ಕೇಟ್ ಅಲ್ಲ ಕ್ಯಾಟ್... ಟೈಟಾನಿಕ್ ಸಿನಿಮಾದಲ್ಲಿ ಹಿರೋಯಿನ್ ಬದಲು ಬೆಕ್ಕು... ಎಡಿಟರ್ ಕೈಚಳಕಕ್ಕೆ ಬೆರಗಾದ ಇಂಟರ್‌ನೆಟ್
- ಇಂಟರ್‌ನೆಟ್‌ನಲ್ಲಿ ಫೋಟೋಶಾಪರ್‌ಗಳ ಕೈಚಳಕ
- ಫೋಟೋ ಶಾಪ್ ಮಾಡಿ ಟೈಟಾನಿಕ್ ಸಿನಿಮಾವನ್ನೇ ಬದಲಿಸಿದರು
- ನಟಿ ಕೇಟ್ ವಿನ್ಸ್ಲೆಟ್ ಜಾಗದಲ್ಲಿ ಬೆಕ್ಕನ್ನು ತಂದು ಕೂರಿಸಿದರು.
ಟೈಟಾನಿಕ್ ಸಿನಿಮಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. 90ರ ದಶಕದ ಅತ್ಯಂತ ಸೂಪರ್‌ಹಿಟ್ ಸಿನಿಮಾವದು. ಲಿಯೊನಾರ್ಡೊ ಡಿಕಾಪ್ರಿಯೊ ಮತ್ತು ಕೇಟ್ ವಿನ್ಸ್ಲೆಟ್ ನಟಿಸಿದ 1998 ರ ಸೂಪರ್ ಹಿಟ್ ಚಲನಚಿತ್ರ ಟೈಟಾನಿಕ್ ಹಾಲಿವುಡ್‌ನ ಅತ್ಯಂತ ಗಮನಾರ್ಹವಾದ ರೋಮ್ಯಾಂಟಿಕ್ ಚಲನಚಿತ್ರಗಳಲ್ಲಿ ಒಂದಾಗಿದೆ. ಕೇಟ್ ವಿನ್ಸ್ಲೆಟ್ (Kate Winslet) ಅವರ ಮುಗ್ಧ ಪಾತ್ರವಾಗಲಿ ಅಥವಾ ಲಿಯೊನಾರ್ಡೊ ಡಿಕಾಪ್ರಿಯೊ (Leonardo DiCaprio) ಅವರ ನಿರಾತಂಕದ ಪಾತ್ರವಾದ ಜ್ಯಾಕ್ ಡಾಸನ್ (Jack Dawson) ಆಗಿರಲಿ ಎಲ್ಲವೂ ಈ ಸಿನಿಮಾದ ಹೈಲೈಟ್‌ಗಲೇ ಆಗಿದ್ದು, ಈ ಚಲನಚಿತ್ರವು ಒಂದು ಮೇರುಕೃತಿಯಾಗಿದೆ.
ಇದು 1912 ರಲ್ಲಿ ಸಮುದ್ರದಲ್ಲಿ ಮುಳುಗಿದ ದುರದೃಷ್ಟಕರ ಐಷಾರಾಮಿ ಹಡಗು ಟೈಟಾನಿಕ್ ದುರಂತ ಕಥೆಯನ್ನು ಆಧರಿಸಿದ ಸಿನಿಮಾವಾಗಿದೆ. ಈಗ ಆದೆಲ್ಲಾ ಪಕ್ಕಕ್ಕಿರಲಿ. ಈಗ ನಮ್ಮ ಇಂಟರ್‌ನೆಟ್‌ನ ಫೋಟೋಶಾಪ್ ಪ್ರತಿಭೆಗಳ ಬಗ್ಗೆ ಇಲ್ಲಿ ತಿಳಿಸಲೇಬೇಕು. ಈ ಟೈಟಾನಿಕ್ ಸಿನಿಮಾದ ಕೆಲವು ದೃಶ್ಯಗಳಲ್ಲಿ ನಟಿ ಕಾಮ್ ಸಿನಿಮಾದ ಹಿರೋಯಿನ್ ಕೇಟ್ ವಿನ್ಸ್ಲೆಟ್ ಬದಲಾಗಿ ಇಲ್ಲಿ ಎಡಿಟರ್ ಬೆಕ್ಕನ್ನು ತಂದು ಕೂರಿಸಿದ್ದಾರೆ. ಇಂಟರ್‌ನೆಟ್‌ನಲ್ಲಿ ಔಲ್‌ಕಿಟ್ಟಿ (OwlKitty) ಎಂದೇ ಖ್ಯಾತಿಗಳಿಸಿರುವ ಪ್ರಸಿದ್ಧ ಬೆಕ್ಕು ಲಿಜ್ಜಿಯನ್ನು ಹಿರೋಯಿನ್ ಜಾಗಕ್ಕೆ ಫೋಟೋಶಾಪ್ ಮಾಡುವ ಮೂಲಕ ಈ ಸಿನಿಮಾವನ್ನುಇನ್ನೊಂದು ಹಂತಕ್ಕೆ ಕೊಂಡೊಯ್ಯಲಾಗಿದೆ.
