ಕಾಂಡೋಮ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್: ಬಳಕೆಯ ಉದ್ದೇಶವೇ ಈಡೇರಲ್ಲ, ಈ 6 ವಿಷಯ ನಿಮಗೆ ಗೊತ್ತಿರಲಿ!

ಲೈಂಗಿಕವಾಗಿ ಹರಡುವ ಸೋಂಕು ಮತ್ತು ಅನಗತ್ಯ ಗರ್ಭಧಾರಣೆ ತಡೆಯಲು ಪುರುಷರು ಕಾಂಡೋಮ್‌ಗಳನ್ನು ಬಳಕೆ ಮಾಡುತ್ತಾರೆ. ಆದ್ರೆ ಇದೀಗ ಕಾಂಡೋಮ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್ ಹೊರ ಬಂದಿದೆ.

Condoms not 100 percent effective in preventing all infections mrq

ನವದೆಹಲಿ: ಸುರಕ್ಷಿತ ಲೈಂಗಿಕ ಸಂಪರ್ಕ ಮತ್ತು ಅನಗತ್ಯ ಗರ್ಭಧಾರಣೆ (Unwanted Pregnancy) ತಡೆಯುವ ಉದ್ದೇಶದಿಂದ ಹೆಚ್ಚಾಗಿ ಕಾಂಡೋಮ್ ಬಳಕೆ ಮಾಡಲಾಗುತ್ತದೆ. ಆದ್ರೆ ಕಾಂಡೋಮ್ ಲೈಂಗಿಕವಾಗಿ ಹರಡುವ ಸೋಂಕುಗಳನ್ನು (sexually transmitted infections) ತಡೆಯಲು ಕಡಿಮೆ ಪ್ರಮಾಣದಲ್ಲಿ ಕೆಲಸ ಮಾಡುತ್ತೆ ಎಂಬ ಅಚ್ಚರಿಯ ಮಾಹಿತಿ ಹೊರ ಬಂದಿದೆ. ಶಾರೀರಿಕ ಸಂಪರ್ಕ ವೇಳೆ ಕಾಂಡೋಮ್ ದೈಹಿಕವಾಗಿ ತಡೆಗೋಡೆಯಾಗಿ ಇರುತ್ತೆ ಹೊರತು ಸಂಪೂರ್ಣವಾಗಿ ಸೋಂಕುಗಳನ್ನು ವರ್ಗಾವಣೆಯಾಗೋದನ್ನು ತಡೆಯಲ್ಲ. ಶೇ.100ರಷ್ಟು ಸೋಂಕುಗಳನ್ನು ತಡೆಯುವ ಸಾಮಾರ್ಥ್ಯವನ್ನು ಕಾಂಡೋಮ್‌ಗಳು ಹೊಂದಿಲ್ಲ ಎಂದು ನವದೆಹಲಿಯ ಕ್ಲೌಡ್‌ನೈನ್ ಗ್ರೂಪ್ ಆಫ್ ಹಾಸ್ಪಿಟಲ್ಸ್, ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರಜ್ಞೆಯಾಗಿರುವ ಡಾಕ್ಟರ್ ಸಾಧನಾ ಸಿಂಘಲ್ ವೈಷ್ಣೋಯಿ ಹೇಳುತ್ತಾರೆ. 

ಲೈಂಗಿಕವಾಗಿ ಹರಡುವ ಸೋಂಕುಗಳಿಂದ ರಕ್ಷಿಸಲು ಕಾಂಡೋಮ್‌ಗಳು ಪೂರ್ಣ-ನಿರೋಧಕ ವಿಧಾನವಲ್ಲ ಎಂದು  ಡಾ.ಸಾಧನಾ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಹಾಗಾಗಿ ಕಾಂಡೋಮ್ ಬಳಕೆದಾರರು ಪ್ರಮುಖ ಆರು ವಿಷಯಗಳನ್ನು ತಿಳಿದುಕೊಳ್ಳಬೇಕಾಗುತ್ತದೆ. ಆ ಆರು ವಿಷಯಗಳು ಏನು ಎಂಬುದರ ಮಾಹಿತಿ ಇಲ್ಲಿದೆ. 

