Asianet Suvarna News Asianet Suvarna News

ಹಿರಿಯರು ಮಕ್ಕಳನ್ನು ಮಣ್ಣಲ್ಲಿ ಆಡೋಕೆ ಬಿಡಿ ಅಂತ ಹೇಳೋದ್ಯಾಕೆ ?

ಬಾಲ್ಯಕಾಲ (Childhood) ನಿಮ್ಗೆ ನೆನಪಿದ್ಯಾ. ಆಗೆಲ್ಲಾ ಇವತ್ತಿನಂತೆ ಮೊಬೈಲ್‌ (Mobile), ಕಂಪ್ಯೂಟರ್‌ ಇರಲ್ಲಿಲ್ಲ. ಟಾಯ್ಸ್‌ಗಳು ಸಹ ಅಪರೂಪ. ಆಗೇನಿದ್ರೂ ಮಕ್ಕಳ (Children) ಆಟವೆಲ್ಲಾ ಮಣ್ಣಿನಲ್ಲಿ. ಆದ್ರೆ ಇವತ್ತಿನ ದಿನಗಳಲ್ಲಿ ಮಕ್ಕಳನ್ನು ಮಣ್ಣಲ್ಲಿ (Mud) ಬಿಟ್ರೆ ಅಲರ್ಜಿ ಆಗುತ್ತೆ ಅಂತಾರೆ. ಆದ್ರೆ ಹಿರಿಯರು ಮಕ್ಕಳನ್ನು ಮಣ್ಣಲ್ಲಿ ಆಡೋಕೆ ಬಿಡಿ ಅಂತ ಯಾಕೆ ಹೇಳ್ತಿದ್ರು ನಿಮ್ಗೆ ಗೊತ್ತಾ ?

What Are Some Health Benefits To Kids Playing In The Mud Vin
Author
Bengaluru, First Published Apr 3, 2022, 3:42 PM IST

ಇವತ್ತಿನ ಮಕ್ಕಳ ಪಾಲಿಗೆ ಆಟ (Play) ಅಂದ್ರೆ ಮೊಬೈಲ್ ಗೇಮಿಂಗ್‌ (Mobile Gaming). ಇಲ್ಲಾಂದ್ರೆ ಆನ್‌ಲೈನ್‌ ಗೇಮ್ಸ್‌. ಅದೂ ಬಿಟ್ರೆ ತರಹೇವಾರಿ ಟಾಯ್ಸ್. ಅದರಾಚೆಗಿನ ಪ್ರಪಂಚಾನೇ ಗೊತ್ತಿಲ್ಲ. ಆದರೆ ಹಿಂದೆಲ್ಲಾ ಹೀಗಿರಲ್ಲಿಲ್ಲ. ಮಕ್ಕಳ (Children0 ಪಾಲಿಗೆ ಆಟ ಅಂದ್ರೆ ಅದು ಮಣ್ಣಲ್ಲಿ ಆಡೋದೆ ಆಗಿತ್ತು. ಮಣ್ಣಲ್ಲಿ ಗೂಡು ಕಟ್ಟೋದು, ಇಡ್ಲಿ ಮಾಡೋದು, ಮನೆ ಕಟ್ಟೋದು, ಕೆಸರು ಎರಚಿ ಸಂಭ್ರಮಿಸೋದು ಮಕ್ಕಳ ಪಾಲಿಗೇ ಇದುವೆ ಸಂಭ್ರಮ. ಆದ್ರೆ ಇವತ್ತಿನ ಪೋಷಕರೋ ಮಕ್ಕಳನ್ನು ಮಣ್ಣಿಗೆ (Mud) ಇಳಿಯೋದಕ್ಕೆ ಬಿಡೋದಿಲ್ಲ. ಮಣ್ಣು ತಾಗಿದ್ರೆ ತುರಿಕೆ, ಅಲರ್ಜಿ ಸಮಸ್ಯೆ ಕಾಣಿಸಿಕೊಳ್ಳುತ್ತೆ ಅಂತಾರೆ. ಆದ್ರೆ ಮಣ್ಣಲ್ಲಿ ಆಡೋದ್ರಿಂದ ಮಕ್ಕಳ ಆರೋಗ್ಯ (Health)ಕ್ಕೆ ಅದೆಷ್ಟು ಪ್ರಯೋಜನವಿದೆ ಗೊತ್ತಾ ? ಇಷ್ಟಕ್ಕೂ ನಮ್ಮ ಹಿರಿಯರು  ಮಕ್ಕಳನ್ನು ಮಣ್ಣಲ್ಲಿ ಆಡೋಕೆ ಬಿಡಿ ಅಂತ ಯಾಕೆ ಹೇಳ್ತಿದ್ರು..?

