ಮದುವೆಗೆ ಮೊದಲು ಸೆಕ್ಸ್ ಬೇಡ ಎಂದು ಪೋಪ್ ಹೇಳಿದ್ದೇಕೆ?
ಮದುವೆಗೆ ಮುಂಚಿನ ಲೈಂಗಿಕ ಅನುಭವದ ಬಗ್ಗೆ ಪೋಪ್ ಫ್ರಾನ್ಸಿಸ್ ನೀಡಿದ ಹೇಳಿಕೆ ಈಗ ಕ್ರಿಶ್ಚಿಯನ್ ಜನರ ನಡುವೆಯೂ ಟ್ರೋಲ್‌ಗೆ ಕಾರಣವಾಗಿದೆ.
ಪೋಪ್ ಪ್ರಾನ್ಸಿಸ್ (Pope Francis) ಅಗಾಗ ನೀಡುವ ಹೇಳಿಕೆಗಳು ವಿವಾದಕ್ಕೆ (Controversy) ಕಾರಣವಾಗುತ್ತವೆ. ವಿವಾದವೇ ಅವರನ್ನು ಹುಡುಕಿಕೊಂಡು ಬರುತ್ತವೆಯೋ, ಅವರ ಮನಸ್ಥಿತಿ ತೀರಾ ಸಾಂಪ್ರದಾಯಿಕ ಆದ್ದರಿಂದ ಈ ವಿವಾದಗಳು ಹುಟ್ಟಿಕೊಳ್ಳುತ್ತವೆಯೋ ಗೊತ್ತಿಲ್ಲ. ಪೋಪ್ ಹೇಳಿಕೆಗಳನ್ನು ಕ್ರಿಶ್ಚಿಯನ್ನರು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಅದಕ್ಕೆ ಕಾರಣ ವ್ಯಾಟಿಕನ್ ಚರ್ಚ್‌ನ (Vatican church) ಪರಮೋಚ್ಛ ಸ್ಥಾನದಲ್ಲಿರುವ ಪೋಪರು ಕ್ರಿಶ್ಚಿಯನ್ನರ ಜಾಗತಿಕ ಧರ್ಮಗುರು. ಧರ್ಮ ಆಚರಣೆಗಳಿಗೆ ಸಂಬಂಧಿಸಿದಂತೆ ಅವರ ಮಾತುಗಳು ಕ್ರೈಸ್ತರ ನಡುವೆ ಪ್ರಾಮುಖ್ಯ ಪಡೆಯುತ್ತವೆ.
ಇತ್ತೀಚೆಗೆ ಅವರು ಹೇಳಿದ್ದು ಹೀಗೆ- ಮದುವೆಗೆ ಮೊದಲು ಜೋಡಿ ಸೆಕ್ಸ್ ನಡೆಸಬಾರದು. ಶೀಲ (Virgin) ಅಥವಾ ಚಾರಿತ್ರ್ಯ (Chastity) ಎಂಬುವುದು ಇಬ್ಬರಿಗೂ ಇಂಪಾರ್ಟೆಂಟು. ಹಾಗೊಂದು ವೇಳೆ ಮದುವೆಗೂ ಮೊದಲೇ ಸೆಕ್ಸ್ ನಡೆಸಿದ್ದೇ ಆದಲ್ಲಿ ದೀರ್ಘಕಾಲಿಕ ದಾಂಪತ್ಯ ಜೀವನದ (Married Life) ಮೇಲೆ ಅದು ದುಷ್ಪರಿಣಾಮ ಬೀರುತ್ತದೆ. ಇದರಿಂದ ದಾಂಪತ್ಯದಲ್ಲಿ ಇರುವ ಸ್ವಾರಸ್ಯವೇ ಹೊರಟುಹೋಗುತ್ತದೆ. ದಂಪತಿ ಎದುರಿಸುವ ಹೆಚ್ಚಿನ ಸಮಸ್ಯೆಗಳ ಮೂಲ ಈ ವಿವಾಹಪೂರ್ವ ಸೆಕ್ಸ್‌ನಲ್ಲಿ (Pre Marital Sex) ಇದೆ.
