ಅಪ್ರಾಪ್ತರಿಗೆ ಕಾಂಡೋಮ್, ಗರ್ಭನಿರೋಧಕ ಮಾತ್ರೆ ಮಾರಾಟ ಮಾಡುವಂತಿಲ್ಲ
ಬೆಂಗಳೂರಿನ ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳ ಬ್ಯಾಗ್ ಪರಿಶೀಲನೆಗೆ ಇಳಿದ ಶಾಲಾ ಶಿಕ್ಷಕರಿಗೆ ಶಾಕ್ ಎದುರಾಗಿತ್ತು. ಹಲವು ಶಾಲಾ ಮಕ್ಕಳ ಬ್ಯಾಗ್ ಗಳಲ್ಲಿ ಕಾಂಡೋಮ್ ಹಾಗೂ ಗರ್ಭ ನಿರೋಧಕ ಮಾತ್ರೆಗಳು ಪತ್ತೆಯಾಗಿತ್ತು. ಹೀಗಾಗಿ ಔಷಧ ನಿಯಂತ್ರಣ ಇಲಾಖೆ ಹೊಸ ನಿಯಮವೊಂದನ್ನು ಜಾರಿಗೆ ತರಲು ಮುಂದಾಗಿದೆ.

ಬೆಂಗಳೂರು: ಇತ್ತೀಚೆಗೆ ಬೆಂಗಳೂರಿನ ಶಾಲೆಗಳಲ್ಲಿ ವಿದ್ಯಾರ್ಥಿಗಳ ಬ್ಯಾಗ್ ಪರಿಶೀಲನೆಗೆ ನಡೆಸುತ್ತಿದ್ದ ಸಂದರ್ಭ ಮಕ್ಕಳ ಬ್ಯಾಗ್ ಗಳಲ್ಲಿ ಕಾಂಡೋಮ್ ಹಾಗೂ ಗರ್ಭ ನಿರೋಧಕ ಮಾತ್ರೆಗಳು ಪತ್ತೆಯಾಗಿದ್ದವು. ಹೀಗಾಗಿ ಸರ್ಕಾರ 18 ವರ್ಷದೊಳಗಿನ ಮಕ್ಕಳಿಗೆ ಹೊಸ ರೂಲ್ಸ್ ಜಾರಿಗೆ ತರಲು ಮುಂದಾಗಿದೆ. ಅಪ್ರಾಪ್ತರಿಗೆ ಕಾಂಡೋಮ್ ಮತ್ತು ಗರ್ಭ ನಿರೋಧಕ ಮಾತ್ರೆ ಮಾರಾಟ ಮಾಡದಂತೆ ಎಲ್ಲ ಮೆಡಿಕಲ್ ಶಾಪ್ ಮಾಲೀಕರಿಗೆ ಔಷಧ ನಿಯಂತ್ರಣ ಇಲಾಖೆ ಖಡಕ್ ಸೂಚನೆ ನೀಡಿದೆ.
ಕೊರೋನಾದ ನಂತರ ಮಕ್ಕಳು ಹೆಚ್ಚೆಚ್ಚು ಕೆಟ್ಟ ಚಟಗಳಿಗೆ ಬಲಿಯಾಗುತ್ತಿದ್ದಾರೆ. ಹೀಗಾಗಿ ಮಕ್ಕಳ ಭವಿಷ್ಯದ ಬಗ್ಗೆ ಆರೋಗ್ಯ ಇಲಾಖೆ (Health department) ಗಮನಹರಿಸುತ್ತಿದೆ. ಶಾಲಾ ಮಕ್ಕಳು ಹಾಗೂ 18 ವರ್ಷದೊಳಗಿನ ಮಕ್ಕಳಿಗೆ ಕಾಂಡೋಮ್ ಮತ್ತು ಗರ್ಭ ನಿರೋಧಕ ಮಾತ್ರೆ (Contraceptive pills) ಸೇರಿಂದತೆ ಉತ್ತೇಜಕ ಮಾತ್ರೆಗಳನ್ನು ನೀಡಬಾರದು ಎಂದು ಸೂಚನೆ ನೀಡಲಾಗಿದೆ.
ಗರ್ಭನಿರೋಧಕ ಬಳಕೆಯಿಂದ ಪಿರಿಯಡ್ಸ್ ಮೇಲೆ ಪರಿಣಾಮ ಬೀರುತ್ತದೆಯೇ?
