ಕಲ್ಲಿನ ಪ್ರತಿಮೆಯ ಮಡಿಲಲ್ಲಿ ಮಲಗಿ ಆಟವಾಡ್ತಿರುವ ಮಾರ್ಜಾಲ : ವಿಡಿಯೋ ವೈರಲ್
ಬೆಕ್ಕುಗಳು ತುಂಬಾ ಮುದ್ದಾಟವನ್ನು ಇಷ್ಟ ಪಡುವ ಪ್ರಾಣಿಗಳು. ಮನುಷ್ಯರನ್ನು ಅಂಟಿಕೊಂಡೆ ಇರುವ ಇವುಗಳು ಬೆಚ್ಚನೆಯ ಮಡಿಲನ್ನು ತುಂಬ ಇಷ್ಟ ಪಡುತ್ತವೆ. ನೀವು ಬೆಕ್ಕು ಪ್ರಿಯರಾದರೆ ನಿಮಗೀ ವಿಚಾರ ಗಮನಕ್ಕೆ ಬಂದಿರಬಹುದು. ಮನುಷ್ಯರಿದ್ದಲ್ಲೇ ಇರುವ ಈ ಮಾರ್ಜಾಲಗಳು ಮ್ಯಾಂವ್ ಮ್ಯಾಂವ್ ಕೂಗುತ್ತಾ ಕಾಲು ಕಾಲಿಗೆ ಸಿಗುತ್ತಾ ನಿಮ್ಮ ಹಿಂದೆ ಮುಂದೆ ಸುಳಿದಾಡುತ್ತಿರುತ್ತವೆ.
ಬೆಕ್ಕುಗಳು ತುಂಬಾ ಮುದ್ದಾಟವನ್ನು ಇಷ್ಟ ಪಡುವ ಪ್ರಾಣಿಗಳು. ಮನುಷ್ಯರನ್ನು ಅಂಟಿಕೊಂಡೆ ಇರುವ ಇವುಗಳು ಬೆಚ್ಚನೆಯ ಮಡಿಲನ್ನು ತುಂಬ ಇಷ್ಟ ಪಡುತ್ತವೆ. ನೀವು ಬೆಕ್ಕು ಪ್ರಿಯರಾದರೆ ನಿಮಗೀ ವಿಚಾರ ಗಮನಕ್ಕೆ ಬಂದಿರಬಹುದು. ಮನುಷ್ಯರಿದ್ದಲ್ಲೇ ಇರುವ ಈ ಮಾರ್ಜಾಲಗಳು ಮ್ಯಾಂವ್ ಮ್ಯಾಂವ್ ಕೂಗುತ್ತಾ ಕಾಲು ಕಾಲಿಗೆ ಸಿಗುತ್ತಾ ನಿಮ್ಮ ಹಿಂದೆ ಮುಂದೆ ಸುಳಿದಾಡುತ್ತಿರುತ್ತವೆ. ಕುಳಿತಲ್ಲಿ ತೊಡೆ ಮೇಲೆ ಬಂದು ಕೂರಲು ಮಲಗಲು ನೋಡುತ್ತವೆ. ಮಲಗಿದರೆ ನಿಮ್ಮ ಬ್ಲಾಂಕೆಟ್ ಅಡಿ ಬಂದು ಸೇರಿಕೊಳ್ಳುತ್ತವೆ. ಒಟ್ಟಿನಲ್ಲಿ ಈ ಬೆಕ್ಕುಗಳು ಮನುಷ್ಯ ಸಂಗಾತ್ಯ ಮುದ್ದಾಟವನ್ನು ಹೆಚ್ಚು ಇಷ್ಟ ಪಡುತ್ತವೆ. ಹಾಗೆಯೇ ಇಲ್ಲೊಂದು ಬೆಕ್ಕು (Cat) ಮನುಷ್ಯ (Human) ಜೋಡಿಯ ಕಲ್ಲು ಪ್ರತಿಮೆ (statue) ಮಡಿಲಲ್ಲಿ ಮಲಗಿ ತುಂಟಾಟವಾಡುತ್ತಿದ್ದು, ತನಗೆ ತಾನೇ ಬೆಕ್ಕು ಜೋಗುಳ ಹಾಡಿಕೊಳ್ಳುವಂತಿದೆ ಈ ದೃಶ್ಯ.
