Asianet Suvarna News Asianet Suvarna News

#Feelfree: ನನ್ನ ಸ್ತನಗಳು ಜೋತು ಬೀಳುತ್ತಿವೆ, ಇದಕ್ಕೆ ಪರಿಹಾರ ಇದೆಯಾ?

ನನ್ನ ಸ್ತನಗಳು ಜೋತು ಬೀಳುತ್ತಿವೆ, ಅದರಿಂದ ನಾನು ಆಕರ್ಷಣೆ ಕಳೆದುಕೊಳ್ಳುತ್ತಿದ್ದೇನೆ ಅನಿಸುತ್ತಿದೆ. ನಾನು ಮೊದಲಿನ ಆಕರ್ಷಣೆ ಉಳಿಸಿಕೊಳ್ಳುವುದು ಹೇಗೆ?

Woma worried about her sagging breasts and solution here
Author
Bengaluru, First Published Aug 22, 2021, 1:51 PM IST
  • Facebook
  • Twitter
  • Whatsapp

ಪ್ರಶ್ನೆ: ನನ್ನ ವಯಸ್ಸು ಮೂವತ್ತೈದು. ವಿವಾಹಿತೆ. ಮದುವೆಯಾಗಿ ಹತ್ತು ವರ್ಷಗಳಾಗಿವೆ. ಇಬ್ಬರು ಮಕ್ಕಳಿದ್ದಾರೆ. ಮಕ್ಕಳಿಬ್ಬರೂ ಶಾಲೆಗೆ ಹೋಗುತ್ತಿದ್ದಾರೆ. ಗಂಡನಿಗೆ ನಲುವತ್ತು ವರ್ಷ. ನನ್ನ ಮತ್ತು ಗಂಡನ ಸೆಕ್ಸ್ ಲೈಫು ಸಾಮಾನ್ಯವಾಗಿ ಹೇಗಿರಬೇಕೋ ಹಾಗಿದೆ. ಅಂದರೆ ಸುಮಾರಾಗಿ ವಾರಕ್ಕೊಮ್ಮೆ ಸೇರುತ್ತೇವೆ. ಕೆಲವೊಮ್ಮೆ ಹೊರಗೆ ಹೋದಾಗ ವಾರಕ್ಕೆ ಎರಡು ಬಾರಿ ಸೇರಿದ್ದೂ ಇದೆ. ಗಂಡನಿಗೆ ಇತ್ತೀಚೆಗೆ ಶೀಘ್ರಸ್ಖಲನ ಆರಂಭವಾಗಿದೆ. ನಾನೇ ಮೊದಲು ಆತನಿಗೆ ಹಸ್ತಮೈಥುನ ಮಾಡಿ, ಎರಡನೇ ಬಾರಿ ಅವರ ಮೇಲೆ ಬಂದು ಸಂಘರ್ಷಿಸಿ ನನಗೆ ತೃಪ್ತಿ ಆಗುವಂತೆ ಮಾಡಿಕೊಳ್ಳುತ್ತೇನೆ. ಆದರೆ ಇತ್ತೀಚೆಗೆ ನನ್ನ ಮೇಲೆ ಅವರಿಗೆ ಮೊದಲಿನ ಅಕರ್ಷಣೆ ಇಲ್ಲವೇನೋ ಅನಿಸುತ್ತಿದೆ. ಇತ್ತೀಚೆಗೆ ನನ್ನ ಎದೆಯನ್ನು ನಾನು ಕನ್ನಡಿಯಲ್ಲಿ ವಿವರವಾಗಿ ನೋಡಿಕೊಂಡಾಗ, ನನ್ನ ಸ್ತನಗಳು ಮೊದಲಿಗಿಂತ ಸ್ವಲ್ಪ ಇಳಿಬಿದ್ದಿವೆ ಅನಿಸಿತು. ಇದರಿಂದಾಗಿಯೇ ಗಂಡ ನನ್ನಲ್ಲಿ ಆಕರ್ಷಣೆ ಕಳೆದುಕೊಂಡಿರಬಹುದು ಅನ್ನಿಸಿ ಒಂಥರಾ ಕೀಳರಿಮೆ ಶುರುವಾಗಿದೆ. ಈ ಬಗ್ಗೆ ನಾನು ಗಂಡನಲ್ಲಿ ಮಾತನಾಡಿಲ್ಲ; ಅವರ ನೈಜ ಅನಿಸಿಕೆ ನನಗೆ ಗೊತ್ತಿಲ್ಲ. ಆದರೆ ನಾನು ನನ್ನ ಸ್ತನಗಳನ್ನು ಮೊದಲಿನಂತೆ ಬಿಗಿಯಾಗಿ ಇಟ್ಟುಕೊಂಡು ಆಕರ್ಷಣೆ ಉಳಿಸಿಕೊಳ್ಳಬೇಕು ಅಂತಾ ನನಗೆ ಬಲವಾಗಿ ಅನಿಸುತ್ತಿದೆ. ಇದಕ್ಕೆ ನಾನೇನು ಮಾಡಬಹುದು? ಹೆಲ್ಪ್ ಮಾಡಿ.

#Feelfree: ವಿವಾಹ ಬಾಹಿರ ಸಂಬಂಧದಲ್ಲಿ ಗರ್ಭಿಣಿ, ಗಂಡನಿಗಿದು ತಿಳಿಯಬಹುದಾ!
 

ಉತ್ತರ: ಸುಮಾರಾಗಿ ಮೂವತ್ತೈದು ವರ್ಷ ದಾಟಿದ ಮಹಿಳೆಯರಿಗೆ ಈ ಭಾವನೆ ಒಂದಲ್ಲ ಒಂದು ಸಲವಾದರೂ ಬಾಧಿಸುತ್ತದೆ. ವಯಸ್ಸಾದಂತೆ ಸ್ತನಗಳು ಜೋತು ಬೀಳುವುದು ಸಾಮಾನ್ಯ ಪ್ರಕ್ರಿಯೆ. ಹೆಚ್ಚು ಆತ್ಮವಿಶ್ವಾಸ ಹೊಂದಿರುವವರು ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಗಂಡಸರಲ್ಲಿ ಶಿಶ್ನ ನಿಮಿರುವಿಕೆ ಹಾಗೂ ಗಡಸುತನ ಹೇಗೆ ವಯಸ್ಸಾದಂತೆ ಕಡಿಮೆಯಾಗುತ್ತ ಹೋಗುತ್ತದೋ, ಅದೇ ರೀತಿ ಸ್ತ್ರೀಯರಲ್ಲಿಯೂ ಸ್ತನಗಳ ಗಡುಸುತನ ಹೊರಟುಹೋಗುತ್ತದೆ. ಇದರ ಬಗ್ಗೆ ಹೆಚ್ಚು ಕೀಳರಿಮೆ, ಮಾನಸಿಕ ಒತ್ತಡ ಬೆಳೆಸಿಕೊಳ್ಳದೆ, ಬೇರೆ ಥರದ ಆಕರ್ಷಣೆಗಳನ್ನು ನಮ್ಮ ವ್ಯಕ್ತಿತ್ವದಲ್ಲಿ ಬೆಳೆಸಿಕೊಳ್ಳಬೇಕು. ಲೈಂಗಿಕ ಕ್ರಿಯೆಯಲ್ಲಿ ಹೊಸ ಹೊಸ ವಿಧಾನಗಳನ್ನೂ ತೃಪ್ತಿ ಕಂಡುಕೊಳ್ಳುವ ಕ್ರಮಗಳನ್ನೂ ಆವಿಷ್ಕರಿಸಿಕೊಳ್ಳಬೇಕು.
 

