ಸಿಂಕ್‌ನ್ನೇ ಬಾತ್‌ಟಬ್‌ ಆಗಿಸಿಕೊಂಡ ಸ್ಮಾರ್ಟ್‌ ಬೆಕ್ಕು: ನಲ್ಲಿ ತಿರುಗಿಸಿ ಸ್ನಾನ... ವಿಡಿಯೋ

  • ಐಷಾರಾಮಿ ಜೀವನ ಇಷ್ಟ ಪಡುವ ಬೆಕ್ಕು
  • ಸಿಂಕ್‌ನ್ನೇ ಬಾತ್‌ಟಬ್‌ ಆಗಿಸಿಕೊಂಡ ಸ್ಮಾರ್ಟ್‌ ಬೆಕ್ಕು
  • ನಲ್ಲಿ ತಿರುಗಿಸಿಕೊಂಡು ಸ್ನಾನ 
Smart cat gives itself a bath by turning tap on Watch adorable video akb

ಇತ್ತೀಚೆಗೆ ಪ್ರಾಣಿಗಳು ಬುದ್ಧಿವಂತರಾಗಿದ್ದು, ಮನುಷ್ಯರಂತೆ ಐಷಾರಾಮಿ ಜೀವನವನ್ನು ಅವುಗಳು ಇಷ್ಟಪಡುತ್ತವೆ. ಇದು ನಿಜ ಎಂಬುದಕ್ಕೆ ಹಲವು ಸಾಕ್ಷಿಗಳಿವೆ. ಹಾಗೆಯೇ ಇಲ್ಲೊಂದು ಬೆಕ್ಕು ಕೈ ತೊಳೆಯಲು ಬಳಸುವಂತಹ ಸಿಂಕ್‌ನಲ್ಲಿ ಮಲಗಿಕೊಂಡು ಸ್ವತಃ ತಾನೇ ಕೈಯಲ್ಲಿ ನಲ್ಲಿ ತಿರುಗಿಸಿ ಸ್ನಾನ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಬೆಕ್ಕಿನ ಸ್ಮಾರ್ಟ್‌ನೆಸ್‌ಗೆ ಎಲ್ಲರೂ ಫಿದಾ ಆಗಿದ್ದಾರೆ. ಕೈ ತೊಳೆಯುವ ಸಿಂಕ್‌ನ್ನೇ ಬೆಕ್ಕು ಬಾತ್‌ ಟಬ್‌ ಆಗಿಸಿಕೊಂಡಿದ್ದು, ಸ್ವತಃ ಅದುವೇ ನಲ್ಲಿಯನ್ನು ತಿರುಗಿಸಿಕೊಂಡು ಮೈಮೇಲೆ ನೀರು ಬಿಟ್ಟುಕೊಳ್ಳುತ್ತಿರುವ ವಿಡಿಯೋ ನೋಡುಗರಿಗೆ ಸೋಜಿಗ ಉಂಟು ಮಾಡುತ್ತಿದೆ. 

ಹೌದು ಸ್ವಾವಲಂಬನೆ ಹಾಗೂ ಐಷಾರಾಮಿ ಜೀವನ ಕೇವಲ ಮಾನವನಿಗೆ ಸೀಮಿತವಾಗಿಲ್ಲೆ ಕೆಲವೊಮ್ಮೆ, ಸಾಕು ಬೆಕ್ಕುಗಳು ಮತ್ತು ನಾಯಿಗಳಲ್ಲಿಯೂ ಸಹ ಇದನ್ನು ಕಾಣಬಹುದು. ಇದಕ್ಕೆ ಸಾಮಾಜಿಕ ಜಾಲತಾಣವಾದ ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಲಾದ ಈ ವೀಡಿಯೊವು ಕೂಡ ಒಂದು ಉದಾಹರಣೆ. ಇಲ್ಲಿ ಬೆಕ್ಕು ತುಂಬಾ ಸ್ಮಾರ್ಟ್ ಮತ್ತು ಸ್ವತಂತ್ರವಾಗಿದ್ದು ಅದು ಯಾವುದೇ ಮಾನವ ಹಸ್ತಕ್ಷೇಪವಿಲ್ಲದೆಯೇ ಸ್ನಾನವನ್ನು ಮಾಡುತ್ತದೆ.