1.ಅಪೂರ್ಣ ಸುರಕ್ಷತೆ: Incomplete Protection
ಕಾಂಡೋಮ್ ಕೇವಲ ಪುರುಷನ ಶಿಶ್ನವನ್ನು ಕವರ್ ಮಾಡುತ್ತದೆ. ಇನ್ನುಳಿದ ಖಾಸಗಿ ಭಾಗ ಕವರ್ ಆಗಿರಲ್ಲ. ಈ ಕಾರಣದಿಂದ ಲೈಂಗಿಕ ಸೋಂಕುಗಳು ಸಂಗಾತಿಯಿಂದ ಸಂಗಾತಿಗೆ ಹರಡುವ ಸಾಧ್ಯತೆಗಳಿರುತ್ತವೆ. ಸೆಕ್ಸ್  ಮಾಡುವಾಗ Syphilis, Herpes, Human papillomavirus(HPV) ಅಂತಹ ಸೋಂಕು ಚರ್ಮದಿಂದ ಚರ್ಮಕ್ಕೆ ತಗುಲಿ ಬರಬಹುದು. ಈ ಕಾರಣದಿಂದ ಕಾಂಡೋಮ್ ಸಂಪೂರ್ಣ ಲೈಂಗಿಕ ಸೋಂಕಿನಿಂದ ರಕ್ಷಣೆ ನೀಡಲಾರದು. 

2.ಕಾಂಡೋಮ್ ಜಾರಬಹುದು: Condom Breakage or Slippage
ಸೆಕ್ಸ್‌ನಲ್ಲಿ ಉತ್ತುಂಗದಲ್ಲಿದ್ದಾಗ ಘರ್ಷಣೆಯಿಂದಾಗಿ ಶಿಶ್ನವನ್ನು ಕವರ್ ಮಾಡಿರುವ ಕಾಂಡೋಮ್ ಹರಿಯಬಹುದು ಅಥವಾ ಜಾರಬಹುದು. ಕೆಲವೊಮ್ಮೆ ಕಾಂಡೋಮ್ ಬಳಕೆ ತಿಳುವಳಿಕೆ ಇಲ್ಲದ ಕಾರಣ ಸೋಂಕು ಅಥವಾ ಅನಗತ್ಯ ಗರ್ಭಧಾರಣೆಗೆ ಕಾರಣವಾಗಬಹುದು. ಮಾರುಕಟ್ಟೆಯಲ್ಲಿ ಲಭ್ಯವಾಗುವ ಕಾಂಡೋಮ್‌ಗಳಲ್ಲಿ ಲುಬ್ರಿಕಂಟ್ ಬಳಸಲಾಗುತ್ತದೆ. ಎಣ್ಣೆ ದ್ರವರೂಪದ ಲುಬ್ರಿಕಂಟ್‌ನಿಂದಾಗಿ ಲೈಂಗಿಕ ಕ್ರಿಯೆ ನಡೆಸುವಾದ ಕಾಂಡೋಮ್ ಜಾರುವ ಸಾಧ್ಯತೆ ಇರುತ್ತದೆ.

3.ಫಂಗಲ್ ಸೋಂಕುಗಳು: Fungal Infections
ಕಾಂಡೋಮ್‌ಗಳು ಫಂಗಲ್ ಸೋಂಕುಗಳನ್ನು ತಡೆಯುವ ಸಾಮಾರ್ಥ್ಯವನ್ನು ಹೊಂದಿರಲ್ಲ. ಕಾಂಡೋಮ್ ಕೇವಲ ಚಿಕ್ಕ ಪ್ರದೇಶವನ್ನು ಮರೆ ಮಾಡೋದರಿಂದ ಖಾಸಗಿ ಭಾಗದಲ್ಲಿಯ ಸೋಂಕುಗಳು ಹರಡಬಹುದು ಎಂದು ಲೈಂಗಿಕ ತಜ್ಞರು ಹೇಳುತ್ತಾರೆ. 

ಕಾಂಡೋಮ್‌ಗೆ ಹೇಳಿ ಬೈ ಬೈ; ಪುರುಷರಿಗಾಗಿ ಮಾರುಕಟ್ಟೆಗೆ ಬರ್ತಿದೆ ಹೊಸ ಪ್ರೊಡಕ್ಟ್!

ಲೈಂಗಿಕ ಸೋಂಕುಗಳಿಂದ ರಕ್ಷಣೆ
1.ವೈದ್ಯಕೀಯ ಪರೀಕ್ಷೆ

ಒಬ್ಬರಿಗಿಂತ ಅಧಿಕ ಲೈಂಗಿಕ ಸಂಗಾತಿಗಳನ್ನು ಹೊಂದಿರುವ ಜನರು ರೆಗ್ಯಲುರ್ ಆಗಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕು. ಕೆಲವೊಮ್ಮೆ ಲೈಂಗಿಕ ಸೋಂಕು ತಗುಲಿದಾಗ ಯಾವುದೇ ಲಕ್ಷಣಗಳು ಕಂಡು ಬಂದಿರಲ್ಲ. ಸಮಸ್ಯೆ ಉಲ್ಭಣಕ್ಕೂ ಮುನ್ನವೇ ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.

