ಪತಿ-ಪತ್ನಿ ಸಂಬಂಧವನ್ನು ಸೆಕ್ಸ್ ಮತ್ತಷ್ಟು ಗಟ್ಟಿಗೊಳಿಸುತ್ತೆ ಎಂಬುದೇನು ನಿಜ.ಆದ್ರೆ ಸೆಕ್ಸ್ಗಿಂತಲೂ ಭಾವನಾತ್ಮಕ ಭದ್ರತೆ ನೀಡೋದು ಇಬ್ಬರ ನಡುವೆ ಎಕ್ಸ್ಚೇಂಜ್ ಆಗೋ ಅಪ್ಪುಗೆ, ಮುತ್ತು ಹಾಗೂ ಮುದ್ದು. ಹಾಸಿಗೆ ಮೇಲೆ ನಡೆಯೋ ಈ ಮುದ್ದಾಟ ಇಬ್ಬರ ನಡುವಿನ ಬಂಧ ಬಿಗಿಗೊಳಿಸೋ ಜೊತೆ ಅದಕ್ಕೊಂದು ವ್ಯಾಖ್ಯಾನವನ್ನೂ ನೀಡಬಲ್ಲದು. ಹೌದು, ಹಾಸಿಗೆ ಮೇಲೆ ನೀವು ನಿಮ್ಮ ಸಂಗಾತಿ ಜೊತೆ ಹೇಗೆ ಮುದ್ದಾಡುತ್ತ ಮಲಗುತ್ತೀರಿ ಎಂಬುದು ನಿಮ್ಮಿಬ್ಬರ ನಡುವಿನ ಸಂಬಂಧವನ್ನು ವಿವರಿಸಬಲ್ಲದು. ನೀವಿಬ್ಬರು ಮಲಗಿರೋ ಭಂಗಿ ನಿಮ್ಮ ಯೋಚನೆಗೂ ಮೀರಿ ನಿಮ್ಮಬ್ಬರ ನಡುವಿನ ಆತ್ಮೀಯತೆ ಹಾಗೂ ಬಾಂಧವ್ಯದ ಕಥೆಯನ್ನು ಹೇಳಬಲ್ಲದು. ಹಾಗಾದ್ರೆ ಸಂಗಾತಿ ಜೊತೆ ನೀವು ನಿದ್ರಿಸೋ ಭಂಗಿ ಏನೆಲ್ಲ ಕಥೆ ಹೇಳುತ್ತೆ?