ಮಕ್ಕಳ ಬ್ಯಾಗ್ ತಪಾಸಣೆ ಮಾಡಿದ ಸಂದರ್ಭ ಪತ್ತೆಯಾಗಿದ್ದ ಕಾಂಡೋಮ್
ಇತ್ತೀಚೆಗೆ ಶಾಲೆಗಳಿಗೆ ಸ್ಮಾರ್ಟ್ಫೋನ್ ತರುವಂತಿಲ್ಲ ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿತ್ತು. ಹಿನ್ನೆಲೆಯಲ್ಲಿ ಶಾಲೆ ಸಿಬ್ಬಂದಿಗಳು ಮಕ್ಕಳ ಬ್ಯಾಗ್ ನ್ನು ತಪಾಸಣೆ ಮಾಡಲಾಗಿತ್ತು. ಈ ವೇಳೆ ಮಕ್ಕಳ ಬ್ಯಾಗ್ ನಲ್ಲಿ ಸೆಲ್ಫೋನ್ಗಳು, ಸ್ಮಾರ್ಟ್ಫೋನ್ಗಳು, ಜೊತೆಗೆ ಕಾಂಡೋಮ್ಗಳು, ಗರ್ಭನಿರೋಧಕ ಮಾತ್ರೆಗಳು ಪತ್ತೆಯಾಗಿತ್ತು. ಇದರಿಂದ ಶಾಲಾ ಸಿಬ್ಬಂದಿಗಳಿಗೆ ಶಾಕ್ ಆಗಿತ್ತು. ಇದಕ್ಕೆ ಕಡಿವಾಣ ಹಾಕುವ ಸಲುವಾಗಿ ಶಾಲಾ ಮಕ್ಕಳು (Children) ಹಾಗೂ 18 ವರ್ಷದೊಳಗಿನ ಮಕ್ಕಳಿಗೆ ಕಾಂಡೋಮ್ ಮತ್ತು ಗರ್ಭ ನಿರೋಧಕ ಮಾತ್ರೆ ಸೇರಿಂದಂತೆ ಉತ್ತೇಜಕ ಮಾತ್ರೆಗಳನ್ನು ನೀಡಬಾರದು ಎಂದು ಔಷದ ಮಾರಾಟಗಾರರಿಗೆ ಸೂಚನೆ ರವಾನೆ ಆಗಿದೆ.
ನವೆಂಬರ್ ಕೊನೆಯ ವಾರ ಬೆಂಗಳೂರಿನ ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳ ಬ್ಯಾಗ್ ಪರಿಶೀಲನೆಗೆ ಇಳಿದ ಶಾಲಾ ಶಿಕ್ಷಕರಿಗೆ ಶಾಕ್ ಎದುರಾಗಿತ್ತು. ಹಲವು ಶಾಲಾ ಮಕ್ಕಳ ಬ್ಯಾಗ್ ಗಳಲ್ಲಿ ಕಾಂಡೋಮ್ ಹಾಗೂ ಗರ್ಭ ನಿರೋಧಕ ಮಾತ್ರೆಗಳು ಪತ್ತೆಯಾಗಿದ್ದವು. ಇದರ ಜೊತೆಗೆ ಸಿಗರೇಟ್, ಲೈಟರ್, ಫೆವಿಕಾಲ್ ಮುಂತಾದ ವಸ್ತುಗಳು ಸಹ ಸಿಕ್ಕಿದ್ವು. 9 ಮತ್ತು 10ನೇ ತರಗತಿ ವಿದ್ಯಾರ್ಥಿ, ವಿದ್ಯಾರ್ಥಿನಿಯರ (Students) ಬ್ಯಾಗ್ ಗಳಲ್ಲಿ ಕಾಂಡೋಮ್, ಗರ್ಭ ನಿರೋಧಕ ಮಾತ್ರೆ ಪತ್ತೆಯಾಗಿದ್ದು, ಈ ಬಗ್ಗೆ ಎಚ್ಚರವಹಿಸುವಂತೆ ಶಾಲಾ ಆಡಳಿತ ಮಂಡಳಿಗಳು ಪೋಷಕರಿಗೆ (Parents) ಸೂಚನೆ ನೀಡಿದ್ದವು.
