Weird Love Story: ಆಕೆ ಮುತ್ತಿಟ್ಟು ನಿದ್ದೆ ಕೆಡಿಸಿದಳು, ಈತ ಆಕೆಗೆ ಬೇರೆ ಮದುವೆಯಾಗದಂತೆ ಮಾಡಿದ
Weird News: ಒಳ್ಳೆಯ ಸ್ನೇಹಿತರು,ಒಳ್ಳೆಯ ಜೀವನ ಸಂಗಾತಿ ಆಗ್ತಾರೆ ಎಂಬ ನಂಬಿಕೆ ಅನೇಕರಲ್ಲಿದೆ. ಸ್ನೇಹಿತರನ್ನು ಸಂಗಾತಿಯನ್ನಾಗಿ ಮಾಡಿಕೊಳ್ಬೇಕೆಂದು ಅನೇಕರು ಪ್ರಯತ್ನಿಸ್ತಾರೆ. ಅದ್ರಲ್ಲಿ ಈತ ಕೂಡ ಒಬ್ಬವನು. ಪ್ರೀತಿಗಾಗಿ ಆತ ಮಾಡಿದ ಕೆಲಸ ಏನು ಗೊತ್ತಾ?
ಸ್ನೇಹಿತ (Friend) ರಿಗೆ ನಾವು ಏನೆಲ್ಲ ಮಾಡ್ತೇವೆ ಎಂಬುದನ್ನು ಪ್ರತ್ಯೇಕವಾಗಿ ಹೇಳ್ಬೇಕಾಗಿಲ್ಲ. ಅದ್ರಲ್ಲೂ ಸ್ನೇಹಿತರನ್ನು ಪ್ರೀತಿ (Love) ಸಲು ಶುರು ಮಾಡಿದಾಗ ಜೀವನಕ್ಕೆ ಜೀವ ಕೊಡಲು ಸಿದ್ಧರಿರ್ತಾರೆ ಜನ. ಸ್ನೇಹಿತರನ್ನು ಬಾಳಸಂಗಾತಿಯನ್ನಾಗಿ ಪಡೆಯಲು ಪುಣ್ಯ ಮಾಡಿರಬೇಕು. ಬೆಸ್ಟ್ ಫ್ರೆಂಡ್ (Best Friend) ಸ್ವಭಾವದಿಂದ ಹಿಡಿದು ಎಲ್ಲವೂ ಗೊತ್ತಿರುವ ಕಾರಣ ಅವರ ಜೊತೆ ಸಂಸಾರ ನಡೆಸುವುದು ಸುಲಭ ಎನ್ನುವವರಿದ್ದಾರೆ. ಆದ್ರೆ ಸ್ನೇಹಕ್ಕೆ ಪ್ರೀತಿ ಸಂಬಂಧ ನೀಡಿದಾಗ ಅದನ್ನು ಎಲ್ಲರೂ ಒಪ್ಪುವುದಿಲ್ಲ. ಕೆಲವರು ಸ್ನೇಹವನ್ನು ಪವಿತ್ರವಾಗಿ ನೋಡ್ತಾರೆ. ಸ್ನೇಹವೇ ಬೇರೆ ಪ್ರೀತಿಯೇ ಬೇರೆ ಎನ್ನುವವರಿದ್ದಾರೆ. ಇಲ್ಲೊಬ್ಬ ವ್ಯಕ್ತಿ ಕೂಡ ಸ್ನೇಹಿತೆಯನ್ನು ಪ್ರೀತಿ ಮಾಡಿ, ಆಕೆಯನ್ನು ಪಡೆಯಲು ನಿರಂತರ ಪ್ರಯತ್ನ ನಡೆಸುತ್ತಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ತನ್ನ ಕಥೆ ಹೇಳಿಕೊಂಡಿದ್ದಾನೆ.
