ಹೆಂಡ್ತಿ ನನ್ಗಿಂತ ಹೆಚ್ಚು ನನ್ನ ಸ್ನೇಹಿತರ ಜೊತೇನೆ ಮಾತನಾಡ್ತಾಳೆ..ಏನ್ಮಾಡ್ಲಿ ?

ಹೆಂಡ್ತಿ (Wife) ನಾನು ಚೆನ್ನಾಗೇ ಇದ್ದೀವಿ. ಆದ್ರೆ ನನ್ ಹೆಂಡ್ತಿ ನನ್ನ ಜೊತೆ ಮಾತನಾಡೋದಕ್ಕಿಂತ ಹೆಚ್ಚು ನನ್ನ ಸ್ನೇಹಿತರ (Friends) ಜತೆನೇ ಮಾತನಾಡ್ತಾಳೆ. ಫ್ರೆಂಡ್ಸ್‌ ನನ್ನ ಪರ್ಸನಲ್ ವಿಷ್ಯ ಮಾತನಾಡಿಕೊಂಡು ನಗ್ತಾರೆ. ಹೆಂಡ್ತಿಯ ಈ ಸಮಸ್ಯೆ (Problem)ಗೆ ಏನ್ಮಾಡ್ಲಿ ಅನ್ನೊದು ಗಂಡನ ಗೋಳು.

Wife Talks Alot With My Friends, Not With Me, What To Do Vin

ಗಂಡ-ಹೆಂಡತಿ (Husband-Wife) ಸಂಬಂಧ ಎಂಬುದು ತುಂಬಾ ಸೂಕ್ಷ್ಮವಾದುದು. ದಾಂಪತ್ಯ (Married Life) ಚೆನ್ನಾಗಿರಲು ಇಬ್ಬರೂ ಪರಸ್ಪರ ಸಾಮರಸ್ಯದಿಂದ  ಬಾಳ್ವೆ ನಡೆಸಬೇಕಾದುದು ಮುಖ್ಯ. ಅದರಲ್ಲೂ ಗಂಡ-ಹೆಂಡಿರ ಮಧ್ಯೆ ಪರಸ್ಪರ ಪ್ರೀತಿ, ನಂಬಿಕೆ, ಪರಸ್ಪರ ನಂಬಿಕೆಯಂತೂ ಇರಲೇಬೇಕು. ಆದರೆ ಅದೆಷ್ಟೋ ದಾಂಪತ್ಯ ಅಪನಂಬಿಕೆ, ಅವಿಶ್ವಾಸದಿಂದಲೇ ಮುರಿದುಬೀಳುತ್ತವೆ. ಹೀಗಾಗಿ ಇಂಥಾ ವಿಷಯಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾದ ಅಗತ್ಯವಿದೆ.

ದಾಂಪತ್ಯದಲ್ಲಿ ಗಂಡ-ಹೆಂಡತಿ ಮಧ್ಯೆ ಕೆಲವೊಮ್ಮೆ ಅತಿಯಾದ ಪ್ರೀತಿ (Love) ಅಥವಾ ಕಾಳಜಿಯಿರುತ್ತದೆ. ಇನ್ನೂ ಕೆಲವೊಮ್ಮೆ ಸಂಗಾತಿಯ ಬಗ್ಗೆ ಹೆಚ್ಚು ನಿರ್ಲಕ್ಷ್ಯವಿರುತ್ತದೆ. ಮದುವೆಯ ಮೊದಲಿದ್ದ ಕ್ರೇಜ್‌ ಗಂಡ ಅಥವಾ ಹೆಂಡತಿಯ ಮಧ್ಯೆ ಇರುವುದಿಲ್ಲ. ವ್ಯಕ್ತಿತ್ವ ಸಪ್ಪೆಯೆನಿಸಿ ವ್ಯಕ್ತಿ ಬೋರೆನಿಸಲು ಶುರುವಾಗುತ್ತಾನೆ. ಹೀಗಾದಾಗಲೇ ಗಂಡ, ಹೆಂಡತಿ ಮನೆಯ ಹೊರಗೆ ಪ್ರೀತಿ ಹುಡುಕಲು ಶುರು ಮಾಡುತ್ತಾರೆ. ಇದು ಅಕ್ರಮ ಸಂಬಂಧಕ್ಕೆ ದಾರಿ ಮಾಡಿಕೊಟ್ಟು ದಾಂಪತ್ಯ ಮುರಿಯಲು ಕಾರಣವಾಗುತ್ತದೆ. ಇಲ್ಲಾಗಿದ್ದು ಅದೇ ಹೆಂಡ್ತಿ ನನ್ನ ಜೊತೆ ಹೆಚ್ಚು ಮಾತನಾಡದೆ ನನ್ನ ಫ್ರೆಂಡ್ಸ್ (Friends) ಜತೆ ನಗು ನಗುತ್ತಾ ಹೆಚ್ಚು ಆಸಕ್ತಿಯಿಂದ ಮಾತನಾಡುತ್ತಾಳೆ. ಅವರ ಜತೆ ಖುಷಿಯಿಂದ ಮಾತುಕತೆ ನಡೆಸುತ್ತಾಳೆ ಎಂಬುದು ಗಂಡನ ಗೋಳು.