ಪೋಪ್ (Pope) ಹೇಳಿಕೆಯಲ್ಲಿ ಹಲವು ಉದ್ದೇಶಗಳಿವೆ. ಮದುವೆಗೆ ಮೊದಲಿನ ಸೆಕ್ಸ್ ತಡೆಗಟ್ಟುವುದೊಂದೇ ಅವರ ಉದ್ದೇಶವಲ್ಲ. ವಾಸ್ತವವಾಗಿ, ಪಾಶ್ಚಿಮಾತ್ಯ ಕ್ರೈಸ್ತ ಜಗತ್ತಿನಲ್ಲಿ ದಾಂಪತ್ಯ ಎಂಬ ವ್ಯವಸ್ಥೆಯೇ ಕುಸಿಯುತ್ತಿದೆ. ಇದನ್ನು ಕಾಪಾಡಿಕೊಳ್ಳುವುದೇ ಇಂದು ಸಮಸ್ಯೆಯಾಗಿದೆ. ದಾಂಪತ್ಯ ಮತ್ತು ಕುಟುಂಬ ಇದ್ದಲ್ಲಿ ಚರ್ಚ್ ವ್ಯವಸ್ಥೆಗೂ ಮೌಲ್ಯ ಇರುತ್ತದೆ. ಇಲ್ಲದಿದ್ದರೆ ಅದೂ ಕುಸಿಯುತ್ತದೆ. ಹೀಗಾಗಿ ಪೋಪ್‌ಗೆ ಅದರ ಬಗ್ಗೆ ಕಾಳಜಿ.
ಕಪಲ್ಸ್ ಯೋಗ ಮಾಡಿ…. ಸಂಬಂಧ ಸ್ಟ್ರಾಂಗ್ ಮಾಡ್ಕೊಳ್ಳಿ
ಮದುವೆ ಆಗುವವರೆಗೂ ಸೆಕ್ಸನ್ನು ಮುಂದೂಡುವುದೂ ನೈಜ ಪ್ರೀತಿಯ ಒಂದು ಮಾದರಿಯಾಗಿದೆ. ಇದರಿಂದ ದಾಂಪತ್ಯ ಇನ್ನಷ್ಟು ಸುಂದರವಾಗುತ್ತದೆ. ಮಕ್ಕಳನ್ನು ಹೊಂದುವುದು ರಿಸ್ಕ್ ಎಂಬ ಭಾವನೆ ಹಲವರಲ್ಲಿದೆ. ಆದರೆ ಹೊಂದದೇ ಇರುವುದು ಇನ್ನಷ್ಟು ರಿಸ್ಕ್ ಎಂದು ಕೂಡ ಪೋಪ್ ನುಡಿದಿದ್ದಾರೆ. ಇಂದು ಹೆಚ್ಚಿನ ಯುವಜನತೆ ಮದುವೆಯಾಗಲು ನಿರಾಕರಿಸುತ್ತಿದ್ದಾರೆ. ಸಣ್ಣ ಪ್ರಾಯದಲ್ಲೇ ಮದುವೆಯಾಚೆಗೆ ಸೆಕ್ಸ್ ಅನುಭವ ಹೊಂದುವುದರಿಂದ, ದಾಂಪತ್ಯ ಅಷ್ಟೇನೂ ಮುಖ್ಯವಲ್ಲ ಎಂಬ ಭಾವನೆ ಅವರಲ್ಲಿ ಮೂಡುತ್ತದೆ. ಹೀಗಾಗಿ ಮದುವೆಗಳು ಕಡಿಮೆಯಾಗುತ್ತಿವೆ. ಒಂಟಿ ಬಾಳ್ವೆ ಜಾಸ್ತಿಯಾಗುತ್ತಿದೆ. ತಲೆಮಾರುಗಳು ಮುಂದುವರಿಯುತ್ತಿಲ್ಲ. ಎಷ್ಟೋ ಮುಂದುವರಿದ ಶ್ರೀಮಂತ ದೇಶಗಳು ಮುಂದಿನ ಜನಾಂಗವೇ ಇಲ್ಲದಂತೆ ನಿರ್ಮಾನುಷವಾಗುವ ಭೀತಿ ಎದುರಿಸುತ್ತಿವೆ. ಹೀಗಾಗಿಬಿಟ್ಟರೆ, ಕ್ರೈಸ್ತ ಧರ್ಮದ ಪರಮ ವಿರೋಧಿ ಎನಿಸಿಕೊಂಡ ಇಸ್ಲಾಂ ಮುಂತಾದವು ಹೆಚ್ಚಿನ ಜನಸಂಖ್ಯೆಯೊಂದಿಗೆ ಮೇಲುಗೈ ಆಗಬಹುದು. ಇದು ಇನ್ನೊಂದು ಚಿಂತೆ.
