ಮದುವೆಗೂ ಮುನ್ನ ಸೆಕ್ಸ್ ಮಾಡಿದ್ರೆ, ಗರ್ಭಿಣಿಯಾದ್ರೆ ತಪ್ಪೇನು? : ದಿಯಾ ಮಿರ್ಜಾ
ದಿಯಾ ಮಿರ್ಜಾ ಕಳೆದ ವರ್ಷದ ಫೆಬ್ರವರಿಯಲ್ಲಿ ಉದ್ಯಮಿ ವೈಭವ್ ರೆಖಿಯನ್ನು ವಿವಾಯವಾಗಿದ್ದರು. ಇದು ಬಾಲಿವುಡ್ ನಟಿಯ 2ನೇ ಮದುವೆ ಆಗಿತ್ತು. ಮದುವೆ ಬಳಿಕ, ಕೆಲ ತಿಂಗಳಲ್ಲೇ ತಾವು ಗರ್ಭಿಣಿಯಾಗಿರುವುದಾಗಿ ಘೋಷಿಸಿದ್ದರು. ಆ ವೇಳೆ ಆಕೆಯ ಮದುವೆ ಹಾಗೂ ಗರ್ಭಿಣಿಯಾದ ಟೈಮಿಂಗ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿತ್ತು. ಇತ್ತೀಚೆಗೆ ಆಲಿಯಾ ಭಟ್ ವಿಚಾರದಲ್ಲೂ ಇದೇ ರೀತಿಯಾಗಿತ್ತು.
ಮುಂಬೈ (ಜುಲೈ 2): ಬಾಲಿವುಡ್ ನಟಿ (Bollywood actress) ದಿಯಾ ಮಿರ್ಜಾ (Dia Mirza), ಯಾವುದೇ ವಿಚಾರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಬಹಳ ಮುಕ್ತವಾಗಿ ಹೇಳಲು ಇಷ್ಟಪಡುತ್ತಾರೆ. ಪ್ರಸ್ತುತ ತಾಯ್ತನದ ಅವಧಿಯನ್ನು ಆನಂದಿಸುತ್ತಿರುವ ದಿಯಾ, ತಮ್ಮ ಇಡೀ ದಿನ ಮಗನ ಆರೈಕೆಯಲ್ಲಿಯೇ ಕಳೆಯುತ್ತಿದೆ ಎಂದು ಹೇಳುತ್ತಿದ್ದಾರೆ. ಇತ್ತೀಚೆಗೆ ಸಂದರ್ಶನದಲ್ಲಿ ಮಾತನಾಡುವ ವೇಳೆ ದಿಯಾ ಮಿರ್ಜಾ ಬೋಲ್ಡ್ ಆದ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ.
ಮದುವೆಗೂ ಮುನ್ನ(Before marriage) ಸೆಕ್ಸ್ (Sex)ಮಾಡಿದರೆ, ಹುಡುಗಿ ಗರ್ಭಣಿಯಾದರೆ (pregnancy) ತಪ್ಪೇನು, ಇದು ಸಂಪೂರ್ಣವಾಗಿ ಆಕೆಯ ವೈಯಕ್ತಿಕ ನಿರ್ಧಾರ ಎಂದು ದಿಯಾ ಮಿರ್ಜಾ ಹೇಳಿರುವ ಮಾತುಗಳು ಹೆಚ್ಚಾಗಿ ವೈರಲ್ ಆಗಿದೆ. ತಮ್ಮ ನಿರ್ಧಾರದ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳುವ ಇವರು, ಇಂಥ ವಿಚಾರವನ್ನು ಆರಾಮವಾಗಿ ಸೆಲಬ್ರೇಟ್ ಮಾಡಬಹುದು. ಇಂದಿನ ಯುಗದಲ್ಲಿಯೂ ಜನರ ಯೋಚನಾಶಕ್ತಿ ತೋರುವಷ್ಟು ಚೆನ್ನಾಗಿಲ್ಲ ಎಂದು ದಿಯಾ ಮಿರ್ಜಾ ಹೇಳಿದ್ದಾರೆ.