Woma worried about her sagging breasts and solution here

ಸ್ತನಗಳು ಹಲವು ಕಾರಣಗಳಿಂದ ಜೋತು ಬೀಳುತ್ತವೆ. ವಯಸ್ಸು ಒಂದು ಕಾರಣ. ಇದಕ್ಕೆ ಏನೂ ಮಾಡಲಾಗದು. ಎಲ್ಲರಿಗೂ ವಯಸ್ಸಾಗುತ್ತದೆ. ಇನ್ನೊಂದು ಆಹಾರ. ನೀವು ಹೆಚ್ಚಾಗಿ ಜಂಕ್‌ಫುಡ್‌ ಸೇವಿಸುತ್ತಿದ್ದರೆ, ಬಲುಬೇಗನೆ ಮೈಯಲ್ಲಿ ಬೊಜ್ಜು ಬೆಳೆಯುತ್ತದೆ ಹಾಗೂ ಸ್ತನಗಳು ಸ್ಯಾಗ್ ಆಗುತ್ತವೆ. ಹೀಗಾಗಿ ಜಂಕ್‌ಫುಡ್‌ ಕೈಬಿಟ್ಟು, ಕಾರ್ಬೊಹೈಡ್ರೇಟ್ ಕಡಿಮೆ ಮಾಡಿ, ಪ್ರೊಟೀನ್ ರಿಚ್ ಇರುವ ಆಹಾರಗಳನ್ನು ಹೆಚ್ಚು ಸೇವಿಸಬೇಕು. ಮೂರನೇ ಕಾರಣವೆಂದರೆ ಪ್ರೆಗ್ನೆನ್ಸಿ. ಮಕ್ಕಳಿಗೆ ಹಾಲುಣಿಸುವ ತಾಯಂದಿರಲ್ಲಿ, ಹಾಲು ತುಂಬಿಕೊಳ್ಳುವ ಕಾರಣ ಸ್ತನಗಳು ಹೀಗಾಗುತ್ತವೆ. ಇದು ಕಾಲಕ್ರಮೇಣ ಸರಿಹೋಗುತ್ತದೆ. ಧೂಮಪಾನ ಮಾಡುವ ಮಹಿಳೆಯರಲ್ಲಿ ಸ್ತನಗಳು ಬಹುಬೇಗನೆ ಜೋತುಬೀಳಬಹುದು. ಧೂಮಪಾನ ಬಿಡುವುದು ಅಗತ್ಯ. ಇನ್ನು ನೀವೇನಾದರೂ ತೀವ್ರಗತಿಯಲ್ಲಿ ಮೈ ತೂಕ ಇಳಿಸಿಕೊಂಡಿದ್ದರೆ, ಅದೇ ವೇಗಕ್ಕೆ ತಕ್ಕಂತೆ ಸ್ತನಗಳು ಇಳಿಯುವುದಿಲ್ಲ. ಹೀಗಾಗಿ ಜೋತುಬೀಳುತ್ತವೆ. ವಯಸ್ಸಾದಂತೆ ಮೈಭಾರ ಹೆಚ್ಚಾಗುವುದು ಇದಕ್ಕೆ ಇನ್ನೊಂದು ಕಾರಣ. ಇನ್ನು ಸ್ತೀಯರಲ್ಲಿ ಮೆನೋಪಾಸ್ ಸಮಯದಲ್ಲಿ ಉಂಟಾಗುವ ಹಾರ್ಮೋನ್ ಸ್ರಾವದ ಬದಲಾವಣೆಗಳು ಕೂಡ ಸ್ತನಗಳು ಇಳಿಯುವಂತೆ ಮಾಡುತ್ತವೆ. ಇನ್ನು ಸ್ತನಗಳ ಕ್ಯಾನ್ಸರ್, ಕ್ಷಯರೋಗ ಇರುವವರಿಗೂ ಹೀಗಾಗುತ್ತದೆ. '

#Feelfree: ನನ್ನ ಗುಪ್ತಾಂಗದ ಕೂದಲು ನನಗಿಷ್ಟ, ಅವನಿಗಿಷ್ಟವಿಲ್ಲ, ಏನ್ ಮಾಡ್ಲಿ?