ತಾಯಂದಿರು ತಮ್ಮ ಮಕ್ಕಳನ್ನು ಬ್ಯಾಕ್ಟೀರಿಯಾ (Bacteria) ಅಥವಾ ಸೋಂಕುಗಳನ್ನು ಹೊಂದಿರುವ ಯಾವುದನ್ನಾದರೂ ಸ್ಪರ್ಶಿಸುವುದನ್ನು ತಡೆಯಲು ಅವರ ಹಿಂದೆ ಓಡುತ್ತಾರೆ. ಮಕ್ಕಳು ಮಣ್ಣಿನಲ್ಲಿ ಆಡೋಕೆ ಹೊರಟರೆ ಸಾಕು,  ಕೆಸರು ಗಲೀಜು, ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಾರೆ ಎಂಬುದು ಅವರ ಆತಂಕ. ಹೀಗಾಗಿಯೇ ನಿಸರ್ಗದಿಂದ ಸಂಪೂರ್ಣ ವಿಮುಖವಾಗಿಯೇ ಮಗು ಬೆಳೆಯುತ್ತಾ ಹೋಗುತ್ತದೆ.

ಮಗುವಿನ ಬಗ್ಗೆ ನಿಮ್ಮಲ್ಲಿರುವ ಈ ತಪ್ಪುಕಲ್ಪನೆಗಳನ್ನು ತೊಡೆದು ಹಾಕಿ

ಮಣ್ಣಿನಲ್ಲಿಆಡೋದ್ರಿಂದ ಮಕ್ಕಳ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನವಿದೆ ?

ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತೆ: ಮಣ್ಣಿನಲ್ಲಿ ಆಡೋದ್ರಿಂದ ಇದರಿಂದ ಮಗುವಿನಲ್ಲಿ ಪ್ರತಿರೋಧ ಶಕ್ತಿ ಕಡಿಮೆಯಾಗುತ್ತೆ. ಮಣ್ಣಲ್ಲಿ ಆಡಿದಾಗ ಮಣ್ಣಲ್ಲಿರುವ ಕೆಲವು ಅಂಶಗಳು ಮಗುವಿನ ದೇಹ ಸೇರುತ್ತವೆ. ಇಂಥಾ ಸೂಕ್ಷ್ಮಾಣು ಜೀವಿಗಳು ದೇಹದ ಪ್ರತಿರೋಧ ಶಕ್ತಿ ಅಥವಾ ರೋಗ ನಿರೋಧಕ ಗುಣ (Immunity Power)ವನ್ನು ಹೆಚ್ಚಿಸುತ್ತವೆ. ಸಣ್ಣ ಪುಟ್ಟ ರೋಗಗಳನ್ನೆಲ್ಲ ದೇಹವೇ ಎದುರಿಸುತ್ತದೆ. ಆದರೆ ಮಣ್ಣಲ್ಲಿ ಆಡದ ಮಗುವಿನಲ್ಲಿ ಈ ಶಕ್ತಿ ಇರಲ್ಲ.

