Pregnancy Myth-Busting: ಸೆಕ್ಸ್ ನಂತರ ಮೂತ್ರ ಮಾಡಿದರೆ ಗರ್ಭಧಾರಣೆ ತಡೆಯಬಹುದಾ?
ಸೆಕ್ಸ್ ನಂತರ ಮೂತ್ರ ಮಾಡುವುದು ಗರ್ಭಧಾರಣೆ ತಡೆಯುವ ಒಂದು ವಿಧಾನ ಎಂಬ ನಂಬಿಕೆ ಬಹಳ ಮಂದಿಯಲ್ಲಿ ಇದೆ. ಇದು ನಿಜವಾ?
ಪ್ರಶ್ನೆ: ನಾನು 23 ವರ್ಷ ಪ್ರಾಯದ ಯುವಕ. ನನಗೆ 22 ವರ್ಷದ ಗೆಳತಿ ಇದ್ದಾಳೆ. ಮದುವೆಯಾಗಿಲ್ಲ. ಎರಡು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದೇವೆ. ಇತ್ತೀಚೆಗೆ ನಾವಿಬ್ಬರೂ ಮೊದಲ ಬಾರಿಗೆ ಸಂಭೋಗಿಸಿದೆವು. ಅಂದಿಗೆ ಆಕೆಯ ಪೀರಿಯೆಡ್ಸ್ (Periods) ಆಗಿ ಹತ್ತು ದಿನಗಳು ಕಳೆದಿದ್ದವು. ಆದರೆ ಸಂಭೋಗಿಸಿದ (Sex) ನಂತರ ಮೂತ್ರ (Urinate) ಮಾಡಿದಳು. ಮೂತ್ರದಲ್ಲಿರುವ ಯೂರಿಕ್ ಆಸಿಡ್, ವೀರ್ಯವನ್ನು (semen) ನಾಶ ಮಾಡುತ್ತದೆ ಹಾಗೂ ಪ್ರೆಗ್ನೆಂಟ್ (Pregnant) ಆಗುವ ಚಾನ್ಸ್ ಇಲ್ಲ ಎಂಬುದು ಆಕೆಯ ನಂಬಿಕೆ. ಆದರೆ ನನಗೆ ಆ ಬಗ್ಗೆ ಇನ್ನೂ ಅನುಮಾನವಿದೆ. ಆಕೆ ಪ್ರೆಗ್ನೆನ್ಸಿ ಪಿಲ್ ತೆಗೆದುಕೊಳ್ಳಬೇಕೆ?
ಉತ್ತರ: ಇದೊಂದು ಜನಪ್ರಿಯ ತಪ್ಪು ಗ್ರಹಿಕೆ. ಸಂಭೋಗದ ನಂತರ ಮೂತ್ರ ಮಾಡಿದರೆ ಯೋನಿ (Vagina) ಯಲ್ಲಿರುವ ವೀರ್ಯವೆಲ್ಲ ಹೊರಗೆ ಹೋಗಿ, ಗರ್ಭಧಾರಣೆ ಆಗುವ ಚಾನ್ಸ್ ತಪ್ಪುತ್ತದೆ ಅನ್ನುವುದು ತಪ್ಪು ತಿಳುವಳಿಕೆ. ಯಾಕೆಂದರೆ ಯೋನಿಯಲ್ಲಿ ಎರಡು ಪ್ರತ್ಯೇಕ ದ್ವಾರಗಳಿರುತ್ತವೆ. ವೀರ್ಯ ಒಳಹೋಗಿ ಗರ್ಭವನ್ನು ಸೇರುವ ದ್ವಾರವೇ ಬೇರೆ. ಮೂತ್ರವು ಮೂತ್ರಚೀಲದಿಂದ ಹೊರಗೆ ಬರುವ ದ್ವಾರವೇ ಬೇರೆ. ಎರಡೂ ಸಂಧಿಸಲು ಸಾಧ್ಯವೇ ಇಲ್ಲ. ಹಾಗೆಯೇ ಶಿಶ್ನದಿಂದ (Penis) ಹೊರಚಿಮ್ಮುವ ವೀರ್ಯವು (semen) ಬಲುವೇಗವಾಗಿ ಯೋನಿಯ ಒಳಗೆ ಸಾಗಿಬಿಟ್ಟಿರುತ್ತದೆ. ವೀರ್ಯದ ಕಣಗಳು ಎಷ್ಟು ಸ್ಪೀಡಾಗಿರುತ್ತವೆ ಎಂದರೆ, ಅಂಡವನ್ನು ಸೇರಲು ತಾನು ಮುಂದು ನಾನು ಮುಂದು ಎಂದು ಧಾವಿಸುತ್ತಾ ಇರುತ್ತವೆ. ಯಾಕೆಂದರೆ ಹೊಸ ಜೀವದ ಸೃಷ್ಟಿ ತನ್ನಿಂದಲೇ ಆಗಬೇಕು ಎಂಬ ಜೈವಿಕ ಆತುರ ಇವುಗಳಲ್ಲಿರುತ್ತದೆ. ಹೀಗಾಗಿ, ಶಿಶ್ನದಿಂದ ಹೊರಬಂದ ವೀರ್ಯವೆಲ್ಲಾ ಯೋನಿಯ ಹೊರಭಾಗದಲ್ಲೇ ನಿಂತಿರುವುದಿಲ್ಲ. ಸೆಕ್ಸ್ ಮುಗಿಸಿ ಸ್ತ್ರೀ ಎದ್ದು ವಾಷ್‌ರೂಮಿಗೆ ಹೋಗುವ ಅತ್ಯಲ್ಪ ಕಾಲದಲ್ಲೇ ಕೆಲವೇ ಸೆಕೆಂಡ್‌ಗಳಲ್ಲೇ ವೀರ್ಯ ಕಣಗಳು ತಮ್ಮ ಗುರಿಯನ್ನು ತಲುಪಿಬಿಟ್ಟಿರುತ್ತವೆ. ಆದ್ದರಿಂದ ಮೂತ್ರ ಮಾಡಿ ವೀರ್ಯವನ್ನು ಹೊರಹಾಕುವುದು ಅಸಂಭವನೀಯ.
ಇನ್ನು ನಿಮ್ಮ ವಿಚಾರ. ನಿಮ್ಮ ಸಂಭೋಗ ಆಕೆಯ ಪೀರಿಯೆಡ್ಸ್ ಮುಗಿದು ಹತ್ತು ದಿನಗಳಲ್ಲಿ ಆಗಿರುವುದರಿಂದ, ಖಂಡಿತವಾಗಿಯೂ ಗರ್ಭಧಾರಣೆಯ ಛಾನ್ಸ್ ಇದ್ದೇ ಇದೆ. ಅದು ನಡೆದು ಇನ್ನೂ ಎಪ್ಪತ್ತೆರಡು ಗಂಟೆಗಳಾಗಿಲ್ಲ ಎಂದಿದ್ದರೆ, ನಿಮ್ಮ ಗೆಳತಿ ಗರ್ಭತಡೆ ಪಿಲ್‌ಗಳನ್ನು ಸೇವಿಸಬಹುದು. ೭೨ ಗಂಟೆ ಕಳೆದಿದ್ದರೆ, ಸ್ತ್ರೀ ತಜ್ಞರಲ್ಲಿಗೆ ತೆರಳುವುದು ಹಾಗೂ ಮುಂದಿನ ಹೆಜ್ಜೆ ತೆಗೆದುಕೊಳ್ಳುವುದು ಅಗತ್ಯ. ಮುಂದಿನ ಸಲ ಹೆಚ್ಚು ಎಚ್ಚರಿಕೆ ವಹಿಸಿ.
#Feelfree: ನನ್ನ ಸ್ತನಗಳು ಜೋತು ಬೀಳುತ್ತಿವೆ, ಇದಕ್ಕೆ ಪರಿಹಾರ ಇದೆಯಾ?
