ಇವತ್ತಿನ ಕಾಲೇಜು ಸ್ಟೂಡೆಂಟ್ಸ್ ಕಾಲೇಜ್ ಹೋಗೋದು ಬಿಟ್ಟು ಮತ್ತೆಲ್ಲಾ ಅವಾಂತರಗಳನ್ನು ಮಾಡಿಕೊಳ್ತಾರೆ. ಬೀಚ್‌, ಪಾರ್ಕ್, ಮಾಲ್, ಥಿಯೇಟರ್‌ಗಳಲ್ಲಿ ಕಾಣಸಿಗ್ತಾರೆ. ಹಾಗೆಯೇ ಇಲ್ಲೊಂದೆಡೆ ನಡುರಸ್ತೆಯಲ್ಲೇ ಇಬ್ಬರು ವಿದ್ಯಾರ್ಥಿನಿಯರ ಜೊತೆ ಯುವಕ ರೋಮ್ಯಾನ್ಸ್‌ ಮಾಡ್ತಿದ್ದು ಜನರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಕಾಲೇಜು ಹೋಗೋದು ಯಾಕೆ, ವಿದ್ಯಾಭ್ಯಾಸಕ್ಕಾಗಿ. ಆದ್ರೆ ಇವತ್ತಿನ ಜನರೇಷನ್‌ನ ಮಕ್ಕಳುಕಾಲೇಜಿಗೆ ಹೋಗಿ ಶಿಸ್ತಾಗಿ ಕಲಿಯುವುದನ್ನು ಬಿಟ್ಟು ಮತ್ತೆಲ್ಲಾ ಕೆಲಸಗಳನ್ನು ಮಾಡುತ್ತಿದ್ದಾರೆ. ಬೀಚ್‌, ಪಾರ್ಕ್, ಮಾಲ್, ಥಿಯೇಟರ್‌ಗಳಲ್ಲಿ ಕಾಣಸಿಗ್ತಾರೆ. ಅಷ್ಟೇ ಯಾಕೆ ಸಿಗರೇಟ್, ಡ್ರಿಂಕ್ಸ್, ಡ್ರಗ್ಸ್ ಅಂತ ಕೆಟ್ಟ ಚಟಗಳಿಗೂ ಬಲಿಯಾಗ್ತಾರೆ. ಫ್ಲರ್ಟಿಂಗ್, ಲವ್‌ ಅಂತ ಬೇರೇನೆ. ಹೆಚ್ಚಿನವರು ನಿಜವಾದ ಪ್ರೀತಿಗಿಂತ ಟೈಂ ಪಾಸ್ ಪ್ರೀತಿ ಮಾಡ್ತಾ, ಸುತ್ತಾಡ್ರಾ ಮಜಾ ಮಾಡ್ಬೇಕು ಅಂದುಕೊಳ್ತಾರೆ. ಮಾತ್ರವಲ್ಲ ಪಬ್ಲಿಕ್ ಪ್ಲೇಸ್‌ಗಳಲ್ಲಿ ಅಶ್ಲೀಲವಾಗಿ ವರ್ತಿಸುವ ವೀಡಿಯೋಗಳು ಆಗಿಂದಾಗೆ ವೈರಲ್ ಆಗುತ್ತಿರುತ್ತವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅದರಲ್ಲೂ ಡಿಜಿಟಲ್ ಮಾಧ್ಯಮ ಯುಗದಲ್ಲಿ, ಯಾವುದೇ ಸುದ್ದಿ, ಫೋಟೋ,ವೀಡಿಯೋಗಳು ಬೇಗ ವೈರಲ್ ಆಗುತ್ತವೆ. ಸಕ್ರಿಯ ಸಾಮಾಜಿಕ ಮಾಧ್ಯಮ ಬಳಕೆದಾರರು ಸಾಮಾನ್ಯವಾಗಿ ಪ್ರತಿದಿನ ವಿಭಿನ್ನ ವೀಡಿಯೊಗಳನ್ನು ನೋಡುತ್ತಾರೆ. ಕೆಲವು ತಮಾಷೆ ಮತ್ತು ಆಸಕ್ತಿದಾಯಕವಾಗಿದ್ದರೆ, ಇತರವು ಮಾಹಿತಿಯುಕ್ತ ಮತ್ತು ಆಘಾತಕಾರಿಯಾಗಿಯೂ ಇರುತ್ತದೆ. ಹಾಗೆಯೇ ನಡುರಸ್ತೆಯಲ್ಲೇ ಇಬ್ಬರು ವಿದ್ಯಾರ್ಥಿನಿಯರ ಜೊತೆ ಯುವಕ ರೋಮ್ಯಾನ್ಸ್‌ ಮಾಡ್ತಿದ ವೀಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಏನು ಮಾಯೆಯೋ.. 19ರ ತರುಣಿ ಮದ್ವೆ ಆಗಿ ರೋಮ್ಯಾನ್ಸ್‌ಗೆ ವಯಸ್ಸು ಮುಖ್ಯವಲ್ಲ ಎಂದ 70ರ ತಾತ