ತಮ್ಮ ಮಾತಿನಂತೆಯೇ ನಡೆದುಕೊಂಡಿದ್ದ ದಿಯಾ ಮಿರ್ಜಾ, 2021ರ ಫೆಬ್ರವರಿಯಲ್ಲಿ ಉದ್ಯಮಿ ವೈಭವ್ ರೆಖಿಯನ್ನು (Vaibhav Rekhi) ವಿವಾಹವಾಗಿದ್ದರು. ಇದು ಆಕೆಯ 2ನೇ ವಿವಾಹವಾಗಿತ್ತು. ಮದುವೆಯಾದ ಕೆಲ ತಿಂಗಳಲ್ಲೇ ದಿಯಾ ಮಿರ್ಜಾ ತಾವು ಗರ್ಭಿಣಿಯಾಗಿರುವುದು ಘೋಷಣೆ ಮಾಡಿದ್ದರು. ಇದೇ ವೇಳೆ ಆಕೆ ಮದುವೆಯಾದ ಹಾಗೂ ಗರ್ಭಿಣಿಯಾದ ಟೈಮಿಂಗ್ ಅನ್ನು ಹೆಚ್ಚಾಗಿ ಪ್ರಶ್ನೆ ಮಾಡಲಾಗಿತ್ತು. ಗರ್ಭಿಣಿಯಾಗಿದ್ದು ಗೊತ್ತಾದ ಕಾರಣಕ್ಕಾಗಿಯೇ ದಿಯಾ ವಿವಾಹವಾಗಿದ್ದರು ಎಂದು ಟ್ರೋಲ್ ಮಾಡಲಾಗಿತ್ತು. ಈ ವೇಳೆ ಪ್ರತಿಕ್ರಿಯೆ ನೀಡಿದ್ದ ಈಕೆ, ಗರ್ಭಿಣಿಯಾದ ಕಾರಣಕ್ಕಾಗಿ ತಾನು ಮದುವೆಯಾಗಿರಲಿಲ್ಲ ಎಂದು ಹೇಳಿದ್ದರು. 2021ರ ಮೇನಲ್ಲಿ ಪುತ್ರನಿಗೆ ಜನ್ಮ ನೀಡಿದ್ದರು. ಮಗನಿಗೆ ಆವ್ಯಾನ್ ಎಂದು ಹೆಸರನ್ನಿಟ್ಟುದ್ದು, ಪ್ರಸ್ತುತ ಈತನ ಆರೈಕೆಯಲ್ಲಿ ದಿನ ಕಳೆಯುತ್ತಿದ್ದಾರೆ.
ಇತ್ತೀಚೆಗೆ ಖಾಸಗಿ ಪತ್ರಿಕೆಗೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿರುವ ದಿಯಾ ಮಿರ್ಜಾ, ಪ್ರಸ್ತುತ ನಮ್ಮ ಸಮಾಜ ಹೇಗಿದೆಯೆಂದರೆ ಸೆಕ್ಸ್ ಮಾಡುವುದು ಹಾಗೂ ಗರ್ಭಿಣಿಯಾಗುವುದು ಮದುವೆಯಾದ ಮೇಲೆ ಸಿಗುವ ಹಕ್ಕು ಎನ್ನುವ ರೀತಿಯಲ್ಲಿದೆ. ಆದರೆ, ನನ್ನ ಪ್ರಕಾರ, ಇದು ವೈಯಕ್ತಿಕ ಆಯ್ಕೆ. ತಮ್ಮ ನಿರ್ಧಾರಗಳ ಆಗು ಹೋಗುಗಳ ಜವಾಬ್ದಾರಿಯನ್ನು ನಿಭಾಯಿಸಲು ಯಾರು ಸಮರ್ಥರಾಗಿರುತ್ತಾರೋ, ಅವರು ಇದನ್ನು ಸುಲಭವಾಗಿ ಆಚರಿಸಬಹುದು. ಬಹುಶಃ ನನ್ನ ಪತಿ ತನ್ನ ನಿರ್ಧಾರದ ಕುರಿತಾಗಿ ಯಾವುದೇ ಅಂಜಿಕೆ ಹೊಂದಿರಲಿಲ್ಲ ಎಂದಿದ್ದಾರೆ.
ಮದುವೆಗೆ ಮೊದಲು ಸೆಕ್ಸ್ ಬೇಡ ಎಂದು ಪೋಪ್ ಹೇಳಿದ್ದೇಕೆ?