ಕಪ್ಪು ಕಲ್ಲಿನ ಗಂಡು ಹೆಣ್ಣಿನ ಜೋಡಿ ಪ್ರತಿಮೆಯ ತೊಡೆ ಮೇಲೆ ಮಲಗಿರುವ ಕೆಂಚು ಬಣ್ಣದ ಬೆಕ್ಕು ಅತ್ತಿತ್ತ ತಲೆಯಾಡಿಸುತ್ತಾ ತಾನು ಯಾವುದು ಮನುಷ್ಯನ ತೊಡೆ ಮೇಲೆ ಮಲಗಿರುವೆ ಎಂಬಂತೆ ಭಾವಿಸಿಕೊಳ್ಳುವಂತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆರು ಲಕ್ಷಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಬಿಟ್ಟಿಂಗ್ಬಿಡನ್ ಎಂಬ ಟ್ವಿಟ್ಟರ್ ಖಾತೆಯಿಂದ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಗಾರ್ಡನ್ (Guarden) ಒಂದರಲ್ಲಿ ಇಟ್ಟಿರುವ ಬೆಂಚಿನ ಮೇಲೆ ಜೋಡಿಯ ಕಲ್ಲು ಪ್ರತಿಮೆ ಇದೆ. ಈ ಪ್ರತಿಮೆಯಲ್ಲಿ ಹೆಣ್ಣಿನ ಪ್ರತಿಮೆಯ ಮಡಿಲಲ್ಲಿ ಮಲಗಿ ಬೆಕ್ಕು ಮುದ್ದಾಡುತ್ತಿದೆ. ಒಟ್ಟಿನಲ್ಲಿ ಈ ವಿಡಿಯೋ (video) ನೋಡುಗರನ್ನು ಭಾವುಕವಾಗಿಸಿದೆ.
ಕೆಲ ದಿನಗಳ ಹಿಂದೆ ಬೆಕ್ಕೊಂದು ಮಲಗಿರುವ ಪುಟ್ಟ ಮಗುವಿನ ಬೆನ್ನ ಮೇಲೆ ನಿಂತು ಮಗುವಿಗೆ ತನ್ನ ಕೈಗಳಿಂದ ಮಸಾಜ್ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (viral)ಆಗಿತ್ತು. ವಿಡಿಯೋದಲ್ಲಿ ಕಾಣಿಸುವಂತೆ ಹಾಲುಗಲ್ಲದ ಕೂಸನ್ನು ಹಾಸಿಗೆ ಮೇಲೆ ಮಲಗಿಸಲಾಗಿದೆ. ಪುಟ್ಟ ಮಗುವಿನ ಬೆನ್ನೇರುವ ಬೆಕ್ಕು ತನ್ನ ಕೈಗಳಿಂದ ಮಗುವಿನ ಬೆನ್ನಿಗೆ ಮಸಾಜ್ ಮಾಡುತ್ತದೆ. ಡಚ್‌ನ ಪ್ರಾಣಿ ಪ್ರಿಯರೊಬ್ಬರು ಬಿಟಿಂಗ್ ಬಿಡ್ಡೆನ್ ಎಂಬ ತಮ್ಮ ಟ್ವಿಟ್ಟರ್ (Twitter) ಖಾತೆಯಿಂದ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಮಸಾಜ್ ಟೈಮ್ ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿತ್ತು.