ಹೆಂಡ್ತಿಗೆ ಗೊತ್ತಾಗದ ಹಾಗೆ ರಹಸ್ಯವಾಗಿ ವೀರ್ಯ ಮಾರಾಟ ಮಾಡ್ತಿದ್ದ ಗಂಡ..!

ನನ್ನ ಹೆಂಡತಿ (Wife) ಸಾಮಾಜಿಕವಾಗಿ ಹೆಚ್ಚು ಬೆರೆಯುತ್ತಾಳೆ. ನನ್ನ ಜೊತೆ ಹೆಚ್ಚು ಮಾತನಾಡುವುದಿಲ್ಲ. ಆದರೆ ನನ್ನ ಎಲ್ಲ ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಲು ಪ್ರಯತ್ನಿಸುತ್ತಾಳೆ ಎಂದು ಗಂಡ (Husband0ನೊಬ್ಬ ಮನಶ್ಶಾಸ್ತ್ರಜ್ಞೆಯ ಜೊತೆ ಮನಬಿಚ್ಚಿ ಮಾತನಾಡಿದ್ದಾನೆ. ನನ್ನ ಸ್ನೇಹಿತರ ಜತೆ ಅತಿ ಸಲುಗೆಯಿಂದಿರುವ ಆಕೆಯ ವರ್ತನೆ ನನಗೆ ಸ್ವಲ್ಪವೂ ಇಷ್ಟವಾಗುವುದಿಲ್ಲ ಏಕೆಂದರೆ ನಾವು ಭೇಟಿಯಾದಾಗಲೆಲ್ಲಾ ಸ್ನೇಹಿತರು ನನ್ನ ಮುಂದೆ ಖಾಸಗಿ ಹಾಸ್ಯಗಳನ್ನು ಚರ್ಚಿಸುತ್ತಾರೆ. ಇದರಿಂದ ನಾನು ಮುಜುಗರ ಅನುಭವಿಸುತ್ತೇನೆ. ಅವಳು ನನ್ನ ಸ್ನೇಹಿತರಿಂದ ದೂರವಿರಬೇಕು ಎಂದು ನಾನು ಅವಳಿಗೆ ಹೇಗೆ ಹೇಳಲಿ ಎಂದು ಗಂಡ ಸಮಸ್ಯೆಯನ್ನು ಹೇಳಿಕೊಂಡಿದ್ದಾನೆ.

ಇದಕ್ಕೆ ಪ್ರತಿಕ್ರಿಯಿಸಿರುವ ಅಂತರಾಷ್ಟ್ರೀಯ ಖ್ಯಾತಿಯ ಮನಶ್ಶಾಸ್ತ್ರಜ್ಞೆ ಡಾ.ಇಶಿತಾ ಮುಖರ್ಜಿ, ಮುಕ್ತವಾಗಿ ಮಾತನಾಡುವ ಅವಕಾಶ ಎಲ್ಲರಿಗು ಇದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ಬಹುಶಃ ಇದು ನಿಮ್ಮ ವಲಯದ ಪರಿಚಯದ ಮೂಲಕ ನಿಮ್ಮೊಂದಿಗೆ ಸಂಪರ್ಕ ಹೊಂದಲು ನಿಮ್ಮ ಹೆಂಡತಿಯ ಮಾರ್ಗವಾಗಿರಬಹುದು ಎಂದು ಹೇಳಿದ್ದಾರೆ.