ನಮ್ಮ ಸಮಾಜದಲ್ಲಿ ಮದುವೆಗೆ ಮುನ್ನ ಲೈಂಗಿಕತೆ ಮತ್ತು ಗರ್ಭಧಾರಣೆಯನ್ನು ಕೆಟ್ಟದಾಗಿ ಪರಿಗಣಿಸುವ ಅನೇಕ ಜನರಿದ್ದಾರೆ, ಆದರೆ ಅದನ್ನು ವೈಯಕ್ತಿಕ ಆಯ್ಕೆ ಎಂದು ಪರಿಗಣಿಸುವ ಅನೇಕ ಜನರಿದ್ದಾರೆ ಎಂದು ದಿಯಾ ಮಿರ್ಜಾ ಹೇಳಿದರು. ಯಾರಾದರೂ ಅಂತಹ ಹೆಜ್ಜೆ ಇಟ್ಟರೆ ಅದು ಅವರ ಹಕ್ಕು ಎಂದು ಅವರು ನಂಬುತ್ತಾರೆ. ನಾವು ಯೋಚಿಸುವ ರೀತಿಯಲ್ಲಿ ಅವರೂ ಯೋಚಿಸುತ್ತಾರೆ ಎಂದು ನಾನು ಭಾವಿಸುವುದಿಲ್ಲ. ನಾವು ನಮ್ಮ ಬಗ್ಗೆ ಯೋಚಿಸುವಷ್ಟು ಮುಕ್ತ ಮನಸ್ಸಿನವರಲ್ಲ ಎಂದು ಹೇಳಿದ್ದಾರೆ.
61 ವರ್ಷದ ಶಂಶದ್‌ನನ್ನು ಪ್ರೀತಿಸಿ ಮದುವೆಯಾದ 18 ವರ್ಷದ ಆಲಿಯಾ, ವೈರಲ್ ಅದ ಲವ್ ಸ್ಟೋರಿ!
ಇನ್ನು ಕೆಲಸದ ವಿಚಾರದ ಬಗ್ಗೆ ಮಾತನಾಡುವುದಾದರೆ, ದಿಯಾ ಮಿರ್ಜಾ ಶೀಘ್ರದಲ್ಲಿಯೇ ಅನುಭವ್ ಸಿನ್ಹಾ ಅವರ "ಭೋಡ್' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕೂ ಮುನ್ನ ದಿಯಾ ಮಿರ್ಜಾ 'ತಪ್ಪಡ್', 'ದಸ್' ಮತ್ತು 'ಕ್ಯಾಶ್' ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದಲ್ಲದೇ ದಿಯಾ ಮಿರ್ಜಾ ಅವರ ಬಳಿ ತಾಪ್ಸಿ ಪನ್ನು ಅವರ 'ಧಕ್ ಧಕ್' ಚಿತ್ರವೂ ಇದೆ. ಇದರಲ್ಲಿ ಫಾತಿಮಾ ಸನಾ ಶೇಖ್, ಸಂಜನಾ ಸಂಘಿ ಮತ್ತು ರತ್ನ ಪಾಠಕ್ ಶಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇತ್ತೀಚೆಗೆ ಬಾಲಿವುಡ್ ನಟಿ ಆಲಿಯಾ ಭಟ್ (Alia Bhat) ಹಾಗೂ ನಟ ರಣಬೀರ್ ಕಪೂರ್ ತಾವು ತಂದೆ ತಾಯಿ ಆಗುತ್ತಿರುವುದಾಗಿ ಘೋಷಣೆ ಮಾಡಿದ್ದರು. ಕೇವಲ 2 ತಿಂಗಳ ಹಿಂದೆ ಮದುವೆಯಾಗಿದ್ದ ಆಲಿಯಾ ಈಗ ಗರ್ಭಿಣಿ ಎಂದು ಘೋಷಿಸಿಕೊಂಡಿದ್ದಕ್ಕೆ, ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್‌ಗೆ ಒಳಗಾಗಿದ್ದರು. ಗರ್ಭಿಣಿಯಾಗಿರುವುದು ಗೊತ್ತಾಗಿಯೇ ಆಕೆ ವಿವಾಹವಾಗಿದ್ದರು ಎಂದು ಹೇಳಲಾಗಿತ್ತು.