ಜೀವನ ಹೇಗೆ ಎಂಜಾಯ್ ಮಾಡಬೇಕೆಂದು ಹೇಳಿಕೊಟ್ಟ ಸುಧಾ ಮೂರ್ತಿ

ತಮ್ಮ ಕೆಲಸದ ಮೂಲಕವೇ ಲಕ್ಷಾಂತರ ಜನರ ಮನಸ್ಸು ಗೆದ್ದಿರುವ ಸುಧಾ ಮೂರ್ತಿ ಜೀವನ ಎಲ್ಲರಿಗೂ ಮಾದರಿ. ಸುಧಾ ಮೂರ್ತಿ  ಸದಾ ಜೀವನದ ಬಗ್ಗೆ ಜನರಿಗೆ ಪಾಠ ಮಾಡ್ತಾರೆ. ಈಗ ಪ್ರತಿ ಕ್ಷಣವನ್ನು ಹೇಗೆ ಎಂಜಾಯ್ ಮಾಡ್ಬೇಕು ಎಂಬುದನ್ನು ಹೇಳಿದ್ದಾರೆ.
 

Sudha Murthy Says How To Enjoy Every Moment Of Life roo

ಸದಾ ತಮ್ಮ ಮಾತಿನ ಮೂಲಕವೇ ಜನರಿಗೆ ಸ್ಫೂರ್ತಿಯ ಸೆಲೆಯಾಗಿರುವ (Motivational Personality Sudha Murthy) ಸಾಮಾಜ ಸೇವಕಿ ಸುಧಾ ಮೂರ್ತಿ. ಸರಳತೆ, ಅವರ ,ಮಾತು, ನಡವಳಿಕೆ ಪ್ರತಿಯೊಬ್ಬರನ್ನು ಆಕರ್ಷಿಸುತ್ತದೆ. ಕೋಟಿ ಹಣವಿದ್ರೂ ಸಿಂಪಲ್ ಜೀವನ ನಡೆಸುತ್ತಿರುವ ಸುಧಾ, ಯುವಕರಿಗೆ, ನೊಂದವರಿಗೆ ತಮ್ಮ ಮಾತಿನ ಮೂಲಕವೇ ಪಾಠ ಕಲಿಸ್ತಾರೆ. ಸುಧಾ ಮೂರ್ತಿಯವರ ಇನ್ನೊಂದು ವಿಡಿಯೋ ಈಗ ಸಂತೋಷದಿಂದ ಹೇಗೆ ಇರ್ಬೇಕು ಎಂಬುವುದನ್ನು ಹೇಳಿದೆ.

ಮನುಷ್ಯನ ಆಸೆಗೆ ಮಿತಿ ಇಲ್ಲ. ಇನ್ನಷ್ಟು, ಮತ್ತಷ್ಟು ಎನ್ನುವ ಜನರು, ಸದಾ ಒಂದಿಲ್ಲೊಂದು ಕೊರಗು ಹೊಂದಿರ್ತಾರೆ. ಸಿಂಗಲ್ (single) ಬೆಡ್ ರೂಮ್ ಮನೆ ಇದೆ, ಡಬಲ್ ಬೆಡ್ ರೂಮ್ ಮನೆ ಇಲ್ಲ, ತಿಂಗಳಿಗೆ ಲಕ್ಷ ಸಂಬಳ (salary) ಬರುವ ಕೆಲಸ ಇಲ್ಲ, ಅದಿಲ್ಲ ಇದಿಲ್ಲ ಎನ್ನುತ್ತ ಬದುಕುವ ಜನರು, ಅದು ಸಿಕ್ಕಿದ್ಮೇಲೂ ಸಂತೋಷವಾಗಿರೋದಿಲ್ಲ. ಸುಧಾ ಮೂರ್ತಿ ಅಂಥವರಿಗೆ ಕಿವಿಮಾತೊಂದನ್ನು ಹೇಳಿದ್ದಾರೆ. ಮನುಷ್ಯ ತಾನಿರುವ ಸ್ಥಳದಲ್ಲಿ ಹಾಗೂ ತಾನಿರುವ ಪರಿಸ್ಥಿತಿಯಲ್ಲೂ ಸಂತೋಷವನ್ನು ಕಂಡುಕೊಳ್ಳಬೇಕು ಅಂತ ಸುಧಾ ಮೂರ್ತಿ (Sudha Murthy) ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಸುಧಾ ಮೂರ್ತಿ, ತಮ್ಮ ಜೀವನದ ಪ್ರತಿಯೊಂದು ಹಂತವನ್ನು ಹೇಗೆ ಸಂತೋಷದಿಂದ ಸ್ವೀಕರಿಸಿದ್ದೇನೆ ಎಂಬುದನ್ನು ಹೇಳಿದ್ದಾರೆ.

