ಪ್ರೀತಿಗೆ ಅಮೀರ ಈ ಭಿಕ್ಷುಕ: ಪತ್ನಿಗಾಗಿ 90 ಸಾವಿರ ನೀಡಿ ಮೊಪೇಡ್ ಕೊಂಡ
- ಪತ್ನಿಗಾಗಿ 90 ಸಾವಿರ ನೀಡಿ ಮೊಪೇಡ್ ಖರೀದಿಸಿದ ಭಿಕ್ಷುಕ
- ನಾಲ್ಕು ವರ್ಷದಿಂದ ಹಣ ಉಳಿತಾಯ ಮಾಡುತ್ತಿರುವ ಸಾಹು
- ಭಿಕ್ಷುಕನ ಪತ್ನಿ ಪ್ರೇಮಕ್ಕೆ ನೆಟ್ಟಿಗರ ಶ್ಲಾಘನೆ
ಛಿಂಡ್ವಾರ: ಭಿಕ್ಷುಕನೋರ್ವ ತನ್ನ ಪತ್ನಿಗಾಗಿ 90 ಸಾವಿರ ನೀಡಿ ಮೊಪೇಡ್ ಖರೀದಿಸಿದ ಘಟನೆ ಮಧ್ಯಪ್ರದೇಶದ ಛಿಂಡ್ವಾರ ಜಿಲ್ಲೆಯಿಂದ ವರದಿಯಾಗಿದೆ. ಈತ ತನ್ನ ಪತ್ನಿಗೆ ಉಡುಗೊರೆಯಾಗಿ ಈ ಮೊಪೆಡ್‌ನ್ನು 90 ಸಾವಿರ ನೀಡಿ ಖರೀದಿಸಿದ್ದಾನೆ ಎಂದು ತಿಳಿದು ಬಂದಿದೆ. ಭಿಕ್ಷುಕನಾದರೂ ಪತ್ನಿಗೆ ಪ್ರೀತಿ ತೋರುವ ವಿಚಾರದಲ್ಲಿ ಅತೀ ಶ್ರೀಮಂತನಾಗಿರುವ ಈ ಭಿಕ್ಷುಕನ (beggar) ಹೆಸರು ಸಂತೋಷ್ ಸಾಹು (Santhosh sahu), ಹುಟ್ಟು ದಿವ್ಯಾಂಗನಾಗಿರುವ ಸಂತೋಷ್ ಸಾಹು, ಜೀವನ ನಡೆಸಲು ಭಿಕ್ಷಾಟನೆಯನ್ನೇ ವೃತ್ತಿಯಾಗಿಸಿಕೊಂಡಿದ್ದಾನೆ. ಈತನ ಕಾಲುಗಳೆರಡು ಶಕ್ತಿ ಗುಂದಿರುವುದರಿಂದ ಭಿಕ್ಷಾಟನೆ ಅನಿವಾರ್ಯವಾಗಿ ಈತನ ವೃತ್ತಿಯಾಗಿದೆ. ಸಂತೋಷ್ ಸಾಹು ಇದುವರೆಗೆ ತನ್ನ ಗಾಲಿ ಕುರ್ಚಿಯಲ್ಲಿ ಕುಳಿತರೆ ಪತ್ನಿ ಮುನ್ನಿ (Munni) ಆತನನ್ನು ಹಿಂದಿನಿಂದ ತಳ್ಳಿಕೊಂಡು ಹೋಗುತ್ತಿದ್ದಳು.
ಆದಾಗ್ಯೂ ಈ ಜೋಡಿ ದೈನಂದಿನ ಜೀವನಕ್ಕೆ ಭಿಕ್ಷಾಟನೆ ವೇಳೆ ಭಾರಿ ಕಷ್ಟಪಡುತ್ತಿದ್ದರು. ಸಾಗುವ ರಸ್ತೆಯೂ ಸರಿ ಇಲ್ಲದ ಪರಿಣಾಮ ಇವರಿಗೆ ಭಿಕ್ಷಾಟನೆಗೆ ಸಾಗುವುದೇ ಕಷ್ಟವಾಗುತ್ತಿತ್ತು. ಇದರಿಂದ ಹೆಂಡತಿ ಅಸ್ವಸ್ಥಳಾಗುವುದು ಹಾಗೂ ಕಷ್ಟಪಡುವುದನ್ನು ನೋಡಿದ ಸಂತೋಷ್ ಸಾಹು ಆಕೆಗಾಗಿ ಒಂದು ಮೊಪೆಡ್ ಗಿಫ್ಟ್ ನೀಡಲು ನಿರ್ಧರಿಸಿದ.
60 ಭಿಕ್ಷುಕರಿಗೆ ತರಬೇತಿ ನೀಡಿ ಉದ್ಯೋಗ ಕೊಟ್ಟ ರಾಜಸ್ಥಾನ ಸರ್ಕಾರ!
