನ್ನ ಎಚ್ಚರವಹಿಸುವುದು ಅಗತ್ಯ. ಮುಂಬೈನ 31ರ ಹರೆಯದ ಯುವಕ LGBTQ+ ಕಮ್ಯೂನಿಟಿಯ ಟಿಂಡರ್ ಆ್ಯಪ್ ಡೌನ್ಲೋಡ್ ಮಾಡಿದ್ದಾನೆ. ಜುಲೈ 30 ರಂದು ಆ್ಯಪ್ ಡೌನ್ಲೋಡ್ ಮಾಡಿ ತನ್ನ ಪ್ರೊಫೈಲ್ ಕ್ರಿಯೇಟ್ ಮಾಡಿದ್ದಾನೆ. ಬಳಿಕ ಡೇಟಿಂಗ್ ಆ್ಯಪ್‌ನಲ್ಲಿ ಕೆಲ ಹೊತ್ತು ಕಳೆದಿದ್ದಾನೆ. ಹೀಗೆ ಆ್ಯಪ್‌ನಲ್ಲಿ ಕಳೆಯುತ್ತಿದ್ದಂತೆ LGBTQ+ ಕಮ್ಯೂನಿಟಿಯ ವ್ಯಕ್ತಿಯೊಬ್ಬರ ಪರಿಚಯವಾಗಿದೆ. ಬಳಿಕ ವ್ಯಾಟ್ಸಾಪ್ ನಂಬರ್ ಕೂಡ ಹಂಚಿಕೊಳ್ಳಲಾಗಿದೆ. ಇಲ್ಲಿಂದ ಪ್ರಕರಣ ತಿರುವು ಪಡೆದುಕೊಂಡಿತು.

ಕೋಣೆಗೆ ಕರೆದೊಯ್ದ ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ ವ್ಯಕ್ತಿ

ಚಾಟಿಂಗ್ ವೇಳೆ ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ ವ್ಯಕ್ತಿ ಭೇಟಿಯಾಗುವ ಪ್ರಪೋಸಲ್ ಇಟ್ಟಿದ್ದಾನೆ. ಇತ್ತ ಯವಕ ಒಪ್ಪಿಕೊಂಡಿದ್ದಾನೆ. ಮುಂಬೈನ ಗೋವಂಡಿ ಬಳಿ ಇರುವ ಗೌತಮ್ ನಗರದಲ್ಲಿ ರಾತ್ರಿ 8.30ಕ್ಕೆ ಭೇಟಿಯಾಗಲು ಸೂಚಿಸಿದ್ದಾನೆ. ಇದರಂತೆ ತಕ್ಕ ಸಮಯಕ್ಕೆ ಸ್ಥಳದಲ್ಲಿ ಯುವಕ ಹಾಜರಾಗಿದ್ದಾನೆ. ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ ವ್ಯಕ್ಕಿ ಆಗಮಿಸಿದ್ದಾನೆ. ಯುವಕನ ಕರೆದುಕೊಂಡು ಬುದ್ಧ ವಿಹಾರ ಏರಿಯಾದ ಕೋಣೆಗೆ ಕರೆದೊಯ್ದಿದ್ದಾನೆ.

ಕೋಣೆಯ ಬಾಗಿಲು ಬಂದ್ ಆಗುತ್ತಿದ್ದಂತೆ ಮತ್ತೆ ಮೂವರು ಸೇರಿಕೊಂಡಿದ್ದಾರೆ. ಬಳಿಕ ಯುವಕನಿಗೆ ಹಿಂಸೆ ನೀಡಲಾಗಿದೆ. ಆತನಿಂದ ಮೊಬೈಲ್ ಕಸಿದುಕೊಳ್ಳಲಾಗಿದೆ. ಜೊತೆ ಅಪರಿಚಿತರು ತಮ್ಮ ಮೊಬೈಲ್‌ನಲ್ಲಿ ಯುವಕನ ಬಟ್ಟೆ ಬಿಚ್ಚಿಸಿ ವಿಡಿಯೋ ಚಿತ್ರೀಕರಿಸಿದ್ದಾರೆ. ಫೋಟೋ ತೆಗೆದಿದ್ದಾರೆ. ಧಮ್ಕಿ ಹಾಕಿದ್ದಾರೆ. ಈ ಫೋಟೋಗಳನ್ನು , ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುವುದಾಗಿ ಬೆದರಿಸಿದ್ದಾರೆ.

ನಾಲ್ವರು ಧಮ್ಕಿಕೆ ಬೆದರಿದೆ ಯುವಕ ತನ್ನ ಖಾತೆಯಲ್ಲಿದ್ದ 30 ಸಾವಿರ ರೂಪಾಯಿ ನೀಡಿದ್ದಾನೆ. ಮನೆಗೆ ಹಿಂದಿರುಗುವಷ್ಟರಲ್ಲಿ ಮತ್ತಷ್ಟು ಹಣಕ್ಕೆ ಬೇಡಿಕೆ ಬಂದಿದೆ. ನಾಳೆ ಸಾಲ ಪಡೆದು ನೀಡುವುದಾಗಿ ಹೇಳಿದ್ದಾನೆ. ಮರು ದಿನ ಬೆಳಗ್ಗೆ ಮತ್ತೆ ಹಣಕ್ಕೆ ಬ್ಲಾಕ್‌ಮೇಲ್ ಶುರುವಾಗಿದೆ. ತಾನು ಮೋಸ ಹೋಗಿದ್ದೇನೆ, ಇನ್ನು ಹಣ ನೀಡುತ್ತಲೇ ಹೋದರೂ ಕೊನೆಗೂ ಫೋಟೋ, ವಿಡಿಯೋ ಹರಿಬಿಡುತ್ತಾರೆ ಎಂದು ಯುವಕ ಧೈರ್ಯ ಮಾಡಿ ಗೋವಂಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರು ಹಾಗೂ ಮಾಹಿತಿ ಪಡೆದ ಪೊಲೀಸರು ನಾಲ್ವರು ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳನ್ನು ಗೋವಂಡಿ ಏರಿಯಾದ ವಾಹಿದ್ ಸಲ್ಮಾನ್, ಸೈಫ್, ತಬ್ರೈಜ್ ಎಂದು ಗುರುತಿಸಲಾಗಿದೆ. ಇತ್ತ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.