ಹೆಂಡ್ತಿ ಭಾಗ್ಯ ಇದ್ರೂ ಶ್ರೇಷ್ಠಾ ಜೊತೆ ಸುತ್ತಾಡೋ ತಾಂಡವ್; ಮುದ್ದಾದ ಹೆಂಡ್ತಿಯಿದ್ರೂ ಗಂಡಸರಿಗ್ಯಾಕೆ ಇಷ್ಟು ಚಪಲ?
ಇತ್ತೀಚಿನ ವರ್ಷಗಳಲ್ಲಿ ಅನೈತಿಕ ಸಂಬಂಧ ಅನ್ನೋದು ಹೆಚ್ಚು ಸಾಮಾನ್ಯವಾಗುತ್ತಿದೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲೂ ವಿವಾಹೇತರ ಸಂಬಂಧದ ಕಥೆಯಿದೆ. ಇಷ್ಟಕ್ಕೂ ಮನೆಯಲ್ಲಿ ಮುದ್ದಾದ ಹೆಂಡ್ತಿಯಿದ್ರೂ ಗಂಡಸರಿಗ್ಯಾಕೆ ಇಷ್ಟು ಚಪಲ?
ಇವತ್ತಿನ ಕಾಲದಲ್ಲಿ ಅತ್ಯಂತ ಕಡಿಮೆ ವ್ಯಾಲಿಡಿಟಿ ಇರೋ ವಿಷ್ಯ ಏನಾದ್ರೂ ಇದ್ರೆ ಅದು ಸಂಬಂಧ. ಅದರಲ್ಲೂ ಮದುವೆ ಸಂಬಂಧ ಅಂತೂ ಯಾವಾಗ ಕೂಡುತ್ತೋ, ಯಾವಾಗ ಮುರಿದು ಬೀಳುತ್ತೋ ಹೇಳೋಕೆ ಆಗಲ್ಲ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಅನೈತಿಕ ಸಂಬಂಧ ಅನ್ನೋದು ಹೆಚ್ಚು ಸಾಮಾನ್ಯವಾಗುತ್ತಿದೆ. ಗಂಡ ಆಫೀಸಿನಲ್ಲಿ ಇನ್ನೊಬ್ಬಳ ಜೊತೆ ಸಂಬಂಧ ಇಟ್ಕೊಳ್ಳೋದು, ಹೆಂಡ್ತಿ ಮನೆಯ ಪಕ್ಕ ಇನ್ನೊಬ್ಬನ ಜೊತೆ ಓಡಾಡೋದು. ನಂತರ ಇಬ್ಬರೂ ಏನೂ ಗೊತ್ತಿಲ್ಲದವರಂತೆ ಅತ್ಯುತ್ತಮ ದಂಪತಿಗಳಂತೆ ಒಟ್ಟಿಗೆ ಇರೋದು ಹೊಸ ವಿಚಾರವಲ್ಲ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲೂ ವಿವಾಹೇತರ ಸಂಬಂಧದ (Extra marital affair) ಕಥೆಯಿದೆ. ಈಗಾಗ್ಲೇ ಮದುವೆಯಾಗಿರೋ ತಾಂಡವ್, ಮನೆಯಲ್ಲಿ ಮುದ್ದಾದ ಹೆಂಡತಿ ಭಾಗ್ಯ ಇದ್ದರೂ ಆಫೀಸಿನಲ್ಲಿ ಶ್ರೇಷ್ಠಾ ಎಂಬವಳ ಜೊತೆ ಓಡಾಡುತ್ತಿರುತ್ತಾನೆ. ಮನೆಯಲ್ಲಿ ಮುದ್ದಾದ ಹೆಂಡ್ತಿ (Wife), ಜೀವಕ್ಕಿಂತ ಹೆಚ್ಚು ಪ್ರೀತಿಸೋ ಮಕ್ಕಳಿದ್ದರೂ ಯಾವಾಗ ನೋಡಿದರೂ ಶ್ರೇಷ್ಠಾ ಜೊತೆ ಓಡಾಡುತ್ತಾ, ಅವಳೊಂದಿಗೆ ಸಮಯ ಕಳೆಯುತ್ತಾ ಆಕೆಗಾಗಿ ಹಂಬಲಿಸುತ್ತಿರುತ್ತಾನೆ. ಇತ್ತ, ಸದ್ಗೃಹಿಣಿಯಂತಿರೋ ಭಾಗ್ಯ ಇದ್ಯಾವುದರ ಅರಿವೇ ಇಲ್ಲದೆ ಅತ್ತೆ-ಮಾವ, ಗಂಡ-ಮಕ್ಕಳು ಅಂತ ಖುಷಿಯಾಗಿದ್ದಾಳೆ. ಇತ್ತೀಚಿಗಷ್ಟೇ ಆಕೆಗೆ ಗಂಡನ ವರ್ತನೆಯ ಬಗ್ಗೆ ಅನುಮಾನ ಶುರುವಾಗಿದೆ.
