Asianet Suvarna News Asianet Suvarna News

ಬಳ್ಳಾರಿಯ ಆಟೋ ಚಾಲಕನನ್ನು ಮದುವೆಯಾದ ಬೆಲ್ಜಿಯಂ ಯುವತಿ

ಪ್ರೀತಿಗೆ ಯಾವ ಗಡಿಗಳ ಹಂಗೂ ಇಲ್ಲ. ಜಾತಿ-ಧರ್ಮ, ಆಸ್ತಿ-ಅಂತಸ್ತು, ಬಡವ-ಬಲ್ಲಿದ ಹೀಗೆ ಎಲ್ಲಾ ವ್ಯತ್ಯಾಸವನ್ನು ಮೀರಿ ಪ್ರೀತಿಯಾಗಿಬಿಡುತ್ತದೆ. ಹಾಗೇ ಹಂಪಿ ಯುವಕನೊಬ್ಬ ಬೆಲ್ಜಿಯಂ ಯುವತಿಯನ್ನು ಮದ್ವೆಯಾಗಿದ್ದಾನೆ. ಆ ಬಗ್ಗೆ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.

Ballries Young Man Marries Belgium Girl In Hampi Vin
Author
First Published Nov 25, 2022, 3:13 PM IST

ಪ್ರೀತಿ (Love)ಯೆಂದರೆ ಹಾಗೆಯೇ. ಆ ಸುಂದರ ಭಾವನೆಯೇ ಅದ್ಭುತ. ಅದಕ್ಕೆ ಯಾವುದರ ಹಂಗೂ ಇಲ್ಲ. ವಯಸ್ಸು, ಜಾತಿ, ಧರ್ಮ, ರಾಜ್ಯ, ದೇಶ ಎಲ್ಲವನ್ನೂ ಮೀರಿ ಪ್ರೀತಿಯಾಗಿಬಿಡುತ್ತದೆ. ಒಲವಿಗಾಗಿ ಎಲ್ಲವನ್ನೂ ಬಿಟ್ಟು ಬಂದವರಿದ್ದಾರೆ. ಒಲವಿಗಾಗಿ ಜೀವವನ್ನೇ ಕಳೆದುಕೊಂಡವರೂ ಇದ್ದಾರೆ. ಪ್ರೀತಿಗೆ ಅಂಥಾ ಶಕ್ತಿಯಿದೆ. ಹಾಗಯೇ ಇಲ್ಲೊಂದು ಜೋಡಿ, ದೇಶ ದೇಶ ಬೇರೆಯಾಗಿದ್ದರೂ ಮದುವೆ (Marriage)ಯೆಂಬ ಬಂಧನದಲ್ಲಿ ಒಂದಾಗಿದೆ. ಬಳ್ಳಾರಿಯ ವಿಜಯನಗರದ ಹಂಪಿಯ ಯುವಕ ಅನಂತರಾಜು, ಬೆಲ್ಜಿಯಂ ಯುವತಿ ಕೆಮಿಲ್‌ರನ್ನು ಮದುವೆಯಾಗಿದ್ದಾನೆ. ವಿಶ್ವವಿಖ್ಯಾತ ಹಂಪಿಯ ವಿರೂಪಾಕ್ಷೇಶ್ವರನ ಸನ್ನಿಧಿಯಲ್ಲಿ ಅದ್ದೂರಿ ವಿವಾಹ ನಡೀತು. 9: 25 ಬೆಳಗಿನ ಕುಂಭ ಲಗ್ನ ಶುಭ ಮುಹೋರ್ಥದಲ್ಲಿ ವಿವಾಹವಾದ ಜೋಡಿ, ಭಾರತೀಯ ಸಂಪ್ರದಾಯದಂತೆ (Indian tradition) ಜೋಡಿ ಸಪ್ತಪದಿ ತುಳಿದಿದ್ದಾರೆ. ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಅನಂತರಾಜು ವಿದೇಶಿ ಕನ್ಯೆ ಕೆಮಿಲ್ ಕೈ ಹಿಡಿದಿದ್ದಾರೆ. 

