ದಟ್ಟ ತಲೆಕೂದಲು ಇರೋರಿಗಿಂತಲೂ ಬೋಳು ತಲೆ ಪುರುಷರ ಮೇಲೆ ಸ್ತ್ರೀಯರಿಗೆ ಹೆಚ್ಚು ಲವ್ವಾ?

ದಟ್ಟ ತಲೆಕೂದಲು ಇರೋರಿಗಿಂತಲೂ ಬೋಳುತಲೆಯ ಪುರುಷರನ್ನು ಕಂಡರೆ ಸ್ತ್ರೀಯರು ಹೆಚ್ಚು ಆಕರ್ಷಿತರಾಗುತ್ತಾರೆ. ಅಂಥ ಗಂಡಸರಿಗೆ ಲೈಂಗಿಕವಾಗಿಯೂ ಹೆಚ್ಚು ಸಾಮರ್ಥ್ಯ ಎಂಬ ನಂಬಿಕೆ ಇದೆ. ಇದು ನಿಜವೇ?

 

Do women love bald men more than thick haired men bni

ಬ್ರೂಸ್ ವಿಲ್ಲಿಸ್ ಸೇರಿದಂತೆ ಹಾಲಿವುಡ್‌ನ ಹಲವು ಹೀರೋಗಳು ಬೋಳುತಲೆಯವರು ಅರ್ಥಾತ್ ಬಾಲ್ಡಿಗಳು. ಇವರು ತುಂಬಾ ಆಕರ್ಷಕ ಎಂದು ಹೇಳುವುದುಂಟು. ಬೋಳು ತಲೆಯವರು ನಾವು ಹುಡುಗಿಯರ ಕಣ್ಣಿನಲ್ಲಿ ಅತ್ಯಂತ ಆಕರ್ಷಕ ಪುರುಷರು, ನಮಗೆ ಲೈಂಗಿಕ ಸಾಮರ್ಥ್ಯವೂ ಹೆಚ್ಚು, ನಾವು ಗಂಟೆಗಟ್ಟಲೆ ಸಂಭೋಗಿಸಬಲ್ಲೆವು ಎಂದೆಲ್ಲಾ ಕೊಚ್ಚಿಕೊಳ್ಳುವುದುಂಟು. ಇದು ನಿಜವೇ?

ಇದು ಪೂರ್ತಿ ನಿಜವಲ್ಲ ಎಂದು ಅಧ್ಯಯನಗಳು ಸಾಬೀತುಪಡಿಸಿವೆ. ಈ ನಂಬಿಕೆ ಹೇಗೆ ಬಂತೋ ಗೊತ್ತಿಲ್ಲ. ಆದರೆ ಪುರುಷರ ತಲೆಕೂದಕು ಸೇರಿದಂತೆ ದೇಹದ ನಾನಾ ಕಡೆ ಬೆಳೆಯುವ ಕೂದಲಿಗೂ ಅವರಲ್ಲಿ ಸ್ರಾವವಾಗುವ ಟೆಸ್ಟೋಸ್ಟಿರಾನ್ ಹಾರ್ಮೋನ್‌ಗೂ ಸಂಬಂಧವಿದೆ. ಟೆಸ್ಟೋಸ್ಟಿರಾನ್ ಉತ್ಪಾದನೆಯ ಪ್ರಮಾಣ, ಅವಧಿ ಇತ್ಯಾದಿಗಳು ವ್ಯತ್ಯಾಸವಾದಂತೆ ಮೈಯ ಮೇಲಿನ ಕೂದಲು ಕೂಡ ವ್ಯತ್ಯಾಸವಾಗುತ್ತದೆ. ಪುರುಷರಲ್ಲಿ ವೀರ್ಯದ ಉತ್ಪತ್ತಿಗೂ ಕಾಮಾಸಕ್ತಿಗೂ ಟೆಸ್ಟೋಸ್ಟಿರಾನ್ ಕಾರಣ. ಇದೇ ಹಾರ್ಮೋನ್ ಕೂದಲ ಬೆಳವಣಿಗೆಗೂ ಕಾರಣ ಎಂದು ನಂಬಲಾಗಿತ್ತು. ಹೆಚ್ಚು ಟೆಸ್ಟೋಸ್ಟಿರಾನ್ ಉತ್ಪಾದನೆಯಿಂದ ತಲೆಕೂದಲು ಬಿದ್ದುಹೋಗುತ್ತದೆ ಹಾಗೂ ಅದೇ ಕಾಮಾಸಕ್ತಿಗೂ ಕಾರಣ ಎಂದ ನಂಬಲಾಗಿತ್ತು.

