ಆಕೆ ವಿವಾಹಿತೆ, ಆದರೂ ಗಾಢ ಪ್ರೇಮದಲ್ಲಿ ಬಿದ್ದಿದ್ದಾನೆ, ಏನು ಮಾಡೋದು?
ಈ ಪ್ರೀತಿ-ಗೀತಿ ಅದ್ಯಾಕೆ ಹುಟ್ಟುತ್ತೋ, ಹೇಗೆ ಮುಂದುವರೆಯುತ್ತೋ ಗೊತ್ತಿಲ್ಲ. ಯಾವುದೇ ಕ್ಷಣದಲ್ಲಿ ಹುಟ್ಟಿಕೊಳ್ಳುವ ಆಕರ್ಷಣೆ ಇನ್ನೇನೋ ಆಗಿ ಬಿಡುತ್ತೆ. ಮದುವೆಯಾದ ಹೆಣ್ಣೂ ಅಂತ ನೋಡದೇ, ಆಕರ್ಷಿತನಾದ ಈ ಅವಿವಾಹಿತ ಬಾಳಲ್ಲಿ ಬಿರುಗಾಳಿ ಎಬ್ಬಿಸಿದ್ದಾಳೆ ಆಕೆ!
ಈತ ಎಂಜಿನೀಯರಿಂಗ್ ಮುಗಿಸಿ, ಪ್ರತಿಷ್ಠಿತ ಕಂಪನಿಯ ಉದ್ಯೋಗಿ. ಬುದ್ಧಿವಂತಿಕೆ ಜೊತೆಯಲ್ಲಿದ್ದು. ಕಠಿಣ ಶ್ರಮವೂ ಕೈ ಹಿಡಿದಿತ್ತು. ಉದ್ಯೋಗದಲ್ಲಿ ನೆಲೆ ಕಾಣಲು ಹೆಚ್ಚು ದಿನ ಹಿಡಿಯಲಿಲ್ಲ. ಕೈ ತುಂಬಾ ದುಡ್ಡು ಸೇರಲು ಶುರುವಾಯಿತು. ಬಾಂಧವ್ಯದ ವಿಷಯದಲ್ಲಿ ಎಲ್ಲರೂ ಪ್ರಾಮಾಣಿಕರಾಗಿರಬೇಕು ಎಂದೇ ನಂಬುವ ವ್ಯಕ್ತಿ ಈ ಗುರು. ಆದರೆ, ಇಂಥವನೇ ಇದೀಗ ಮದುವೆಯಾದ ಹೆಣ್ಣಿನ ಪಾಶಕ್ಕೆ ಬಿದ್ದಿದ್ದಾನೆ. ಇಂಥ ಪರಿಸ್ಥಿತಿ ಅದು ಹೇಗೆ ಬಂತೋ, ಯಾಕೆ ತಂದು ಕೊಂಡನೋ ಗೊತ್ತಿಲ್ಲ. ಮನಸ್ಸಂತೂ ಗೊಂದಲದ ಗೂಡಾಗಿದೆ. ಅಷ್ಟಕ್ಕೂ ಇವನ ಜೀವನದಲ್ಲಿ ಆಗಿದ್ದೇನು?
ಕೈಯಲ್ಲಿ ದುಡ್ಡು ಸೇರಿದ ಕೂಡಲೇ ಜೊತೆಗೊಂದು ಸಂಗಾತಿ (Companion) ಬೇಕೆಂದು ಇವನಿಗೂ ಅನಿಸಿದೆ. ಕೊಲೀಗ್ (Colleague) ಜೊತೆ ಡೇಟಿಂಗ್ (Dating) ಸಹ ಶುರುವಾಯಿತು. ಆದರೆ, ಕೆಲಸದ ಒತ್ತಡ ಹೆಚ್ಚುತ್ತಿದ್ದಂತೆ, ಸಂಬಂಧವನ್ನು ಮೆಂಟೈನ್ ಮಾಡಲು ಆಗಲಿಲ್ಲ. ಎಲ್ಲವುದರಿಂದ ಹೊರ ಬರಬೇಕೆಂದು ಮನಸ್ಸು ಹಾತೊರೆಯುತ್ತಿತ್ತು. ಏನು ಮಾಡೋದು ಅಂತ ಮಾತ್ರ ಅರ್ಥವಾಗುತ್ತಿರಲಿಲ್ಲ.