ಸ್ನೇಹಿತೆ ಪ್ರೀತಿಗೆ ಬಿದ್ದ ವ್ಯಕ್ತಿಯ ಕಥೆ ಏನು ? : ಹೈಸ್ಕೂಲಿನಲ್ಲಿ ಆತನ ಸ್ನೇಹದ ಜೊತೆ ಪ್ರೀತಿಯೂ ಚಿಗುರಿತ್ತಂತೆ. ನೋಡಲು ಸುಂದರವಾಗಿರುವ ಹಾಗೂ ಎಲ್ಲರನ್ನೂ ಆಕರ್ಷಿಸುವ ಹುಡುಗಿ ಹೈಸ್ಕೂಲ್ ಗೆ ಬರ್ತಿದ್ದಂತೆ ಎಲ್ಲರ ಮನಸ್ಸು ಕದ್ದಿದ್ದಳಂತೆ. ಅದ್ರಲ್ಲಿ ಈತ ಕೂಡ ಒಬ್ಬವನು. ದಿನ ಕಳೆದಂತೆ ಇಬ್ಬರ ಮಧ್ಯೆ ಸ್ನೇಹ ಶುರುವಾಗಿತ್ತಂತೆ. ಜೀವನ ಪೂರ್ತಿ ನನ್ನ ಜೊತೆಗಿರಬೇಕಾದವಳು ಇವಳೇ ಎಂದು ಆಕೆಯನ್ನು ನೋಡಿದ ತಕ್ಷಣ ಹೇಳಿತ್ತಂತೆ ಮನಸ್ಸು. ಸುಂದರ ಹುಡುಗಿ ಸ್ನೇಹಿತೆಯಾಗಿದ್ದಾಳೆ ಎಂಬ ಖುಷಿಯಲ್ಲಿಯೇ ಹೈಸ್ಕೂಲ್ ಜೀವನ ಮುಗಿಸಿದ ವ್ಯಕ್ತಿ ಕಾಲೇಜ್ ಗೆ ಹೋಗ್ತಿದ್ದಂತೆ ಪ್ರೇಮ ನಿವೇದನೆ ಮಾಡಿದ್ದನಂತೆ.
ಪ್ರೀತಿ ನಿರಾಕರಿಸಿದ ಸ್ನೇಹಿತೆ : ಎಲ್ಲರ ಮುಂದೆ ಬೆಸ್ಟ್ ಫ್ರೆಂಡ್ ಎನ್ನುತ್ತಿದ್ದ ಹುಡುಗಿಗೆ ಅಂದು ಸ್ವಲ್ಪ ಶಾಕ್ ಆಗಿತ್ತಂತೆ. ಸ್ನೇಹಿತ ಬಂದು ಪ್ರೇಮ ನಿವೇದನೆ ಮಾಡಿದಾಗ ಅದನ್ನು ಹುಡುಗಿ ನಿರಾಕರಿಸಿದ್ದಳಂತೆ. ನಿನ್ನ ಜೊತೆ ರೋಮ್ಯಾನ್ಸ್ ಕಲ್ಪನೆ ಸಾಧ್ಯವಿಲ್ಲ ಎಂದಿದ್ದ ಹುಡುಗಿ ಸ್ನೇಹದ ಗಡಿ ಹಾಕಿದ್ದಳಂತೆ. ಪ್ರೀತಿಗೆ ಒಪ್ಪದ ಹುಡುಗಿಯನ್ನು ಬಿಡಲು ಮನಸ್ಸಿಲ್ಲದ ಹುಡುಗ ಸ್ನೇಹ ಮುಂದುವರೆಸಿದ್ದನಂತೆ. ಇಬ್ಬರ ಮಧ್ಯೆ ಮೊದಲಿದ್ದ ಸ್ನೇಹ ಮತ್ತೆ ಗಟ್ಟಿಯಾಗಲು ಸ್ವಲ್ಪ ಸಮಯ ಹಿಡಿದಿತ್ತಂತೆ. ಆಕೆ ಜೊತೆ ಸದಾ ಇರ್ತಿದ್ದ ಹುಡುಗ, ಆಕೆಯ ಪ್ರತಿಯೊಂದು ಆಗು-ಹೋಗುಗಳಿಗೆ ನೆರವಾಗ್ತಿದ್ದನಂತೆ. ಸ್ನೇಹಿತೆಯನ್ನು ಸಂಪೂರ್ಣ ಅರ್ಥ ಮಾಡಿಕೊಂಡವನಿಗೆ ಆಕೆ ಪ್ರೀತಿ ನಿರಾಕರಿಸಿದ್ದ ಬೇಸರ ಮಾತ್ರ ಮನಸ್ಸಿನಲ್ಲಿ ಉಳಿದಿತ್ತಂತೆ. ಸ್ನೇಹಿತೆ ಪ್ರೀತಿಸಲು ಬರ್ತಿದ್ದ ಹುಡುಗರನ್ನು ಓಡಿಸುವ ಕೆಲಸವೂ ನಡೆದಿತ್ತು ಎನ್ನುತ್ತಾನೆ ಆತ.
ಇದನ್ನೂ ಓದಿ: ಹಿರಿಯರು ಮಕ್ಕಳನ್ನು ಮಣ್ಣಲ್ಲಿ ಆಡೋಕೆ ಬಿಡಿ ಅಂತ ಹೇಳೋದ್ಯಾಕೆ ?