ಆದರೆ ಅದು ಪೂರ್ತಿ ನಿಜವಲ್ಲ. ಪುರುಷರಲ್ಲಿ ತಲೆಕೂದಲು ಉದುರಲು ಕಾರಣವಾಗುವುದು ಟೆಸ್ಟೋಸ್ಟಿರಾನ್ ಅಲ್ಲ. ಬದಲಾಗಿ, ಡಿಹೈಡ್ರೋಟೆಸ್ಟೋಸ್ಟಿರಾನ್ ಎಂಬ ಇನ್ನೊಂದು ಹಾರ್ಮೋನ್. ಇದು ಹೆಚ್ಚಾಗಿ ಸ್ರವಿಸಿದರೆ ತಲೆಕೂದಲು ಉದುರುತ್ತದೆ. ಇದಕ್ಕೂ ಕಾಮಾಸಕ್ತಿಗೂ ಸಂಬಂಧವಿಲ್ಲ. ಹೀಗಾಗಿ ಬಾಲ್ಡಿ ಪುರುಷರು ಹೆಚ್ಚು ಕಾಮಾಸಕ್ತರು ಎಂಬುದರಲ್ಲೂ ನಿಜವಿಲ್ಲ. 

ಆದರೆ ಬೋಳುತಲೆಯ ಪುರುಷರ ಬಗ್ಗೆ ಮಹಿಳೆಯರು ಹೆಚ್ಚು ಆಸಕ್ತರಾಗುವುದು ನಿಜ. ಇದಕ್ಕೆ ಯಾವುದೇ ಸಮಂಜಸ ವಿವರಣೆ ಸಿಗಲಾರದು.  ಆದರೆ ಕೆಲವು ಅಧ್ಯಯನಗಳು ಬಾಲ್ಡಿ ಗಂಡಸರು ಕೆಲವು ಮಹಿಳೆಯರನ್ನು ಲೈಂಗಿಕವಾಗಿ ಹೆಚ್ಚು ಆಕರ್ಷಿಸುತ್ತಾರೆ ಎಂಬುದೂ ಕಂಡುಬಂದಿದೆ. 

ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಬೋಳು ಪುರುಷರು ತಮ್ಮದೇ ಪ್ರಾಯದ ಇತರರಿಗಿಂತ ದೈಹಿಕವಾಗಿ ಹೆಚ್ಚು ಪ್ರಬಲರಾಗಿರುತ್ತಾರೆ ಮತ್ತು ಯಶಸ್ವಿಯೂ ಆಗಿರುತ್ತಾರೆ ಎಂದು ಜನ ನಂಬುತ್ತಾರೆ ಎಂದು ಕಂಡುಬಂದಿದೆ. ಸ್ವತಃ ಬೋಳು ತಲೆ ಹೊಂದಿರುವ ವಿಜ್ಞಾನಿ ಆಲ್ಬರ್ಟ್ ಇ. ಮನ್ನೆಸ್, ಪುರುಷರ ಚಿತ್ರಗಳ ಸರಣಿಯನ್ನು ತೋರಿಸಿ ಜನರ ಪ್ರತಿಕ್ರಿಯೆಗಳನ್ನು ದಾಖಲಿಸಿದ್ದಾರೆ. ಭಾಗವಹಿಸುವವರಿಗೆ ಎರಡು ಬಾರಿ ಒಬ್ಬ ವ್ಯಕ್ತಿಯ ಚಿತ್ರವನ್ನು ತೋರಿಸಲಾಯಿತು- ಒಮ್ಮೆ ಸಂಪೂರ್ಣ ತಲೆಕೂದಲು ಇರುವಾಗ ಮತ್ತು ನಂತರ ಅವನ ತಲೆಕೂದಲನ್ನು ಬೋಳಿಸಿದ ಬಳಿಕ. ಪ್ರತಿಕ್ರಿಯಿಸಿದವರೆಲ್ಲಾ ಬೋಳಿಸಿಕೊಂಡ ತಲೆಯನ್ನು ಹೊಂದಿರುವ ಪುರುಷರು 'ಹೆಚ್ಚು ಪ್ರಬಲರು, ದೊಡ್ಡವರು ಮತ್ತು ಬಲಶಾಲಿ' ಎಂದು ಹೇಳಿದರು. 