ಅದೃಷ್ಟವೆಂಬಂತೆ, ಆತ ಬಿಇ ಓದಿದ ಕಾಲೇಜ್‌ನಿಂದಲೇ ಅಸಿಸ್ಟೆಂಟ್ ಪ್ರೊಫೆಸರ್ (Assistant Professor) ಪೋಸ್ಟ್‌ಗೆ ಅಲ್ಲಿ ವೇಕೆನ್ಸಿ ಕ್ರಿಯೇಟ್ ಆಗಿತ್ತು. ಮನಸ್ಸು ಬದಲಾವಣೆಗೆ ಹಾತೊರೆಯುತ್ತಿತ್ತು. ಎಂಎನ್‌ಸಿಯಲ್ಲಿ (MNC) ಕೆಲಸ ಮಾಡಿದವವನಿಗೆ ಮಕ್ಕಳಿಗೆ ಪಾಠ ಹೇಳುವುದು ಸುಲಭ ಅನಿಸಲಿಲ್ಲ. ಬದಲಾವಣೆ ಬಯಸಿದ ಮನಸ್ಸಿಗೆ ಇದೆ ಚಾಲೆಂಜ್ ಎನಿಸಿತು. ಕೈ ತುಂಬಾ ಸಂಬಳ ಕೊಡುವ ಕೆಲಸ ಬಿಟ್ಟು ಬಿಟ್ಟ. ಮೊದ ಮೊದಲು ಕಷ್ಟವಾಗಿದ್ದು ಸುಳ್ಳಲ್ಲ. ಆದರೆ, ಬರ್ತಾ ಬರ್ತಾ ಹೊಸ ಕೆಲಸ ರೂಢಿಯಾಯಿತು. ಸ್ಟುಡೆಂಟ್ಸ್ ಫ್ರೆಂಡ್ಸ್ ಆದ್ರು. ಓದು, ಅದು ಇದು ಅಂತ ಸಾಕಷ್ಟು ಟೈಮ್ ಸಿಗುತ್ತಿತ್ತು. ಜ್ಞಾನವೂ ಹೆಚ್ಚಿಸಿಕೊಳ್ಳೋಕೆ ಸಾಧ್ಯವಾಗ್ತಿತ್ತು. ಹೊಸ ಕೆಲಸದೊಂದಿಗೆ ಹಳೇ ಕ್ರಷ್ ಸಹ ಮರೆತು ಹೋಯಿತು. ಯಾವ ಹುಡುಗಿ ಜೊತೆ ಡೇಟಿಂಗ್ ಮಾಡುತ್ತಿದ್ದನೋ, ಅವಳ ನೆನಪೂ ಇಲ್ಲವಾಯಿತು.
