Bigg Boss12 ರಲ್ಲಿ ಸಕತ್​ ಹವಾ ಸೃಷ್ಟಿಸಿದ್ದ ರಕ್ಷಿತಾ ಶೆಟ್ಟಿ ಇದೀಗ ಬಿಗ್‌ಬಾಸ್ 13ನೇ ಸೀಸನ್‌ಗೆ ಅತಿಥಿಯಾಗಿ ಪ್ರವೇಶಿಸಿದ್ದಾರೆ. ಈ ವೇಳೆ ಅವರು ತಮ್ಮ ಭಾವಿ ಪತಿಗೆ ಇರಬೇಕಾದ ತಮಾಷೆಯ ಗುಣಗಳು ಮತ್ತು ಷರತ್ತುಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಬಿಗ್​ಬಾಸ್​ 12 (Bigg Boss 12) ಸಿಕ್ಕಾಪಟ್ಟೆ ವೀಕ್ಷಕರಿಗೆ ಖುಷಿ ಕೊಟ್ಟಿರುವುದಕ್ಕೆ ಕಾರಣ, ಒಂದು ಗಿಲ್ಲಿ ನಟನ ಕಾಮಿಡಿ ಹಾಗೂ ಇನ್ನೊಂದು ರಕ್ಷಿತಾ ಶೆಟ್ಟಿ ಅವರ ಕನ್ನಡ. ಪಟಪಟಾ ಅಂತ ತುಳು ಮಿಕ್ಸ್​ ಕನ್ನಡ ಮಾತನಾಡುತ್ತಾ ಎಲ್ಲರ ಮನಸ್ಸನ್ನು ಗೆದ್ದು ಮಂಗಳೂರು ಪುಟ್ಟಿ ಎಂದೇ ಫೇಮಸ್​ ಆದವರು ರಕ್ಷಿತಾ ಶೆಟ್ಟಿ (Rakshita Shetty). ಬಿಗ್​ಬಾಸ್​ 13 ಯಾಕೋ ವೀಕ್ಷಕರಿಗೆ ಹಿಡಿಸುತ್ತಲೇ ಇಲ್ಲ. ಇದರಿಂದ ಹೆಚ್ಚು ಟಿಆರ್​ಪಿ ತರುವುದಕ್ಕಾಗಿ ಹಲವಾರು ಸಾಹಸ ಮಾಡುತ್ತಿದ್ದರೂ, ಕಳೆದ ಸೀಸನ್​ ಗುಂಗಿನಲ್ಲಿಯೇ ಇರುವ ವೀಕ್ಷಕರು ಈ ಬಾರಿ ಸಿಕ್ಕಾಪಟ್ಟೆಸಪ್ಪೆ ಎನ್ನುತ್ತಿದ್ದಾರೆ. ಇದೇ ಕಾರಣಕ್ಕೆ ಇದಾಗಲೇ ಬಿಗ್​ಬಾಸ್ ಮನೆಗೆ ಕುಮಾರಿಯನ್ನು ಕಳುಹಿಸಲಾಗಿತ್ತು. ಆದರೆ ಅದ್ಯಾಕೋ ವರ್ಕ್​ಔಟ್​ ಆಗಿಲ್ವೋ ಏನೊ, ಇದೀಗ ರಕ್ಷಿತಾ ಶೆಟ್ಟಿಯನ್ನು ಬಿಗ್​ಬಾಸ್​ ಮನೆಯೊಳಕ್ಕೆ ಕಳುಹಿಸಲಾಗಿದೆ. ಇವರು ಅತಿಥಿಯಾಗಿ ಹೋಗಿದ್ದಾರೆ ಎನ್ನಲಾಗುತ್ತಿದೆ.