ಬೆಲ್ಜಿಯಂ ಯುವತಿ ಕೆಮಿಲ್ ಮದುವೆಯಾದ ಅನಂತರಾಜು
ಅನಂತರಾಜು ಹಾಗೂ ಕೆಮಿಲ್ ಸರಿ ಸುಮಾರು ನಾಲ್ಕೈದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದಾರೆ. ಅನಂತರಾಜು ಆಟೋ ಚಾಲಕನಾಗಿ ಕಲಸ ಮಾಡ್ತಿದ್ದು, ಕೆಮಿಲ್, ಸೋಷಿಯಲ್ ವರ್ಕರ್ ಆಗಿ ಕೆಲಸ ಮಾಡ್ತಿದ್ದಾರೆ. ನಾಲ್ಕೈದು ವರ್ಷಗಳ ಹಿಂದೆ ಕೆಮಿಲ್ ಕುಟುಂಬ ಹಂಪಿ ವೀಕ್ಷಣೆಗೆಂದು ಬಳ್ಳಾರಿಗೆ ಬಂದಿದ್ದರು. ಈ ಸಂದರ್ಭಲ್ಲಿ ಅನಂತರಾಜು ಪ್ರಾಮಾಣಿಕತೆಗೆ ಕೆಮಿಲ್ ಕುಟುಂಬಸ್ಥರು ಮನಸೋತಿದ್ದರು. ಮೂರು ವರ್ಷದ ಹಿಂದೆಯೇ ಈ ಜೋಡಿ ಪ್ರೇಮ ವಿವಾಹ (Love marriage) ಆಗಬೇಕಿತ್ತು. ಆದ್ರೆ ಕೊರೊನಾ ಮಾಹಾಮಾರಿ ಇವರ ಪ್ರೇಮ ವಿವಾಹಕ್ಕೆ ಅಡ್ಡಿ ಆಗಿತ್ತು

ಏನು ಮಾಯೆಯೋ.. 19ರ ತರುಣಿ ಮದ್ವೆ ಆಗಿ ರೋಮ್ಯಾನ್ಸ್‌ಗೆ ವಯಸ್ಸು ಮುಖ್ಯವಲ್ಲ ಎಂದ 70ರ ತಾತ

ಹಂಪಿಯ ವಿರೂಪಾಕ್ಷೇಶ್ವರನ ಸನ್ನಿಧಿಯಲ್ಲಿ ಅದ್ದೂರಿ ವಿವಾಹ
ಮಗಳ ಮದುವೆಯಲ್ಲ ಬೆಲ್ಜಿಯಂನಲ್ಲೇ ಅದ್ದೂರಿಯಾಗಿ ಮಾಡಬೇಕು ಎಂದು ಕೆಮಿಲ್ ಕುಟುಂಬ ಅಂದುಕೊಂಡಿತ್ತು. ಆದ್ರೆ ಕೆಮಿಲ್ ತಂದೆ ಜೀಪ್ ಫಿಲಿಪ್ಪೆ ಹಿಂದೂ ಸಂಪ್ರದಾಯದಂತೆ ಹಂಪಿಯಲ್ಲೇ ಮದುವೆ ಮಾಡಲು ನಿರ್ಧರಿಸಿದರು. ನಿನ್ನೆ ಸಂಜೆ ನಿಶ್ಚಿತಾರ್ಥ (Engagement) ನೆರವೇರಿಸಿಕೊಂಡಿದ್ದ ಜೋಡಿ, ಇಂದು ಬೆಳಗ್ಗೆ 8:30 ರಿಂದ 9:30ರ ಕುಂಭ ಲಗ್ನ ಶುಭ ಮುಹೂರ್ತದಲ್ಲಿ ಅದ್ದೂರಿಯಾಗಿ ಮದುವೆಯಾಗಿದೆ. ಅನಂತರಾಜು ಹಂಪಿ ಜನತಾ ಪ್ಲಾನ್ ನ ರೇಣುಕಮ್ಮ ದಿ. ಅಂಜಿನಪ್ಪ ಅವರ ಸುಪುತ್ರ. ಕೆಮಿಲ್, ಬೆಲ್ಜಿಯಂನ ಜೀಪ್ ಫಿಲಿಪ್ಪೆ ಅವರ ತೃತೀಯ ಪುತ್ರಿ. ಇಬ್ಬರೂ ಈಗ ವೈವಾಹಿಕ ಜೀವನಕ್ಕೆ ಖುಷಿಯಿಂದ ಕಾಲಿಟ್ಟಿದ್ದಾರೆ.