ವಿವಾಹ: ಉದ್ಯೋಗದಲ್ಲಿ ಕಾಂಪ್ರಮೈಸ್ ಮಾಡಿಕೊಂಡವರಿವರು

ಸ್ಪೂನ್ ಭಂಗಿ
ಅರೇ, ಇದೇನಪ್ಪ ಸ್ಪೂನ್ ಎಂದು ಯೋಚಿಸುತ್ತಿದ್ದೀರಾ? ಸ್ಪೂನ್ ಭಂಗಿ ಎಂದ ತಕ್ಷಣ ಸ್ಪೂನ್ ಇಟ್ಟುಕೊಂಡು ಮಲಗೋದು ಎಂದು ಭಾವಿಸಬೇಡಿ ಮರಾಯ್ರೆ! ಹೆಂಡ್ತಿ ಗಂಡನ ಹೊಟ್ಟೆಗೆ ತನ್ನ ಬೆನ್ನು ತಾಗಿಸಿಕೊಂಡಿದ್ರೆ,ಗಂಡನ ತೋಳುಗಳು ಆಕೆಯನ್ನು ಅಪ್ಪಿ ಹಿಡಿದಿರೋ ಭಂಗಿ. ಸಾಂಪ್ರದಾಯಿಕವಾಗಿ ಹೇಳೋದಾದ್ರೆ ಇಲ್ಲಿ ಗಂಡನಿಗೆ ಬಿಗ್ ಸ್ಪೂನ್, ಹೆಂಡ್ತಿಗೆ ಲಿಟ್ಲ ಸ್ಪೂನ್ ಎನ್ನುತ್ತಾರೆ. ಇಲ್ಲಿ ಬಿಗ್ ಸ್ಪೂನ್ ಅಂದ್ರೆ ಪತಿ. ಆತ ಬಲಿಷ್ಠ ಹಾಗೂ ರಕ್ಷಕ ಎಂಬ ಅರ್ಥದಲ್ಲಿ ಹೀಗೆ ಕರೆಯಲಾಗಿದೆ. ಪತ್ನಿ ಲಿಟ್ಲ ಸ್ಪೂನ್ ಅಂದ್ರೆ ಸೂಕ್ಷ್ಮ ಹಾಗೂ ಮೃದು. ಇದರರ್ಥ ಇಷ್ಟೇ ಹೆಂಡ್ತಿ ಗಂಡನ ತೋಳುಗಳಲ್ಲಿ ಸುರಕ್ಷಿತ ಭಾವನೆ ಅನುಭವಿಸುತ್ತಾಳೆ ಅನ್ನೋದು. ಆದ್ರೆ ಕಾಲಕ್ಕೆ ತಕ್ಕಂತೆ ಈ ವ್ಯಾಖ್ಯಾನದಲ್ಲಿ ಕೂಡ ಬದಲಾವಣೆಯಾಗಿದೆ. ಆಧುನಿಕ ಕಾಲದಲ್ಲಿ ಜಿಮ್ ಬಾಡಿ ಹೊಂದಿರೋ ಪತಿ ತಾನೇ ಲಿಟ್ಲ ಸ್ಪೂನ್ ಆಗಲು ಬಯಸುತ್ತಾನೆ. ಅಂದ್ರೆ ಆತ ತನ್ನ ಪತ್ನಿಯ ತೋಳುಗಳಲ್ಲಿ ಭಾವನಾತ್ಮಕ ಸುರಕ್ಷತೆ ಹಾಗೂ ನೆಮ್ಮದಿ ಅನುಭವಿಸುತ್ತಾನೆ ಎನ್ನೋದು ಕೆಲವು ಸಂಶೋಧಕರ ಅಭಿಪ್ರಾಯ. ಸ್ಪೂನ್ ಭಂಗಿಯಲ್ಲಿ ನೀವು ನಿಮ್ಮ ಸಂಗಾತಿಯೊಂದಿಗೆ ಮಲಗುತ್ತೀರಿ ಎಂದಾದ್ರೆ ನೀವಿಬ್ಬರೂ ಒಬ್ಬರಿಗೊಬ್ಬರು ಆಸರೆ, ಭದ್ರತೆ ಒದಗಿಸುತ್ತೀರಿ ಎಂದರ್ಥ.

ಹನಿಮೂನ್ ಹಗ್
ಈ ಭಂಗಿಯಲ್ಲಿ ಸಂಗಾತಿಗಳು ಒಬ್ಬರಿಗೊಬ್ಬರು ಮುಖ ಕೊಟ್ಟು ಒಬ್ಬರ ಕಾಲುಗಳನ್ನು ಇನ್ನೊಬ್ಬರ ಕಾಲುಗಳೊಳಗೆ ಸಿಕ್ಕಿಸಿಕೊಂಡು ಮಲಗುತ್ತಾರೆ. ಮದುವೆಯಾದ ಪ್ರಾರಂಭದಲ್ಲಿ ಪತಿ ಹಾಗೂ ಪತ್ನಿ ಇಂಥ ಭಂಗಿಯಲ್ಲಿ ಮಲಗೋದು ಕಾಮನ್. ಇದೇ ಕಾರಣಕ್ಕೆ ಇದಕ್ಕೆ ಹನಿಮೂನ್ ಹಗ್ ಎಂಬ ಹೆಸರಿದೆ. ಮದುವೆಯಾಗಿ ಅನೇಕ ವರ್ಷಗಳು ಕಳೆದ ಮೇಲೂ ನೀವು ಹಾಗೂ ನಿಮ್ಮ ಸಂಗಾತಿ ಇದೇ ಭಂಗಿಯಲ್ಲಿ ಮಲಗುತ್ತೀರಿ ಎಂದಾದ್ರೆ ನೀವಿಬ್ಬರು ಅಗತ್ಯಕ್ಕಿಂತ ಹೆಚ್ಚು ಒಬ್ಬರನ್ನೊಬ್ಬರು ಅವಲಂಬಿಸಿದ್ದೀರಿ ಎಂದರ್ಥ.

ಮದುವೆಯಾದ ಹೆಣ್ಣಿನ ಮೇಲೆ ಲವ್ವಾಗೋಯ್ತು! ಮುಂದೇನು?

