ತಮಿಳು ಬಿಗ್‌ಬಾಸ್ ಸ್ಪರ್ಧಿ ಜೇಸನ್ ನಟಿ ರಮ್ಯಾಕೃಷ್ಣ ಬಳಿ ಉದ್ಧಟತನ ತೋರಿದ್ದಕ್ಕೆ ವೀಕ್ಷಕರು ಆಕ್ರೋಶಗೊಂಡಿದ್ದಾರೆ. ಈ ಸ್ಪರ್ಧಿಗೆ ತಕ್ಕ ಪಾಠ ಕಲಿಸಲು ಕಿಚ್ಚ ಸುದೀಪ್ ತಮಿಳು ಬಿಗ್‌ಬಾಸ್ ನಿರೂಪಣೆ ಮಾಡಬೇಕು ಎಂದು ಅಭಿಮಾನಿಯೊಬ್ಬರು ಮಾಡಿರುವ ವಿಡಿಯೋ ವೈರಲ್ ಆಗಿದೆ.
ಕನ್ನಡದ ಬಿಗ್ಬಾಸ್ನ 13 ಸೀಸನ್ಗಳನ್ನು ಅಚ್ಚುಕಟ್ಟಾಗಿ ನಿರೂಪಣೆ ಮಾಡುತ್ತಾ ಬಂದವರು ಕಿಚ್ಚ ಸುದೀಪ್. ಇವರಿಂದಾಗಿಯೇ ಈ ಷೋಗೆ ಒಂದು ಕಳೆ ಬಂದಿದೆ. ಕಳೆದ ಬಾರಿ ಸುದೀಪ್ ಅವರು ತಾವಿನ್ನು ನಿರೂಪಣೆ ಮಾಡುವುದಿಲ್ಲ ಎಂದು ಹೇಳಿ ಅಭಿಮಾನಿಗಳಿಗೆ ಶಾಕ್ ಕೊಟ್ಟಿರುವ ವಿಷ್ಯ ಗೊತ್ತೇ ಇದೆ. ಕೊನೆಗೂ ಅವರು ಷೋಗೆ ಮರಳಿ ಮುಂದಿನ ನಾಲ್ಕು ಸೀಸನ್ಗೆ ಬುಕ್ ಮಾಡಿಕೊಂಡರು. ಸುದೀಪ್ ಅವರು, ಸ್ಪರ್ಧಿಗಳಿಗೆ ಖಡಕ್ ಕ್ಲಾಸ್ ತೆಗೆದುಕೊಳ್ಳುವುದರಲ್ಲಿ ಯಾವತ್ತೂ ಹಿಂದೆ ಬೀಳುವುದಿಲ್ಲ. ಇದೇ ಕಾರಣಕ್ಕೆ ಇದೀಗ ತಮಿಳಿನ ಬಿಗ್ಬಾಸ್ನಲ್ಲಿಯೂ ಸುದೀಪ್ ಅವರು ಎಂಟ್ರಿ ಕೊಡುವಂತೆ ಅವರ ಅಭಿಮಾನಿಯೊಬ್ಬರು ಮಾಡಿರುವ ಮನವಿಯ ವಿಡಿಯೋ ಈಗ ವೈರಲ್ ಆಗಿದೆ.
ವಿಡಿಯೋ ವೈರಲ್
ತೆಲುಗುವಿನಲ್ಲಿ ಈ ವಿಡಿಯೋ ಅನ್ನು ಶ್ಯಾಮ್ ಬಾಲಾಜಿ ಎನ್ನುವವರು ಶೇರ್ ಮಾಡಿಕೊಂಡಿದ್ದಾರೆ. ಕಿಚ್ಚಾ ಸುದೀಪ್ ಸಾರ್, ನೀವು ತಮಿಳ್ ಬಿಗ್ ಬಾಸ್ ಗೆ ಬಂದು ಹೋಸ್ಟ್ ಮಾಡಿ ಸಾರ್ ಎಂದು ಅವರು ಬೇಡಿಕೊಂಡಿದ್ದಾರೆ. ಈ ಕಂಟೆಂಸ್ಟೆಂಟ್ ಇದನಲಾ ಇವನು ಓವರ್ ಆಟಿಟ್ಯೂಡ್ ಮಾಡ್ತಾ ಇದಾನೆ. ಅವನನ್ನು ತಹಬದಿಗೆ ತರಲು ನೀವೇ ಸರಿ, ದಯವಿಟ್ಟು ನೀವೇ ಬಂದು ಹೋಸ್ಟ್ ಮಾಡಿ ಎಂದು ಅದರಲ್ಲಿ ಯುವಕ ಹೇಳಿದ್ದಾರೆ.