ದಿನ ಕಳೆದಂತೆ ದಾಂಪತ್ಯದಲ್ಲಿ ಬಿರುಕು ಹೆಚ್ಚುತ್ತಿದ್ಯಾ? ಹಾಗಿದ್ರೆ ಇವಿಷ್ಟು ಮಾಡಿ!
ಇಷ್ಟಕ್ಕೂ ಮದುವೆಯಾಗಿ ದಾಂಪತ್ಯದಲ್ಲಿ ಯಾವುದೇ ತೊಂದರೆಯಿಲ್ಲದೆ ಸುಗಮವಾಗಿ ಸಾಗುತ್ತಿದ್ದರೂ ಗಂಡದಿರಿಗ್ಯಾಕೆ ಇನ್ನೊಬ್ಬಳ ಮೇಲೆ ಮೋಹ. ಮ್ಯಾರೀಡ್ ಲೈಫ್‌ನಲ್ಲಿ ಯಾವುದೇ ಸಮಸ್ಯೆಯಿಲ್ಲದಿದ್ದರೂ ಯಾಕೆ ಇನ್ನೊಬ್ಬ ಹೆಂಗಸಿನ ಮೇಲೆ ಮೋಹ? ವಿವಾಹೇತರ ಸಂಬಂಧವನ್ನು ಸಮರ್ಥಿಸಲು ಯಾವುದೇ ಕಾರಣ ಕೊಟ್ಟರೂ ಸರಿ ಹೋಗುವುದಿಲ್ಲ. ಆದರೂ ಪುರುಷರು ವಿವಾಹೇತರ ಸಂಬಂಧಗಳು ಬೆಳೆಸಲು ಈ ಕೆಲವು ವಿಷಯಗಳು ಕಾರಣವಾಗುತ್ತವೆ ಎಂದು ತಜ್ಞರು ತಿಳಿಸುತ್ತಾರೆ.
ಒತ್ತಾಯದ ಮದುವೆ : ಅರೆಂಜ್ ಮ್ಯಾರೇಜ್ ನಲ್ಲಿ ಮಾತ್ರವಲ್ಲ ಲವ್ ಮ್ಯಾರೇಜ್ ನಲ್ಲೂ ಒತ್ತಾಯದ ಮದುವೆ ನಡೆದಿರುತ್ತದೆ. ಪಾಲಕರು ಅಥವಾ ಸಂಗಾತಿ ಒತ್ತಾಯಕ್ಕೆ ಕೆಲವರು ಮದುವೆಯಾಗಿರ್ತಾರೆ. ಅವರ ಇಷ್ಟ-ಕಷ್ಟಗಳು ಮದುವೆಯಾಗಿರುವ ಸಂಗಾತಿಯೊಂದಿಗೆ ತಾಳೆಯಾಗೋದಿಲ್ಲ. ಹೀಗಾಗಿ ಅನಿವಾರ್ಯವಾಗಿ ಅನೇಕ ಬಾರಿ ಇಂಥ ಮದುವೆಗಳು ವಿವಾಹೇತರ ಸಂಬಂಧದಲ್ಲಿ ಅಂತ್ಯ ಕಾಣುತ್ತದೆ.