2.ಸ್ವಚ್ಚತೆ
ಸ್ವಚ್ಛತೆ ಕಾಪಾಡಿಕೊಳ್ಳುವ ಮೂಲಕ ಲೈಂಗಿಕ ಸೋಂಕಿನಿಂದ ಪಾರಾಗಬಹುದು. ಲೈಂಗಿಕ ಸಂಬಂಧದ ನಂತರ ಖಾಸಗಿ ಭಾಗ ಸ್ವಚ್ಛ ಮಾಡಿಕೊಳ್ಳಬೇಕು. ಇದರ ಜೊತೆಗೆ ಎಂದಿಗೂ ಬೇರೆಯವರ ಜೊತೆ ಒಳಉಡುಪುಗಳನ್ನು ಶೇರ್ ಮಾಡಿಕೊಳ್ಳಬಾರದು.

3.ಲೈಂಗಿಕ ಸಂಗಾತಿ ಒಬ್ಬರೇ ಇರಲಿ
ಹೆಚ್ಚು ಸಂಗಾತಿಗಳ ಜೊತೆ ಸಂಭೋಗ ನಡೆಸುವರಲ್ಲಿ ಇಂತಹ ಸೋಂಕುಗಳು ಕಂಡು ಬರುತ್ತವೆ. ಹಾಗಾಗಿ ಒಬ್ಬರ ಜೊತೆಯಲ್ಲಿಯೇ ಲೈಂಗಿಕ ಸಂಬಂಧ ಬೆಳೆಸಬಹುದು. ಇಲ್ಲವಾದಲ್ಲಿ ಒಬ್ಬರಿಂದ ಒಬ್ಬರಿಗೆ ಲೈಂಗಿಕ ಸೋಂಕುಗಳು ಹರಡಬಹುದು.

4.ವ್ಯಾಕ್ಸಿನೇಷನ್
ಲೈಂಗಿಕ ಸೋಂಕುಗಳಿಗೆ ವ್ಯಾಕ್ಸಿನೇಷನ್‌ಗಳು ಸಿಗುತ್ತವೆ. ಸೋಂಕಿನ ಮುನ್ಸೂಚನೆ ಸಿಗುತ್ತಿದ್ದಂತೆ ತಜ್ಞರಿಂದ ಚಿಕಿತ್ಸೆ ಪಡೆದು ವ್ಯಾಕ್ಸಿನೇಷನ್ ಪಡೆದುಕೊಳ್ಳಬಹುದು. ಉದಾಹರಣೆಗೆ HPV and hepatitis B ವ್ಯಾಕ್ಸಿನೇಷನ್‌ನಿಂದ ಲೈಂಗಿಕ ಸೋಂಕುಗಳಿಂದ ರಕ್ಷಣೆ ಪಡೆಯಬಹುದಾಗಿದೆ. 

5.ಮುಕ್ತ ಮಾತುಕತೆ 
ನಿಮ್ಮ ಲೈಂಗಿಕ ಸಂಗಾತಿ ಜೊತೆ ಮುಕ್ತವಾಗಿ ಮಾತನಾಡೋದರಿಂದ ಇಂತಹ ಸಮಸ್ಯೆಗಳಿಂದ ದೂರ ಉಳಿಯಬಹುದು. ಇಬ್ಬರಲ್ಲಿ ಯಾರಿಗೇ ಸೋಂಕು ಇದ್ರೂ ಮುಂಜಾಗ್ರತ ಕ್ರಮ ತೆಗೆದುಕೊಳ್ಳಬಹುದು. ಸಂದೇಹಗಳಿದ್ದರೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗುವ ಮೊದಲು ಪರಸ್ಪರ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಲೈಂಗಿಕ ಸೋಂಕಿನ ಅಪಾಯ ಕಡಿಮೆ ಮಾಡಿಕೊಳ್ಳಬಹುದು.

6.ಲೈಂಗಿಕ ತಜ್ಞರಿಂದ ಸಲಹೆ
ಒಂದು ವೇಳೆ ಲೈಂಗಿಕ ಸೋಂಕಿನ ಲಕ್ಷಣಗಳು ಕಂಡು ಬಂದರೆ ಸೂಕ್ತ ತಜ್ಞರಿಂದ ಸಲಹೆ ಪಡೆದುಕೊಳ್ಳಿ. ಆರೋಗ್ಯ ಅಥವಾ ಲೈಂಗಿಕ ತಜ್ಞರು ನಿಮಗೆ ಸಲಹೆ, ಪರೀಕ್ಷೆ ಮತ್ತು ಚಿಕಿತ್ಸೆಯ ಆಯ್ಕೆಗಳನ್ನು ನೀಡಬಹುದು.

ಕಾಂಡೋಮ್ ಬಳಕೆ ಬಗ್ಗೆ ಮಹತ್ವದ ಸರ್ವೇ ನಡೆಸಿದ ಎಚ್ಚರಿಕೆ ಸಂದೇಶ ಕೊಟ್ಟ ವಿಶ್ವ ಆರೋಗ್ಯ ಸಂಸ್ಥೆ!

Latest Videos
Follow Us:
Download App:
  • android
  • ios