ಇನ್ನೊಬ್ಬನ ಜೊತೆ ಎಂಗೇಜ್ಮೆಂಟ್ : ಎಲ್ಲ ಹುಡುಗರನ್ನು ಓಡಿಸಲು ಯಶಸ್ವಿಯಾಗಿದ್ದ ಈತನಿಗೆ ಪೈಪೋಟಿ ನೀಡಿದ್ದು ಹಿಮಾಂಶು. ಹುಡುಗಿ ಮನಸ್ಸು ಕದಿಯಲು ಯಶಸ್ವಿಯಾಗಿದ್ದ ಹಿಮಾಂಶು, ಆಕೆಯನ್ನು ಗಾಢವಾಗಿ ಪ್ರೀತಿಸಲು ಶುರು ಮಾಡಿದ್ದನಂತೆ. ಆತ ಮಾತ್ರವಲ್ಲ ಹುಡುಗಿ ಕೂಡ ಪ್ರೀತಿಯಲ್ಲಿ ಬಿದ್ದಿದ್ದಳಂತೆ. ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಸಾಧ್ಯವೇ ಇಲ್ಲ ಎಂದು ನಿರಾಶೆಯಾಗಿದ್ದವನಿಗೆ ಆಕಾಶ ಕೆಳಗೆ ಬಿದ್ದಿದ್ದು ಹುಡುಗಿ ಎಂಗೇಜ್ಮೆಂಟ್ ವಿಷ್ಯ ಕೇಳಿ. ಸ್ನೇಹಿತನ ಬಳಿ ಬಂದು ಹಿಮಾಂಶು ಜೊತೆ ನಿಶ್ಚಿತಾರ್ಥವಾಗಿದೆ ಎಂದಾಗ ಹುಡುಗ ನಿಂತಲ್ಲೇ ಕುಸಿದಿದ್ದನಂತೆ.
ಯಶಸ್ವಿಯಾಯ್ತು ಬಿಟ್ಟ ಬಾಣ : ಹುಡುಗಿಯನ್ನು ಎಂದಿಗೂ ಬಿಟ್ಟುಕೊಡಲು ಮನಸ್ಸಿಲ್ಲದ ಹುಡುಗ ಹಿಮಾಂಶು ಹಿನ್ನಲೆ ಹುಡುಕಾಟ ಶುರು ಮಾಡಿದ್ದನಂತೆ. ಆಗ ಸಿಕ್ಕಿದ್ದು ಆತನ ಹಳೆ ಪ್ರೀತಿ. ಮೂರ್ನಾಲ್ಕು ತಿಂಗಳು ವಿಚ್ಛೇದಿತ ಮಹಿಳೆ ಜೊತೆ ಹಿಮಾಂಶು ಸಂಬಂಧವಿತ್ತು ಎಂಬುದನ್ನು ಹುಡುಗಿ ಕಿವಿಗೆ ಹಾಕಿದ ಹುಡುಗ ಕಾರಣವೇನು ಎಂಬುದನ್ನೂ ಪತ್ತೆ ಮಾಡಿದ್ದನಂತೆ. ಇದ್ರಿಂದ ಕೋಪಗೊಂಡ ಹುಡುಗಿ ನಿರೀಕ್ಷೆಯಂತೆ ಹಿಮಾಂಶುವಿನಿಂದ ದೂರವಾದ್ಲಂತೆ.
ಇದನ್ನೂ ಓದಿ: ಹೆಂಡ್ತಿ ನನ್ಗಿಂತ ಹೆಚ್ಚು ನನ್ನ ಸ್ನೇಹಿತರ ಜೊತೇನೆ ಮಾತನಾಡ್ತಾಳೆ..ಏನ್ಮಾಡ್ಲಿ ?
ಮತ್ತೆ ಚಿಗುರೊಡೆಯುತ್ತಿರುವ ಪ್ರೀತಿ : ಹಿಮಾಂಶು ದೂರ ಮಾಡಿ ಬಂದ ಹುಡುಗಿ, ಈತನಿಗೆ ಹತ್ತಿರವಾಗ್ತಿದ್ದಾಳಂತೆ. ತುಟಿಗೆ ಮುತ್ತಿಟ್ಟು ನಿದ್ರೆ ಹಾಳು ಮಾಡಿರುವ ಸ್ನೇಹಿತೆ ತನ್ನ ಬಳಿ ಬಂದೇ ಬರ್ತಾಳೆಂಬ ನಂಬಿಕೆ ಈತನಿಗಿದೆಯಂತೆ.