Asianet Suvarna News Asianet Suvarna News

ಏನು ಮಾಯೆಯೋ.. 19ರ ತರುಣಿ ಮದ್ವೆ ಆಗಿ ರೋಮ್ಯಾನ್ಸ್‌ಗೆ ವಯಸ್ಸು ಮುಖ್ಯವಲ್ಲ ಎಂದ 70ರ ತಾತ

ಪಾಕಿಸ್ತಾದಲ್ಲಿ .70 ವರ್ಷದ ವೃದ್ಧನೋರ್ವನನ್ನು 19 ವರ್ಷದ ತರುಣಿಯೊಬ್ಬಳು ಮದುವೆಯಾಗಲು ಮುಂದಾಗಿದ್ದಾಳೆ.

age does not a matter for romance, 70 year old Pakistan man, who married 19 year old girl said in interview akb
Author
First Published Nov 16, 2022, 7:09 PM IST

ಕರಾಚಿ: ಇತ್ತೀಚೆಗೆ ಪಾಕಿಸ್ತಾನದಲ್ಲಿ ವೃದ್ಧರನ್ನು ಮದುವೆಯಾಗುತ್ತಿರುವ ನವ ತರುಣಿಯರ ಸಂಖ್ಯೆ ಹೆಚ್ಚಾಗುತ್ತಿದೆ. ಸ್ಪರ್ಧೆಗೆ ಬಿದ್ದಂತೆ ಎಳೆಯ ಪ್ರಾಯದ ಹೆಣ್ಣು ಮಕ್ಕಳೆಲ್ಲಾ ವೃದ್ಧರ ಪ್ರೀತಿಗೆ ಬಿದ್ದು, ಮದುವೆಯಾಗಲು ಮುಂದಾಗುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ 20 ವರ್ಷದ ಯುವತಿಯೊಬ್ಬಳು 52 ವರ್ಷದ ಶಾಲಾ ಶಿಕ್ಷಕನನ್ನು ಪ್ರೇಮಿಸಿ ಮದುವೆಯಾಗಿದ್ದಳು. ಈ ಘಟನೆ ಮಾಸುವ ಮೊದಲೇ ಇದೇ ರೀತಿ ಬಹಳ ವರ್ಷದ ವಯಸ್ಸಿನ ಅಂತರದ ಮತ್ತೊಂದು ಪ್ರೇಮ ಪ್ರಕರಣ ಬೆಳಕಿಗೆ ಬಂದಿದೆ. 70 ವರ್ಷದ ವೃದ್ಧನೋರ್ವನನ್ನು 19 ವರ್ಷದ ತರುಣಿಯೊಬ್ಬಳು ಮದುವೆಯಾಗಲು ಮುಂದಾಗಿದ್ದಾಳೆ.

ಪ್ರೇಮ ಎಂಬುದು ಕುರುಡು (Blind). ಇದು ಹಲವು ಬಾರಿ ಸಾಬೀತಾಗಿದೆ. ಅನೇಕರು ಅಂದ ಚೆಂದ ಜಾತಿ, ಬಣ್ಣ (Colour) , ಭಾಷೆ (Language) ಕುಲ, ಗೋತ್ರ ಎಲ್ಲವನ್ನು ಮರೆತು ಪ್ರೀತಿಯಲ್ಲಿ ಬಿದ್ದು, ಪ್ರೀತಿಗೆ ಕಣ್ಣಿಲ್ಲ, ಪ್ರೀತಿ ಕುರುಡು ಎಂಬುದನ್ನು ಸಾಬೀತುಪಡಿಸಿದ್ದಾರೆ. ಹಾಗೆಯೇ ಈಗ ಪಾಕಿಸ್ತಾನದಲ್ಲಿ ವಯಸ್ಸಿನ ಅಂತರವನ್ನು ಮರೆತು ಯುವತಿಯರು ತಾತನ ವಯಸ್ಸಿನ ಮುದುಕರಲ್ಲಿ ಬಾಳ ಸಂಗಾತಿಯನ್ನು ಕಾಣುತ್ತಿದ್ದಾರೆ. 

'ಪಾಕಿಸ್ತಾನದ ಮೊಗ್ಗಿನ ಮನಸು..' 52 ವರ್ಷದ ಶಿಕ್ಷಕನಿಗೆ ಮನಸ್ಸು ಕೊಟ್ಟ 20 ವರ್ಷದ ವಿದ್ಯಾರ್ಥಿನಿ!

ಆಕೆಯ ಹೆಸರು ಸುಮೈಲ ಅಲಿ (Shumaila Ali), ವಯಸ್ಸಿನ್ನು ಕೇವಲ 19, ಆಕೆಯ ಪ್ರೇಮಿಯ ಹೆಸರು ಲಿಯಾಖತ್ ಅಲಿ (Liaquat Ali) ವಯಸ್ಸು 70 ವರ್ಷ. ಈ ಇಬ್ಬರಿಗೂ ಒಬ್ಬರ ಮೇಲೊಬ್ಬರಿಗೆ ಪರಸ್ಪರ ಪ್ರೀತಿಯಾಗಿದೆ. ಅಲ್ಲದೇ ವಯಸ್ಸಿನ ಅಂತರವನ್ನು ಮರೆತು 19ರ ಸುಮೈಲಾ ತನಗಿಂತ 50 ವರ್ಷ ಹಿರಿಯರಾದ ಲಿಯಾಖತ್‌ನನ್ನು ಮದುವೆಯಾಗಿದ್ದಾಳೆ. ವಯಸ್ಸಿನ ಅಂತರದ ಕಾರಣಕ್ಕೆ ಇವರ ಪ್ರೇಮ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವುದರ ಜೊತೆಗೆ ಸುದ್ದಿ ಕೇಂದ್ರಬಿಂದುವಾಗಿದೆ. ಇವರ ಪ್ರೇಮ ಕತೆಯನ್ನು ಪಾಕಿಸ್ತಾನದ (Pakistan) ಯುಟ್ಯೂಬರ್ (YouTuber) ಸೈಯದ್ ಬಸಿತ್ ಅಲಿ (Syed Basit Ali) ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ. 