ಇದು ನೈಸರ್ಗಿಕ ವಿಶ್ರಾಂತಿ : ಮಕ್ಕಳು ಮಣ್ಣಿನ ಆಟದಲ್ಲಿದ್ದಾಗ ತುಂಬಾ ಕಟ್ಟುನಿಟ್ಟಾಗಿ ಪ್ರತಿಕ್ರಿಯಿಸದಂತೆ ಮನಶ್ಶಾಸ್ತ್ರಜ್ಞರು ಸಲಹೆ ನೀಡುತ್ತಾರೆ. ಕೆಸರಿನಲ್ಲಿ ಆಟವಾಡುವುದು ನಿಮ್ಮ ಮಗುವಿನ ದೈಹಿಕ ಮತ್ತು ಭಾವನಾತ್ಮಕ ಆರೋಗ್ಯಕ್ಕೆ ಒಳ್ಳೆಯದು ಎಂದು ವೈದ್ಯಕೀಯ ಸಂಶೋಧನೆ ತೋರಿಸುತ್ತದೆ. ಶಿಶುಗಳು ಸಹ ಮಣ್ಣಿನ ಆಟದಿಂದ ಪ್ರಯೋಜನ ಪಡೆಯಬಹುದು. ಕಾಂಕ್ರೀಟ್ ರಚನೆಗಳ ಜಾಗದಲ್ಲಿ ನಡೆಯುವ ಬದಲು, ಮಕ್ಕಳು ಪ್ರಕೃತಿಯ ಮಡಿಲಲ್ಲಿದ್ದಾಗ ಉಲ್ಲಸಿತವಾಗಿರುತ್ತಾರೆ. ಮಣ್ಣಿನ ಆಟವು ಮಕ್ಕಳನ್ನು ತಮ್ಮ ಸುತ್ತಲಿನ ನೈಸರ್ಗಿಕ ಪ್ರಪಂಚದೊಂದಿಗೆ ಸಂಪರ್ಕಿಸಲು ಮತ್ತು ಸಂವಹನ ಮಾಡಲು ಅನುವು ಮಾಡಿಕೊಡುತ್ತದೆ. 

ಅಂಬೆಗಾಲಿಡುವ ಮಕ್ಕಳಿಗೆ ಮಲ್ಟಿ ವಿಟಮಿನ್ ಮಾತ್ರೆಗಳನ್ನು ಕೊಡಬಹುದಾ ?

ಇಂದ್ರಿಯಗಳನ್ನು ಸಕ್ರಿಯಗೊಳಿಸುತ್ತದೆ: ಸಂವೇದನಾ ಆಟದೊಂದಿಗೆ ಮಕ್ಕಳಿಗೆ ಸ್ಪರ್ಶ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಇದು ಸಹಾಯ ಮಾಡುತ್ತದೆ. ಸಂವೇದನಾ ಆಟವು ಮಗುವಿನ ಇಂದ್ರಿಯಗಳನ್ನು ಸಕ್ರಿಯಗೊಳಿಸುವ ಮತ್ತು ಉತ್ತೇಜಿಸುವ ಒಂದು ರೀತಿಯ ಆಟವಾಗಿದೆ. ಈ ರೀತಿಯ ಸಕ್ರಿಯ ಆಟವು ಮೆದುಳಿನಲ್ಲಿ ಸಂಪರ್ಕಗಳನ್ನು ರಚಿಸಲು ಸಹಾಯ ಮಾಡುತ್ತದೆ, ಅದು ಹೆಚ್ಚು ಸಂಕೀರ್ಣವಾದ ಆಲೋಚನೆಗಳು ಮತ್ತು ಕಾರ್ಯಗಳನ್ನು ಅನುಮತಿಸುತ್ತದೆ

ಸಾಮಾಜಿಕವಾಗಿ ಬೆರೆಯುವ ಅಭ್ಯಾಸ: ಮಣ್ಣಿನ ಆಟವು ಮಕ್ಕಳು ಇತರರೊಂದಿಗೆ ಬಾಂಧವ್ಯವನ್ನು ಬೆಳೆಸಲು ಸಹಾಯ ಮಾಡುತ್ತದೆ. ಪ್ಲಾಸ್ಟಿಕ್ ಕಂಟೈನರ್‌ಗಳು ಅಥವಾ ಸ್ಪೂನ್‌ಗಳು ಮತ್ತು ಸ್ಪಾಟುಲಾಗಳಂತಹ ಅಡುಗೆ ಸಲಕರಣೆಗಳಂತಹ ಕೆಲವು ಸಾಧನಗಳನ್ನು ಅವರಿಗೆ ಒದಗಿಸಿ. ಮಣ್ಣಿನೊಂದಿಗೆ ಆಟವಾಡಲು ಮಕ್ಕಳನ್ನು ಪ್ರೋತ್ಸಾಹಿಸಿ. ಮಣ್ಣಿನಲ್ಲಿ ಆಟವಾಡಿದ ಬಳಿಕ ಮನೆಗೆ ಬಂದು ಕೈ, ಕಾಲು ತೊಳೆಯಲು ಮತ್ತು ಸ್ವಚ್ಛವಾದ ಬಟ್ಟೆಗಳನ್ನು ಬದಲಾಯಿಸಲು ಅವರಿಗೆ ಕಲಿಸಿ.

Follow Us:
Download App:
  • android
  • ios