Asianet Suvarna News Asianet Suvarna News

Relationship Tips: ಗಂಡ ಅಥವಾ ಹೆಂಡತಿ ಬೇರೆಯವರನ್ನ ಇಷ್ಟ ಪಡ್ತಿದ್ದಾರೆ ಅಂದ್ರೆ ಹೀಗೆ ಮಾಡ್ತಾರೆ

ಸಂಗಾತಿ ಇನ್ನೊಬ್ಬರ ಬಗ್ಗೆ ಆಕರ್ಷಿತರಾದಾಗ ಅವರನ್ನು ದೂಷಿಸುತ್ತ, ದ್ವೇಷಿಸುತ್ತ, ಮೋಸ ಮಾಡಿದೆ ಎಂದು ಕೂಗಾಡುತ್ತಿರುವುದರಿಂದ ಲಾಭವಿಲ್ಲ. ಅವರ ವರ್ತನೆಯನ್ನು ಅರಿತು ಸೂಕ್ಷ್ಮವಾಗಿ ವರ್ತಿಸಿ, ಸಮಾಧಾನದಿಂದ ಅವರ ಮನಸ್ಸನ್ನು ಒಲಿಸಿಕೊಳ್ಳಬೇಕಾಗುತ್ತದೆ.
 

If your partner get attracted by someone they behave like this
Author
First Published Sep 24, 2022, 11:29 AM IST

ಕೆಲವೊಮ್ಮೆ ಅಂಥದ್ದು ಘಟಿಸಿಬಿಡುತ್ತದೆ. ಅದು ಭವಿಷ್ಯದಲ್ಲಾಗುವ ಅಪಾಯದ ಮುನ್ಸೂಚನೆಯೂ ಆಗಿರಬಹುದು. ಅಂತಹ ಘಟನೆಗಳನ್ನು ನಮ್ಮ ಸುತ್ತಲೂ ಸಾಕಷ್ಟು ಬಾರಿ ಕಾಣುತ್ತಿರುತ್ತೇವೆ. ಅದೇನೆಂದರೆ, ಸುಂದರವಾದ ಸಂಸಾರದಲ್ಲಿದ್ದೂ ಇನ್ನೊಂದು ಸಂಬಂಧದತ್ತ ಆಕರ್ಷಿತರಾಗುವ ದೌರ್ಬಲ್ಯದ ಮನಸ್ಥಿತಿ. ಹೌದು, ನಮ್ಮ ಸಂಗಾತಿ ಇನ್ನೊಬ್ಬರತ್ತ ಆಕರ್ಷಿತರಾದರೆ ಎಂದರೆ ಅದು ಅಪಾರ ನೋವು ನೀಡುತ್ತದೆ. ಆ ಆಕರ್ಷಣೆ ಮಿತಿ ಮೀರಿದರೆ ಜತೆಯಾಗಿ ಕಂಡ ಕನಸು ಕ್ಷಣಾರ್ಧದಲ್ಲಿ ಚೂರಾಗಬಹುದು. ಆಕರ್ಷಣೆ ಎನ್ನುವುದು ಪುರುಷ-ಸ್ತ್ರೀಯರ ನಡುವೆ ಸಹಜವಾಗಿ ಇರುವಂತಹ ಕಾಮನೆಗಳಲ್ಲಿ ಒಂದು. ಆದರೆ, ಅದು ವೈವಾಹಿಕ ಸಂಬಂಧವನ್ನು ಹಾಳುಮಾಡುವಷ್ಟು ಮಿತಿ ಮೀರಿದರೆ ಬದುಕು ಹಾಸ್ಯಾಸ್ಪದವಾಗುತ್ತದೆ. ಅದರಿಂದ ಏನೆಲ್ಲ ಸಂಭವಿಸಬಹುದು. ಲೈಂಗಿಕ ಆಸಕ್ತಿಗೆ ತಿರುಗಬಹುದು. ಸಂಗಾತಿಗೆ ಮೋಸ ಮಾಡುವ ಪರಿಪಾಠ ಆರಂಭವಾಗಬಹುದು. ಅಪರಾಧ ಚಟುವಟಿಕೆಗೂ ಪ್ರೇರೇಪಿಸಬಹುದು. ಯಾರಾದರೊಬ್ಬರ ಮೇಲೆ ಸಾದಾ ಕ್ರಶ್‌ ಉಂಟಾಗುವುದಕ್ಕೂ ಮೋಸಕ್ಕೂ ಸಂಬಂಧವಿದೆ. ಸಂಗಾತಿ ಇನ್ನೊಬ್ಬರತ್ತ ಆಕರ್ಷಿತರಾದಾಗ ಕೆಲವು ವರ್ತನೆಗಳನ್ನು ಅವರಿಗೆ ಅರಿಯದೇ ವ್ಯಕ್ತಪಡಿಸುತ್ತಿರುತ್ತಾರೆ. ಅದರ ಮೇಲೆ ಗಮನವಿಟ್ಟರೆ ಅವರ ಮನಸ್ಸಿನಲ್ಲಿ ಏನಾಗುತ್ತಿದೆ ಎನ್ನುವುದನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಆಗ ನೀವು ಎಚ್ಚೆತ್ತುಕೊಳ್ಳಲೂ ಅನುಕೂಲವಾಗುತ್ತದೆ. ಇಂತಹ ಸಮಯದಲ್ಲಿ ಕೋಪ, ಉದ್ರೇಕಗೊಳ್ಳುವುದರಿಂದ ಪ್ರಯೋಜನವಿಲ್ಲ. ಬದಲಿಗೆ, ಪ್ರೀತಿ, ವಿಶ್ವಾಸದಿಂದಲೇ ಅವರ ಆರ್ಕಷಣೆ ಗಡಿ ದಾಟದಂತೆ ನೋಡಿಕೊಳ್ಳಬೇಕಾಗುತ್ತದೆ.
ಇನ್ನೊಬ್ಬರತ್ತ ಆಕರ್ಷಿತರಾಗಿರುವ ಸಂಗಾತಿ ಈ ರೀತಿಯ ಕೆಲವು ವರ್ತನೆಗಳನ್ನು ತೋರಬಹುದು.