ಕಾಲೇಜು ಹುಡುಗನೊಬ್ಬ ಬೀದಿಗಳಲ್ಲಿ ಇಬ್ಬರು ಹುಡುಗಿಯರ ಜೊತೆ ಒಂದೇ ಬಾರಿಗೆ ರೊಮ್ಯಾನ್ಸ್ ಮಾಡುವುದನ್ನು ತೋರಿಸುವ ವೀಡಿಯೊ ವೈರಲ್ ಆಗಿದೆ. ವೀಡಿಯೋದಲ್ಲಿ, ತನ್ನ ಕಾಲೇಜು ಸಮವಸ್ತ್ರದಲ್ಲಿರುವ ಹುಡುಗನೊಬ್ಬ ಒಳರಸ್ತೆಯಲ್ಲಿ ಸ್ಕೂಟಿ ನಿಲ್ಲಿಸಿದ್ದು, ಇಬ್ಬರು ಹುಡುಗಿಯರ ಜೊತೆ ರೋಮ್ಯಾನ್ಸ್ ಮಾಡುತ್ತಾನೆ. ಸಮವಸ್ತ್ರದಲ್ಲಿರುವ ಹುಡುಗಿಯನ್ನು ತಬ್ಬಿಕೊಳ್ಳುವುದು, ಎತ್ತಿಕೊಳ್ಳುವುದನ್ನು ಮಾಡವುದನ್ನು ನೋಡಬಹುದು.

ಮೊದಲಿಗೆ ಒಬ್ಬಳು ಹುಡುಗಿಯನ್ನು ಎತ್ತಿಕೊಂಡು ಮುದ್ದಾಡುತ್ತಾನೆ. ನಂತರ ಮೊದಲ ಹುಡುಗಿಯನ್ನು ಬಿಟ್ಟು, ಹುಡುಗ ಎರಡನೆಯವಳ ಕಡೆಗೆ ತಿರುಗಿ ಅವಳನ್ನು ಹತ್ತಿರಕ್ಕೆ ಎಳೆದು ಮುದ್ದಾಡುfತತಾನೆ. ಈ ಸಂದರ್ಭದಲ್ಲಿ ಮೊದಲ ಹುಡುಗಿ ನಿಂತುಕೊಂಡು ಇಬ್ಬರನ್ನು ನೋಡುತ್ತಿರುವುದು ಕಂಡುಬರುತ್ತದೆ. ಮೂವರು ಹೀಗೆ ರೋಮ್ಯಾನ್ಸ್ ಮಾಡುವಾಗ, ಕಟ್ಟಡದ ಬಾಲ್ಕನಿಯಲ್ಲಿ ನಿಂತಿರುವ ವ್ಯಕ್ತಿಯೊಬ್ಬರು ಘಟನೆಯನ್ನು ಮೊಬೈಲ್‌ನಲ್ಲಿ ಸೆರೆಹಿಡಿಯುತ್ತಿದ್ದಾರೆ.