ಟೈಟಾನಿಕ್ ನಟಿ ಕೇಟ್ ಮುಳುಗಿದ್ದು ಸಮುದ್ರದಲ್ಲಲ್ಲ ಬಾತ್‌ಟಬ್ ಒಳಗೆ!
ಈ ಎಡಿಟೆಟ್ ವಿಡಿಯೋ ಪರಿಪೂರ್ಣವಾಗಿದ್ದು, ಎಲ್ಲೂ ಫೋಟೋಶಾಪ್ ಮಾಡಿದಂತೆ ಕಾಣುತ್ತಿಲ್ಲ. ಯೂಟ್ಯೂಬ್ ಚಾನೆಲ್ OwlKitty ಈ ವಿಡಿಯೋ ಪೋಸ್ಟ್ ಮಾಡಿದ್ದು, ಲಿಜ್ಜಿ ಬೆಕ್ಕು ಇರುವ ಟೈಟಾನಿಕ್ ಟ್ರೈಲರ್ ಅನ್ನು ತೋರಿಸುತ್ತದೆ. ಯೂಟ್ಯೂಬ್ ಚಾನೆಲ್ OwlKitty ಯಲ್ಲಿ ಹಂಚಿಕೊಳ್ಳಲಾದ ವೀಡಿಯೊ, ಕೇಟ್ ವಿನ್ಸ್ಲೆಟ್ ಬದಲಿಗೆ ಬೆಕ್ಕು ಲಿಜ್ಜಿ ಇರುವ ಚಿತ್ರದ ಟ್ರೈಲರ್ ಅನ್ನು ತೋರಿಸುತ್ತದೆ. ಈ ಟ್ರೇಲರ್ ಚಲನಚಿತ್ರದ ಕೆಲವು ಪ್ರಮುಖ ದೃಶ್ಯಗಳ ತುಣಕನ್ನು ನೀಡುತ್ತದೆ., ಡ್ಯಾನ್ಸಿಂಗ್ ದೃಶ್ಯ, ಭಾವಚಿತ್ರ ಪೇಂಟಿಂಗ್ ದೃಶ್ಯ ಹಾಗೂ ದುರಂತ ಅಂತ್ಯದ ದೃಶ್ಯವೂ ಇದರಲ್ಲಿದೆ. ಡೈಲಿಮೇಲ್‌ನ ವರದಿಯ ಪ್ರಕಾರ, ಯೂಟ್ಯೂಬರ್‌ಗಳಾದ ಥಿಬಾಲ್ಟ್ ಚಾರ್ರೊಪಿನ್(Thibault Charroppin) ಮತ್ತು ಒಲಿವಿಯಾ ಬೂನ್ (Olivia Boone) ಅವರು ವಿಶೇಷವಾಗಿ ಪ್ರೇಮಿಗಳ ದಿನದಂದು ವೀಡಿಯೊವನ್ನು ಮಾಡಿದ್ದಾರೆ.
ವಿಡಿಯೋವನ್ನು ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದು ಸಾವಿರಾರು ಜನ ಕಾಮೆಂಟ್ ಮಾಡಿದ್ದಾರೆ. ಈ ಬೆಕ್ಕು ಲಿಜಿ ಸಿನಿಮಾದಲ್ಲಿ ನಟಿಸುತ್ತಿರುವುದು ಇದೇ ಮೊದಲಲ್ಲ. ಉದ್ದ ಕೂದಲಿನ ಈ ಕಪ್ಪು ಬೆಕ್ಕನ್ನು ದಿ ಅವೆಂಜರ್ಸ್ (The Avengers), ಜುರಾಸಿಕ್ ಪಾರ್ಕ್ (Jurassic Park), ಪಲ್ಪ್ ಫಿಕ್ಷನ್ ( Pulp Fiction), ಜಾಸ್ ಮತ್ತು ದಿ ಶೈನಿಂಗ್‌ನಂತಹ ಹಲವಾರು ಬ್ಲಾಕ್‌ಬಸ್ಟರ್ ಚಲನಚಿತ್ರಗಳ ದೃಶ್ಯಗಳಲ್ಲಿ ಫೋಟೋಶಾಪ್ ಮಾಡಲಾಗಿದೆ.