ಬಾಯ್‌ಫ್ರೆಂಡ್ ಜೊತೆ ಹೀಗೆಲ್ಲಾ ಮಾಡಿದ್ರೆ ಬ್ರೇಕಪ್ ಆಗೋದು ಖಂಡಿತ
ಇಷ್ಟೇ ಆಗಿದ್ದರೆ ಎಲ್ಲವೂ ಈತನ ಜೀವನದಲ್ಲಿ ಸರಿಯಾಗಿಯೇ ಇರುತ್ತಿತ್ತು. ಆಗಿದ್ದೇ ಬೇರೆ. ಕಾಲೇಜಿಗೆ ಸೇರಿದ ದಿನದಿಂದಲೇ ವಿವಾಹಿತ ಕೊಲೀಗ್ ಜೊತೆ ಏನೋ ಹೇಳದಂಥ ಆಕರ್ಷಣೆ (Attraction) ಇವನಿಗೆ. ದೊಡ್ಡವಳು, ಎರಡು ಮಕ್ಕಳ ತಾಯಿ ಅಂತ ಗೊತ್ತಿದ್ದರೂ ಹೇಳಲಾಗದಂಥ ಅವ್ಯಕ್ತ ಭಾವ. ಎಲ್ಲರನ್ನೂ ಕೇರ್ ಮಾಡುತ್ತಿದ್ದ ಆಕೆಯ ವ್ಯಕ್ತಿತ್ವಕ್ಕೆ (Personality) ಎಲ್ಲರಿಗೂ ಫಿದಾ ಆದವರೇ. ಸ್ಟುಡೆಂಟ್ಸ್‌ಗೂ ಫೇವರೇಟ್ ಪ್ರೊಫೆಸರ್. ಸ್ನೇಹಿತೆಯಂತೆ ತಮ್ಮ ಗೋಳನ್ನೂ ಈ ಮೇಡಮ್ ಜೊತೆ ಹೇಳಿ ಕೊಳ್ಳುವಷ್ಟು ಸಲುಗೆ ಮಕ್ಕಳಿಗೆ. ಎಲ್ಲರಿಗೂ ಈ ಮೇಡಮ್ ಫ್ರೆಂಡ್, ಗೈಡ್, ಫಿಲಾಸಫರ್.
ಅಂಥವಳ ಹಿಂದೆ ಬಿದ್ದ ಈ ಗುರು. ಅವಳ ಮುಖವೇ ಕಣ್ಮುಂದೆ ಬರುತ್ತಿತ್ತು. ಅದೆಷ್ಟೋ ರಾತ್ರಿಗಳು ನಿದ್ರೆಯೇ ಬರುತ್ತಿರಲಿಲ್ಲ. ಮಧುರ ದನಿ, ಕೆನ್ನೆಯ ಡಿಂಪಲ್ ಇವನನನ್ನು ಕಂಗೆಡಿಸುತ್ತಿತ್ತು. ವಿವಾಹಿತೆಯೊಂದಿಗೆ ಇಂಥದ್ದೊಂದು ಭಾವ ತಾಳುವುದು ತಪ್ಪೆಂದು ಗೊತ್ತಿದ್ದರೂ ಮನಸ್ಸು, ಯಾವುದೇ ಅವ್ಯಕ್ತ ಪ್ರೀತಿಗೆ ಹಾತೊರೆಯಲು ಶುರು ಮಾಡಿತು. ಇವನು ಕಂಟ್ರೋಲ್ ತಪ್ಪಿದ್ದ.
ಊಟದ ಬಿಡುವಿನಲ್ಲಿ ಆಗಾಗ ಇವರಿಬ್ಬರ ಭೇಟಿಯಾಗುತ್ತಿತ್ತು. ಮೇಡಮ್ ಜೊತೆಗಿನ ಕೆಲವೇ ಕೆಲವು ನಿಮಿಷಗಳು ಈತನಿಗೆ ಬಹಳ ಖುಷಿ ಕೊಡುತ್ತಿತ್ತು. ಓದಿಕೊಂಡವಳು. ಮಾತನಾಡಲು ವಿಷಯಗಳು ಇರುತ್ತಿದ್ದವು. ಜ್ಞಾನವೂ ಶೇರ್ (Knowledge Sharing) ಆಗುತ್ತಿತ್ತು. ಜೊತೆಗೆ ಫೋನ್ ನಂಬರ್ ಸಹ ಎಕ್ಸ್‌ಚೇಂಜ್ ಆಯಿತು. ಮೆಸೇಜ್, ಅಪರೂಪಕ್ಕೂ ಕಾಲ್ ಸಹ ಹೋಗಿ, ಬಂದವು. ಇಬ್ಬರಿಗೂ ಗೊತ್ತಲ್ಲದಂತೆ ಸ್ನೇಹ ಗಾಢವಾಗಿತ್ತು. ಆಕೆಯೂ ಇವನಿಗೆ ಅಟ್ರಾಕ್ಟ್ ಆಗಿದ್ದಳು.