ತಮಾಷೆಯ ಮಂಗಳೂರು ಪುಟ್ಟಿ

ರಕ್ಷಿತಾ ಶೆಟ್ಟಿ ಎಂದ್ಮೇಲೆ ಅಲ್ಲಿ ಒಂದಷ್ಟು ತಮಾಷೆ ಇರಲೇಬೇಕು. ಅಷ್ಟಕ್ಕೂ ಬಿಗ್​ಬಾಸ್​ ಮನೆಯಲ್ಲಿ ರಕ್ಷಿತಾ ಶೆಟ್ಟಿ ಮತ್ತು ಗಿಲ್ಲಿ ನಟನ ಸ್ನೇಹದ ಬಗ್ಗೆಯೂ ಸಿಕ್ಕಾಪಟ್ಟೆ ತಮಾಷೆ ಸನ್ನಿವೇಶಗಳು ನಡೆದಿದ್ದವು. ಒಂದು ಹಂತದಲ್ಲಿ ನನಗೆ ಗಿಲ್ಲಿಯಂಥ ಹುಡುಗ ಬೇಕು ಎಂದು ರಕ್ಷಿತಾ ಶೆಟ್ಟಿ ಹೇಳಿದಾಗ, ಸೋಷಿಯಲ್​ ಮೀಡಿಯಾದಲ್ಲಿ ಇವರಿಬ್ಬರ ಫೋಟೋ ಎಐನಲ್ಲಿ ಮಾಡಿ ಮದುವೆಯನ್ನೇ ಮಾಡಿಸಿದ್ದು ಇದೆ. ಹೀಗೆಲ್ಲಾ ರಕ್ಷಿತಾ ಶೆಟ್ಟಿ ಫೇಮಸ್​ ಆಗಿದ್ರು.

ಗಂಡನಿಗೆ ಇವೆಲ್ಲಾ ಕ್ವಾಲಿಟಿ ಬೇಕು ನೋಡಿ

ಇದೀಗ ಅವರ ಮದುವೆಯ ಸುದ್ದಿಯನ್ನೇ ಮತ್ತೊಮ್ಮೆ ಕೇಳಲಾಗಿದೆ. ಅದಕ್ಕೆ ರಕ್ಷಿತಾ ಶೆಟ್ಟಿ ಪುನಃ ತಮ್ಮದೇ ಆದ ಹಾಸ್ಯದ ರೀತಿಯಲ್ಲಿ ಉತ್ತರ ಕೊಟ್ಟಿದ್ದು, ಅದನ್ನು ಕಲರ್ಸ್​ ಕನ್ನಡ ವಾಹಿನಿ ಶೇರ್​ಮಾಡಿದೆ. ಇಲ್ಲಿ ರಕ್ಷಿತಾ ಏನೇನು ಕ್ವಾಲಿಟಿ ಹೇಳಿದ್ದಾರೆ ನೋಡಿ.

- ತುಂಬಾ ತುಂಬಾ ತುಂಬಾ ಸೀರಿಯಲ್​ ಇರಬಾರದು. 100 ಪರ್ಸೆಂಟ್​ನಲ್ಲಿ 2 ಪರ್ಸೆಂಟ್​ ಸೀರಿಯಸ್​ನೆಸ್​ ಇದ್ದರೆ ಸಾಕು.

- ತುಂಬಾ ಸೆನ್ಸ್​ ಆಫ್​ ಹ್ಯೂಮರ್ಸ್​ ಇರಬೇಕು. ನನಗಂತೂ ತುಂಬಾ ನಗ್ತಾ ನಗ್ತಾ ಇರೋಕೆ ಇಷ್ಟ.

- ಕಿಚನ್​ನಲ್ಲಿ ಊಟ ಮಾಡಿದ್ರೆ (ಅಡುಗೆ) ಅವರು ತಿನ್ನಬೇಕು

- ನನ್ನ ವಿಡಿಯೋಸ್​ ತೆಗೆದುಕೊಳ್ಳಲು ಅವರು ಆಗಲ್ಲ ಅಂತ ಪ್ಚಿಪ್ಚಿ ಮಾಡಬಾರದು

- ಅವರಿಗೆ ಯಾವಾಗ್ಲೂ ಸುಸ್ತಾಗಬಾರದು.

- ಅವರ ಕೈಯಲ್ಲಿ ಯಾವಾಗ್ಲೂ ಫೋನ್​ ಇರಬೇಕು (ರಕ್ಷಿತಾ ವಿಡಿಯೋ ಬೇಕು ಎಂದಾಗಲೆಲ್ಲಾ ಶೂಟ್​ ಮಾಡಲು)

- ರಾತ್ರಿ ಬೇಗ ಮಲಗಬಾರದು. ರಾತ್ರಿ ಇಡೀ ಮಾತಾಡ್ತಾ ಇರಬೇಕು.

- ಅವರು ಪ್ರಾಣಿ ಲವರ್​ ಇರಬೇಕು. ನಾನು ನಾಯಿ ಬೇಕು ಎಂದ್ರೆ ಅವ್ರು ನಾಯಿ ತಗೊಂಡು ಬರಬೇಕು.

- ತೊಟ್ಟಿ ಮನೆ ಇರಬೇಕು. ಆ ಮನೆಯಲ್ಲಿ ನಾವಿಬ್ರೂ ಡಾನ್ಸ್​ ಮಾಡಬೇಕು. ಡಾನ್ಸ್​ಗೆ ನೋ ಅಂತ ಹೇಳಬಾರದು