ದೇಸಿ ಹುಡುಗರ ಪ್ರೀತಿಯಲ್ಲಿ ಬೀಳೋ ವಿದೇಶಿ ಬೆಡಗಿಯರು!
ಮೇರಿ ಲೋರಿ ಹೆರಾಲ್ ಪ್ಯಾರಿಸ್‌(Paris)ನಿಂದ ಭಾರತಕ್ಕೆ ಬಂದಿದ್ದು ಸುತ್ತಾಡಬೇಕೆಂದು. ದೆಲ್ಲಿಯ ಪ್ರವಾಸಿ ಸ್ಥಳಗಳು, ಅವುಗಳ ವಿಶೇಷವನ್ನು ತಿಳಿಸುತ್ತಿದ್ದ ಬಿಹಾರದ ಟೂರ್ ಗೈಡ್ ರಾಕೇಶ್ ಜೊತೆ ಸುತ್ತುತ್ತಾ ಅವನ ಮೇಲೇ ಮೇರಿಗೆ ಪ್ರೀತಿಯಾಗಿ ಬಿಟ್ಟಿತು. ಬಿಹಾರದ ಪುಟ್ಟ ಹಳ್ಳಿ ಬೆಗುಸರಾಯ್‌ನ ರಾಕೇಶ್ ಕೂಡಾ ಅದಾಗಲೇ ಫ್ರೆಂಚ್ ಬೆಡಗಿಗೆ ಮನಸೋತಿದ್ದ. ಇದೆಲ್ಲ ಆಗಿದ್ದು 6 ವರ್ಷಗಳ ಹಿಂದೆ. ಮೇರಿ ಪ್ಯಾರಿಸ್ಸಿಗೆ ಮರಳಿದ ಮೇಲೂ ರಾಕೇಶ್ ಜೊತೆ ಫೋನ್ ಸಂಪರ್ಕದಲ್ಲಿದ್ದಳು. ಮಾತಾಡುತ್ತಾ ಮಾತಾಡುತ್ತಾ ಇಬ್ಬರೂ ತಮ್ಮ ಪ್ರೀತಿಯನ್ನು ಹೇಳಿಕೊಂಡರು. 

ಲೆಫ್ಟ್, ರೈಟ್ ಸಿದ್ಧಾಂತ ಸೈಡಿಗಿಟ್ಟು ಸ್ಟ್ರೈಟ್‌ ಆಗಿ ಹಸೆಮಣೆಯೇರಿದ ಕೇರಳದ ಜೋಡಿ

ಈ ಲಾಂಗ್ ಡಿಸ್ಟೆನ್ಸ್ ರಿಲೇಶನ್‌ಶಿಪ್ ಹೇಗೆ ಮುಂದುವರಿಸುವುದೆಂದು ಯೋಚಿಸಿದ ಮೇರಿ, ರಾಕೇಶ್‌ನನ್ನೇ  ಪ್ಯಾರಿಸ್ಸಿಗೆ ಕರೆಸಿಕೊಂಡು ತನ್ನೊಂದಿಗೆ ಟೆಕ್ಸ್‌ಟೈಲ್ ಬಿಸ್ನೆಸ್ ಆರಂಭಿಸಲು ಹೇಳಿದಳು. ಇಬ್ಬರೂ ಒಟ್ಟಾಗಿ ಬಿಸ್ನೆಸ್ ಮಾಡತೊಡಗಿದ ಮೇಲೆ ಅವರ ಪ್ರೀತಿ ಮತ್ತಷ್ಟು ಗಟ್ಟಿಯಾಗಿ ಬೆಳೆಯುತ್ತಲೇ ಹೋಯಿತು. ಕಡೆಗೆ ಈ ವರ್ಷ ಇಬ್ಬರೂ ಮದುವೆಯಾಗಲು ನಿಶ್ಚಯಿಸಿದರು. 

ಭಾರತೀಯ ಸಂಸ್ಕೃತಿ, ಸಂಪ್ರದಾಯಗಳಿಗೆ ಮಾರು ಹೋಗಿರುವ ಮೇರಿ ಬಿಹಾರದಲ್ಲಿ ಹಿಂದೂ ಶಾಸ್ತ್ರದ ಪ್ರಕಾರ ರಾಕೇಶ್‌ನನ್ನು ವಿವಾಹವಾದಳು. ಮೇರಿ ಹಾಗೂ ರಾಕೇಶ್‌ನ ಎರಡೂ ಕುಟುಂಬಗಳು ಮದುವೆಯಲ್ಲಿ ಭೋಜ್‌ಪುರಿ ಹಾಡುಗಳಿಗೆ ನೃತ್ಯ ಮಾಡಿ ಸಂಭ್ರಮಿಸಿದರು. ಇನ್ನೊಂದು ವಾರದಲ್ಲಿ ಜೋಡಿ ಪ್ಯಾರಿಸ್ಸಿಗೆ ಮರಳಲಿದೆ. ಇದು ವಿದೇಶದಲ್ಲಿ ಸೆಟಲ್ ಆಗಲು ನಿಶ್ಚಯಿಸಿರುವ ಜೋಡಿಯಾದರೆ, ಭಾರತದಲ್ಲೇ ಇರಬೇಕೆಂದು ಬಯಸಿ ಬರುವ ವಿದೇಶಿ ಹುಡುಗಿಯರ ಸಂಖ್ಯೆಯೂ ಕಡಿಮೆಯೇನಿಲ್ಲ. 

Follow Us:
Download App:
  • android
  • ios