60 ಭಿಕ್ಷುಕರಿಗೆ ತರಬೇತಿ ನೀಡಿ ಉದ್ಯೋಗ ಕೊಟ್ಟ ರಾಜಸ್ಥಾನ ಸರ್ಕಾರ!
* ರಾಜಸ್ಥಾನ ಸರ್ಕಾರ ‘ಭಿಕ್ಷಾಟನೆ ನಿರ್ಮೂಲನೆ’ ಕಾರ್ಯಕ್ರಮದಡಿ ಭಿಕ್ಷುಕರ ಬಾಳಿನ ಬೆಳಕು
* ವಿವಿಧ ಪ್ರಾಂತ್ಯಗಳ 60 ವಸತಿರಹಿತ ಭಿಕ್ಷುಕರಿಗೆ ಕೌಶಲ್ಯ ತರಬೇತಿ ನೀಡಿ ಉದ್ಯೋಗ
* 100 ಜನ ಭಿಕ್ಷುಕರ ಪೈಕಿ ಒಂದು ವರ್ಷಗಳ ತರಬೇತಿಯ ಬಳಿಕ 60 ಭಿಕ್ಷುಕರಿಗೆ ಉದ್ಯೋಗ
ಜೈಪುರ(ಆ.07): ರಾಜಸ್ಥಾನ ಸರ್ಕಾರ ‘ಭಿಕ್ಷಾಟನೆ ನಿರ್ಮೂಲನೆ’ ಕಾರ್ಯಕ್ರಮದಡಿಯಲ್ಲಿ ವಿವಿಧ ಪ್ರಾಂತ್ಯಗಳ 60 ವಸತಿರಹಿತ ಭಿಕ್ಷುಕರಿಗೆ ಕೌಶಲ್ಯ ತರಬೇತಿ ನೀಡಿ ಉದ್ಯೋಗವನ್ನೂ ಕೂಡ ಕಲ್ಪಿಸಿದೆ. ಭಿಕ್ಷುಕರು ಗೌರವಾನ್ವಿತ ಬದುಕು ಸಾಗಿಸಲು ಬೇಕಿರುವ ತರಬೇತಿ ನೀಡುವುದು ಯೋಜನೆಯ ಉದ್ದೇಶವಾಗಿದೆ.
ಈ ನಿಟ್ಟಿನಿಂದ ಕೆಲವು ತಿಂಗಳುಗಳ ಹಿಂದೆ ರಾಜಸ್ತಾನದ ಕೌಶಲ್ಯ ಮತ್ತು ಜೀವನೋಪಾಯ ಅಭಿವೃದ್ಧಿ ನಿಗಮ, ಸೋಪಾನ್ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಸಹಯೋಗದಲ್ಲಿ ಅಭಿಯಾನವನ್ನು ಆರಂಭಿಸಿತ್ತು.
100 ಜನ ಭಿಕ್ಷುಕರ ಪೈಕಿ ಒಂದು ವರ್ಷಗಳ ತರಬೇತಿಯ ಬಳಿಕ 60 ಭಿಕ್ಷುಕರಿಗೆ ಉದ್ಯೋಗವನ್ನು ನೀಡಲಾಗಿದೆ. ಉಳಿದವರಿಗೆ ತರಬೇತಿ ಮುಂದುವರಿದಿದೆ.