ಜೀವನ ಹೇಗೆ ಎಂಜಾಯ್ ಮಾಡಬೇಕೆಂದು ಹೇಳಿಕೊಟ್ಟ ಸುಧಾ ಮೂರ್ತಿ

ಸಾರ್ಲ್ಯಾಂಡ್ ವಿಶ್ವವಿದ್ಯಾನಿಲಯದ ಮನಶ್ಶಾಸ್ತ್ರಜ್ಞ ರೊನಾಲ್ಡ್ ಹೆನ್ಸ್ ಅವರು 20,000ಕ್ಕೂ ಹೆಚ್ಚು ಮಂದಿಯನ್ನು ಒಳಗೊಂಡ ಜಾಗತಿಕ ಸಂಶೋಧನೆಯನ್ನು ನಡೆಸಿದರು. ಅವರ ಸಂಶೋಧನೆಯ ಪ್ರಕಾರ, ಬೋಳು ಪುರುಷರು ಹೆಚ್ಚು ವಯಸ್ಸಾದವರಂತೆ ಕಂಡರೂ, ಹೆಚ್ಚು ಬುದ್ಧಿವಂತರು ಎಂದು ಜನ ಗ್ರಹಿಸುತ್ತಾರೆ. ಆದರೆ, ಭಾಗಶಃ ತಲೆ ಬೋಳಾದವರು ಹೆಚ್ಚು ಆಕರ್ಷಕ ಎಂದು ಮಹಿಳೆಯರು ಭಾವಿಸುವುದಿಲ್ಲ. ಬದಲಾಗಿ, ಪೂರ್ತಿಯಾಗಿ ತಲೆ ಬೋಳಾದವರನ್ನು ಹೆಚ್ಚು ಆಕರ್ಷಕ ಎಂದು ತಿಳಿಯುತ್ತಾರಂತೆ.  

ಮಹಿಳೆಯರೇಕೆ ಬೋಳಾಗುವುದಿಲ್ಲ?

ಪುರುಷ ದೇಹದಲ್ಲಿನ ಪ್ರಮುಖ ಲೈಂಗಿಕ ಹಾರ್ಮೋನ್ ಟೆಸ್ಟೋಸ್ಟೆರಾನ್- ಡೈಹೈಡ್ರೊಟೆಸ್ಟೋಸ್ಟೆರಾನ್ ಆಗಿ ಪರಿವರ್ತಿಸುತ್ತದೆ. ಈ ಹಾರ್ಮೋನ್ ಪ್ರಮಾಣವು ಆನುವಂಶಿಕ. ಇದು ತಾಯಿಯ ಅಥವಾ ತಂದೆಯ ಜೀನ್‌ಗಳಿಂದ ಬರಬಹುದು. ಪುರುಷರಲ್ಲಿ ಜೀನ್‌ಗಳು ಎಕ್ಸ್ ಮತ್ತು ವೈ ಕ್ರೋಮೋಸೋಮ್ ಹೊಂದಿರುತ್ತವೆ. ಮಹಿಳೆಯರಲ್ಲಿ ಜೀನ್‌ಗಳು ಎಕ್ಸ್‌ ಮತ್ತು ಎಕ್ಸ್ ಕ್ರೋಮೋಸೋಮ್‌ ಹೊಂದಿರುತ್ತವೆ. ಬೋಳುತನದ ಗುಣ ಇರುವುದು ವೈ ಕ್ರೋಮೋಸೋಮ್‌ನಲ್ಲಿ. ಹೀಗಾಗಿ ಮಹಿಳೆಯರು ಬಾಲ್ಡ್ ಆಗುವುದಿಲ್ಲ. ಆದರೆ ಕೂದಲು ಉದುರಿ ತೆಳ್ಳಗಾಗಬಹುದು. 

ಮದುವೆಗೆ ಗಂಡೇ ಬೇಕೆಂದೇನೂ ಇಲ್ಲ, ಮೂರು ಮದ್ವೆಯಾಗಿದ್ದೇನೆ: ಮನದಾಳದ ಮಾತು ತೆರೆದಿಟ್ಟ ರೇಖಾ!
 

Latest Videos
Follow Us:
Download App:
  • android
  • ios