61 ವರ್ಷದ ಶಂಶದ್‌ನನ್ನು ಪ್ರೀತಿಸಿ ಮದುವೆಯಾದ 18 ವರ್ಷದ ಆಲಿಯಾ, ವೈರಲ್ ಅದ ಲವ್‌ ಸ್ಟೋರಿ!

ಪಾಕಿಸ್ತಾನದಲ್ಲಿ ಇತ್ತೀಚೆಗೆ 18 ವರ್ಷದ ಆಲಿಯಾ ಎನ್ನುವ ಹುಡುಗಿ, 61 ವರ್ಷದ ಶಂಶಾದ್ ಎನ್ನುವವನನ್ನು ವಿವಾಹವಾಗಿದ್ದಾಳೆ. ಇದು ಇಡೀ ಪಾಕಿಸ್ತಾನದಲ್ಲಿ ಚರ್ಚೆಯ ವಿಷಯವಾಗಿದೆ. ಈ ಕುರಿತಾಗಿ ಮಾತನಾಡಿರುವ  ಶಂಶಾದ್, "ಮದುವೆ ಎನ್ನುವುದು ಸ್ವರ್ಗದಲ್ಲಿಯೇ ನಿಶ್ಚಯವಾಗುತ್ತದೆ. ಪ್ರಕೃತಿಯ ಕಡೆಯಿಂದ ಏನಾಗಬೇಕೋ ಅದು ಆಗುತ್ತದೆ. ನಾವಾಗಲಿ, ನೀವಾಗಲಿ ಏನೋ ಮಾಡಲು ಆಗೋದಿಲ್ಲ' ಎಂದು ಹೇಳಿದ್ದಾನೆ.
 

61 year old Shamshad marriage 18 year old Alia in Pakistan Viral News san

ಕರಾಚಿ (ಜೂನ್ 29): ಪಾಕಿಸ್ತಾನದಲ್ಲಿ(pakistan) ಇತ್ತೀಚೆಗೆ ಒಂದು ಮದುವೆಯ ವಿಚಾರ ಸಾಕಷ್ಟು ಸುದ್ದಿಯಾಗಿದೆ. ಬಹುತೇಕ ಪಾಕಿಸ್ತಾನದ ಪತ್ರಿಕೆಗಳಲ್ಲಿ, ಹಾಗೂ ಸೋಷಿಯಲ್‌ ಮೀಡಿಯಾಗಳಲ್ಲಿ(Social Media) ಈ ಮದುವೆಯ ಸುದ್ದಿ, ಚಿತ್ರ ಹಾಗೂ ವಿಡಿಯೋಗಳು ವೈರಲ್ ಆಗಿದೆ. ಅದಕ್ಕೆ ಕಾರಣ 61 ವರ್ಷದ ಶಂಶಾದ್ (Rana Shamshad) ಎನ್ನುವ ವ್ಯಕ್ತಿ 18 ವರ್ಷದ ಆಲಿಯಾ (Alia) ಎನ್ನುವ ಹುಡುಗಿಯನ್ನು ಮದುವೆಯಾಗಿರುವುದು.

ರಾಣಾ ಶಂಶಾದ್ ಎನ್ನುವ ವ್ಯಕ್ತಿ ರಾವಲ್ಪಿಂಡಿ (Rawalpindi) ಮೂಲದವರು. ತನಗಿಂತ 43 ವರ್ಷ ಕಡಿಮೆ ಇರುವ ಆಲಿಯಾ ಎನ್ನುವ ಹುಡುಗಿಯನ್ನು ವಿವಾಹವಾಗುವ ಮೂಲಕ ಸುದ್ದಿಯಾಗಿದ್ದಾನೆ. ಅಷ್ಟಕ್ಕೂ ಇವರಿಬ್ಬರದು ಪ್ರೇಮ ವಿವಾಹ ಎನ್ನುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಹಾಗಿದ್ದರೆ, ಇವರಿಬ್ಬರ ನಡುವೆ ಪ್ರೇಮಾಂಕುರವಾಗಿದ್ದು ಹೇಗೆ ಎನ್ನುವ ಕುತೂಹಲ ಎಲ್ಲರಲ್ಲಿದೆ.

ಇದರ ಬಗ್ಗೆ ಮಾತನಾಡಿರುವ ಆಲಿಯಾ, ಯೂಟ್ಯೂಬ್‌ನಲ್ಲಿ (You Tube)  ಇದನ್ನು ಹಂಚಿಕೊಂಡಿದ್ದಾರೆ. ರಾಣಾ ಶಂಶದ್ ಅವರು ತಮ್ಮ ಪ್ರದೇಶದಲ್ಲಿನ ಬಡ ಹುಡುಗಿಯರಿಗೆ ಮದುವೆ ಮಾಡಿಸುತ್ತಿದ್ದರು. ಅವರ ಈ ಅಭ್ಯಾಸವನ್ನು ನಾನು ಇಷ್ಟಪಟ್ಟೆ. ಇದೇ ಕಾರಣಕ್ಕೆ ಅವರನ್ನು ಪ್ರೇಮಿಸಿ ಮದುವೆಯಾಗಿದ್ದೇನೆ' ಎಂದು ಹೇಳಿದ್ದಾರೆ.