ಕಾವೇರಿ ಕೂಗು ಅಭಿಯಾನಕ್ಕೆ ಟೈಟಾನಿಕ್ ಹೀರೋ ಡಿಕ್ಯಾಪ್ರಿಯೋ ಬೆಂಬಲ!
25 ವರ್ಷಗಳ ಹಿಂದೆ ಟೈಟಾನಿಕ್ ಚಿತ್ರ ಕೇಟ್‌ರನ್ನು ರಾತ್ರೋರಾತ್ರಿ ಸ್ಟಾರ್ ಮಾಡಿತು. ಈ ಸಿನಿಮಾದ ಬಗ್ಗೆ ಕೆಲವು ಇಂಟರೆಸ್ಟಿಂಗ್ facts ಇಲ್ಲಿವೆ. ಜೇಮ್ಸ್ ಕ್ಯಾಮರೂನ್ ನಿರ್ದೇಶನದ ಟೈಟಾನಿಕ್ ಚಿತ್ರ 70ನೇ ಅಕಾಡೆಮಿ ಆವಾರ್ಡ್‌ಗಳಲ್ಲಿ 14 ನಾಮೀನೇಷನ್ ಪಡೆಯಿತು. ಈ ಚಿತ್ರವು ಬೆಸ್ಟ್ ಫಿಲ್ಮಂ ಹಾಗೂ ಬೆಸ್ಟ್ ಡೈರೆಕ್ಟರ್ ಸೇರಿ 11 ಪ್ರಶಸ್ತಿಗಳನ್ನು ಗೆದ್ದಿದೆ. 25 ವರ್ಷಗಳ ಹಿಂದೆ ಬಿಡುಗಡೆಯಾದ ಹಾಲಿವುಡ್‌ನ ಈ ರೊಮ್ಯಾಂಟಿಕ್ ಸಿನಿಮಾದಲ್ಲಿ ಲಿಯೊನಾರ್ಡೊ ಡಿಕಾಪ್ರಿಯೊ ಕೇಟ್ ಜೊತೆ ಮುಖ್ಯ ಪಾತ್ರದಲ್ಲಿದ್ದರು. ಅಂದಹಾಗೆ, ಚಿತ್ರದಲ್ಲಿ ಕೇಟ್ ಮುಳುಗುವ ದೃಶ್ಯವನ್ನು ಸಮುದ್ರದಲ್ಲಿ ಶೂಟ್ ಮಾಡಿದಲ್ಲ.
ಹೌದು ಟೈಟಾನಿಕ್‌ನ ನಾಯಕಿ ರೋಸ್ ಮುಳುಗುವ ಸೀನ್ ಸಮುದ್ರದಲ್ಲಿ ಚಿತ್ರಿಕರಿಸಿಲ್ಲ ಬದಲಿಗೆ ಬಾತ್‌ಟಬ್‌ನಲ್ಲಿ ಶೂಟ್ ಮಾಡಲಾಯಿತಂತೆ. 1333 ಕೋಟಿ ರೂ.ಗಳ ಬಜೆಟ್‌ನಲ್ಲಿ ನಿರ್ಮಿಸಲಾದ 'ಟೈಟಾನಿಕ್' ಸಿನಿಮಾದ ಚಿತ್ರೀಕರಣವು ತಾರೆಯರಿಗೆ ಬಹಳ ಕಷ್ಟದ ಕೆಲಸವಾಗಿತ್ತು. ಚಿತ್ರದ ಸ್ಟಾರ್ ಕಾಸ್ಟ್ ಮತ್ತು ಸಿಬ್ಬಂದಿ ಹಲವು ತಿಂಗಳ ಕಾಲ ನೀರೊಳಗೆ ಚಿತ್ರೀಕರಣ ಮಾಡಬೇಕಾಯಿತು.