ಆದರೆ ಪೋಪರ ಈ ಹೇಳಿಕೆ ಸಾಕಷ್ಟು ಟ್ರೋಲ್‌ಗೂ ಕಾರಣವಾಗಿದೆ. ಪೋಪ್ ಅತ್ಯಂತ ಸಂಪ್ರದಾಯವಾದಿಯಾಗಿ ಮಾತನಾಡಿದ್ದಾರೆ. ಇದು ಸರಿಯಲ್ಲ. ಅವರೂ ಆಧುನಿಕ ಮನೋವೃತ್ತಿ ಬೆಳೆಸಿಕೊಳ್ಳಬೇಕು. ಇಂದು ಯಾರೂ ಮದುವೆಯಾಚೆಗಿನ ಸೆಕ್ಸನ್ನು ನಿಷೇಧಿತ ಎಂಬಂತೆ ಭಾವಿಸುವುದಿಲ್ಲ. ಅದನ್ನು ಕ್ಯಾಶುವಲ್ ಆಗಿ ಪರಿಗಣಿಸುತ್ತಾರೆ. ಪ್ರೇಮವೆಂಬುದು ಸೆಕ್ಸ್‌ಗೆ ಸಂಬಂಧಪಟ್ಟಿಲ್ಲ. ಅದು ದಾಂಪತ್ಯಕ್ಕೆ ಅಡ್ಡಿಯಾಗುವುದಿಲ್ಲ ಎಂಬುದು ಹೆಚ್ಚಿನವರ ಟೀಕೆಗಳ ಅಂತರಂಗ.ಇನ್ನು ಪೋಪ್ ಸರಿಯಾಗಿಯೇ ಮಾತಾಡಿದ್ದಾರೆ, ಇಂಥ ಉಪದೇಶಗಳು ಅಗತ್ಯ ಎನ್ನುವವರ ಸಂಖ್ಯೆಯೂ ಸಾಕಷ್ಟಿದೆ.
6 ಹೆಂಡತಿಯರೊಂದಿಗೆ ಶಾಪಿಂಗ್ ಹೋದ ಪತಿ: ಖರ್ಚು ಮಾಡಿದ್ದು ಎಷ್ಟು ಗೊತ್ತಾ?
ಪೋಪ್ ವಿವಾದಾತ್ಮಕ ಹೇಳಿಕೆ ಇದೇ ಮೊದಲಲ್ಲ. ಈ ಹಿಂದೆ ಅವರು ಮಕ್ಕಳನ್ನು ಮಾಡಿಕೊಳ್ಳದೆ ನಾಯಿ ಸಾಕುವವರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಮಕ್ಕಳನ್ನು ಹುಟ್ಟಿಸದೆ ಬರಿಯ ಸಾಕುಪ್ರಾಣಿಗಳನ್ನು ಮುದ್ದು ಮಾಡಿಕೊಂಡು ಬದುಕುವುದು ಬರೀ ಸ್ವಾರ್ಥ. ಇದರಿಂದ ಸಮಾಜಕ್ಕೆ ಯಾವುದೇ ಉಪಯೋಗವಿಲ್ಲ. ಇದರಿಂದ ಮಾನವಕುಲ ಮುಂದುವರಿಯುವುದಿಲ್ಲ. ಎಂದು ಅವರು ಆಕ್ಷೇಪಿಸಿದ್ದರು. ಇದಕ್ಕೂ ಟೀಕೆ ಬಂದಿತ್ತು. ಹಾಗೆ ನೋಡಿದರೆ ವಿವಾಹಪೂರ್ವ ಸೆಕ್ಸ್ ಬಗ್ಗೆ ಹೆಚ್ಚಿನ ಎಲ್ಲ ಧರ್ಮಗಳ ಧರ್ಮಗುರುಗಳಿಗೂ ಮೇಲೆ ಹೇಳಿದ ಪೋಪ್‌ರ ಅಭಿಪ್ರಾಯವೇ ಇದೆ. ಇವರ್ಯಾರೂ ವಿವಾಹಪೂರ್ವ ಲೈಂಗಿಕತೆಯನ್ನು (Pre Marital Sex) ಒಪ್ಪುವುದಿಲ್ಲ. ದೇಹದ ಹಸಿವನ್ನು ತಣಿಸಿಕೊಳ್ಳುವುದಕ್ಕಿಂತಲೂ ಸಾಂಪ್ರದಾಯಿಕ ಕುಟುಂಬ (Traditional Family) ವ್ಯವಸ್ಥೆ ಮೇಲೆಯೇ ಹೆಚ್ಚಿನವರ ಕಾಳಜಿ. ನಮ್ಮ ಸ್ವಾಮೀಜಿಗಳನ್ನು ಮಾತಾಡಿಸಿದರೂ ಇದೇ ಮಾತನ್ನು ಹೇಳಬಹುದು. ಅಂತೂ ಸಾಂಪ್ರದಾಯಿಕ ಅಭಿಪ್ರಾಯಕ್ಕೂ ಯುವಜನತೆಯ ನೋಟಕ್ಕೂ ಇರುವ ಭಿನ್ನತೆ ಪೋಪ್‌ರ ಈ ಹೇಳಿಕೆಯಲ್ಲಿ ವ್ಯಕ್ತವಾಗಿದೆ ಎನ್ನಬಹುದು.
Relationship Tips: ಅಮ್ಮನಾ? ಹೆಂಡತಿಯಾ? ಕಾಡುವ ಹೆಂಗಸರ ನಿಭಾಯಿಸೋದು ಹೀಗೆ