•    ಭಾವನಾತ್ಮಕವಾಗಿ ನಿಮ್ಮಿಂದ ದೂರವಾಗುವುದು (Emotionally Away from You)
ಪತ್ನಿ (Wife) ಅಥವಾ ಪತಿ (Husband) ನಿಮ್ಮೊಂದಿಗಿದ್ದರೂ ಭಾವನಾತ್ಮಕವಾಗಿ ನಿಮ್ಮೊಂದಿಗೆ ಇರುವುದಿಲ್ಲ. ಅವರ ಗಮನ ಬೇರೆಲ್ಲೋ ಇರುತ್ತದೆ. ಅಥವಾ ಉದ್ದೇಶಪೂರ್ವಕವಾಗಿ ನಿಮ್ಮನ್ನು ಭಾವನಾತ್ಮಕ ಪ್ರಪಂಚದಿಂದ ಹೊರಗಿಡಬಹುದು. ಅಂತರ (Gap) ನಿರ್ಮಿಸಿಕೊಳ್ಳಬಹುದು. ತೀರ ತಣ್ಣಗಿನ (Cold) ಮನಸ್ಥಿತಿಯಲ್ಲಿ ನಿಮ್ಮೊಂದಿಗೆ ಇರಬಹುದು. ಇದು ಗಮನಕ್ಕೆ ಬಂದಾಗ ಅವರಲ್ಲಾಗುವ ಏರಿಳಿತಗಳನ್ನು ಗಮನಿಸಿ, ಸೂಕ್ಷ್ಮವಾಗಿ ವರ್ತಿಸಿ. ಪುರುಷರು (Male) ಈ ವರ್ತನೆ ತೋರುವುದು ಕಡಿಮೆ. ಮಹಿಳೆಯರಲ್ಲಿ (Female) ಹೆಚ್ಚು.

ಇದನ್ನೂ ಓದಿ: ಹೆಂಡ್ತಿಯನ್ನ ಗೌರವಿಸಿ, ಸ್ಪೇಸ್ ಕೊಡಿ: ವಿವಾಹಿತರಿಗೆ ವಿಚ್ಛೇದಿತರ ಕಿವಿಮಾತು

•    ಜೀವನಶೈಲಿಯಲ್ಲಿ ಬದಲಾವಣೆ (Change in Lifestyle)
ಸಂಗಾತಿಯ (Partner) ವರ್ತನೆ (Behaviour), ಜೀವನಶೈಲಿಯಲ್ಲಿ ಏಕಾಏಕಿ ಬದಲಾವಣೆ ಕಂಡುಬಂದರೆ ಎಚ್ಚರಿಕೆ ವಹಿಸಿ. ಕಚೇರಿಯಲ್ಲಿ ಅಗತ್ಯಕ್ಕಿಂತ ಹೆಚ್ಚು ಸಮಯ ಇರಲು ಆರಂಭಿಸುವುದು, ಜಿಮ್‌ ಗೆ ಹೋಗಲು ಬೇಸರ ಪಡುವವರು ಏಕಾಏಕಿ ಖುಷಿಯಿಂದ ಜಿಮ್‌ ಗೆ ಹೋಗಲು ಆರಂಭಿಸುವುದು ಇಂತಹ ಕೆಲವು ಲಕ್ಷಣಗಳಲ್ಲಿ ಒಂದು. ಪುರುಷರು (Men) ಈ ಧೋರಣೆ ತೋರಲು ಆರಂಭಿಸಿದರೆ ಅವರಲ್ಲಿ ಜವಾಬ್ದಾರಿ, ಪ್ರೀತಿ (Love) ಹೆಚ್ಚಿಸುವಂತಹ, ತಾನು ತಪ್ಪು ಮಾಡುತ್ತಿದ್ದೇವೆ ಎನ್ನುವ ಭಾವವನ್ನು ಜಾಗೃತಗೊಳಿಸಬೇಕಾಗುತ್ತದೆ.