ಆದರೆ ಕೆಲವು ಗಡಿಗಳು ಅಗತ್ಯವೆಂದು ನಂಬುವುದು ನಿಮ್ಮ ಕಡೆಯಿಂದ ನ್ಯಾಯೋಚಿತವಾಗಿದೆ. ಹೀಗಾಗಿ ಸ್ನೇಹಿತರ ಜತೆ ಮಾತನಾಡುವಾಗ ಪರ್ಸನಲ್ ವಿಷಯಗಳನ್ನು ಶೇರ್ ಮಾಡಿಕೊಳ್ಳದಂತೆ ಅವಳಿಗೆ ಹೇಳಿ. ಮತ್ತು ಅದು ಏಕೆ ಎಂದು ಅವಳಿಗೆ ಅರ್ಥವಾಗುವಂತೆ ಮಾಡಿ. ನೀವು ಅವಳೊಂದಿಗೆ ಮಾತನಾಡುವಾಗ ನಿಮ್ಮ ಸ್ವರವು ಸಾಧ್ಯವಾದಷ್ಟು ಸೂಕ್ಷ್ಮ ಮತ್ತು ಸ್ಪಷ್ಟವಾಗಿರಬೇಕು ಏಕೆಂದರೆ ಅದು ಯಾರ ತಪ್ಪಲ್ಲದಿದ್ದರೂ ಸಹ ಅದು ನಿಮಗೆ ತೊಂದರೆ ನೀಡುತ್ತಿದೆ ಎಂದು ಅವಳು ಅರ್ಥಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ.

Husband Storage Pods: ಗಂಡನನ್ನು ಇಲ್ ಬಿಟ್ಹೋಗಿ ! ಶಾಪಿಂಗ್ ಪ್ರಿಯ ಹೆಂಗಸರಿಗಿನ್ನು ಟೆನ್ಶನ್ನೇ ಇಲ್ಲ !

ಮಾತ್ರವಲ್ಲ ಹೆಂಡತಿ ಇತರರೊಂದಿಗೆ ಹೆಚ್ಚಾಗಿ ಮಾತನಾಡುತ್ತಿದ್ದಾಳೆ ಎಂಬ ಕಾರಣಕ್ಕೆ ತಪ್ಪು ಭಾವಿಸಬಾರದು. ಹೆಚ್ಚು ಸಮಯ ಮನೆಯೊಳಗೇ ಕಳೆಯುವ ಮಹಿಳೆ ಮಾತನಾಡಲು ಯಾರಾದರೂ ಸಿಕ್ಕರೆ ಸಾಕೆಂದು ಹಾತೊರೆಯುತ್ತಿರುತ್ತಾಳೆ. ಹೀಗಿದ್ದಾಗ ಸ್ನೇಹಿತರನ್ನು ಮನೆಗೆ ಕರೆದುಕೊಂಡು ಬಂದರೆ ಅವಳಿಗೆ ಅವರ ಜೊತೆ ಆತ್ಮೀಯವಾಗಿ ಮಾತನಾಡುವಂತೆ ಅನಿಸಬಹುದು. ಅಥವಾ ಕೆಲವೊಮ್ಮೆ ಇದು ಯಾವಾಗಲೂ ಗಂಡನ ಜೊತೆ ಹೆಚ್ಚು ಸಮಯವನ್ನು ಕಳೆಯುವ ಸ್ನೇಹಿತರಿಂದ ಗಂಡನ ಬಗ್ಗೆ ಹೆಚ್ಚು ವಿಷಯವನ್ನು ತಿಳಿದುಕೊಳ್ಳುವ ಕುತೂಹಲವೂ ಇರಬಹುದು ಎಂದು ಅಂತರಾಷ್ಟ್ರೀಯ ಖ್ಯಾತಿಯ ಮನಶ್ಶಾಸ್ತ್ರಜ್ಞೆ ಡಾ.ಇಶಿತಾ ಮುಖರ್ಜಿ ತಿಳಿಸಿದ್ದಾರೆ. 

ಹೀಗಾಗಿ ಹೆಂಡತಿ ಪರಪುರುಷನ ಜತೆ ಮಾತನಾಡುತ್ತಿದ್ದಾಳೆಂದು ಎಂದು ತಿಳಿದಾಗ ಅದನ್ನು ಅನುಮಾನದಿಂದ ಕಣ್ಣುಗಳನ್ನು ನೋಡುವುದನ್ನು ಬಿಟ್ಟು ಸಾಮಾನ್ಯ ವರ್ತನೆಯಂತೆ ನೋಡುವುದು ಅಗತ್ಯವಾಗಿದೆ.

Latest Videos
Follow Us:
Download App:
  • android
  • ios