ತನ್ನ ಮರಿಗಳೊಂದಿಗೆ ಬೆಕ್ಕಿಗೂ ಹಾಲುಣಿಸುವ ತಾಯಿ ಶ್ವಾನ

ಐಷಾರಾಮಿ ಜೀವನ ನಡೆಸುವ ಮನುಷ್ಯರು ಬಾತ್‌ಟಬ್‌ನಲ್ಲಿ ಮಲಗಿಕೊಂಡು ಹೇಗೆ ಸ್ನಾನ ಮಾಡುತ್ತಾರೋ ಹಾಗೆಯೇ ಈ ಬೆಕ್ಕು ಬಾತ್‌ಟಬ್‌ನಲ್ಲಿ ಆರಾಮವಾಗಿ ಮಲಗಿಕೊಂಡು ಟ್ಯಾಪ್‌ ಅನ್ನು ಮಾಡಿ ಮೇಲಿನಿಂದ ಬೀಳುವ ನೀರಿಗೆ ಮೈಯೊಡ್ಡುತ್ತದೆ. ಬೆಕ್ಕಿನ ವರ್ತನೆ ನೋಡಿದರೆ ಬಹುಶಃ ಈ ಬೆಕ್ಕು ಮನೆ ಮಂದಿ ಯಾರೋ ಬಾತ್‌ಟಬ್‌ನಲ್ಲಿ ಸ್ನಾನ ಮಾಡುವುದನ್ನು ನೋಡಿದೆ ಎಂದೆನಿಸುವುದಂತು ನಿಜ. ಒಟ್ಟಿನಲ್ಲಿ ಈ ಬೆಕ್ಕು ಸೆಲೆಬ್ರಿಟಿ ರೀತಿ ವರ್ತಿಸುತ್ತಿರುವುದಂತು ನಿಜ.

ಕೇಟ್‌ ಅಲ್ಲ ಕ್ಯಾಟ್... ಟೈಟಾನಿಕ್‌ ಸಿನಿಮಾದಲ್ಲಿ ಹಿರೋಯಿನ್ ಬದಲು ಬೆಕ್ಕು... ಎಡಿಟರ್‌ ಕೈಚಳಕಕ್ಕೆ ಬೆರಗಾದ ಇಂಟರ್‌ನೆಟ್‌
 

ಮಕ್ಕಳು, ನಾಯಿ ಮರಿಗಳು, ಬೆಕ್ಕು ಮರಿಗಳು ಮುದ್ದಾಗಿ ಆಟ ಆಡುವುದನ್ನು ನೀವು ನೋಡಿರಬಹುದು. ಆದರೆ ಇಲ್ಲೊಂದು ಬೆಕ್ಕು ನಾಯಿಯೊಂದಿಗೆ ಬರೀ ಆಟವಲ್ಲ, ತುಂಟಾಟವಾಡುತ್ತಿದೆ. ನಿದ್ರಿಸಿರುವ ಶ್ವಾನವನ್ನು ಕೈಯಲ್ಲಿ ತಟ್ಟಿ ಎಳಿಸುವ ಬೆಕ್ಕು. ಅದು ಎದ್ದು ನೋಡುತ್ತಿದ್ದಂತೆ ಅದಕ್ಕೆ ಕಾಣದಂತೆ ಮಾಯವಾಗುತ್ತದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಬೆಕ್ಕಿನ ತುಂಟ ನಡೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಪ್ರಾಣಿಗಳ ವಿಡಿಯೋಗಳು ನಿಮ್ಮ ಮಾನಸಿಕ ಒತ್ತಡವನ್ನು ನಿವಾರಿಸುವಷ್ಟು ಬೇರಾವುದು ಮಾಡಲು ಸಾಧ್ಯವಿಲ್ಲ. ನಾಯಿ ಮರಿಗಳು ಆಟವಾಡುವ ಮುದ್ದಾದ ವಿಡಿಯೋ, ಬೆಕ್ಕು ಮರಿಗಳ ತುಂಟಾಟ, ಅಲ್ಲದೇ ಆನೆ ಮರಿಗಳ ಮುದ್ದು ಚೆಲ್ಲಾಟ ಎಲ್ಲವೂ, ಕಣ್ಣು ಮನಸ್ಸು ಎರಡನ್ನು ಹಗುರವಾಗಿಸುವುದರಲ್ಲಿ ಸಂಶಯವೇ ಇಲ್ಲ. ಹಾಗೆಯೇ ಇಲ್ಲಿ ಶ್ವಾನದೊಂದಿಗೆ ಬೆಕ್ಕಿನ ಕಣ್ಣಮುಚ್ಚಾಲೆಯಾಟ ಮನಸ್ಸಿಗೆ ಮುದ ನೀಡುತ್ತಿದೆ. 