Relationship Tips: ಗಂಡ ಅಥವಾ ಹೆಂಡತಿ ಬೇರೆಯವರನ್ನ ಇಷ್ಟ ಪಡ್ತಿದ್ದಾರೆ ಅಂದ್ರೆ ಹೀಗೆ ಮಾಡ್ತಾರೆ

ಎರಡನೇ ಹುಡುಗಿಯನ್ನು ನೆಲಕ್ಕೆ ಇಳಿಸಿದ ನಂತರ, ಹುಡುಗ ಮೊದಲ ಹುಡುಗಿಯನ್ನು ಮೇಲಕ್ಕೆತ್ತುತ್ತಾನೆ. ಈ ಸಂದರ್ಭದಲ್ಲಿ ಯುವಕ ಬಾಲಕಿಯನ್ನು ಕೆಳಗಿಳಿಸಿದ ಕೂಡಲೇ ಕಟ್ಟಡದ ಬಾಲ್ಕನಿಯಲ್ಲಿದ್ದ ವ್ಯಕ್ತಿಯೊಬ್ಬರು ಕಾಲೇಜು ಹುಡುಗ ಹುಡುಗಿಯರ ಮೇಲೆ ಬಕೆಟ್ ನೀರನ್ನು ಸುರಿದಿದ್ದಾನೆ. ನೀರು ಎರಚಿದ ಕೂಡಲೇ ಹುಡುಗಿಯರು ಸ್ಥಳದಿಂದ ಓಡಲು ಪ್ರಾರಂಭಿಸುತ್ತಾರೆ, ಹುಡುಗ ಸ್ಕೂಟರ್ ಅನ್ನು ತಳ್ಳಿಕೊಂಡು ಓಡಿಹೋಗುತ್ತಾನೆ. ಓಡುವಾಗ ನೀರು ಸುರಿದವರು ಕಾಲೇಜು ಹುಡುಗನ ಮೇಲೆ ಚಪ್ಪಲಿ ಎಸೆದಿದ್ದಾರೆ. ಕಾಲೇಜು ಹುಡುಗ-ಹುಡುಗಿಯರ ಅಸಭ್ಯ ವರ್ತನೆಯ ಬಗ್ಗೆ ಸಿಟ್ಟಿನಿಂದ ಮಾತನಾಡುವುದನ್ನು ಕೇಳಬಹುದು.

ಸದ್ಯ ವೈರಲ್ ಆಗಿರುವ ವೀಡಿಯೋಗೆ ನೆಟ್ಟಿಗರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು 'ನಮ್ಮ ಸಂಸ್ಕೃತಿ ಎತ್ತ ಸಾಗುತ್ತಿದೆ' ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು 'ವಿದ್ಯಾರ್ಥಿಗಳು ಕಾಲೇಜು ಹೋಗುವುದು ಬಿಟ್ಟು ಇದೇನು ಮಾಡುತ್ತಿದ್ದಾರೆ' ಎಂದು ಟೀಕಿಸಿದ್ದಾರೆ. ಇನ್ನೊಬ್ಬರು 'ಇವತ್ತಿನ ಕಾಲದ ಮಕ್ಕಳನ್ನು ಪೋಷಕರು ಶಿಸ್ತಾಗಿ ಬೆಳೆಸುತ್ತಿಲ್ಲ. ಅದರ ಪರಿಣಾಮವೇ ಇಂಥಾ ವರ್ತನೆ' ಎಂದು ಟೀಕಿಸಿದ್ದಾರೆ.

ರೊಮ್ಯಾನ್ಸ್ ಕುರಿತ ಈ ವಿಷ್ಯಗಳನ್ನು ಕೇಳಿದ್ರೆ ಖುಷಿಯಾಗೋದು ಗ್ಯಾರಂಟಿ

View post on Instagram