Watch: ಟಿವಿ ಲೈವ್‌ನಲ್ಲೇ ನಟ ರಾಜ್‌ ತರುಣ್‌ ಸ್ನೇಹಿತನಿಗೆ ಚಪ್ಪಲಿಯಲ್ಲಿ ಹೊಡೆದ ನಟಿ ಲಾವಣ್ಯ!

ಕುಟುಂಬಕ್ಕೆ ಮಹತ್ವ (Priority to Family) : ಸುಧಾ ಮೂರ್ತಿ ಕುಟುಂಬಕ್ಕೆ ಮಹತ್ವ ನೀಡಿದ್ದಾಗಿ ಹೇಳಿದ್ದಾರೆ. ಆಗ್ಲೂ ಈಗ್ಲೂ ನಾನು ಕುಟುಂಬಕ್ಕೆ ಮಹತ್ವ ನೀಡಿದ್ದೇನೆ. ಮನೆ, ಮಕ್ಕಳ ಜೊತೆಗೆ ನಾನು ಪಾರ್ಟ್ ಟೈಂ ಕೆಲಸಕ್ಕೆ ಹೋಗ್ತಿದ್ದೆ. ಆ ಸಮಯದಲ್ಲಿ ನನಗೆ ಕೆಲಸಕ್ಕೆ ಹೋಗೋದು ಅನಿವಾರ್ಯವಾಗಿತ್ತು. ಬೆಳಿಗ್ಗೆ 9 -12 ಗಂಟೆ ಲೆಕ್ಚರರ್ ಕೆಲಸ ಮಾಡ್ತಿದ್ದ ನಾನು ಯಾವಾಗ್ಲೂ ಅದಕ್ಕೆ ಬೇಸರಪಟ್ಟುಕೊಳ್ಳಲಿಲ್ಲ ಎಂದಿದ್ದಾರೆ.

ಮೂರ್ತಿ ಮೇಲೆ ಪ್ರೀತಿ (Love Husband) : ಇನ್ನು ಸುಧಾ ಮೂರ್ತಿ ತಮ್ಮ ಪತಿ ನಾರಾಯಣ ಮೂರ್ತಿ ಮೇಲಿನ ಪ್ರೀತಿ ಬಗ್ಗೆಯೂ ಹೇಳಿದ್ದಾರೆ. ನಾನು ನಾರಾಯಣ ಮೂರ್ತಿ ಬಳಿ ಹಣ ಇದ್ಯೋ ಇಲ್ವೋ ಎನ್ನುವ ಬಗ್ಗೆ ಎಂದೂ ಯೋಚನೆ ಮಾಡಿಲ್ಲ ಎಂದಿದ್ದಾರೆ. ಯಾವುದೇ ಸಮಯ ಬಂದ್ರೂ ಹೆದರಬೇಡಿ ಅಂತಾ ಸುಧಾ ಮೂರ್ತಿ, ನಾರಾಯಣ ಮೂರ್ತಿಗೆ ಅನೇಕ ಬಾರಿ ಹೇಳ್ತಿದ್ದರಂತೆ. ಒಂದ್ವೇಳೆ ಬ್ಯುಸಿನೆಸ್ ನಲ್ಲಿ ಸೋಲಾದ್ರೆ ಇಬ್ಬರಿಗೂ ಡಿಗ್ರಿ ಇದೆ. ಅನಿವಾರ್ಯವಾದ್ರೆ ಸಂಬಳ ಬರುವ ಕೆಲಸಕ್ಕೆ ಸೇರಿಕೊಳ್ಳೋಣ ಎಂದಿದ್ದರಂತೆ. ಆ ಸಮಯದಲ್ಲಿ ಪುಣೆ ಮಾಡೆಲ್ ಕಾಲೋನಿಯಲ್ಲಿ ಡಬಲ್ ಬೆಡ್ ರೂಮ್ ಮನೆ ಇತ್ತು. ಅದು ನನಗೆ ಬಂಗಲೆ ಅನ್ನಿಸ್ತಿತ್ತು. ಆ ಸಮಯದಲ್ಲಿ ಮಾಡೆಲ್ ಕಾಲೋನಿಯಲ್ಲಿ ಎರಡು ಬೆಡ್ ರೂಮ್ ಅಪಾರ್ಟ್ಮೆಂಟ್ ಇರೋದು ಸಣ್ಣ ವಿಷ್ಯವಲ್ಲ. ಯಾಕೆ ಟೆನ್ಷನ್ ಮಾಡಿಕೊಳ್ತಿರಿ. ಯಾವುದಕ್ಕೂ ಟೆನ್ಷನ್ ಬೇಡ ಎನ್ನುತ್ತಿದ್ದರಂತೆ ಸುಧಾ ಮೂರ್ತಿ. ನಾರ್ಮಲ್ ಜೀವನ ನಡೆಸೋಣ ಎನ್ನುವ ಮೂಲಕವೇ ನಾರಾಯಣ ಮೂರ್ತಿಗೆ ಧೈರ್ಯ ನೀಡಿದ್ದರು ಸುಧಾ ಮೂರ್ತಿ.