ಹಜವಾಗಿಯೇ ಸ್ತನಗಳು ಇಳಿಬಿದ್ದಿದ್ದರೆ ಅದನ್ನು ಸರಿ ಮಾಡಿಕೊಳ್ಳುವುದಕ್ಕೆ ಕೆಲವು ವ್ಯಾಯಾಮಗಳಿವೆ. ಉದಾಹರಣೆಗೆ, ಮುಖ ಮೇಲೆ ಮಾಡಿ ಮಲಗಿಕೊಂಡು, ಡಂಬ್‌ಬೆಲ್‌ಗಳನ್ನು ನಿಮ್ಮ ಎರಡೂ ಕೈಯಲ್ಲಿ ಹಿಡಿದುಕೊಂಡು, ಅದನ್ನು ಎತ್ತಿ ಇಳಿಸಿ. ಹೀಗೆ ಮಾಡುವಾಗ ನಿಮ್ಮ ಬೆನ್ನಿಗೆ ಆಧಾರವಾಗಿ ಒಂದು ದಿಂಬು ಇರಲಿ, ಅದು ಎದೆಯನ್ನು ಎತ್ತಿ ಹಿಡಿಯುವಂತೆ ಇರಲಿ. ಇದನ್ನು ಪ್ರತಿನಿತ್ಯ ಮಾಡಿದರೆ ನಿಮ್ಮ ಎದೆಯ ಸ್ನಾಯುಗಳು ಬಿಗಯಾಗುತ್ತವೆ. ಇದೇ ರೀತಿಯ ಹಲವಾರು ವ್ಯಾಯಾಮಗಳು ಇವೆ. ಜಿಮ್‌ ತರಬೇತಿದಾರರ ಮೂಲಕ ಅಥವಾ ಇಂಟರ್‌ನೆಟ್‌ನಲ್ಲಿ ಈ ವಿವರಗಳನ್ನು ನೀವು ಪಡೆಯಬಹುದು.

ಎದೆಯ ಉನ್ನತಿಯನ್ನು ಕಾಪಾಡಿಕೊಳ್ಳುವ ಹಲವು ಯೋಗಾಸನಗಳೂ ಇವೆ. ಇದಕ್ಕೂ ನೀವು ಪರಿಣತ ಯೋಗಾಚಾರ್ಯರ ನೆರವು ಪಡೆಯಬಹುದು. ಕುಳಿತುಕೊಳ್ಳುವ ಭಂಗಿಯನ್ನು ಕೂಡ ನೀವು ಸರಿಪಡಿಸಿಕೊಳ್ಳಬೇಕು. ಯಾವತ್ತೂ ಮುಂಬಾಗಿದಂತೆ ಅಥವಾ ಹಿಂಬಾಗಿದಂತೆ ಕೂರಬಾರದು. ನೆಟ್ಟಗೆ ಕೂರಬೇಕು. ಇದು ನಿಮ್ಮ ಎದೆಯ ಭಾಗವನ್ನು ಗಡುಸಾಗಿಡಲು ಸಹಕರಿಸುತ್ತದೆ. ಹಾಗೇ ನೀವು ಧರಿಸುವ ಬಟ್ಟೆ ಕೂಡ ನಿಮ್ಮ ಆಕರ್ಷಣೆಯನ್ನು ಎತ್ತಿ ಹಿಡಿಯುವಂತಿದ್ದರೆ ಚೆನ್ನಾಗಿರುತ್ತದೆ. ನಿಮ್ಮ ಅಳತೆಗೆ ತಕ್ಕ ಪುಶ್‌ಅಪ್ ಬ್ರಾಗಳು ಹೇರಳವಾಗಿ ಈಗ ಸಿಗುತ್ತವೆ.

#Feelfree: ನಾನು ಪೋರ್ನ್ ಫಿಲಂ ಗಂಡಸಿನಂತಿಲ್ಲ, ಸೆಕ್ಸ್ ಎಂಜಾಯ್ ಮಾಡೋಕ್ಕಾಗುತ್ತಾ?

Follow Us:
Download App:
  • android
  • ios