ಮಗುವೂ (Baby) ಕೂಡ ಯಾವುದೇ ಅಂಜಿಕೆ ಭಯ ಇಲ್ಲದೇ ಬೆಕ್ಕಿನ ಮಸಾಜ್‌ನ್ನು ಆನಂದಿಸುತ್ತದೆ. ನನ್ನ ಬೆಕ್ಕು (cat) ಮಸಾಜ್ ಮಾಡುವುದನ್ನು ಇಷ್ಟ ಪಡುತ್ತದೆ ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋವನ್ನು ಸಾಕಷ್ಟು ಜನ ಮೆಚ್ಚಿಕೊಂಡಿದ್ದಾರೆ. ಎರಡು ಸಾವಿರಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ರಿಟ್ವಿಟ್ ಮಾಡಿದ್ದಾರೆ. ಅಲ್ಲದೇ ನಮ್ಮ ಬೆಕ್ಕು ಕೂಡ ಇದೇ ರೀತಿ ಮಾಡುತ್ತದೆ ಎಂದು ಕಾಮಂಟ್‌ಗಳಲ್ಲಿ ತಿಳಿಸಿದ್ದಾರೆ. ಪ್ರಾಣಿಗಳ (Animal) ಇಂತಹ ಸಾಕಷ್ಟು ವಿಡಿಯೋಗಳು (video) ಸಾಮಾಜಿಕ ಜಾಲತಾಣಗಳಲ್ಲಿವೆ. ಇವು ನೋಡುಗರ ಮೂಡನ್ನು ಬದಲಾಯಿಸುವುದಲ್ಲದೇ ಖುಷಿ ನೀಡುತ್ತವೆ.
ಸಿಂಕ್‌ನ್ನೇ ಬಾತ್‌ಟಬ್ ಆಗಿಸಿಕೊಂಡ ಸ್ಮಾರ್ಟ್ ಬೆಕ್ಕು: ನಲ್ಲಿ ತಿರುಗಿಸಿ ಸ್ನಾನ... ವಿಡಿಯೋ
ಕೆಲ ದಿನಗಳ ಹಿಂದೆ ತುಂಟ ಬೆಕ್ಕಿನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿತ್ತು. ಇತ್ತೀಚೆಗೆ ಪ್ರಾಣಿಗಳು ಬುದ್ಧಿವಂತರಾಗಿದ್ದು, ಮನುಷ್ಯರಂತೆ ಐಷಾರಾಮಿ ಜೀವನವನ್ನು ಅವುಗಳು ಇಷ್ಟಪಡುತ್ತವೆ. ಇದು ನಿಜ ಎಂಬುದಕ್ಕೆ ಹಲವು ಸಾಕ್ಷಿಗಳಿವೆ. ಹಾಗೆಯೇ ಇಲ್ಲೊಂದು ಬೆಕ್ಕು ಕೈ ತೊಳೆಯಲು ಬಳಸುವಂತಹ ಸಿಂಕ್‌ನಲ್ಲಿ ಮಲಗಿಕೊಂಡು ಸ್ವತಃ ತಾನೇ ಕೈಯಲ್ಲಿ ನಲ್ಲಿ ತಿರುಗಿಸಿ ಸ್ನಾನ (Bath) ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬೆಕ್ಕಿನ ಸ್ಮಾರ್ಟ್‌ನೆಸ್‌ಗೆ ಎಲ್ಲರೂ ಫಿದಾ ಆಗಿದ್ದಾರೆ. ಕೈ ತೊಳೆಯುವ ಸಿಂಕ್‌ನ್ನೇ ಬೆಕ್ಕು ಬಾತ್ ಟಬ್ ಆಗಿಸಿಕೊಂಡಿದ್ದು, ಸ್ವತಃ ಅದುವೇ ನಲ್ಲಿಯನ್ನು ತಿರುಗಿಸಿಕೊಂಡು ಮೈಮೇಲೆ ನೀರು (water) ಬಿಟ್ಟುಕೊಳ್ಳುತ್ತಿರುವ ವಿಡಿಯೋ ನೋಡುಗರಿಗೆ ಸೋಜಿಗ ಉಂಟು ಮಾಡುತ್ತಿದೆ.