ಯಾವುದೋ ಬುಕ್ ಪಡೆಯಲು ಫ್ಲಾಟಿಗೆ ಬಂದಾಗ ಆಕೆಯನ್ನು ತಬ್ಬಿ, ಚುಂಬಿಸಿದ್ದಾರೆ. ಆದರೆ, ಏನೋ ಜ್ಞಾನೋದಯವಾದಂತೆ ಅವಳು ತಪ್ಪಿಸಿಕೊಂಡು ಹೋಗಿದ್ದಾಳೆ. ಇಬ್ಬರದ್ದೂ ತಪ್ಪಿತ್ತು. ಆದರೆ, ಮನಸ್ಸು ಕೇಳುತ್ತಿರಲಿಲ್ಲ. ನಂತರ ಅವಳ ಫೋನ್ ಸ್ವಿಚ್ ಆಫ್ ಆಯಿತು. ವಾರ ಕಾಲೇಜು ಕಡೆ ಮುಖ ಹಾಕಲಿಲ್ಲ. ಕಾರಣ ಸಿಕ್ ಲೀವ್ (Sick Leave). ಅಬ್ಬಾ ಮತ್ತೊಂದು ವಾರವೂ ರಜೆ ಎಕ್ಸ್‌ಟೆಂಡ್ ಆಯಿತು. ಎರಡು ವಾರ ಅವಳನ್ನು ನೋಡದೇ ಮನಸ್ಸು ವಿಲ ವಿಲ ಒದ್ದಾಡಿತು.
ಒಳ್ಳೆ ಗಂಡನಿದ್ರೂ ಪರ ಪುರುಷನ ಜೊತೆ ಸಂಬಂಧ ಬೆಳೆಸಿದ್ದಾಳೆ ಸ್ನೇಹಿತೆ, ಏನು ಹೇಳೋದು ಈಕೆಗೆ?
ಒಂದು ರಾತ್ರೀ ಮನಸ್ಸು ಅವಳ ಯೋಚನೆಯಲ್ಲಿಯೇ ಮುಳುಗಿತ್ತು. ಬೆಲ್ ಆಯಿತು. ನೋಡಿದರೆ ಅದೇ ಮೇಡಮ್. ಶಾಕ್‌ನಿಂದ ಸುಧಾರಿಸುವ ಕೊಳ್ಳು ಹೊತ್ತಿಗೆ ಆಕೆಯೇ ಇವನನ್ನು ಒಳಗೆ ತಳ್ಳಿ ಬಾಗಿಲು ಮುಚ್ಚಿ ತಬ್ಬಿಕೊಂಡಿದ್ದಳು. ನಾನು ಸಂಕೋಚದಿಂದ ಏನು ಮಾಡಲೂ ತೋಚದೇ ನಿಂತಿದ್ದ. ಅವತ್ತು ರಾತ್ರಿ ಅವರಿಬ್ಬರೂ ಗಾಢ ಪ್ರೇಮದಲ್ಲಿ ಮುಳುಗಿ ಹೋದರು. ಇದು ಮತ್ತೆ ಮತ್ತೆ ಮರುಕಳುಸುತ್ತಿದೆ. ಮನೆಯಲ್ಲಿ ಮದುವೆ ವಿಚಾರ ಎತ್ತಿದರೆ, ಏನೋ ನೆಪ ಹೇಳಿ ಮುಂದೂಡಲಾಗುತ್ತಿದೆ. ಅವಳ ಗಂಡನಿಗೆ ಇವರಿಬ್ಬರ ಸಂಬಂಧ ಗುಟ್ಟು ಗೊತ್ತಿಲ್ಲ. ಆದರೆ, ಮುಂದೇನೆ ಎನ್ನೋ ಗೊಂದಲ ಕಾಡುತ್ತಿದೆ. ಏನು ಮುಂದಿನ ಜೀವನ?