2 +2 = 4 ಆಗ್ಬೇಕಾಗಿಲ್ಲ : ಸುಧಾ ಮೂರ್ತಿ ಪ್ರಕಾರ, ಜೀವನ ಎರಡಕ್ಕೆ ಎರಡು ಸೇರಿಸಿದ್ರೆ ನಾಲ್ಕಲ್ಲ. ಅದು ಐದು ಅಥವಾ ಮೂರು ಎರಡೂ ಆಗ್ಬಹುದು (Accept the Situation as it is). ಅದನ್ನು ನಾವು ಸ್ವೀಕರಿಸಬೇಕು. ನಿಮಗೆ ಏನ್ ಸಿಕ್ಕಿದ್ಯೋ ಅದನ್ನು ಎಂಜಾಯ್ ಮಾಡಿ. ಜೀವನದ ಪ್ರತಿ ಹಂತವನ್ನೂ ಎಂಜಾಯ್ ಮಾಡಿ, ಸಂತೋಷದಿಂದ ಕಳೆಯಿರಿ ಎಂದು ಸುಧಾಮೂರ್ತಿ ಹೇಳಿದ್ದಾರೆ.

ಪ್ರೀತಿಸಿದವರ ಮದುವೆಗೆ ಪೋಷಕರ ವಿರೋಧ; ಜಮೀನಲ್ಲಿ ವಿಷ ಸೇವಿಸಿ ಪ್ರಾಣಬಿಟ್ಟ ಯುವ ಪ್ರೇಮಿಗಳು!

ನಾನು ಕಾಲೇಜ್ ಶಿಕ್ಷಕಿಯಾಗಿ ಆ ಸಮಯವನ್ನು ಎಂಜಾಯ್ ಮಾಡಿದ್ದೇನೆ. ಮನೆಯಲ್ಲಿ ತಾಯಿಯಾಗಿ, ಪತ್ನಿಯಾಗಿ ಆ ಕ್ಷಣ, ದಿನವನ್ನು ಎಂಜಾಯ್ ಮಾಡಿದ್ದೇನೆ. ಈಗ ಅಜ್ಜಿಯಾಗಿ ಈ ದಿನಗಳನ್ನು ಎಂಜಾಯ್ ಮಾಡ್ತಿದ್ದೇನೆ. ಯಾವುದೇ ಸಮಯ ಬಂದ್ರೂ ನಮ್ಮ ಕೈಲಾದಷ್ಟು ಮಾಡಿ, ಆ ಸಮಯವನ್ನು ಎಂಜಾಯ್ ಮಾಡಬೇಕು ಎಂಬುದು ನನ್ನ ಜೀವನದ ಉದ್ದೇಶ ಎಂದು ಸುಧಾ ಮೂರ್ತಿ ಹೇಳಿದ್ದಾರೆ. 
 

 
 
 
 
 
 
 
 
 
 
 
 
 
 
 

A post shared by ubga.women (@ubga.women)

Latest Videos
Follow Us:
Download App:
  • android
  • ios