ಪ್ರಶ್ನೆ: ನಾನು ಮೂವತ್ತು ವರ್ಷದ ಪುರುಷ. ಆದರೆ ನನಗೆ ಸ್ತ್ರೀಯರ ಬ್ರಾ, ಒಳಚಡ್ಡಿ ಧರಿಸಿಕೊಳ್ಳುವುದು ಇಷ್ಟ. ಇದನ್ನು ನನ್ನ ಹೆಂಡತಿಯೂ ಇಷ್ಟಪಡುತ್ತಾಳೆ. ನಾನು ಬ್ರಾ (bra) ಧರಿಸಿದಾಗ ಆಕೆಗೂ ಹೆಚ್ಚಿನ ಕಾಮೋದ್ರೇಕ ಉಂಟಾಗುತ್ತದೆ ಮತ್ತು ನಾವಿಬ್ಬರೂ ಸೆಕ್ಸ್‌ನಲ್ಲಿ ಹೆಚ್ಚು ಸಂತೋಷಪಡುತ್ತೇವೆ. ಇತ್ತೀಚೆಗೆ ಆಕೆ ನನಗೆ ಪೂರ್ತಿಯಾಗಿ ಸ್ತ್ರೀಯಂತೆ ಡ್ರೆಸ್ ಮಾಡಿಕೊಳ್ಳುವಂತೆ, ಮೇಕಪ್ ಮಾಡಿಕೊಳ್ಳುವಂತೆ ಹೇಳುತ್ತಿದ್ದಾಳೆ. ಆಕೆ ಪುರುಷರಂತೆ ಡ್ರೆಸ್ ಮಾಡಿಕೊಂಡಿದ್ದರೆ ನನಗೆ ಹೆಚ್ಚು ಕಾಮೋದ್ರೇಕವಾಗುವುದನ್ನು ಗಮನಿಸಿದ್ದೇನೆ. ನಮ್ಮಿಬ್ಬರ ಸೆಕ್ಸ್ ಆದ್ಯತೆಗಳು ಬದಲಾಗುತ್ತಿರುವುದೇಕೆ? ಇದರಿಂದ ಮುಂಧೆ ಏನಾದರೂ ಆತಂಕವಿದೆಯಾ?
ಉತ್ತರ: ಯಾವ ಆತಂಕವೂ ಇಲ್ಲ. ನಿಮ್ಮ ಬೆಡ್‌ರೂಮ್ ಕ್ರಿಯೆಗಳು ನಿಮಗೆ ಸುಖ ನೀಡುತ್ತಿದೆ ಎಂದಾದರೆ ಇತರ ವಿಚಾರಗಳನ್ನು ನೀವು ಚಿಂತಿಸುವ ಅಗತ್ಯವೇ ಇಲ್ಲ. ಇದರಿಂದ ನಿಮ್ಮ ಲಿಂಗತ್ವದಲ್ಲಿ ವ್ಯತ್ಯಾಸವಿದೆ ಎಂದೂ ಭಾವಿಸುವ ಅಗತ್ಯವಿಲ್ಲ. ಆರೋಗ್ಯಕರ ಸೆಕ್ಸ್‌ನಲ್ಲಿ ಇಂಥ ಫ್ಯಾಂಟಸಿಗಳು, ರೋಲ್ ಪ್ಲೇಗಳು ಸ್ವಾಭಾವಿಕ. ಅಂದ ಹಾಗೆ, ನೀವು ಬಳಸುವ ಬ್ರಾ ನಿಮ್ಮದೇನಾ ಅಥವಾ ನಿಮ್ಮ ಹೆಂಡತಿಯದ್ದಾ!?
Feelfree: ರೂಮ್‌ಮೇಟ್ ಬಾಯ್‌ಫ್ರೆಂಡ್ ಮೇಲೆ ಅಟ್ರಾಕ್ಷನ್! ಏನು ಮಾಡಲಿ?