ಆದರೆ ಇಷ್ಟೊಂದು ಹಣ ಖರೀದಿಸುವುದು ಸುಲಭದ ಮಾತಾಗಿರಲಿಲ್ಲ. ಈ ದಂಪತಿ (Couple) ಬಸ್ ನಿಲ್ದಾಣ (Bus stand) , ದೇವಸ್ಥಾನ (Temple) ಮಸೀದಿಗಳ ಬಳಿ ಪ್ರತಿದಿನ ಭಿಕ್ಷಾಟನೆ ಮಾಡಿ ದಿನಕ್ಕೆ 300 ರಿಂದ 400 ರೂ ಗಳಿಸುತ್ತಿದ್ದರು. ಹೀಗೆ ಗಳಿಸಿದ್ದ ಹಣವನ್ನು ಉಳಿತಾಯ ಮಾಡಿದ್ದ ಸಾಹು ಇಷ್ಟು ಹಣ ಸಂಗ್ರಹಿಸಲು ಸುಮಾರು ನಾಲ್ಕು ವರ್ಷ ಕಾದಿದ್ದಾರೆ. ಕಡೆಗೂ ಈ ದಂಪತಿಯ ಆಸೆ ಈಡೇರಿದ್ದು, 90 ಸಾವಿರ ಹಣ ನೀಡಿ ಮೊಪೆಡ್ ಖರೀದಿಸಿದ್ದಾರೆ. ಈಗ ದಿನವೂ ದಂಪತಿ ಈ ಮೊಪೆಡ್ ಮೂಲಕ ಒಟ್ಟಿಗೆ ತೆರಳಿ ಭಿಕ್ಷಾಟನೆ ಮಾಡುತ್ತಾರೆ. ಭಿಕ್ಷುಕನಾದರೂ ಪತ್ನಿ ಮೇಲಿನ ಈತನ ಅಪರಿಮಿತ ಪ್ರೀತಿಗೆ ಜನ ಬೆರಗಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ (Social Media) ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
Relationship Tips : ನಿಮ್ಮ ಪ್ರೀತಿ ಈಗಷ್ಟೇ ಶುರುವಾಗಿದ್ರೆ, ಈ ತಪ್ಪುಗಳನ್ನು ಮಾಡಲೇಬೇಡಿ
ಭಿಕ್ಷೆ ಬೇಡಲು ಬಂದ ಮಹಿಳೆ ಮೇಲೆ ಆಂಬುಲೆನ್ಸ್ ಚಾಲಕರು ಅತ್ಯಾಚಾರ ನಡೆಸಿದ ಘಟನೆ ರಾಜಸ್ಥಾನದ (Rajasthan) ಜೈಪುರದಲ್ಲಿ (Jaipura) ಕಳೆದ ವರ್ಷ ನಡೆದಿತ್ತು. ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಇಬ್ಬರು ಚಾಲಕರನ್ನು ಬಂಧಿಸಲಾಗಿತ್ತು. ಮೋತಿ ಡುಂಗ್ರಿ ನಿಲ್ದಾಣದ ಮಹಿಳೆ ಭಿಕ್ಷೆ ಬೇಡುತ್ತಿದ್ದು, ಅಲ್ಲೇ ಗಾಂಧಿ ಸರ್ಕಲ್ ಬಳಿ ಇದ್ದ ಆಂಬುಲೆನ್ಸ್ (Ambulence) ಚಾಲಕರ ಬಳಿಯೂ ಭಿಕ್ಷೆ ಕೇಳಿದ್ದಾಳೆ. ಹಸಿವಾಗ್ತಿದೆ, ಆಹಾರವಿಲ್ಲ ದಯವಿಟ್ಟು ನೆರವು ನೀಡಿ ಎಂದು ಕೇಳಿಕೊಂಡಿದ್ದಾಳೆ. ಈ ವೇಳೆ ಆಹಾರ ನೀಡುತ್ತೇವೆ ಎನ್ನುವ ನೆಪದಲ್ಲಿ ಆಕೆಯನ್ನು ಕಿರಾತಕರು ಆಂಬುಲೆನ್ಸ್ ಗೆ ಹತ್ತಿಸಿಕೊಂಡಿದ್ದಾರೆ. ಬಳಿಕ ಚಲಿಸುತ್ತಿರುವ ವಾಹನದಲ್ಲಿ ಒಬ್ಬರಾದ ಮೇಲೆ ಒಬ್ಬರು ಮಹಿಳೆಯ ಮೇಲೆ ದೌರ್ಜನ್ಯ ಎಸಗಿದ್ದಾರೆ. ಘಟನೆಯ ನಂತರ ನಿರ್ಜನ ಪ್ರದೇಶದಲ್ಲಿ ಆಕೆಯನ್ನು ಇಳಿಸಿ ಪರಾರಿಯಾಗಿದ್ದರು.
ಕಳೆದ ವರ್ಷ ಅನಾರೋಗ್ಯ ಕಾರಣದಿಂದ ದೇವಾಲಯ ಪಟ್ಟಣವಾದ ತಿರುಮಲ ಸಮೀಪದಲ್ಲಿ ವಾಸವಿದ್ದ ಭಿಕ್ಷುಕನೋರ್ವ ಮೃತಪಟ್ಟಿದ್ದ. ಆತನ ಸಾವಿನ ಬಳಿಕ ಆತ ವಾಸವಿದ್ದ ಮನೆ ಶೋಧಿಸಿದಾಗ 10 ಲಕ್ಷ ರೂಪಾಯಿ ನಗದು ಹಣ ಪತ್ತೆಯಾಗಿತ್ತು. ಮೃತ ಭಿಕ್ಷುಕ ಶ್ರೀನಿವಾಸಾಚಾರಿ ತಿರುಮಲ ತಿರುಪತಿ ದೇವಸ್ತಾನಂ(ಟಿಟಿಡಿ) ಟ್ರಸ್ಟ್ ಅಡಿ ಸಣ್ಣ ಉದ್ಯಮ ಮಾಡುತ್ತಿದ್ದರು. ಜೊತೆಗೆ ಭಿಕ್ಷೆ ಬೇಡುತ್ತಾ ಜೀವನಸಾಗಿಸುತ್ತಿದ್ದರು