ಬೆನ್ನಿಗೆ ಬೆನ್ನು ಕೊಟ್ಟು ಮಲಗೋದು
ಕೆಲವರಿಗೆ ಸಂಗಾತಿಯೊಂದಿಗಿರುವಾಗಲೂ ಖಾಸಗಿತನ ಬೇಕೆನಿಸುತ್ತದೆ. ಇವರು ತಮ್ಮ ಸಂಗಾತಿಯ ಖಾಸಗಿತನಕ್ಕೂ ಗೌರವ ನೀಡುತ್ತಾರೆ. ಹೀಗಾಗಿ ಇವರು ಸಂಗಾತಿ ಬೆನ್ನಿಗೆ ತನ್ನ ಬೆನ್ನು ತಾಗಿಸಿ ಮಲಗುತ್ತಾರೆ. ಅಂದ್ರೆ ಇಬ್ಬರು ವಿರುದ್ಧ ದಿಕ್ಕಿಗೆ ಮುಖ ಮಾಡಿ ಮಲಗಿದ್ದರೂ ಅವರ ಬೆನ್ನುಗಳು ಪರಸ್ಪರ ತಾಗಿಕೊಂಡೇ ಇರುತ್ತವೆ. ಹಾಗೇ ನೋಡಿದ್ರೆ ಉಳಿದ ಭಂಗಿಗಳಿಗೆ ಹೋಲಿಸಿದ್ರೆ ಇದು ರೊಮ್ಯಾಂಟಿಕ್ ಅಲ್ಲ ಅನಿಸಬಹುದು, ಆದ್ರೆ ಸಂಬಂಧದಲ್ಲಿ ಸ್ಥಿರತೆಯನ್ನು ಸೂಚಿಸುತ್ತದೆ. ಈ ಭಂಗಿಯಲ್ಲಿ ಮಲಗೋರು ಆತ್ಮನಿರ್ಭರರು ಜೊತೆಗೆ ಸಂಗಾತಿಯ ಪ್ರೈವೆಸಿಗೂ ಗೌರವ ನೀಡುತ್ತಾರೆ ಎಂದರ್ಥ. 

ಎದೆ ಮೇಲೆ ತಲೆಯಿಟ್ಟು ಮಲಗೋದು
ಸಿನಿಮಾಗಳ ಬೆಡ್‍ರೂಮ್ ದೃಶ್ಯಗಳಲ್ಲಿ ಹೀರೋ ಎದೆ ಮೇಲೆ ಹೀರೋಯಿನ್ ತಲೆಯಿಟ್ಟುಕೊಂಡು ಮಲಗಿರೋದನ್ನು ನೋಡಿರುತ್ತೀರಿ. ತುಂಬಾ ರೊಮ್ಯಾಂಟಿಕ್ ಆಗಿ ಕಾಣಿಸೋ ಈ ಭಂಗಿಯಲ್ಲಿ ಸಂಗಾತಿಗಳು ಮಲಗೋದ್ರಿಂದ ಸುರಕ್ಷಿತ ಭಾವನೆ ಮೂಡುತ್ತದೆಯಂತೆ. 

ಕಾಲುಗಳನ್ನು ಬೆಸೆಯೋದು
ಸಂಗಾತಿಗಳು ತಮ್ಮ ಕಾಲುಗಳನ್ನು ಬೆಸೆದು ಮಲಗುತ್ತಾರೆ ಎಂದಾದ್ರೆ ಅವರಿಬ್ಬರ ಸಂಬಂಧದಲ್ಲಿ ಪ್ರೈವೆಸಿಗೆ ಹೆಚ್ಚಿನ ಮಹತ್ವವಿದೆ ಎಂದರ್ಥ. ಈ ಭಂಗಿಯಲ್ಲಿ ಕಾಲುಗಳನ್ನು ಬಿಟ್ಟು ಶರೀರದ ಇತರ ಭಾಗಗಳು ದೂರವಿರೋ ಕಾರಣ ಇಬ್ಬರಿಗೂ ಕಂಫರ್ಟ್ ಸಿಗುತ್ತದೆ. 

ಜನ್ಮ ರಾಶಿಗೂ, ಸೆಕ್ಸ್ ಭಂಗಿಗೂ ಇದೆ ಸಂಬಂಧ

ಕೈಗಳನ್ನು ಹಿಡಿದುಕೊಳ್ಳೋದು
ಸಂಗಾತಿಯ ಕೈಗಳನ್ನು ನಿಮ್ಮ ಕೈಗಳೊಂದಿಗೆ ಸೇರಿಸಿಕೊಂಡು ಮಲಗೋ ಅಭ್ಯಾಸ ನಿಮಗಿದ್ರೆ ನೀವಿಬ್ಬರು ಸದಾ ಕನೆಕ್ಟ್ ಆಗಿರಲು ಬಯಸುತ್ತೀರಿ ಎಂದರ್ಥ. ಈ ಭಂಗಿಯಲ್ಲಿ ಇಬ್ಬರೂ ಸುರಕ್ಷತೆ, ನೆಮ್ಮದಿಯ ಅನುಭವವನ್ನು ಪಡೆಯುತ್ತಾರೆ.