ಸ್ಪರ್ಧಿಯ ಉದ್ಧಟತನ
ಅಷ್ಟಕ್ಕೂ ಆಗಿರುವುದು ಏನೆಂದರೆ, ಸದ್ಯ ತಮಿಳು ಬಿಗ್‌ಬಾಸ್ ಅನ್ನು ನಟ ವಿಜಯ್ ಸೇತುಪತಿ ನಿರೂಪಣೆ ಮಾಡುತ್ತಿದ್ದಾರೆ. ಕಳೆದ ವಾರ ರಮ್ಯಕೃಷ್ಣ ಅವರು ನಿರೂಪಣೆಗೆ ಬಂದಿದ್ದರು. ಈ ಸಂದರ್ಭದಲ್ಲಿ, ಜೇಸನ್ ಎಂಬ ಸ್ಪರ್ಧಿ ರಮ್ಯಾಕೃಷ್ಣ ಅವರ ಎದುರು ಉದ್ಧಟತನ ಪ್ರದರ್ಶಿಸಿದ್ದ. ಇದರಿಂದ ಹಲವರು ರೊಚ್ಚಿಗೆದ್ದಿದ್ದರು. ಇಂಥವರಿಗೆ ಬುದ್ಧಿ ಕಲಿಸಲು ನೀವೇ ಸರಿ, ಅದಕ್ಕಾಗಿಯೇ ಬನ್ನಿ ಎನ್ನುವುದು ಸುದೀಪ್ ಅವರಿಗೆ ಯುವಕ ಮಾಡಿಕೊಂಡಿರುವ ಮನವಿ.
ಈ ಎಪಿಸೋಡ್ನಲ್ಲಿ ಜೇಸನ್ ಎಂಬ ಸ್ಪರ್ಧಿ ನಟಿ ರಮ್ಯಾಕೃಷ್ಣ ಮಾತ್ರವಲ್ಲದೇ, ಸಹ ಸ್ಪರ್ಧಿ ಮುನಿಯಮ್ಮ ಬಳಿಯೂ ಉದ್ಧತನ ತೋರಿದ್ದ. ಈ ಬಗ್ಗೆ ನಟಿ ಹೇಳುತ್ತಿರುವಾಗ, ಆತ, ಅವರ ಜೊತೆಗೂ ಉದ್ಧಟತನ ಪ್ರದರ್ಶಿಸಿದ್ದ. ರಮ್ಯಾಕೃಷ್ಣ ಅವರು ವೀಕೆಂಡ್ ಎಪಿಸೋಡ್ಗೆ ಬಂದಿದ್ದರು. ಆಗ ಜೇಸನ್, ‘ನಾನು ಯಾರಿಗೂ ಮರ್ಯಾದೆ ಕೊಡುವುದಿಲ್ಲ. ಬಿಗ್‌ಬಾಸ್, ರಮ್ಯಾ ಕೃಷ್ಣ, ಜನರಿಗೂ ಮರ್ಯಾದೆ ಕೊಡುವುದಿಲ್ಲ’ ಎಂದಿದ್ದ. ರಮ್ಯಾ ಕೃಷ್ಣ ಎದುರು ಸಹ ಬಹಳ ಉದ್ಧಟತನದಿಂದ ಮಾತನಾಡಿದ್ದ. ಇದು ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಆ ಬಳಿಕ ಜೇಸನ್, ರಮ್ಯಾಕೃಷ್ಣ ಮತ್ತು ಮುನಿಯಮ್ಮ ಬಳಿ ಕ್ಷಮೆ ಕೇಳಿದ್ದ. ಅದಕ್ಕಾಗಿಯೇ ಇಂಥವರನ್ನು ಸರಿದಾರಿಗೆ ತರಲು ಸುದೀಪ್ ಸರಿಯಾದವರು ಎನ್ನುವುದು ಯುವಕನ ಅಭಿಪ್ರಾಯ.