•    ಒಬ್ಬರೇ ಇರಲು ಇಷ್ಟಪಡುವುದು (Loneliness) 
ನಿಮ್ಮ ಪತಿಯೋ, ಪತ್ನಿಯೋ ಮನೆಯ ಕೆಲಸಗಳಲ್ಲಿ ಆಸಕ್ತಿ ಇಲ್ಲದೆ ಸಾಧ್ಯವಾದಷ್ಟು ಒಬ್ಬರೇ ಇರಲು ಇಷ್ಟಪಡುವುದು ಸಹ ಏನೋ ಬದಲಾವಣೆಯ ಸಂಕೇತ (Symbol). ಅವರು ಅವರ ಕುಟುಂಬದೊಂದಿಗೂ (Family) ಬೆರೆಯುವುದಿಲ್ಲ. ಆಕರ್ಷಣೆಗೆ ಒಳಗಾದವರಿಗಾಗಿ ನಿಮ್ಮ ಸಮಯದ ಪರಿವೆಯಿಲ್ಲದೆ ಓಡಾಡುವುದನ್ನು ಅಭ್ಯಾಸ ಮಾಡಿಕೊಂಡರೂ ಗಮನ ವಹಿಸಬೇಕು.

ಇದನ್ನೂ ಓದಿ: ಸಂಗಾತಿ ಜೊತೆ ಗಟ್ಟಿ ಸಂಬಂಧ, ನಿಭಾಯಿಸೋದು ಹೇಗೆ?

•    ನಿಮ್ಮೊಂದಿಗೆ ರೋಮ್ಯಾನ್ಸ್‌ ಮುಗಿದ ಅಧ್ಯಾಯ (End of Romantic Life)
ಉತ್ತಮ ಸಂಬಂಧವಿದ್ದಾಗ ರೋಮ್ಯಾನ್ಸ್‌ ಎನ್ನುವುದು ಜೀವನದ ಅವಿಭಾಜ್ಯ ಅಂಗವಾಗಿರುತ್ತದೆ. ಒಂದೊಮ್ಮೆ ದಂಪತಿಯ ನಡುವೆ ಬೇಸರಗಳಿದ್ದರೂ ರೋಮ್ಯಾನ್ಸ್‌ ಗೇನೂ ಕಡಿಮೆ ಇರುವುದಿಲ್ಲ. ಆದರೆ, ನಿಮ್ಮ ಸಂಗಾತಿ ಏಕಾಏಕಿ ರೋಮ್ಯಾಂಟಿಕ್‌ ಭಾವನೆಗಳನ್ನು ಕಡಿಮೆಗೊಳಿಸಿದರೆ, ಅವರ ಗಮನ ಬೇರೆಡೆ ಹರಿದಿದೆ ಎಂದರ್ಥ. ಇದು ಸಹ ಮಹಿಳೆಯರಲ್ಲಿ ಹೆಚ್ಚು ಕಂಡುಬರುವ ವರ್ತನೆ. ಪುರುಷರು ಇದಕ್ಕೆ ವಿರುದ್ಧವಾದ ವರ್ತನೆ ತೋರಬಹುದು. ಅವರು ಬೇರೊಬ್ಬರತ್ತ ಆಕರ್ಷಣೆಗೆ (Attraction) ಒಳಗಾದರೆ ಉದ್ದೇಶಪೂರ್ವಕವಾಗಿ ತಮ್ಮ ಸಂಗಾತಿಯನ್ನು ಒಲಿಸಿಕೊಳ್ಳಲು ಹೆಚ್ಚು ವಿನೋದದಿಂದ, ರೋಮ್ಯಾಂಟಿಕ್‌ ಆಗಿ ವರ್ತಿಸಲು ಯತ್ನಿಸಬಹುದು. 

Follow Us:
Download App:
  • android
  • ios