ಅಂದಹಾಗೆ ಈ ಜೋಡಿ ಮುಂಜಾನೆಯ ವಾಯುವಿಹಾರಕ್ಕೆ ತೆರಳುತ್ತಿದ್ದ ವೇಳೆ ಪರಸ್ಪರ ಭೇಟಿಯಾಗಿದ್ದಾರಂತೆ. ಮೂಲತಃ ಲಾಹೋರ್‌ನವರಾದ (Lahore) ಈ ಜೋಡಿ ದಿನವೂ ಮುಂಜಾನೆ ವಾಕ್ ಮಾಡುತ್ತಿದ್ದ ವೇಳೆ ತಾವಿಬ್ಬರು ಪರಸ್ಪರ ಭೇಟಿಯಾಗಿದ್ದು, ವಿಧಿ ನಮ್ಮನ್ನು ಇಲ್ಲಿಯವರೆಗೆ ಕರೆ ತಂದಿದೆ ಎಂದು ಹೇಳಿಕೊಂಡಿದ್ದಾರೆ. ವಾಕಿಂಗ್ ವೇಳೆ ಸುಮೈಲಾಳನ್ನು ನೋಡಿ ಮೆಚ್ಚಿಕೊಂಡ ಈ ತಾತ ಆಕೆಯನ್ನು ಇಂಪ್ರೆಸ್ ಮಾಡಲು ಹಾಡು ಹಾಡುತ್ತಿದ್ದನಂತೆ ಇದನ್ನ ಯೂಟ್ಯೂಬ್ ಸಂದರ್ಶನದಲ್ಲಿ ತಾತ ಹೇಳಿಕೊಂಡಿದ್ದಾನೆ. ತಾತನ (Grand Father) ಹಾಡಿನ ಮೋಡಿಗೆ ಮೊಮ್ಮಗಳ ವಯಸ್ಸಿನ ಹುಡುಗಿ ಮರುಳಾಗಿದ್ದು, ಡ್ಯೂಯೆಟ್ ಹಾಡೊದೊಂದು ಬಾಕಿ ನೋಡಿ. 

T20 World Cup: ಭಾರತವನ್ನು ಜಿಂಬಾಬ್ವೆ ಸೋಲಿಸಿದರೆ ನಾನು ಆ ದೇಶದವರನ್ನೇ ಮದುವೆಯಾಗ್ತೀನಿ ಎಂದ ಪಾಕ್‌ ನಟಿ..!

ಇತ್ತ ಈ ಜೋಡಿ ತಮ್ಮಿಬ್ಬರ ಪ್ರೇಮವನ್ನು ತಿಳಿದು ಮನೆಯವರು ತೀವ್ರವಾಗಿ ವಿರೋಧ ವ್ಯಕ್ತಪಡಿಸುತ್ತಾರೆ ಎಂದು ಭಾವಿಸಿದ್ದರಂತೆ. ಆದರೆ ಪೋಷಕರು ಮೊದಲಿಗೆ ಸ್ವಲ್ಪ ವಿರೋಧ ತೋರಿದರು ಅವರ ಮನವೊಲಿಸಲು ಈ ಜೋಡಿ ಯಶಸ್ವಿಯಾದರಂತೆ ಹಾಗಂತ ಯುವತಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾಳೆ. ಇದೇ ಅಭಿಪ್ರಾಯವನ್ನು 70 ವರ್ಷದ ವೃದ್ಧ ಪ್ರೇಮಿಯೂ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಬಯಸಿದ ವ್ಯಕ್ತಿಯನ್ನು ಮದುವೆಯಾಗುವ ಅವಕಾಶ ಇರಬೇಕು ಎಂದು ವೃದ್ಧ ಹೇಳಿಕೊಂಡಿದ್ದಾನೆ. ಇಷ್ಟೇ ಅಲ್ಲದೇ ರೋಮ್ಯಾನ್ಸ್ ವಿಚಾರಕ್ಕೆ ವಯಸ್ಸು ಮುಖ್ಯ ಅಲ್ಲ ಎಂದು ಹೇಳುವ ಮೂಲಕ ತಾತ ಬಾಂಬ್ ಹಾಕಿದ್ದಾನೆ. ಪ್ರಣಯದ ವಿಚಾರದಲ್ಲಿ ವಯಸ್ಸು ಒಂದು ಅಂಶವಲ್ಲ. ಪ್ರೀತಿಯ ವಿಚಾರದಲ್ಲಿ ದೊಡ್ಡವರು ಸಣ್ಣವರು ಎಂಬುದಿಲ್ಲ ಎಂದು ಆತ ಹೇಳಿಕೊಂಡಿದ್ದಾನೆ. ತಾತನ ಮಾತು ಕೇಳಿ ಗರ್ಲ್‌ಫ್ರೆಂಡ್ ಇಲ್ಲದ ಯುವಕರು ದಂಗಾಗಿದ್ದು, ಇಳಿ ವಯಸ್ಸಿನಲ್ಲಿ ತಾತನಿಗೆ ಒಲಿದ ಅದೃಷ್ಟ, ಯೌವ್ವನದಲ್ಲೂ ನಮಗಿಲ್ಲವಲ್ಲ ಎಂದು ಹಲುಬುತ್ತಿರುವುದು ಸುಳ್ಳಲ್ಲ.

Follow Us:
Download App:
  • android
  • ios