ವೀಡಿಯೊದಲ್ಲಿ, ಬೆಕ್ಕು ಸ್ವಲ್ಪ ಮೋಜು ಮತ್ತು ಕಿಡಿಗೇಡಿತನ ಮಾಡಲು ನಿರ್ಧರಿಸಿದಂತಿದೆ.  ನಾಯಿಯೊಂದು ಮಂಚದ ಮೇಲೆ ಶಾಂತಿಯುತವಾಗಿ ಮಲಗಿದ್ದು, ಅಲ್ಲಿಗೆ ಬಂದ ಬೆಕ್ಕು ಮೊದಲು ತನ್ನ ಕೈಯನ್ನು ನಾಯಿಗೆ ಸ್ಪರ್ಶಿಸುವ ಮೂಲಕ ನಾಯಿಯನ್ನು ಎಚ್ಚರಗೊಳಿಸಲು ಪ್ರಯತ್ನಿಸುತ್ತದೆ ಮತ್ತು ನಂತರ ಅಷ್ಟೇ ವೇಗವಾಗಿ  ಸೋಫಾದ ಕೆಳಗೆ ಅಡಗಿಕೊಳ್ಳುತ್ತದೆ.  ಇದರ ಸ್ಪರ್ಶಕ್ಕೆ ಒಮ್ಮೆ ತಲೆ ಮೇಲೆತ್ತಿದ ನಾಯಿ ಮತ್ತೆ ಅಲ್ಲೇ ಮಲಗುತ್ತದೆ. ಇತ್ತ ನಾಯಿ ಎಚ್ಚರಗೊಂಡಿದ್ದನ್ನು ಕುತೂಹಲದಿಂದ ಕದ್ದು ನೋಡುವ ಬೆಕ್ಕು ಅದು ಏಳುತ್ತಿದ್ದಂತೆ ಸೋಪಾದ ಕೆಳಗೆ ಅಡಗಿಕೊಳ್ಳುತ್ತದೆ. ಅಲ್ಲದೇ ಮತ್ತದೆ ತನ್ನ ತುಂಟಾಟವನ್ನು ಮುಂದುವರಿಸುತ್ತದೆ. ಎರಡನೇ ಬಾರಿ ಬೆಕ್ಕು ಇದೇ ರೀತಿ ಮಾಡಿದಾಗ ಎದ್ದ ನಾಯಿ ತನ್ನನ್ನು ಮುಟ್ಟಿದ್ಯಾರು ಎಂದು ಅಚ್ಚರಿಯಿಂದ ನೋಡಲು ಶುರು ಮಾಡುತ್ತದೆ. 

Latest Videos
Follow Us:
Download App:
  • android
  • ios