ನಾವು ಹಲವು ಬಾರಿ ಭೇಟಿಯಾಗಿ ತುಂಬಾ ಹೊತ್ತು ಮಾತುಕತೆಯನ್ನೂ ನಡೆಸಿದ್ದೇವೆ. ಈ ವೇಳೆ ಅವರ ವರ್ತನೆ ನನಗೆ ಇಷ್ಟವಾಯಿತು. ಅಲ್ಲದೆ, ಸ್ಥಳೀಯ ಜನರು ಕೂಡ ಅವರ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳುತ್ತಿದ್ದರು. ಆ ಬಳಿಕ, ನಾನು ಅವರನ್ನೇ  ಮದುವೆಯಾಗಬೇಕು ಎಂದು ತೀರ್ಮಾನ ಮಾಡಿದೆ ಎಂದು ಹೇಳಿದ್ದಾರೆ.

ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ: 61ನೇ ವಯಸ್ಸಿನಲ್ಲಿ ಜೊತೆಗಾರ್ತಿ ಸಿಕ್ಕಿರುವುದರಿಂದ ನಾನು ಅದೃಷ್ಟವಂತ ಎಂದು ಅಂದುಕೊಳ್ಳುತ್ತೇನೆ. ಆದರೆ, ಆಲಿಯಾ ನನ್ನನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾಳೆ ಎಂದು ಹೇಳಿದ್ದಾರೆ. ಅದೇ ಸಮಯದಲ್ಲಿ, ಆಲಿಯಾ, ಶಂಶಾದ್ ಕೂಡ ಅವನ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾನೆ. ಆಲಿಯಾ ಕೂಡ 'ಅವರಿಗೆ ಏನು ಬೇಕಾದರೂ ತರುತ್ತಾರೆ. ಅವರು ನನ್ನ ಕುಟುಂಬಕ್ಕೂ ಸಹಾಯ ಮಾಡುತ್ತಾರೆ ಎಂದಿದ್ದಾರೆ.

ಲವ್ ಮ್ಯಾರೇಜ್‌ಗಿಂತ ಆರೇಂಜ್ಡ್‌ ಮ್ಯಾರೇಜ್‌ ಒಳ್ಳೇದು ಅಂತಾರಲ್ಲ, ಯಾಕೆ ?

ಮದುವೆ ಸ್ವರ್ಗದಲ್ಲಿ ನಿಶ್ಚಯವಾಗುತ್ತೆ: ಮದುವೆಯ ಬಗ್ಗೆ ತಿಳಿದ ಬಳಿಕ, ಶಂಶದ್‌ಗೆ ಅವರ ಸಂಬಂಧಿಕರಿಂದ ಸಾಕಷ್ಟು ಕರೆಗಳು ಬಂದಿವೆ. ಹಲವರು ತಮಗಿಂತ 43 ವರ್ಷ ಚಿಕ್ಕವಳನ್ನು ಮದುವೆಯಾಗಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕೆಲವರಿಗೆ ಇದನ್ನು ಸಹಿಸಿಕೊಳ್ಳಲು ಸಾಧ್ಯವಾಗೋದಿಲ್ಲ. ಯಾಕೆಂದರೆ ವಯಸ್ಸಿನ ಅಂತರ ಇದಕ್ಕೆ ಕಾರಣ ಎನ್ನುತ್ತಾರೆ.

ವೈವಾಹಿಕ ಜೀವನಕ್ಕೆ ಕಾಲಿಟ್ಟ ಸರಿಗಮಪ ಗಾಯಕಿ ಅಖಿಲಾ ಪಜಿಮಣ್ಣು!

ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ತಮಗಿಂತ ಹಿರಿಯ ವಯಸ್ಸಿನ ವ್ಯಕ್ತಿಯನ್ನು ಮದುವೆಯಾಗಿದ್ದಕ್ಕೆ ಕಾರಣವೇನು ಎನ್ನುವ ಪ್ರಶ್ನೆ ಆಲಿಯಾಗೆ ಸಾಕಷ್ಟು ಬಾರಿ ಎದುರಾಗಿದೆ. ಕುಟುಂಬಸ್ಥರು, ಸಂಬಂಧಿಕರು ಈಗಲೂ ಪ್ರಶ್ನೆ ಮಾಡುತ್ತಾರೆ. 'ಇಂದಿಗೂ ನನ್ನ ಸಂಬಂಧಿಕರು ಇದರ ಬಗ್ಗೆ ಮಾತನಾಡುತ್ತಿದ್ದಾರೆ. ಮಾತನಾಡುವುದು ಅವರ ಹಕ್ಕು. ಅದಕ್ಕೇನೂ ಮಾಡಲಾಗುವುದಿಲ್ಲ. ನಾನು ಇಲ್ಲೇ ಹತ್ತಿರದ ಪ್ರದೇಶಗಳಿಗೆ ಹೋದಾಗ ನನಗೆ ಎಲ್ಲರೂ ಕೇಳುವ ಪ್ರಶ್ನೆ ಒಂದೇ, 61 ವರ್ಷದ ವಯಸ್ಸಿನ ವ್ಯಕ್ತಿಯಲ್ಲಿ ನೀನು ಕಂಡಿದ್ದೇನು? ಎನ್ನುವುದು. ಆದರೆ, ಇದನ್ನು ನಾನು ಜನರಿಗೆ ತಿಳಿಸಲು ಆಗೋದಿಲ್ಲ. ಅವರಿಗೆ ಇದರ ಅಗತ್ಯವೂ ಇಲ್ಲ ಎನ್ನುತ್ತಾರೆ.

Latest Videos
Follow Us:
Download App:
  • android
  • ios