ಲೈಂಗಿಕ ಕ್ರಿಯೆ ಮಧ್ಯೆ ಕಾಂಡೋಮ್ ಹರಿಯೋದು ಕಾಮನ್, ಪ್ರೆಗ್ನೆನ್ಸಿ ತಪ್ಪಿಸಲು ಹೀಗೆ ಮಾಡಿ
ವಿದ್ಯಾರ್ಥಿಗಳು ತರಗತಿಗೆ ಸೆಲ್ ಫೋನ್ ತರುತ್ತಾರೆ ಎಂಬ ದೂರಿನ ಹಿನ್ನಲೆ ಪರಿಶೀಲನೆ
ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳು ತರಗತಿಗಳಿಗೆ ಸೆಲ್ ಫೋನ್‌ಗಳನ್ನು ತರುತ್ತಾರೆ ಎಂಬ ದೂರಿನ ಆಧಾರದಲ್ಲಿ ಅಧಿಕಾರಿಗಳು (Officers) ವಿದ್ಯಾರ್ಥಿಗಳ ಬ್ಯಾಗ್‌ಗಳನ್ನು ಪರಿಶೀಲಿಸಲು ನಿರ್ಧರಿಸಿದ್ದರು. ತರಗತಿಯೊಳಗೆ ಸೆಲ್ ಫೋನ್ ಬಳಕೆಯನ್ನು ಪರಿಶೀಲಿಸಲು ನಗರದ ಹಲವಾರು ಶಾಲೆಗಳಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಕರ್ನಾಟಕದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್‌ಗಳು (KAMS) ಸಹ ಶಾಲೆಗಳು ವಿದ್ಯಾರ್ಥಿಗಳ ಬ್ಯಾಗ್‌ಗಳನ್ನು ಪರೀಕ್ಷಿಸಿದ್ದರು. ಈ ಸಂದರ್ಭದಲ್ಲಿ ಸೆಲ್ ಫೋನ್‌ಗಳಲ್ಲದೆ, ಬ್ಯಾಗ್‌ನಲ್ಲಿ ಮೌಖಿಕ ಗರ್ಭನಿರೋಧಕಗಳು, ಲೈಟರ್‌ಗಳು, ಸಿಗರೇಟ್‌ಗಳು, ವೈಟ್‌ನರ್‌ಗಳು ಮತ್ತು 8, 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳ ಬ್ಯಾಗ್‌ಗಳಲ್ಲಿ ಹೆಚ್ಚುವರಿ ಹಣವನ್ನು ಪತ್ತೆ ಮಾಡಿದ್ದರು.
ಕೆಲವು ಶಾಲೆಗಳು ವಿಶೇಷ ಪೋಷಕ-ಶಿಕ್ಷಕರ ಸಭೆಗಳನ್ನು (Parents meeting) ನಡೆಸಿದವು. 'ಘಟನೆಯ ಬಗ್ಗೆ ತಿಳಿದು ಪೋಷಕರು ಸಹ ಅಷ್ಟೇ ಆಘಾತಕ್ಕೊಳಗಾದರು ಮತ್ತು ಮಕ್ಕಳಲ್ಲಿ ಹಠಾತ್ ವರ್ತನೆಯ ಬದಲಾವಣೆಗಳ ಬಗ್ಗೆ ನಮಗೆ ಹೇಳಿದರು' ಎಂದು ಶಾಲೆಯ ಪ್ರಾಂಶುಪಾಲರು ಹೇಳಿದರು. ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ನಿಭಾಯಿಸಲು ಶಾಲಾ ಆಡಳಿತ ಮಂಡಳಿ ಪೋಷಕರಿಗೆ ಸೂಚನೆಗಳನ್ನು ನೀಡಿತು.ವಿದ್ಯಾರ್ಥಿಗಳನ್ನು ಅಮಾನತುಗೊಳಿಸುವ ಬದಲು ಕೌನ್ಸೆಲಿಂಗ್ ಅನ್ನು ಶಿಫಾರಸು ಮಾಡಿತು. ಇದೆಲ್ಲದರ ಬೆನ್ನಲ್ಲೇ ಅಪ್ರಾಪ್ತ ಮಕ್ಕಳಿಗೆ ಕಾಂಡೋಮ್, ಗರ್ಭನಿರೋಧಕ ಮಾತ್ರೆ ಮಾರಾಟ ಮಾಡುವಂತಿಲ್ಲ ಎಂದು ಔಷಧ ನಿಯಂತ್ರಣ ಇಲಾಖೆ ಸೂಚನೆ ನೀಡಿದೆ.