ದಾಂಪತ್ಯದಲ್ಲಿ ಜಗಳ : ಹೊಂದಾಣಿಕೆಯಿದ್ದರೆ ಸರಿ. ಜಗಳ ನಡೆಯೋ ದಾಂಪತ್ಯ ಹೆಚ್ಚು ದಿನ ಉಳಿಯೋಕೆ ಸಾಧ್ಯವಿಲ್ಲ. ಮನೆಯವರು ಹಾಗೂ ಪತ್ನಿ ಮಧ್ಯೆ ಹೊಂದಾಣಿಕೆ ಇಲ್ಲದೆ ಹೋಗಾದ ಪುರುಷ ಒತ್ತಡಕ್ಕೆ ಒಳಗಾಗ್ತಾನೆ. ಇಬ್ಬರನ್ನು ಸಂಭಾಳಿಸಲಾಗದೆ ಸುಸ್ತಾಗುವ ಪುರುಷ, ನೆಮ್ಮದಿಗಾಗಿ ಬೇರೆ ದಾರಿ ನೋಡಿಕೊಳ್ತಾನೆ. ಪರಸ್ತ್ರೀ ಸಹವಾಸ ಮಾಡಿ ನೆಮ್ಮದಿ ಕಂಡುಕೊಳ್ಳುವ ಪ್ರಯತ್ನ ನಡೆಸುತ್ತಾನೆ.
ಈ ಕಪಲ್‌ಗೆ ತಮ್ಮ ಸಂಗಾತಿ ಬೇರೆಯವರ ಜೊತೆ ಹೋದ್ರೂ ಬೇಜಾರಾಗೋಲ್ಲ!
ದೀರ್ಘ ಸಂಬಂಧದಿಂದ ಬೇಸರ : ಮದುವೆ ಆರಂಭದಲ್ಲಿ ಎಲ್ಲವೂ ಚೆನ್ನಾಗಿರುತ್ತದೆ. ಒಬ್ಬರನ್ನೊಬ್ಬರು ಅರಿಯುವ ಆಸಕ್ತಿ, ಕುತೂಹಲವಿರುತ್ತದೆ. ದಿನಕಳೆದಂತೆ ಇಬ್ಬರೂ ಹಳಬರಾಗುವ ಕಾರಣ ವಿಶೇಷ ಆಸಕ್ತಿ, ಗಮನ ನೀಡುವ ಅಗತ್ಯವಿರೋದಿಲ್ಲ. ಪುರುಷರಿಗೆ ಇದು ಬೇಸರತರಿಸಲು ಶುರುವಾಗಿರುತ್ತದೆ. ಹೊಸತನ ಬಯಸುವ ಕೆಲ ಪುರುಷರು ವಿವಾಹೇತರ ಸಂಬಂಧದಲ್ಲಿ ಆಸಕ್ತಿ ತೋರಿಸುತ್ತಾರೆ. ಸಂಗಾತಿ ಜೊತೆ ಸಿಗದ ಅನುಭವವನ್ನು ಬೇರೆಯವರ ಜೊತೆ ಪಡೆಯಲು ಪ್ರಯತ್ನಿಸುತ್ತಾನೆ.
ಬದಲಾವಣೆ ಬೇಕೆನಿಸುತ್ತದೆ: ಯಾವುದೇ ವಸ್ತುವನ್ನು ದೀರ್ಘಕಾಲ ಬಳಸುವುದು ಯಾರಿಗಾದರೂ ಬೇಜಾರು ತರುವ ವಿಷಯ. ನಾವು ಡ್ರೆಸ್, ಮೊಬೈಲ್, ಕಾರು ಎಲ್ಲವನ್ನೂ ಬದಲಾಯಿಸುತ್ತೇವೆ. ಯಾಕೆಂದರೆ ಇವೆಲ್ಲವೂ ವರ್ಷಗಳ ಕಾಲ ಜೊತೆಗಿದ್ದಾಗ ನಮಗೆ ಬೋರೆನಿಸಲು ಶುರುವಾಗುತ್ತದೆ. ಹಾಗೆಯೇ ಕೆಲವೊಬ್ಬರ ಪಾಲಿಗೆ ಸಂಬಂಧ ಕೂಡಾ. ಜೊತೆಗೆ ಹೆಚ್ಚು ವರ್ಷ ಕಳೆದ ಹಾಗೆ ಬೋರು ತರಿಸುತ್ತದೆ. ಹೀಗಾಗಿಯೇ ಹೊಸತನಕ್ಕೆ ಹುಡುಕಾಟ ಶುರುವಾಗುತ್ತದೆ.